57ನೇ ವಯಸ್ಸಿನಲ್ಲಿ ಮತ್ತೆ ತಂದೆಯಾಗ್ತಿದ್ದಾರಾ ಅರ್ಬಾಜ್ ಖಾನ್ ? 22 ವರ್ಷ ಚಿಕ್ಕವಳಾದ ಎರಡನೇ ಪತ್ನಿ ಗರ್ಭಿಣಿ..?
ಸಾಮಾನ್ಯವಾಗಿ ಯಾರೇ ಮದುವೆಯಾಗಲಿ ಕೆಲ ದಿನ ಕಳೆಯುತ್ತಿದ್ದಂತೆಯೇ ಏನಾದರೂ ಗುಡ್ ನ್ಯೂಸ್ ಎಂಬ ಪ್ರಶ್ನೆಯನ್ನೇ ಅನೇಕರು ಕೇಳಲು ಶುರು ಮಾಡುತ್ತಾರೆ. ಇನ್ನು ಸೆಲೆಬ್ರೆಟಿಗಳ ವಿಚಾರದಲ್ಲಿ ಇದು ಇನ್ನೂ ಹೆಚ್ಚಾಗಿರುತ್ತೆ. ಎಲ್ಲಿಯೇ ಹೋದರೂ ಸಾಕು ಮುಜುಗರವಾಗುವಂತಹ ವ್ಯೆಯಕ್ತಿಕ ಪ್ರಶ್ನೆಗಳನ್ನು ಕೇಳುತ್ತಲೇ ಇರುತ್ತಾರೆ. ಹೀಗೆ ಸಿಕ್ಕ ಸಿಕ್ಕಲ್ಲಿ ಪ್ರಶ್ನೆಗಳನ್ನು ಕೇಳುವವರಿಗೆ ಸಲ್ಮಾನ್ ಖಾನ್ ಅವರ ಸಹೋದರ ಅರ್ಬಾಜ್ ಖಾನ್ ತಮ್ಮ 57ನೇ ವಯಸ್ಸಿನಲ್ಲಿ ಮತ್ತೊಮ್ಮೆ ಖುಷಿಯ ವಿಚಾರವನ್ನು ಹಂಚಿಕೊಳ್ಳಲು ಸಿದ್ಧರಾದಂತೆ ಇದೆ.
ಹೌದು, 2023 ಡಿಸೆಂಬರ್ 24ರಂದು ಅರ್ಬಾಜ್ ಖಾನ್ ತಮ್ಮ ಮಾಜಿ ಪತ್ನಿ ಮಲೈಕಾ ಅರೋರಾ ಅವರನ್ನು ಮರೆತು ತನಗಿಂತ 22 ವರ್ಷ ಚಿಕ್ಕವಳಾದ ಶುರಾ ಖಾನ್ ಜೊತೆ ಮದುವೆಯ ಬಂಧನಕ್ಕೊಳಗಾಗಿದ್ದರು. ಮುಂಬೈನಲ್ಲಿ ಕುಟುಂಬ ಸದಸ್ಯರು ಮತ್ತು ಕೆಲವೇ ಕೆಲವು ಆಪ್ತ ಸ್ನೇಹಿತರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

ಇದೀಗ ಮದುವೆಯಾಗಿ ಎರಡು ವರ್ಷಗಳ ನಂತರ ಶುರಾ ಖಾನ್ ಗರ್ಭಿಣಿಯಾಗಿದ್ದಾರೆ, 57ರ ಹರೆಯದಲ್ಲಿ ಅರ್ಬಾಜ್ ಖಾನ್ ಮತ್ತೊಮ್ಮೆ ತಂದೆಯಾಗುತ್ತಿದ್ದಾರೆ ಎನ್ನುವ ಸುದ್ದಿ ಸದ್ಯ ಮುಂಬೈನಲ್ಲಿ ಕೇಳಿ ಬರುತ್ತಿದೆ. ಇದಕ್ಕೆ ಪೂರಕವಾಗಿ ಅರ್ಬಾಜ್ ಖಾನ್ ಮತ್ತು ಶುರಾ ಖಾನ್ ಹೆರಿಗೆ ಆಸ್ಪತ್ರೆಗೆ ಹೋಗಿದ್ದಾರೆ. ವೈದ್ಯರನ್ನು ಭೇಟಿ ಮಾಡಿ ಬಂದಿದ್ದಾರೆ.
ಇನ್ನು, ಸೆಲೆಬ್ರಿಟಿಗಳ ಖಾಸಗಿ ಬದುಕು, ಮನರಂಜನೆಯ ಸರಕು ಆಗಿ ಬದಲಾಗಿದ್ದು ಇಂದು ನಿನ್ನೆಯಲ್ಲ. ಅನೇಕ ವರ್ಷದ ಹಿಂದೆಯೇ .. ಬಣ್ಣದ ಪ್ರಪಂಚಲ್ಲಿರುವ ಬಣ್ಣ .. ಬಣ್ಣದ .. ಜನ ಹೋದಲ್ಲಿ .. ಬಂದಲ್ಲಿ .. ಕ್ಯಾಮರಾಗಳನ್ನ ಕರೆಸಿಕೊಳ್ಳುವ ಮೂಲಕ ತಮ್ಮ ಕೈಯಾರೆ ತಮ್ಮ ಖಾಸಗಿತನಕ್ಕೆ ಕೊಳ್ಳಿ ಇಟ್ಟಿದ್ದಾರೆ.
ಇದಕ್ಕೆ ಇನ್ನೊಂದು ಪುರಾವೆ ಎನ್ನುವಂತೆ ಅರ್ಬಾಜ್ ಖಾನ್ ಮತ್ತು ಶುರಾ ಖಾನ್ ಆಸ್ಪತ್ರೆಗೆ ಹೋಗುವ ಸಮಯದಲ್ಲಿ ಪಾಫರಾಜಿಗಳು ಇವರ ಫೋಟೊ ಸೆರೆಹಿಡಿಯಲು ಮತ್ತು ವಿಡಿಯೋಗಳನ್ನು ಚಿತ್ರೀಕರಿಸಲು ಮುಗಿ ಬಿದ್ದಿದ್ದಾರೆ. ಇದರಿಂದ ಕೋಪಗೊಂಡು ಅರ್ಬಾಜ್ ಖಾನ್ ತಮ್ಮ ಪತ್ನಿಯ ಜೊತೆ ಅಲ್ಲಿಂದ ತೆರಳಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಶುರಾ ಖಾನ್ ಗರ್ಭಿಣಿಯಾಗಿರಬಹುದು ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.
ಇನ್ನು ಇದರ ನಡುವೆ ಅರ್ಬಾಜ್ ಖಾನ್ ಪತ್ನಿ ಶುರಾ ಖಾನ್ ಗರ್ಭಿಣಿಯಾಗಿಲ್ಲ. ಇಬ್ಬರು ಆಸ್ಪತ್ರೆಗೆ ತೆರಳಿದ ಹಿಂದೆ ಬೇರೆಯದ್ದೇ ಕಾರಣ ಇದೆ ಎಂದು ಬಾಲಿವುಡ್ ಶಾದೀಸ್ ವರದಿಯನ್ನು ಮಾಡಿದೆ. ಅಂದ್ಹಾಗೇ ಶುರಾ ಖಾನ್ ವೃತ್ತಿಯಲ್ಲಿ ಮೇಕಪ್ ಆರ್ಟಿಸ್ಟ್ ಆಗಿ ಕೆಲಸ ಮಾಡುತ್ತಿದ್ದವರು. ಬಾಲಿವುಡ್ ನಟಿ ರವೀನಾ ಟಂಡನ್ ಹಾಗೂ ಅವರ ಪುತ್ರಿ ರಾಶಾ ಟಂಡನ್ ಗೆ ಇವರೇ ಖಾಯಂ ಆಘಿ ಮೇಕಪ್ ಮಾಡುತ್ತಿದ್ದರು. ಹೀಗಾಗಿ ರವೀನಾ ಟಂಡನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಪಾಟ್ನಾ ಶುಕ್ಲಾದಲ್ಲಿ ಚಿತ್ರೀಕರಣದ ಸಮಯದಲ್ಲಿ ಅರ್ಬಾಜ್‌ಗೆ ಶುರಾ ಪರಿಚಯವಾಗಿದ್ದರು. ಪಾಟ್ನಾ ಶುಕ್ಲಾಗೆ ಅರ್ಬಾಜ್ ನಿರ್ಮಾಪಕರಾದ ಹಿನ್ನೆಲೆ ಮೇಲಿಂದ ಮೇಲೆ ಭೇಟಿಯಾಗಲು ಶುಉರ ಮಾಡಿದ್ದರು. ಹೀಗೆ ಶುರುವಾದ ಪರಿಚಯ ಆ ನಂತರ ಸ್ನೇಹಕ್ಕೆ ತಿರುಗಿತು. ಆ ನಂತರ ಕೆಲವೇ ದಿನಗಳಲ್ಲಿ ಪ್ರೇಮಾಂಕುರವಾಯಿತು.
ಅರ್ಬಾಜ್ ಮತ್ತು ಶುರಾ ಮದುವೆಯಲ್ಲಿ ಅರ್ಬಾಜ್ ಖಾನ್ ಮೊದಲ ಪತ್ನಿ ಮಲೈಕಾ ಅರೋರಾ ಕೂಡ ಭಾಗವಹಿಸಿದ್ದರು.ರವೀನಾ ಟಂಡನ್ ಮತ್ತು ಮಗಳು ರಾಶಾ ಥಡಾನಿ, ರಿದ್ಧಿಮಾ ಪಂಡಿತ್, ರಿತೇಶ್ ದೇಶ್‌ಮುಖ್ ಮತ್ತು ಪತ್ನಿ ಜೆನಿಲಿಯಾ ದೇಶಮುಖ್ ಕೂಡ ನಿಖಾದಲ್ಲಿ ಭಾಗಯಾಗಿದ್ದರು. ಸಲ್ಮಾನ್ ಖಾನ್ ಸೇರಿ ಕುಟುಂಬ ವರ್ಗದವರೆಲ್ಲ ಹಾಜರಿದ್ದರು. ಅರ್ಬಾಜ್ ಖಾನ್ ಅವರಿಗೆ ಎದೆಯೆತ್ತರಕ್ಕೆ ಬೆಳೆದ ಅರ್ಹಾನ್ ಖಾನ್ ಎಂಬ ಮಗ ಇದ್ದಾನೆ. ತಂದೆಯ ಎರಡನೇ ಮದುವೆಯಲ್ಲಿ ಮಗ ಕೂಡ ಡ್ಯಾನ್ಸ್ ಮಾಡಿದ್ದ.


Click it and Unblock the Notifications











