ಗುಡ್ ನ್ಯೂಸ್ ಕೊಡ್ತಿದ್ದಾರಾ ದೀಪಿಕಾ ಪಡುಕೋಣೆ.? ಸುರಿಯುತ್ತಿದೆ ಪ್ರಶ್ನೆಗಳ ಸುರಿಮಳೆ.!

Recommended Video

Deepika Padukone shares the cutest Childhood Photos on Instagram

ಸೋಷಿಯಲ್ ಮೀಡಿಯಾದಲ್ಲಿ ಸದಾ ಟ್ರೆಂಡಿಂಗ್ ನಲ್ಲಿರುವ ದಂಪತಿ ಯಾರು ಅಂತ ಕೇಳಿದ್ರೆ ದೀಪಿಕಾ ಪಡುಕೋಣೆ ಮತ್ತು ರಣ್ವೀರ್ ಸಿಂಗ್ ಎಂದು ಥಟ್ ಅಂತ ಉತ್ತರ ಕೊಡ್ತಾರೆ ಬಾಲಿವುಡ್ ಸಿನಿ ಪ್ರಿಯರು. ಪ್ರತಿ ನಿತ್ಯ ಒಂದಲ್ಲಾ ಒಂದು ಪೋಸ್ಟ್ ಹಾಕುತ್ತ ಸದಾ ಟ್ರೆಂಡಿಂಗ್ ನಲ್ಲಿರ್ತಾರೆ ಈ ಜೋಡಿ.

ಮದುವೆ ಆಗಿ ಆಲ್ಮೋಸ್ಟ್ ವರ್ಷ ತುಂಬಿಸಿರುವ ಈ ದಂಪತಿ ಮೊನ್ನೆ ಮೊನ್ನೆಯಷ್ಟೇ ದೀಪಾವಳಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದರು. ದೀಪಾವಳಿ ಹಬ್ಬ ಮುಗಿಯುತ್ತಿದ್ದಂತೆಯೇ, ತಮ್ಮ ಬಾಲ್ಯದ ಫೋಟೋಗಳನ್ನ ದೀಪಿಕಾ ಪಡುಕೋಣೆ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ. ಅದಕ್ಕೆ ''ದೀಪಾವಳಿ ಮುಗಿದ ಬಳಿಕ ಸಂಭ್ರಮ'' ಎಂದು ಕ್ಯಾಪ್ಷನ್ ಕೂಡ ಕೊಟ್ಟಿದ್ದಾರೆ.

ಇದನ್ನ ನೋಡಿರುವ ಅಭಿಮಾನಿಗಳಿಗೆ ''ಸಂಭ್ರಮ ಅಂದ್ರೆ ಗುಡ್ ನ್ಯೂಸ್ ಇರಬಹುದಾ.?'' ಎಂಬ ಡೌಟ್ ಬಂದಿದೆ. ದೀಪಿಕಾ ಪಡುಕೋಣೆ ಗರ್ಭಿಣಿ ಆಗಿದ್ದಾರಾ.? ಅಂತ ನೆಟ್ಟಿಗರು ನೇರವಾಗಿ ದಿಪ್ಪಿಗೆ ಪ್ರಶ್ನೆ ಮಾಡುತ್ತಿದ್ದಾರೆ.

Is Deepika Padukone Instagram Post Hinting Good News Soon

ದೀಪಿಕಾ ಪಡುಕೋಣೆ ಪ್ರೆಗ್ನೆಂಟ್ ಅಂತ ಈಗಾಗಲೇ ಹಲವು ಬಾರಿ ಗಾಸಿಪ್ ಹಬ್ಬಿತ್ತು. ಆದ್ರೆ, ಇಲ್ಲಿಯವರೆಗೂ ಈ ಬಗ್ಗೆ ದೀಪಿಕಾ ಪಡುಕೋಣೆ ಆಗಲಿ ರಣ್ವೀರ್ ಸಿಂಗ್ ಆಗಲಿ ಸ್ಪಷ್ಟನೆ ಕೊಟ್ಟಿಲ್ಲ. ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಬಾಲ್ಯದ ಭಾವಚಿತ್ರಗಳನ್ನು ದೀಪಿಕಾ ಪಡುಕೋಣೆ ಹಂಚಿಕೊಂಡಿರುವುದು ಇದೇ ಮೊದಲೇನಲ್ಲ. ಆದರೆ, ಈ ಬಾರಿ ''ದೀಪಾವಳಿ ಬಳಿಕದ ಸಂಭ್ರಮ'' ಅಂತ ಹೇಳಿರುವುದು ಹಲವರ ಕುತೂಹಲಕ್ಕೆ ಕಾರಣವಾಗಿದೆ.

ಅಂದ್ಹಾಗೆ, ಕಳೆದ ವರ್ಷದ ನವೆಂಬರ್ ತಿಂಗಳಲ್ಲಿ ಇಟಲಿಯಲ್ಲಿ ರಣ್ವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಸಾಂಪ್ರದಾಯಿಕವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಹೀಗಾಗಿ, ದೀಪಿಕಾ ಪಡುಕೋಣೆ ಕಡೆಯಿಂದ ಅಭಿಮಾನಿಗಳು ಸಿಹಿ ಸುದ್ದಿ ನಿರೀಕ್ಷೆ ಮಾಡುತ್ತಿದ್ದಾರೆ. ಆದರೆ, ಸದ್ಯಕ್ಕೆ 'ಚಪಕ್', '83' ಚಿತ್ರಗಳಲ್ಲಿ ದೀಪಿಕಾ ಪಡುಕೋಣೆ ಬಿಜಿಯಾಗಿದ್ದಾರೆ. ಜೊತೆಗೆ 'ಮಹಾಭಾರತ' ಚಿತ್ರದಲ್ಲಿ ದ್ರೌಪದಿ ಪಾತ್ರ ನಿಭಾಯಿಸಲು ದೀಪಿಕಾ ಪಡುಕೋಣೆ ಕಮ್ಮಿಟ್ ಆಗಿದ್ದಾರೆ ಎನ್ನಲಾಗಿದೆ.

More from Filmibeat

English summary
Is Bollywood Actress Deepika Padukone's new Instagram post hinting 'Good News coming soon'?.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X