49ನೇ ವಯಸ್ಸಿನಲ್ಲಿ ತಾಯಿಯಾಗಲಿದ್ದಾರೆಯೇ ಅಮೀಷಾ ಪಟೇಲ್? ದುಬೈ ಫೋಟೋ ನೋಡಿ ನೆಟ್ಟಿಗರು ಶಾಕ್
ಬಾಲಿವುಡ್‌ಗೆ ಕಾಲಿಟ್ಟ ಮೊದಲ ಸಿನಿಮಾದಲ್ಲಿಯೇ ಭರ್ಜರಿ ಯಶ್ಸಸ್ಸು ಗಳಿಸಿದ ನಟಿ ಅಮೀಷಾ ಪಟೇಲ್. ಹಿಂದಿ ಚಿತ್ರರಂಗದ ಹ್ಯಾಂಡ್ಸಮ್ ಹಂಕ್ ಹೃತಿಕ್ ರೋಷನ್ ನಟಿಸಿದ 'ಕಹೋ ನಾ ಪ್ಯಾರ್ ಹೇ' ಮೂಲಕ ಸಿನಿ ಪ್ರಿಯರ ಮನಸ್ಸು ಗೆದ್ದಿದ್ದರು. 50 ಸನಿಹದಲ್ಲಿರುವ ಈ ನಟಿ ಇಂದಿಗೂ ಅದೆಷ್ಟೋ ಮಂದಿಯ ಫೇವರಿಟ್. ಈಕೆ ಸೌಂದರ್ಯಕ್ಕೆ ನೆಟ್ಟಿಗರಂತೂ ಆಗಾಗ ಸುಸ್ತಾಗುತ್ತಲೇ ಇರುತ್ತಾರೆ.
ಅಮೀಷಾ ಪಟೇಲ್ ಇತ್ತೀಚೆಗೆ ಸಿನಿಮಾಗಳಲ್ಲಿ ನಟಿಸುವುದು ಕಡಿಮೆಯಾಗಿದೆ. ಆದರೂ, 2023ರಲ್ಲಿ ತೆರೆಕಂಡಿದ್ದ 'ಗದರ್ 2' ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ ದಾಖಲೆ ಬರೆದಿತ್ತು. ಆ ನಂತರ ಬಂದ ಎರಡು ಸಿನಿಮಾಗಳು ಹೆಚ್ಚೇನು ಸದ್ದು ಮಾಡಲಿಲ್ಲ. ಆದರೂ, ಆಯ್ಕೆ ಮಾಡಿಕೊಂಡು ನಟಿಸುವ ಅಮಿಷಾ ಪಟೇಲ್ ತನ್ನ ಲೈಫ್ ಅನ್ನು ಸಖತ್ ಆಗಿಯೇ ಎಂಜಾಯ್ ಮಾಡುತ್ತಿದ್ದಾರೆ.

ಇತ್ತೀಚೆಗೆ ಅಮೀಷಾ ಪಟೇಲ್ ಪಟೇಲ್ ದುಬೈ ಪ್ರವಾಸ ಮಾಡಿದ್ದರು. ಹಾಗೇ ಅಲ್ಲಿನ ಕೆಲವು ಫೋಟೊಗಳನ್ನು ಹಂಚಿಕೊಂಡಿದ್ದರು. ಅದರಲ್ಲೊಂದು ಫೋಟೋ ನೆಟ್ಟಿಗರಿಗೆ ಶಾಕ್ ಕೊಟ್ಟಿದೆ. 49 ವರ್ಷದ ನಟಿ ಗರ್ಭಿಣಿಯಾಗಿದ್ದಾರೆಯೇ? ಎನ್ನುವ ಅನುಮಾನ ಮೂಡಿದೆ. ಆ ಫೋಟೋಗಳನ್ನು ಇಟ್ಟುಕೊಂಡು ಸೋಶಿಯಲ್ ಮೀಡಿಯಾಗಳಲ್ಲಿ ಚರ್ಚೆಯನ್ನು ಹುಟ್ಟಾಕಿದ್ದಾರೆ. ಅಸಲಿಗೆ ಅಮೀಷಾ ಪಟೇಲ್ ಗರ್ಭಿಣಿಯಾಗಿರುವುದು ನಿಜವೇ?
ಅಮೀಷಾ ಪಟೇಲ್ ಬಾಲಿವುಡ್‌ನಲ್ಲಿ ತನ್ನದೇ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದಾರೆ. ಚೊಚ್ಚಲ ಚಿತ್ರವೇ ಮೆಗಾ ಹಿಟ್ ಆಗುತ್ತಿದ್ದಂತೆ ಸ್ಟಾರ್ ಪಟ್ಟಕ್ಕೆ ಏರಿದ್ದರು. ಹಿಂದಿ ಹಾಗೂ ತೆಲುಗು ಭಾಷೆಯ ಸಿನಿಮಾಗಳಲ್ಲಿಯೂ ಅಮೀಷಾ ಪಟೇಲ್ ನಟಿಸಿದ್ದಾರೆ. ಸಿನಿಮಾ ಜೊತೆಗೆ ಸದಾ ಸೋಶಿಯಲ್ ಮೀಡಿಯಾಗಳಲ್ಲೂ ಅಮೀಷಾ ಪಟೇಲ್ ಆಕ್ಟಿವ್ ಆಗಿರುತ್ತಾರೆ. ಹೀಗೆ ದುಬೈ ಫೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾ ಖಾತೆಯಲ್ಲಿ ಶೇರ್ ಮಾಡಿದ್ದು, ದೊಡ್ಡ ಚರ್ಚೆಗೆ ಕಾರಣವಾಗಿದೆ.
ಅಮೀಷಾ ಪಟೇಲ್‌ಗೆ ಈಗ 49 ವರ್ಷ. ಮುಂಬೈ ಮೂಲದ ನಟಿ ಸಿನಿಮಾದಿಂದ ಸಾಕಷ್ಟು ಹೆಸರನ್ನು ಗಳಿಸಿದ್ದರೂ, ಇನ್ನೂ ಮದುವೆ ಆಗಿಲ್ಲ. ಒಂಟಿ ಜೀವನದಲ್ಲಿ ಖುಷಿಯನ್ನು ಕಂಡುಕೊಳ್ಳುತ್ತಿದ್ದಾರೆ. ಈಗ ಅಮೀಷಾ ಶೇರ್ ಮಾಡಿರುವ ದುಬೈ ಫೋಟೋಗಳ ಪೈಕಿ ಒಂದರಲ್ಲಿ ಗರ್ಭಿಣಿಯಾಗಿರುವಂತೆ ತೋರುತ್ತಿದೆ. ಈ ಫೋಟೋ ನೋಡಿ ಶಾಕ್ ಆಗಿರುವ ನೆಟ್ಟಿಗರು ಒಂದರ ಹಿಂದೊಂದು ಕಮೆಂಟ್‌ಗಳನ್ನು ಮಾಡಿ ಪ್ರಶ್ನೆಗಳ ಸುರಿಮಳೆಯನ್ನೇ ಹರಿಸುತ್ತಿದ್ದಾರೆ.
ತನ್ನ ಬ್ಯುಸಿ ಶೆಡ್ಯೂಲ್‌ಗೆ ಬ್ರೇಕ್ ಕೊಟ್ಟು ರಜೆಯನ್ನು ಎಂಜಾಯ್ ಮಾಡುತ್ತಿದ್ದಾರೆ. ದುಬೈನಲ್ಲಿ ಐಸ್‌ಕ್ರೀಂ ತಿನ್ನುತ್ತಾ ಕ್ಯಾಮರಾಗೆ ಕೊಟ್ಟ ಪೋಸ್ ನೆಟ್ಟಿಗರ ನಿದ್ದೆ ಕಡೆಸಿದೆ. 49ನೇ ವರ್ಷಕ್ಕೆ ತಾಯಿಯಾಗುತ್ತಿದ್ದಾರೆಯೇ ಅಮೀಷಾ ಪಟೇಲ್? ಮದುವೆ ಆಗದೇ ಗರ್ಭಿಣಿಯಾದರೇ? ಎಂಬ ಎರಡು ಪ್ರಶ್ನೆಗಳು ನೆಟ್ಟಿಗರನ್ನು ಕಾಡುತ್ತಿದೆ. ಅದಕ್ಕೆ ಒಂದರ ಹಿಂದೊಂದು ಕಮೆಂಟ್‌ಗಳನ್ನು ಹಾಕುತ್ತಿದ್ದಾರೆ. "ನೀವು ಈ ಫೋಟೊದಲ್ಲಿ ಗರ್ಭಿಣಿಯಾದಂತೆ ಕಾಣುತ್ತಿದ್ದೀರಿ?" ಎಂದು ಪ್ರಶ್ನೆ ಮಾಡಿದ್ದರೆ, ಇನ್ನೊಬ್ಬರು "ನಾನು ತಪ್ಪಾಗಿ ತಿಳಿದುಕೊಂಡಿದ್ದೇನಾ?" ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು "ಈಕೆ ಮದುವೆಯಾಗದೇ ಹೇಗೆ ಗರ್ಭಿಣಿಯಾದಳು?" ಎಂದು ಕಮೆಂಟ್ ಮಾಡಿದ್ದಾರೆ.
ಇನ್ನು ನಿಜಕ್ಕೂ ಅಮೀಷಾ ಪಟೇಲ್ ಗರ್ಭಿಣಿಯಾಗಿದ್ದಾರಾ? ಪ್ರಶ್ನೆಗೆ ಬೇರೆ ಫೋಟೊಗಳಲ್ಲಿ ಉತ್ತರ ಸಿಗುತ್ತೆ. ಅದರಲ್ಲಿ ಅಮೀಷಾ ಪಟೇಲ್ ಗರ್ಭಿಣಿಯಾದಂತೆ ಕಾಣುತ್ತಿಲ್ಲ. ಒಂದು ಫೋಟೋ ಕ್ಯಾಮರಾ ಆಂಗಲ್‌ನಲ್ಲಿ ಗರ್ಭಿಣಿಯಾದಂತೆ ತೋರುತ್ತಿದೆ. ಅಮೀಷಾ ಪಟೇಲ್ ವೈವಾಹಿಕ ಜೀವನದಿಂದ ದೂರವಿದ್ದು, ಲೈಫ್ ಅನ್ನು ಎಂಜಾಯ್ ಮಾಡುತ್ತಿದ್ದಾರೆ ಎಂದು ಕೆಲ ನೆಟ್ಟಿಗರು ಸಮಜಾಯಿಷಿ ಕೊಡುತ್ತಿದ್ದಾರೆ. ಇನ್ನು ಐದು ದಿನಗಳ ಹಿಂದಷ್ಟೇ ಹಂಚಿಕೊಂಡು ವಿಡಿಯೋದಲ್ಲಿ ಅಮೀಷಾ ಪಟೇಲ್ ಸಿಕ್ಕಾಪಟ್ಟೆ ಸ್ಲಿಮ್ ಆಗಿ ಕಾಣಿಸುತ್ತಿದ್ದಾರೆ.


Click it and Unblock the Notifications











