ಎರಡನೇ ಮಗುವಿನ ನಿರೀಕ್ಷೆಯಲ್ಲಿ ವಿರಾಟ್ ಕೊಹ್ಲಿ- ಅನುಷ್ಕಾ ಶರ್ಮಾ?: ಬೇಬಿ ಬಂಪ್ ವಿಡಿಯೋ ವೈರಲ್!
ಸೆಲಬ್ರಿಟಿಗಳು ತಮ್ಮ ಖಾಸಗಿ ಜೀವನದ ಹಲವು ವಿಷಯಗಳನ್ನು ಬೇಗ ಸಾರ್ವಜನಿಕರೊಂದಿಗೆ ಹಂಚಿಕೊಳ್ಳುವುದಿಲ್ಲ. ಅದಕ್ಕೆ ಸೂಕ್ತ ಸಮಯ ಬರುವವರೆಗೂ ಕಾಯುತ್ತಾರೆ. ಹೀಗಿರುವಾಗ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮತ್ತು ಕ್ರಿಕೆಟಿಗ ವಿರಾಟ್ ಕೊಹ್ಲಿ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂಬ ಸುದ್ದಿ ಹಲವು ದಿನಗಳಿಂದ ಚರ್ಚೆಯಲ್ಲಿದೆ.
ಅನುಷ್ಕಾ ಶರ್ಮಾ ಇತ್ತೀಚೆಗೆ ದೊಗಲೆ ಬಟ್ಟೆಗಳನ್ನು ಧರಿಸುತ್ತಿದ್ದಾರೆ. ಜಾಹೀರಾತುಗಳಲ್ಲಿಯೂ ಲೂಸ್ ಬಟ್ಟೆಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದಲ್ಲದೆ ಹಲವು ಬಾರಿ ಅವರ ಬೇಬಿ ಬಪ್ ಕೂಡ ಕಾಣಿಸಿಕೊಂಡಿದೆ. ಇತ್ತೀಚೆಗೆ ಮತ್ತೊಂದು ವಿಡಿಯೋ ವೈರಲ್ ಆಗಿದ್ದು, ಇದರಲ್ಲಿ ನಟಿ ಗರ್ಭವತಿ ಎಂಬುದು ತಿಳಿಯುತ್ತಿದೆ.

ಅನುಷ್ಕಾ ಶರ್ಮಾ ಹೊಸ ವಿಡಿಯೋ ವೈರಲ್
ಐಸಿಸಿ ವಿಶ್ವಕಪ್ 2023ರ ನೆದರ್ಲ್ಯಾಂಡ್ಸ್ ತಂಡದ ಜೊತೆಗೆ ನಡೆಯಲಿರುವ ಪಂದ್ಯಕ್ಕಾಗಿ ವಿರಾಟ್ ಕೊಹ್ಲಿ ಅವರೊಂದಿಗೆ ಅನುಷ್ಕಾ ಶರ್ಮಾ ಬೆಂಗಳೂರಿಗೆ ಬಂದಿಳಿದ್ದಾರೆ. ವಿಶ್ವಕಪ್ ಪಂದ್ಯಗಳಲ್ಲಿ ಭಾರತ ಇದುವರೆಗೆ ಎಲ್ಲಾ ಪಂದ್ಯಗಳನ್ನು ಗೆದ್ದಿದೆ. ಇನ್ನು, ಬೆಂಗಳೂರಿನಲ್ಲಿನ ಈ ಜೋಡಿಯ ವಿಡಿಯೋ ಭಾರಿ ವೈರಲ್ ಆಗಿದೆ.
ಅನುಷ್ಕಾ ಶರ್ಮಾ ತನ್ನ ಪತಿ ವಿರಾಟ್ ಕೊಹ್ಲಿಯವರ ಕೈ ಹಿಡಿದುಕೊಂಡು ಬೆಂಗಳೂರಿನ ಹೋಟೆಲ್‌ನಿಂದ ಹೊರ ಹೋಗುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ಬಾರಿಯ ನವೆಂಬರ್ 12 ರಂದು ಭಾರತ ಮತ್ತು ನೆದರ್ಲ್ಯಾಂಡ್ಸ್ ವಿಶ್ವಕಪ್ ಪಂದ್ಯ ನಡೆಯಲಿದ್ದು, ಇದಕ್ಕಾಗಿ ಈ ಸೆಲಬ್ರಿಟಿ ಜೋಡಿ ಬೆಂಗಳೂರಿನಲ್ಲಿದ್ದಾರೆ. ಈ ವಿಡಿಯೋದಲ್ಲಿಯೇ ನಟಿ ಅನುಷ್ಕಾ ಅವರ ಬೇಬಿ ಬಂಪ್ ಕಾಣಿಸುತ್ತಿದೆ.
ಪ್ರಗ್ನೆನ್ಸಿ ಘೋಷಿಸದ ಅನುಷ್ಕಾ- ವಿರಾಟ್
ವಿರಾಟ್ ಕೊಹ್ಲಿ ಇತ್ತೀಚೆಗೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಜೊತೆಗೆ ತಮ್ಮ ಇನ್ನಿಂಗ್ಸ್‌ನಿಂದ ಕೋಟ್ಯಾಂತರ ಜನರ ಹೃದಯಗಳನ್ನು ಗೆದ್ದಿದ್ದಾರೆ. ಹೀಗಾಗಿ ಎಲ್ಲರ ಗಮನ ವಿರಾಟ್ ಮೇಲೆಯೇ ಇದ್ದು, ಜತೆಗೆ ಅನುಷ್ಕಾ ಶರ್ಮಾ ಅವರ ಮೇಲೆಯೂ ಕ್ಯಾಮರಾ ಕಣ್ಣುಗಳು ಬೀಳುತ್ತಿವೆ.
ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಜೋಡಿಗೆ ಈಗಾಗಲೇ 'ವಾಮಿಕಾ' ಎಂಬ ಹೆಣ್ಣು ಮಗುವಿದೆ. ಇದಾದ ನಂತರ ಮತ್ತೊಂದು ಮಗುವಿನ ಬಗ್ಗೆ ಎಲ್ಲಿಯೂ ಘೋಷಿಸಲಿಲ್ಲ. ಇತ್ತೀಚೆಗೆ ವಿರಾಟ್ ಮತ್ತು ಅನುಷ್ಕಾ ಹೆರಿಗೆ ಆಸ್ಪತ್ರೆಯಲ್ಲಿ ಕಾಣಿಸಿಕೊಂಡಿದ್ದರು. ಆದರೆ, ಪಾಪರಾಜಿಗಳಿಗೆ ಈ ಸುದ್ದಿಯನ್ನು ಬಹಿರಂಗಪಡಿಸಿದ್ದಾರೆ ಎಂದು ವರದಿಯಾಗಿದೆ.
ಅಂದಿನಿಂದ, ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿಯ ಮತ್ತೊಂದು ಮಗುವಿನ ಬಗ್ಗೆ ವದಂತಿಗಳು ಹೆಚ್ಚಾಗಿದ್ದವು. ಇದಕ್ಕೆ ಪುಷ್ಠಿ ಕೊಡುವಂತೆ ಈ ಬೆಂಗಳೂರಿನ ಹೋಟೆಲ್ ವಿಡಿಯೋ ಇದೆ. ನಟಿ ಅನುಷ್ಕಾ ಶರ್ಮಾ ಕಪ್ಪು ಬಣ್ಣದ ಲೂಸ್ ಶಾರ್ಟ್ ಡ್ರೆಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ವಿರಾಟ್ ಕ್ಯಾಶುವಲ್ ಲುಕ್‌ನಲ್ಲಿದ್ದಾರೆ. ಇಬ್ಬರು ಕೈ ಕೈ ಹಿಡಿದುಕೊಂಡು ನಡೆಯುತ್ತಿದ್ದಾರೆ. ಇದರಲ್ಲಿ ಅನುಷ್ಕಾ ಗರ್ಭಿಣಿಯರು ನಡೆಯುವಂತೆ ನಿಧಾನವಾಗಿ ನಡೆಯುತ್ತಿದ್ದಾರೆ.
ವಿಡಿಯೋಗೆ ಅಭಿಮಾನಿಗಳ ಕಾಮೆಂಟ್
ವಿಡಿಯೋ ನೋಡಿದ ಅನುಷ್ಕಾ ಮತ್ತು ವಿರಾಟ್ ಅಭಿಮಾನಿಗಳು ಅನುಷ್ಕಾ ಈಗಾಗಲೇ ಪ್ರೆಗ್ನೆನ್ಸಿ ವಾಕ್ ಮಾಡುತ್ತಿದ್ದಾರೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಅನುಷ್ಕಾ ನಿಜವಾಗಿಯೂ ಗರ್ಭಿಣಿಯೇ ಎಂದು ಮತ್ತೆ ಕೆಲವರು ಪ್ರಶ್ನಿಸುತ್ತಿದ್ದಾರೆ. ವೈರಲ್ ವಿಡಿಯೋ ನೋಡಿದ ನಂತರ ಅನೇಕರು ಇದು ನಿಜ ಎಂದಿದ್ದಾರೆ.
ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಯಾವಾಗಲೂ ತಮ್ಮ ವೈಯಕ್ತಿಕ ಜೀವನವನ್ನು ಖಾಸಗಿಯಾಗಿಯೇ ಇಟ್ಟುಕೊಂಡಿದ್ದಾರೆ. ಅವರು ಕಳೆದ ಬಾರಿ ತಾವು ಪೋಷಕರಾಗುತ್ತಿರುವುದನ್ನು ಘೋಷಿಸಿದರು. ಈಗ ಅಭಿಮಾನಿಗಳು ಎರಡನೇ ಮಗುವಿನ ಬಗ್ಗೆಯೂ ಘೋಷಿಸಲಿ ಎಂದು ಕೇಳುತ್ತಿದ್ದಾರೆ.


Click it and Unblock the Notifications











