ಮದ್ವೆಯಾಗದೇ 12 ವರ್ಷಗಳಿಂದ ಈ ವ್ಯಕ್ತಿಯ ಜೊತೆ ಒಂದೇ ಸೂರಿನಡಿ ಬದುಕುತ್ತಿದ್ದಾರೆ ಈ ಖ್ಯಾತ ನಟಿ..!
ಪ್ರೀತಿಯಲ್ಲಿ ಬೀಳುವುದಕ್ಕಿಂತ ಪ್ರೀತಿಯನ್ನೇ ಊರುಗೋಲಾಗಿ ಹಿಡಿದು ಮೇಲೇಳಬೇಕು. ಈ ಪ್ರೀತಿ ಯಾರಲ್ಲಿ, ಯಾವಾಗ ಎಲ್ಲಿ ಹುಟ್ಟುತ್ತದೆ ಎಂದು ಹೇಳುವುದು ಕಷ್ಟ. ಆದರೆ ಪ್ರೀತಿ ಹುಟ್ಟಿದ ಮೇಲೆ ಅದನ್ನು ಕಾಪಾಡಿಕೊಂಡು ಹೋಗಬೇಕು.ಇನ್ನು ಪ್ರೀತಿ ಅಂದರೆ ಹಾಗೇ ಜೀವನವನ್ನೇ ಬದಲಾಯಿಸುವ ಶಕ್ತಿ ಹೊಂದಿರುವ ಮಾಯಾಜಾಲ. ಮಧುರ ಪ್ರೀತಿಗೆ ತಂದೆ ತಾಯಿಯೂ ಬೇಡ, ಹಣ ಒಡವೆ ಕೂಡ ಬೇಡ.
ಸಂಗಾತಿಯ ಮಾತಿನ ಕಚಗುಳಿಯ ನಡುವೆ ಸ್ಪರ್ಶದ ಸಿಂಚನ ಸಾಕು ಅನ್ಸುತ್ತೆ. ಬಿಟ್ಟಿರಲಾರದ ತವಕ, ಏನೂ ಬೇಡವೆನ್ನುವ ಭಾವ. ಇದಕ್ಕೆ ಡಯಾನಾ ಪೆಂಟಿ ಅವರ ವ್ಯೆಯಕ್ತಿಕ ಬದುಕು ಸದ್ಯದ ಮತ್ತೊಂದು ಉದಾಹರಣೆ.

ಹೌದು, ಡಯಾನಾ ಪೆಂಟಿ.. ಬಾಲಿವುಡ್‌ನ ಚೆಲುವೆ. ಕಾಕ್ಟೈಲ್.. ಹ್ಯಾಪಿ ಭಾಗ್ ಜಾಯೇಗಿ.. ಪರಮಾಣು.. ಸೆಲ್ಫಿ.. ಬ್ಲಡಿ ಡ್ಯಾಡಿ.. ಹೀಗೆ ಕಳೆದೊಂದು ದಶಕದಲ್ಲಿ ಹಲವು ಚಿತ್ರಗಳಲ್ಲಿ ಅಭಿನಯಿಸಿರುವ ಡಯಾನಾ ಪೆಂಟಿಗೆ ಈಗ 39ರ ಹರೆಯ. ಆದರೆ.. ಇನ್ನೂ ಮದುವೆಯಾಗಿಲ್ಲ.
ಹಾಗಂಥ ಡಯಾನಾ ಸಿಂಗಲ್ ಸುಂದರಿ ಕೂಡ ಅಲ್ಲ. ಬದಲಿಗೆ ಲಿವ್ ಇನ್ ಸಂಬಂಧದಲ್ಲಿದ್ದಾರೆ. ಅದು, ಒಂದೆರಡಲ್ಲ. ಕಳೆದ ಹನ್ನೆರಡು ವರ್ಷಗಳಿಂದ. ಈ ವಿಚಾರವನ್ನು ಇತ್ತೀಚೆಗೆ ಖುದ್ದು ಡಯಾನಾ ರಿವೀಲ್ ಮಾಡಿದ್ದಾರೆ.
ಹೌಟರ್‌ಫ್ಲೈಗೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ಡಯಾನಾ, ನಾನು ಒಂಟಿಯಲ್ಲ ಎಂದು ಹೇಳಿದ್ದಾರೆ. 22 ವರ್ಷಗಳಿಂದ ನನಗೆ ಹರ್ಷ್ ಸಾಗರ್ ಪರಿಚಯ. ಕಳೆದ 12 ವರ್ಷಗಳಿಂದ ನಾವು ಜೊತೆಯಲ್ಲಿಯೇ ವಾಸ ಮಾಡುತ್ತಿದ್ದೇವೆ ಎಂದಿರುವ ಡಯಾನಾ, ನಾವು ಸಮಾಜದ ದೃಷ್ಟಿಯಲ್ಲಿ ಸಂಪ್ರದಾಯ ಬದ್ಧವಾಗಿ ಮದುವೆಯಾಗಿಲ್ಲ ಅಷ್ಟೇ ಆದರೆ ನಮ್ಮ ಇಬ್ಬರ ಆತ್ಮಗಳು ಒಂದಾಗಿವೆ, ಮಾನಸಿಕವಾಗಿ ನಾವು ಮದುವೆಯಾಗಿದ್ದೇವೆ ಎಂದು ಡಯಾನಾ ಹೇಳಿದ್ದಾರೆ.
ಮದುವೆ ಪ್ರಮಾಣ ಪತ್ರ ನಮ್ಮ ಬಳಿ ಇಲ್ಲ ಹಾಗಂಥ ನಮ್ಮ ಮೇಲೆ ಮದುವೆಯಾಗುವಂತೆ ಒತ್ತಡವನ್ನು ಕೂಡ ನಮ್ಮ ಮನೆಯಲ್ಲಿ ಯಾರು ಹೇರುತ್ತಿಲ್ಲ ಎಂದಿರುವ ಡಯಾನ ನಾವು ಇಬ್ಬರು ಜೊತೆಯಲ್ಲಿ ಖುಷಿ ಖುಷಿಯಾಗಿದ್ದೇವೆ, ಒಟ್ಟಿಗೆ ವಾಸ ಮಾಡುತ್ತಿದ್ದೇವೆ, ನಾಯಿಯನ್ನು ಮಗುವಿನಂತೆ ಸಾಕುತ್ತಿದ್ದೇವೆ ಎಂದು ಡಯಾನಾ ಈ ಸಂದರ್ಶನದಲ್ಲಿ ಹೇಳಿದ್ದಾರೆ.

ಅಂದ್ಹಾಗೇ ಡಯಾನಾ ಹೃದಯ ಗೆದ್ದ ಹರ್ಷ್ ಸಾಗರ್, ವಜ್ರದ ಉದ್ಯಮಿ ಎಂದು ರಿಪಬ್ಲಿಕ್ ಟಿವಿ ವರದಿಯನ್ನು ಮಾಡಿದೆ. ಇದಲ್ಲದೇ ಬಾಲಿವುಡ್‌ನ ಖ್ಯಾತ ನಿರ್ದೇಶಕ, ಅಮಿತಾಬ್ ಬಚ್ಚನ್ ಅವರಿಗೆ 'ಡಾನ್' ಚಿತ್ರವನ್ನು ನಿರ್ದೇಶಿಸಿದ್ದ ಚಂದ್ರ ಬರೋಟ್ ಅವರ ಸಂಬಂಧಿ ಕೂಡ ಹೌದು ಹರ್ಷ್ ಸಾಗರ್.
ಇಂಥಾ ಹಿನ್ನೆಲೆಯ ಹರ್ಷ್ ಸಾಗರ್ ಜೊತೆ ಕಳೆದ ಹನ್ನೆರಡು ವರ್ಷಗಳಿಂದ ಮದುವೆಯಾಗದೇ ಒಂದೇ ಮನೆಯಲ್ಲಿ ಸಂಸಾರ ನಡೆಸುತ್ತಿರುವುದಾಗಿ ಡಯಾನಾ ಪೆಂಟಿ ಹೇಳಿದ್ದಾರೆ.
ಇನ್ನುಳಿದಂತೆ ಸದ್ಯ ಡಯಾನಾ ಅಭಿನಯದ ಡಿಟೆಕ್ಟಿವ್ ಶೆರ್‌ದಿಲ್ ಚಿತ್ರ ಇಂದಿನಿಂದ { ಜೂನ್ 20 } ಜೀ 5ನಲ್ಲಿ ಪ್ರಸಾರವಾಗುತ್ತಿದೆ. ರವಿ ಚಾಬ್ರಿಯಾ ನಿರ್ದೇಶನದ ಈ ಚಿತ್ರದಲ್ಲಿ ದಿಲ್ಜಿತ್ ದೊಸಾಂಜ್ ನಾಯಕನ ಪಾತ್ರವನ್ನು ನಿರ್ವಹಿಸಿದ್ದಾರೆ. ಬೊಮನ್ ಇರಾನಿ ಮತ್ತು ಚಂಕಿ ಪಾಂಡೆ ಕೂಡ ಈ ಚಿತ್ರದಲ್ಲಿದ್ದಾರೆ. ಈ ಚಿತ್ರವನ್ನು ಹೊರತು ಪಡಿಸಿದರೆ ಸೆಕ್ಷನ್ 84 ಎಂಬ ಚಿತ್ರವನ್ನು ಕೂಡ ಡಯಾನಾ ಪೆಂಟಿ ಮಾಡುತ್ತಿದ್ದಾರೆ. ಡೇರಿಂಗ್ ಪಾರ್ಟನರ್ಸ್ ಎಂಬ ವೆಬ್ ಸರಣಿಗೆ ಕೂಡ ಡಯಾನಾ ಬಣ್ಣ ಹಚ್ಚಿದ್ದಾರೆ.


Click it and Unblock the Notifications