ಬಾಲಿವುಡ್ ಹಾಟ್ ಕಪಲ್ ರೊಮ್ಯಾನ್ಸ್‌ ನೋಡಿ ಪೂಜಾ ಹೆಗ್ಡೆಗೆ ಅಸೂಯೆ!; ವಿಡಿಯೋ ವೈರಲ್

ಮುಂಬೈ ಬ್ಯೂಟಿ ಪೂಜಾ ಹೆಗ್ಡೆ ಕ್ರೇಜ್ ದಿಢೀರನೆ ಕಮ್ಮಿ ಆಗಿಬಿಟ್ಟಿದೆ. ಎರಡು ವರ್ಷಗಳ ಹಿಂದೆ ಬಾಲಿವುಡ್, ಟಾಲಿವುಡ್, ಕಾಲಿವುಡ್ ಎಲ್ಲೆಲ್ಲೂ ಬುಟ್ಟಬೊಮ್ಮ ಹವಾ ಜೋರಾಗಿತ್ತು. ಭಾರೀ ನಿರೀಕ್ಷೆ ಮೂಡಿಸಿದ್ದ ಸಿನಿಮಾಗಳು ಹಿಟ್ ಆಗದೇ ಪೂಜಾಳನ್ನು ನಿಧಾನವಾಗಿ ಫಿಲ್ಮ್ ಮೇಕರ್ಸ್ ಮರೆಯುವಂತಾಗಿಬಿಟ್ಟಿದೆ.

ಸಾಮಾನ್ಯವಾಗಿ ನಟಿಯರು ಬಣ್ಣದಲೋಕದಲ್ಲಿ ಫೇಡ್ ಆಗುತ್ತಿದ್ದಂತೆ ಮದುವೆ ಮಾಡಿಕೊಳ್ಳುವ ಯೋಚನೆ ಮಾಡುತ್ತಾರೆ. ಈ ಹಿಂದೆ ಕೂಡ ಸಾಕಷ್ಟು ಬಾರಿ ಪೂಜಾ ಹೆಗ್ಡೆ ಮದುವೆ ಬಗ್ಗೆ ಗುಸುಗುಸು ಕೇಳಿಬಂದಿತ್ತು. ಆಕೆಯ ಲವ್ವಿ ಡವ್ವಿ ಬಗ್ಗೆ ಕೂಡ ಊಹಾಪೋಹ ಶುರುವಾಗಿತ್ತು. ಆದರೆ ಯಾವುದು ಕೂಡ ನಿಜವಾಗಲಿಲ್ಲ. ವಯಸ್ಸು 33 ಆಗಿದ್ದರೂ ಸದ್ಯಕ್ಕೆ ಆಕೆ ಸಿಂಗಲ್ ಆಗಿಯೇ ಇರಲು ತೀರ್ಮಾನಿಸಿದಂತೆ ಕಾಣುತ್ತಿದೆ.

Is actress Pooja Hegde felt jealous after seeing bollywood hot couple being close

ಪ್ರೇಮಿಗಳು ಅಥವಾ ಗಂಡ-ಹೆಂಡತಿ ಸಾರ್ವಜನಿಕ ಸ್ಥಳಗಳಲ್ಲಿ ರೊಮ್ಯಾಂಟಿಕ್ ಆಗಿ ಇರುವುದನ್ನು ನೋಡಿದಾಗ ಸಿಂಗಲ್ಸ್‌ಗೆ ಅಸೂಯೆ ಉಂಟಾಗುತ್ತದೆ. ನಟಿ ಪೂಜಾ ಹೆಗ್ಡೆಗೂ ಇದೇ ಅನುಭವವಾಗಿದೆ ಎನ್ನುವ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅಂದಹಾಗೆ ಇದು ಹೊಸ ವಿಡಿಯೋ ಏನಲ್ಲ. ಕಳೆದ ವರ್ಷ ನಡೆದ ಉಮಂಗ್ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಕಂಡುಬಂದಿರುವ ದೃಶ್ಯವಿದು.

ಮುಂಬೈನಲ್ಲಿ ನಡೆದ ಉಮಂಗ್ ಅವಾರ್ಡ್ಸ್ 2023 ಕಾರ್ಯಕ್ರಮದಲ್ಲಿ ಸಾಕಷ್ಟು ಜನ ಬಾಲಿವುಡ್ ತಾರೆಯರು ಭಾಗಿ ಆಗಿದ್ದರು. ರಿತೇಶ್ ದೇಶಮುಖ್- ಜೆನೆಲಿಯಾ ದಂಪತಿ ಕೂಡ ಹಾಜರಿದದ್ದರು. ರೆಡ್‌ ಕಾರ್ಪೆಟ್‌ ಮೇಲೆ ದಂಪತಿ ಒಟ್ಟಿಗೆ ಛಾಯಾಗ್ರಾಹಕರ ಕ್ಯಾಮರಾಗಳಿಗೆ ಪೋಸ್ ನೀಡುತ್ತಿದ್ದರು. ಇಬ್ಬರೂ ಬಹಳ ಕ್ಲೋಸ್ ಆಗಿ ನಗುತ್ತಾ, ತಮಾಷೆಯಾಗಿ ಕಾಣಿಸಿಕೊಂಡಿದ್ದಾರೆ.

ಬಹಳ ಹೊತ್ತು ರಿತೇಶ್-ಜೆನೆಲಿಯಾ ಜೋಡಿ ಹೀಗೆ ವರ್ತಿಸಿದ್ದಾರೆ. ಅಲ್ಲೇ ಪಕ್ಕದಲ್ಲಿ ಪೂಜಾ ಹೆಗ್ಡೆ ಕೂಡ ಇದ್ದರು. ಇಬ್ಬರೂ ಹೀಗೆ ರೊಮ್ಯಾಂಟಿಕ್ ಆಗಿ ಇದ್ದಿದ್ದನ್ನು ನೋಡಿ ಪೂಜಾ ಅಸೂಯೆಯಿಂದ ಹೊರಟು ಹೋದಂತೆ ವಿಡಿಯೋ ವೈರಲ್ ಆಗುತ್ತಿದೆ. ಸಿಂಗಲ್ಸ್ ಕಷ್ಟ ಹೇಗಿದೆ ನೋಡ್ರಪ್ಪಾ, ಎಂದು ಯಾರೋ ಈ ವಿಡಿಯೋವನ್ನು ತೇಲಿಬಿಟ್ಟಿದ್ದಾರೆ. ಆದರೆ ನಿಜಕ್ಕೂ ಪೂಜಾ ಅಸೂಯೆಯಿಂದ ಆ ರೀತಿ ಹಾವಭಾವ ಪ್ರದರ್ಶಿಸಿದ್ರಾ? ಎಂದು ಕೆಲವರು ಹುಡುಕಾಡುತ್ತಿದ್ದಾರೆ.

ರಿತೇಶ್-ಜೆನೆಲಿಯಾ ದಂಪತಿ ಹಿಂದೆ ಪೂಜಾ ಹೆಗ್ಡೆ ಆಪ್ತರೊಬ್ಬರು ಇದ್ದರು. ಆಕೆಯನ್ನು ಮಾತನಾಡಿಸಲು ಪೂಜಾ ಆ ರೀತಿ ನಡೆದು ಬಂದಿರುವುದು ಕಂಪ್ಲೀಟ್ ವಿಡಿಯೋದಲ್ಲಿ ಗೊತ್ತಾಗಿದೆ. ಆದರೂ ಆಕೆಯ ಹಾವಭಾವದ ಬಗ್ಗೆಯೇ ಕೆಲವರು ಗಮನ ಹರಿಸಿ, ಇದು ಅಸೂಯೆ ಮತ್ತೇನು? ಎಂದು ಕೇಳುತ್ತಿದ್ದಾರೆ. ಒಟ್ನಣ್ಣ ಬಹಳ ದಿನಗಳ ಬಳಿಕ ಸಣ್ಣ ವಿಡಿಯೋ ಕ್ಲಿಪ್ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ. "ಅಯ್ಯೋ ಪಾಪ ಪೂಜಾ" ಎಂದು ಕೆಲವರು ಮೀಮ್ಸ್ ಕ್ರಿಯೇಟ್ ಮಾಡುತ್ತಿದ್ದಾರೆ.

ಒಂದ್ಕಾಲದಲ್ಲಿ ಕ್ರೇಜಿ ಆಫರ್‌ಗಳಲ್ಲಿ ಪೂಜಾ ಹೆಗ್ಡೆ ಬ್ಯುಸಿಯಾಗಿದ್ದರು. ಆದರೆ ಈಗ ಒಂದೇ ಒಂದು ಹಿಂದಿ ಸಿನಿಮಾ ಮಾತ್ರ ಆಕೆಯ ಕೈಯಲ್ಲಿದೆ. ಚಿತ್ರದಲ್ಲಿ ಶಾಹಿದ್ ಕಪೂರ್ ಜೋಡಿಯಾಗಿ ನೀಳಕಾಲ್ಗಳ ಚೆಲುವೆ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ತೆಲುಗು, ತಮಿಳಿನಲ್ಲಿ ಮೊದಲಿನಂತೆ ಅವಕಾಶಗಳು ಸಿಗುತ್ತಿಲ್ಲ. ಆಕೆ ನಟಿಸಿದ 'ಮೋಸ್ಟ್ ಎಲಿಜಬಲ್ ಬ್ಯಾಚುಲರ್', 'ರಾಧೆಶ್ಯಾಮ್', 'ಬೀಸ್ಟ್', 'ಆಚಾರ್ಯ' ಹೀಗೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ಸೋಲುಂಡವು.

ಮಹೇಶ್ ಬಾಬು ಜೊತೆ ಗುಂಟೂರು ಖಾರಂ ಚಿತ್ರಕ್ಕೆ ಪೂಜಾ ಆಯ್ಕೆ ಆಗಿದ್ದರು. ಕೆಲ ದಿನಗಳ ಕಾಲ ಚಿತ್ರೀಕರಣ ಕೂಡ ನಡೆದಿತ್ತು. ಆದರ ಬಳಿಕ ಚಿತ್ರದಿಂದ ಹೊರ ನಡೆದು ಆ ಅವಕಾಶ ಶ್ರೀಲೀಲಾ ಪಾಲಾಗಿತ್ತು. ಇನ್ನು ಬಾಲಿವುಡ್‌ನಲ್ಲಿ ನಟಿಸಿದ 'ಸರ್ಕಸ್', 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಸಿನಿಮಾಗಳು ಆಕೆಯ ಕೈಹಿಡಿಯಲಿಲ್ಲ.

More from Filmibeat

English summary
Pooja Hegde's Umang Awards 2023 red carpet video goes viral now;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X