33 ವರ್ಷದ ವಜ್ರದ ವ್ಯಾಪಾರಿಗೆ ಮನಸೋತ 52 ವರ್ಷದ ಮಲೈಕಾ ಅರೋರಾ ? ವಿಡಿಯೋ ವೈರಲ್ - ಯಾರು ಈ ಮಾಸ್ಕ್ ಮ್ಯಾನ್ ?

ಈ ಬಣ್ಣದ ಲೋಕನೇ ಹಾಗೇ. ಇಲ್ಲಿ ದಿನಕ್ಕೊಂದು ಸುದ್ದಿ ಸತ್ಯ ಆದರೆ, ಮಿಕ್ಕ ತೊಂಬತ್ತೊಂಬತ್ತು ಸುದ್ದಿ ಸುಳ್ಳಾಗುತ್ತಾವೆ. ಆದರೂ.. ಈ ಅಂತೆ-ಕಂತೆಯ ಸಂತೆಯಲ್ಲಿ ಊಹಾಪೋಹ ಸುದ್ದಿಗಳಿಗೆ ಬರ ಇಲ್ಲ. ಅದರಲ್ಲಿಯೂ ಲವ್ .. ಬ್ರೇಕಪ್.. ಮದುವೆ.. ಡಿವೋರ್ಸ್‌ ಸುದ್ದಿಗಳು ಇಲ್ಲಿ ತುಂಬಾನೇ ಮಾಮೂಲು. ಯಾಕೆಂದರೆ.. ಇಲ್ಲಿ ಕೆಲವರು ಪ್ರೀತಿಯಲ್ಲಿ ಬಿದ್ದರೆ ಕೊನೆಯವರೆಗೆ ತಮ್ಮ ಪ್ರೀತಿಯನ್ನು ಉಳಿಸಿಕೊಳ್ಳಲು...

ಪ್ರಯತ್ನ ಮಾಡುತ್ತಾರೆ. ತಮ್ಮ ಪ್ರಿಯಕರ/ಪ್ರಿಯತಮೆ ಅಪ್ರಾಮಾಣಿಕವಾದರೂ ಕೂಡ ತಾವು ಮಾತ್ರ ತಮ್ಮ ಪ್ರೀತಿಗೆ ಬದ್ಧರಾಗಿರುತ್ತಾರೆ. ಆದರೆ ಇನ್ನೂ ಕೆಲವರು ಇಲ್ಲಿ ಇದ್ದಾರೆ. ಇವರಿಗೆ ಪದೇ ಪದೇ ಪ್ರೀತಿಯಲ್ಲಿ ಬೀಳುವುದೇ ಖಯಾಲಿ. ಸಂಬಂಧಗಳನ್ನು ತುಂಡರಿಸಿಕೊಳ್ಳುವುದು ಇವರಿಗೆ ಬಟ್ಟೆ ಬದಲಿಸಿದಷ್ಟೇ ಸುಲಭ. ಉದಾಹರಣೆಗೆ ಮಲೈಕಾ ಅರೋರಾ.

Is Diamond Merchant Harsh Mehta The New Man In Malaika Arora s Life The Airport Spotting Says Yes

ಹೌದು, ಮಲೈಕಾ ಅರೋರಾ ..ಬಾಲಿವುಡ್‌ನ ಬಳಕುವ ಬಳ್ಳಿ. 50 + ವಯಸ್ಸಾದರೂ ಇವರ ಮನ ಸದಾ ಪ್ರೀತಿಗೆ ಹಾತೊರೆಯುತ್ತಿರುತ್ತೆ. ಇದಕ್ಕೆ ಕೈಗನ್ನಡಿ ಎಂಬಂತೆ ಮಲೈಕಾ ಒಂದು ದಿನ ಪ್ರೇಮದ ಅಮಲಿನಲ್ಲಿ ತೂರಾಡಿದರೆ ... ಮತ್ತೊಂದು ದಿನ ಬ್ರೇಕಪ್ ನೋವಲ್ಲಿ ವಾಲಾಡುತ್ತಾರೆ.

ಅರ್ಬಾಜ್ ಖಾನ್ ಅವರಿಗೆ ಡಿವೋರ್ಸ್‌ ನೀಡಿದ ನಂತರ ಅರ್ಜುನ್ ಕಪೂರ್ ಅವರಿಂದ ದೂರವಾದ ನಂತರ..ಶ್ರೀಲಂಕಾ ಕ್ರಿಕೆಟ್ ತಂಡದ ದಂತಕಥೆ ಕುಮಾರ ಸಂಗಕ್ಕಾರ ಅವರಿಂದ ಹಿಡಿದು ಫ್ಯಾಷನ್ ಪ್ರಪಂಚದಲ್ಲಿ ಗುರುತಿಸಿಕೊಂಡಿರುವ ರಾಹುಲ್ ವಿಜಯ್ ಅವರ ಜೊತೆ ಮಲೈಕಾ ಅರೋರಾ ಹೆಸರು ಕೇಳಿ ಬಂದಿದೆ.

ಇಂಥಾ ಮಲೈಕಾ ಅರೋರಾ ಅವರ ಹೆಸರು ಸದ್ಯ 33 ವರ್ಷದ ಚೆಲುವ ಹರ್ಷ್ ಮೆಹ್ತಾ ಅವರ ಜೊತೆ ಥಳುಕು ಹಾಕಿಕೊಂಡಿದೆ. ಇದಕ್ಕೆ ಪೂರಕವಾಗಿ ಕಳೆದ ಅಕ್ಟೋಬರ್‌ನಲ್ಲಿ ಮುಂಬೈನ ಎಂಎಂಆರ್‌ಡಿಎ ಗ್ರೌಂಡ್‌ನಲ್ಲಿ ನಡೆದ ಗ್ರ್ಯಾಮಿ ಪ್ರಶಸ್ತಿ ವಿಜೇತ ಗಾಯಕ ಎನ್ರಿಕ್ ಇಗ್ಲೇಷಿಯಸ್ ಅವರ ಮ್ಯೂಸಿಕಲ್ ನೈಟ್ ಕಾರ್ಯಕ್ರಮದಲ್ಲಿ ಮಲೈಕಾ ಅರೋರಾ ಇದೇ ಹರ್ಷ್ ಮೆಹ್ತಾ ಜೊತೆ ಕಾಣಿಸಿಕೊಂಡಿದ್ದರು.

ಇಲ್ಲಿಂದ ಇವರ ಇಬ್ಬರ ಸಂಬಂಧದ ಕುರಿತು ಚರ್ಚೆಯಾಗಲು ಶುರುವಾಯ್ತು. ಮಲೈಕಾ ಅರೋರಾ ಅವರ ಹಾವ ಭಾವ - ಕಣ್ಸನ್ನೆ.. ಕಣ್ಣೋಟ.. ಕ್ಯಾಮರಾದಲ್ಲಿ ಸೆರೆಯಾಗಿತ್ತು. ವಿಡಿಯೋ ವೈರಲ್ ಆಗಿತ್ತು. ಇದೀಗ ಮಲೈಕಾ ಅರೋರಾ ಇದೇ ಹರ್ಷ್ ಮೆಹ್ತಾ ಜೊತೆ ವಿಮಾನ ನಿಲ್ದಾಣದಲ್ಲಿ ಕ್ಯಾಮರಾದವರ ಕೈಯಲ್ಲಿ ಸಿಕ್ಕಿ ಬಿದ್ದಿದ್ದಾರೆ.

Is Diamond Merchant Harsh Mehta The New Man In Malaika Arora s Life The Airport Spotting Says Yes

ಕ್ಯಾಮರಾ ಕಂಡು ಇಬ್ಬರು ಪ್ರತೈಕವಾಗಿ ಹೊರ ಹೋಗುವ ಪ್ರಯತ್ನವನ್ನು ಮಾಡಿದ್ದಾರಾದರೂ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ. ಕ್ಯಾಶುವಲ್ ಉಡುಪು ಧರಿಸಿ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಮಲೈಕಾ ಅರೋರಾ ಅವರನ್ನು ದೂರದಿಂದ ಹಿಂಬಾಲಿಸಿದ ಹರ್ಷ್ ಮೆಹ್ತಾ ಆ ನಂತರ ಸೀದಾ ಪಾರ್ಕಿಂಗ್ ಸ್ಥಳಕ್ಕೆ ಹೋಗಿ ಮಲೈಕಾ ಅರೋರಾ ಕಾರಿನಲ್ಲಿ ಕುಳಿತುಕೊಂಡಿದ್ದಾರೆ. ಒಂದೇ ಕಾರಿನಲ್ಲಿ ಇಬ್ಬರು ವಿಮಾನ ನಿಲ್ಧಾಣದಿಂದ ಹೊರ ಹೋಗಿದ್ದಾರೆ.

ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮಲೈಕಾ ಅರೋರಾ ಮತ್ತು ಹರ್ಷ್ ಮೆಹ್ತಾ ನಡುವೆ ಪ್ರೇಮಾಂಕುರವಾಗಿರುವುದು ನಿಜಾ ಎನ್ನುವುದಕ್ಕೆ ಇವರ ಈ ವಿಡಿಯೋ ಸಾಕ್ಷಿ ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಇಬ್ಬರು ಜೊತೆಯಲ್ಲಿ ಪ್ರವಾಸಕ್ಕೆ ಹೋಗಿ ಬಂದಂತೆ ಇದೆ ಎನ್ನುವ ಮಾತು ಕೂಡ ಕೇಳಿ ಬರುತ್ತಿದೆ.

ಅಂದ್ಹಾಗೇ ನ್ಯೂಸ್ 18 ಸೇರಿ ಹಲವು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿರುವಂತೆ ಹರ್ಷ್‌ ಮೆಹ್ತಾ ಅವರಿಗೆ ಈಗ 33 ವರ್ಷ. ವೃತ್ತಿಯಲ್ಲಿ ವಜ್ರದ ವ್ಯಾಪಾರಿ ಇವರು. ಮಾಧ್ಯಮಗಳ ವರದಿಯ ಪ್ರಕಾರ ಕೋಟ್ಯಂತರ ರೂಪಾಯಿ ಆಸ್ತಿಯ ಒಡೆಯ. ಸಾಮಾಜಿಕ ಜಾಲತಾಣಗಳಿಂದ ಮತ್ತು ಮಾಧ್ಯಮದ ಕ್ಯಾಮರಾಗಳಿಂದ ಇಲ್ಲಿಯವರೆಗೆ ಹರ್ಷ್ ಮೆಹ್ತಾ ಅಂತರವನ್ನು ಕಾಪಾಡಿಕೊಂಡು ಬಂದಿದ್ದರು. ಆದರೆ ಈಗ ಮಲೈಕಾ ಅರೋರಾ ಸಹವಾಸದಿಂದ ಹರ್ಷ್ ಮೆಹ್ತಾ ಮೇಲಿಂದ ಮೇಲೆ ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೀಡಾಗುತ್ತಿದ್ದಾರೆ.

ಒಟ್ನಲ್ಲಿ ಸದ್ಯ ಮಲೈಕಾ ಅರೋರಾ ಮತ್ತು ಹರ್ಷ್ ಮೆಹ್ತಾ ಇಬ್ಬರು ವಿಮಾನ ನಿಲ್ದಾಣದಿಂದ ಬರುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮಲೈಕಾ ಅರೋರಾ ಮತ್ತು ಹರ್ಷ್ ಮೆಹ್ತಾ ಅವರ ಸಂಬಂಧ ಕೇವಲ ಸ್ನೇಹಕ್ಕೆ ಮಾತ್ರ ಸೀಮಿತವಾಗಿದ್ದಾ ? ಅಥವಾ ಸ್ನೇಹಕ್ಕೂ ಮೀರಿದ ಸಂಬಂಧ ಇಬ್ಬರ ನಡುವೆ ಇದೆಯಾ ಎನ್ನುವುದಕ್ಕೆ ಉತ್ತರ ಖುದ್ದು ಮಲೈಕಾ ಅರೋರಾ ಅವರೇ ನೀಡಬೇಕು.

More from Filmibeat

English summary
Learn the identity of Malaika Arora's rumored beau, Harsh Mehta, a 33-year-old diamond merchant. Find out why their shared car ride is fueling intense dating buzz.
Read more about: malaika arora rumours
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X