ಆನ್ ಲೈನ್ ನಲ್ಲಿ ಚಿತ್ರ ಬಿಡುಗಡೆ ಮಾಡಿ ಸಿನಿ ಕಾರ್ಮಿಕರ ನೆರವಿಗೆ ಮುಂದಾದ ಬಾಲಿವುಡ್
ಕೊರೊನಾ ಲಾಕ್ ಡೌನ್ ನಿಂದಾಗಿ ಇಡೀ ದೇಶ ಸ್ತಬ್ಧವಾಗಿದೆ. ಚಿತ್ರೀಕರಣ ಸೇರಿದ್ದಂತೆ ಸಿನಿಮಾರಂಗಕ್ಕೆ ಸಂಬಂಧಿಸಿದ ಚಟುವಟಿಕೆಗಳು ಸಂಪೂರ್ಣ ಬಂದ್ ಆಗಿದೆ. ಸಿನಿಮಾವನ್ನೆ ನಂಬಿಕೊಂಡು ಜೀವಿಸುತ್ತಿದ್ದ ಸಿನಿ ಕಾರ್ಮಿಕರು ಒಂದೊತ್ತಿನ ಊಟಕ್ಕೂ ಪರದಾಡುವಂತಾಗಿದೆ.
Recommended Video
ಇವರ ಕಷ್ಟ ಅರ್ಥಮಾಡಿಕೊಂಡ ಬಾಲಿವುಡ್, ಸಿನಿಕಾರ್ಮಿಕರಿಗೆ ನೆರವು ನೀಡಲು ಮುಂದಾಗಿದೆ. ಈಗಾಗಲೆ ಸಾಕಷ್ಟು ಸ್ಟಾರ್ಸ್ ಕಾರ್ಮಿಕರಿಗೆ ನರವಿನ ಹಸ್ತ ಚಾಚಿದೆ. ಇದರ ನಡುವೆ ಸದ್ಯ ರಿಲೀಸ್ ಗೆ ರೆಡಿಯಾಗಿರುವ ಸಿನಿಮಗಳನ್ನು ಆನ್ ಲೈನ್ ನಲ್ಲಿ ರಿಲೀಸ್ ಮಾಡಿ, ಕಾರ್ಮಿಕರಿಗೆ ಸಹಾಯ ಮಾಡಲು ಮುಂದಾಗಿದೆ ಎಂದು ಹೇಳಲಾಗುತ್ತಿದೆ. ಮುಂದೆ ಓದಿ...

ಸಿನಿ ಕಾರ್ಮಿಕರ ನೆರವಿಗೆ ನಿಂತ ಬಾಲಿವುಡ್
ಲಾಕ್ ಡೌನ್ ತೆರವಾದರು ತಕ್ಷಣಕ್ಕೆ ಚಿತ್ರಮಂದಿರಗಳು ಓಪನ್ ಆಗುವ ಸಾಧ್ಯತೆ ತೀರಾ ಕಡಿಮೆ. ಹಾಗಾಗಿ ಬಿಡುಗಡೆಗೆ ಸಿದ್ಧವಾಗಿರುವ ಸಿನಿಮಾಗಳನ್ನು ಸದ್ಯಕ್ಕೆ ರಿಲೀಸ್ ಆಗಲ್ಲ. ಈ ಹಿನ್ನಲೆಯಲ್ಲಿ ಆನ್ ಲೈನ್ ನಲ್ಲಿ ಬಿಡುಗಡೆ ಮಾಡಿ, ಬರುವ ಹಣದಿಂದ ಸಿನಿಕಾರ್ಮಿಕರ ನೆರವಿಗೆ ನೀಡುವುದೆಂದು ಬಾಲಿವುಡ್ ನಿರ್ಮಾಪಕರು ಮತ್ತು ಕೆಲವು ಸ್ಟಾರ್ಸ್ ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಆನ್ ಲೈನ್ ನಲ್ಲಿ ರಿಲೀಸ್ ಆಗುತ್ತಿರುವ ಮೊದಲ ಸಿನಿಮಾ
ಈ ನಿಟ್ಟಿನಲ್ಲಿ ವೆಬ್ ನಲ್ಲಿ ರಿಲೀಸ್ ಆಗುತ್ತಿರುವ ಮೊದಲ ಸಿನಿಮಾ ಅಕ್ಷಯ್ ಕುಮಾರ್ ಅಭಿನಯದ ಲಕ್ಷ್ಮೀ ಬಾಂಬ್ ಆಗಲಿದೆ ಎನ್ನುವ ಮಾತುಗಳು ಬಾಲಿವುಡ್ ನಲ್ಲಿ ಕೇಳಿ ಬರುತ್ತಿದೆ. ಲಕ್ಷೀ ಬಾಂಬ್ ತಮಿಳಿನ ಸೂಪರ್ ಹಿಟ್ ಮುನಿ-2: ಕಾಂಚನ ಸಿನಿಮಾದ ರಿಮೇಕ್ ಆಗಿದೆ. ಚಿತ್ರಕ್ಕೆ ರಾಘವ್ ಲಾರೆನ್ಸ್ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ಮೇ 22ಕ್ಕೆ ರಿಲೀಸ್ ಆಗಬೇಕಿತ್ತು
ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಸಿನಿಮಾ ಮೇ 22ಕ್ಕೆ ರಿಲೀಸ್ ಆಗಬೇಕಿತ್ತು. ಆದರೆ ಲಾಕ್ ಡೌನ್ ತೆರವಾದರೂ ಮೇ 22ಕ್ಕೆ ರಿಲೀಸ್ ಆಗುವುದು ಅನುಮಾನ. ಹಾಗಾಗಿ ಚಿತ್ರದ ನಿರ್ಮಾಪಕರು ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಹೇಳಲಾಗುತ್ತಿದೆ.

'83' ಸಿನಿಮಾ ಕೂಡ ಆನ್ ಲೈನ್ ನಲ್ಲಿ ರಿಲೀಸ್ ಸಾಧ್ಯತೆ
ಬಾಲಿವುಡ್ ಬಿಗ್ ಬಜೆಟ್ ಸಿನಿಮಾಗಳಲ್ಲಿ ಒಂದಾಗಿರುವ ರಣ್ವೀರ್ ಸಿಂಗ್ ಅಭಿನಯದ 83 ಸಿನಿಮಾ ಕೂಡ ಆನ್ ಲೈನ್ ನಲ್ಲಿ ರಿಲೀಸ್ ಆಗುವ ಸಾಧ್ಯತೆ ಇದೆಯಂತೆ. ಆದರೆ ಕೆಲವು ಮೂಲಗಳ ಸಿನಿಮಾ ನೇರವಾಗಿ ಚಿತ್ರಮಂದಿರಗಳಲ್ಲಿಯೇ ರಿಲೀಸ್ ಆಗಲಿದೆ ಎಂದು ಹೇಳಲಾಗುತ್ತಿದೆ. ಆದರೆ ಇನ್ನೂ ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ. ಸಾಕಷ್ಟು ಸಿನಿಮಾಗಳನ್ನು ಆನ್ ಲೈನ್ ನಲ್ಲಿ ರಿಲೀಸ್ ಮಾಡಲು ಪ್ಲಾನ್ ಮಾಡಲಿದೆಯಂತೆ.


Click it and Unblock the Notifications











