ಶಿವನ ಸಿನಿಮಾ ಕಥೆಯಲ್ಲಿ ಲೈಂಗಿಕ ಶಿಕ್ಷಣ, ಸಲಿಂಗ ಕಾಮದ ವಿಚಾರ? 'OMG- 2' ರಿಲೀಸ್‌ಗೂ ಮೊದ್ಲೆ ವಿವಾದ?
ಅದ್ಯಾಕೋ ಬಾಲಿವುಡ್‌ಗೂ ವಿವಾದಗಳಿಗೂ ಬಿಡಿಸಲಾರದ ನಂಟು ಅನ್ನಿಸ್ತಿದೆ. ಬೇಡ ಬೇಡ ಅಂದ್ರು ಹಿಂದಿ ಸಿನಿಮಾಗಳು, ಬಿಟೌನ್ ಕಲಾವಿದರು ಪದೇ ಪದೇ ವಿವಾದಗಳಲ್ಲಿ ಸಿಲುಕಿಕೊಳ್ಳುತ್ತಲೇ ಇರುತ್ತಾರೆ. 'ಪಠಾಣ್', 'ಆದಿಪುರುಷ್' ಸಿನಿಮಾಗಳು ಹುಟ್ಟಾಕ್ಕಿದ ವಿವಾದಗಳ ಬಗ್ಗೆ ಎಲ್ಲರಿಗೂ ಗೊತ್ತೇಯಿದೆ. ಇದೀಗ ರಿಲೀಸ್‌ಗೂ ಮೊದ್ಲೆ ಅಕ್ಷಯ್‌ಕುಮಾರ್ ನಟನೆಯ 'ಓ ಮೈ ಗಾಡ್- 2' ಸಿನಿಮಾ ಸಂಕಷ್ಟಕ್ಕೆ ಸಿಲುಕಿದೆ.
ಆಗಸ್ಟ್ 11ಕ್ಕೆ ಅಮಿತ್ ರೈ ನಿರ್ದೇಶನದ 'ಓ ಮೈ ಗಾಡ್- 2' ಸಿನಿಮಾ ರಿಲೀಸ್ ಆಗಬೇಕಿದೆ. ಆದರೆ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ಗ್ರೀನ್ ಸಿಗ್ನಲ್ ಸಿಕ್ಕಿಲ್ಲ. ಸೆನ್ಸಾರ್ ಮಂಡಳಿ ಚಿತ್ರವನ್ನು ರಿವೈಸಿಂಗ್ ಕಮಿಟಿಗೆ ಕಳುಹಿಸಿರುವುದಾಗಿ ಹೇಳಲಾಗ್ತಿದೆ. ಚಿತ್ರದಲ್ಲಿ ಒಂದಷ್ಟು ವಿವಾದ ಸೃಷ್ಟಿಸುವಂತಹ ವಿಚಾರಗಳಿವೆ, ಹಾಗಾಗಿ ನಾವು ಸೆನ್ಸಾರ್ ಸರ್ಟಿಫಿಕೇಟ್ ಕೋಡೊಕೆ ಆಗಲ್ಲ ಎಂದು ಹೇಳಿದ್ದಾರಂತೆ. ಇದಲ್ಲದರ ನಡುವೆ ಸಿನಿಮಾ ಬಗ್ಗೆ ಒಂದಷ್ಟು ಊಹಾಪೋಹ ಶುರುವಾಗಿದೆ.

ಸೆನ್ಸಾರ್ ಮಂಡಳಿ 'ಓ ಮೈ ಗಾಡ್- 2' ಚಿತ್ರವನ್ನು ರಿವೈಸಿಂಗ್ ಕಮಿಟಿಗೆ ಕಳುಹಿಸಲು ಚಿತ್ರದಲ್ಲಿರುವ ಲೈಂಗಿಕ ಶಿಕ್ಷಣ, ಸಲಿಂಗ ಕಾಮದಂತ ವಿಚಾರಗಳೇ ಕಾರಣ ಎನ್ನಲಾಗ್ತಿದೆ. ಕೆಲ ವರ್ಷಗಳ ಹಿಂದೆ ಬಂದಿದ್ದ 'ಓ ಮೈ ಗಾಡ್' ಸಿನಿಮಾ ಸೂಪರ್ ಹಿಟ್ ಆಗಿತ್ತು. ಕನ್ನಡ, ತೆಲುಗಿಗೂ ರಿಮೇಕ್ ಆಗಿ ಸಕ್ಸಸ್ ಕಂಡಿತ್ತು. ಹಾಗಾಗಿ ಅದೇ ಟೈಟಲ್‌ನಲ್ಲಿ ಅದೇ ರೀತಿಯ ಮತ್ತೊಂದು ಸಿನಿಮಾ ಮಾಡುವ ಪ್ರಯತ್ನ ನಡೀತು. ಆಗ ಹುಟ್ಟಿಕೊಂಡಿದ್ದೇ 'ಓ ಮೈ ಗಾಡ್- 2'.
ಹಿಂದಿನ ಸಿನಿಮಾದಲ್ಲಿ ಕೃಷ್ಣನ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಅಕ್ಷಯ್ ಕುಮಾರ್ ಇಲ್ಲಿ ಈಶ್ವರನ ಅವತಾರ ತಾಳುತ್ತಿದ್ದಾರೆ. ಇದೇ ಕಾರಣಕ್ಕೆ ಶಿವನ ಸಿನಿಮಾದಲ್ಲಿ ಲೈಂಗಿಕ ಶಿಕ್ಷಣ, ಸಲಿಂಗ ಕಾಮ ಸಂಗತಿಗಳನ್ನು ಜನ ಒಪ್ಪುವುದಿಲ್ಲ. ಇದರಿಂದ ಸಿನಿಮಾ ವಿವಾದ ಸೃಷ್ಟಿಸಬಹುದು ಎನ್ನುವ ವದಂತಿ ಹರಿದಾಡುತ್ತಿದೆ. ಆದರೆ ಚಿತ್ರದಲ್ಲಿ ನಿಜಕ್ಕೂ ಇಂತಹ ವಿಚಾರ ಇರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಈ ವಿಚಾರವನ್ನು ಚಿತ್ರತಂಡವಾಗಲಿ, ಸೆನ್ಸಾರ್ ಮಂಡಳಿ ಆಗಲಿ ಹೇಳಿಲ್ಲ. ಇದೆಲ್ಲಾ ಬರೀ ಗಾಸಿಪ್ ಎಂದು ವರದಿ ಆಗುತ್ತಿದೆ.

'ಓ ಮೈ ಗಾಡ್- 2' ಚಿತ್ರಕ್ಕೆ ಸೆನ್ಸಾರ್ ಸರ್ಟಿಫಿಕೇಟ್ ಸಿಗುವುದು ತಡವಾದ ಬೆನ್ನಲ್ಲೇ ಇಂತಹ ಅಂತೆಕಂತೆ ಕಥೆಗಳು ಹುಟ್ಟಿಕೊಂಡಿವೆ. ಚಿತ್ರದಲ್ಲಿ ಏನೋ ವಿವಾದಾತ್ಮಕ ಅಂಶ ಇದೆ, ಅದಕ್ಕೆ ರಿವೈಸಿಂಗ್ ಕಮಿಟಿಗೆ ಕಳುಹಿಸಿದ್ದಾರೆ ಎನ್ನುವ ಮಾತುಗಳು ಕೇಳಿಬರ್ತಿದೆ. ಅದಕ್ಕೆ ಈ ರೀತಿ ಬೇರೆ ಬೇರೆ ಕಾರಣಗಳನ್ನು ತೇಲಿ ಬಿಡಲಾಗುತ್ತಿದೆ. ಇತ್ತೀಚೆಗೆ 'ಆದಿಪುರುಷ್' ಸಿನಿಮಾ ಭಾರೀ ವಿವಾದ ಸೃಷ್ಟಿಸಿತ್ತು. ರಾಮಾಯಣದ ಪಾತ್ರಗಳನ್ನು ಅನುಚಿತವಾಗಿ ಚಿತ್ರಿಸಿ ಚಿತ್ರತಂಡ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎನ್ನುವ ಆರೋಪಗಳು ಕೇಳಿಬಂದಿತ್ತು.
ಪ್ರಭಾಸ್ ನಟನೆಯ 'ಆದಿಪುರುಷ್' ಭಾರೀ ವಿವಾದ ಸೃಷ್ಟಿಸಿ, ಸಿನಿಮಾ ವಿರುದ್ಧ ಕೋರ್ಟ್‌ಗಳಲ್ಲಿ ದೂರುಗಳು ದಾಖಲಾಗಿದ್ದವು. ಅಲಹಾಬಾದ್ ಕೋರ್ಟ್ ಚಿತ್ರತಂಡ ಹಾಗೂ ಸೆನ್ಸಾರ್ ಮಂಡಳಿಗೆ ಛೀಮಾರಿ ಹಾಕಿತ್ತು. ಇನ್ನು ಚಿತ್ರ ಹಿಂದಿ ಸಂಭಾಷಣೆಕಾರ ಮನೋಜ್ ವಿವಾದಾತ್ಮಕ ಹೇಳಿಕೆಗಳನ್ನು ನೀಡಿ ಆಕ್ರೋಶ ವ್ಯಕ್ತವಾದ ಮೇಲೆ ಕ್ಷಮೆ ಕೇಳಿದ್ದರು. ಇನ್ನು 'ಆದಿಪುರುಷ್' ಸಿನಿಮಾ ಹೀನಾಯವಾಗಿ ಸೋಲುಂಡಿದೆ. ಈ ಕ್ಷಣಕ್ಕೂ ಚಿತ್ರತಂಡದ ಸದಸ್ಯರು ಪ್ರತಿಕ್ರಿಯೆ ನೀಡಲು ಹೆದರಿಕೊಳ್ಳುವಂತಾಗಿದೆ. ಜೂನ್ 16ರಂದು ಓಂ ರಾವುತ್ ನಿರ್ದೇಶನದ ಈ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗಪ್ಪಳಿಸಿತ್ತು.
ಇನ್ನು 'ಓ ಮೈ ಗಾಡ್'-2 ಸಿನಿಮಾ ಬಗ್ಗೆ ಹೇಳುವುದಾದರೆ ಚಿತ್ರದಲ್ಲಿ ಅಕ್ಷಯ್ ಕುಮಾರ್ ಜೊತೆ ಪಂಕಜ್ ತ್ರಿಪಾಠಿ ನಟಿಸಿದ್ದಾರೆ. ಯಾಮಿ ಗೌತಮ್, ಗೋವಿಂದ್ ನಾಮ್‌ದೇವ್, ಅರುಣ್ ಗೋವಿಲ್ ತಾರಾಗಣದಲ್ಲಿದ್ದಾರೆ. ಅರುಣ ಬಾಟಿಯಾ, ವಿಪುಲ್ ಶಾ, ರಾಜೇಶ್ ಬಾಲ್ ಹಾಗೂ ಅಶ್ವಿನ್ ವರ್ದೆ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಸತತ ಸೋಲುಗಳಿಂದ ಕಂಗೆಟ್ಟಿರುವ ಅಕ್ಷಯ್ ಕುಮಾರ್ ಶಿವನ ಪಾತ್ರದಲ್ಲಿ ನಟಿಸಿ ಗೆಲ್ಲುವ ಭರವಸೆಯಲ್ಲಿದ್ದಾರೆ. ಆದರೆ ಸಿನಿಮಾ ರಿಲೀಸ್‌ಗೂ ಮೊದ್ಲೆ ವಿವಾದ ಸೃಷ್ಟಿಸುವ ಸುಳಿವು ಸಿಗುತ್ತಿದೆ.


Click it and Unblock the Notifications











