For Quick Alerts
  ALLOW NOTIFICATIONS  
  For Daily Alerts

  ಸಲ್ಮಾನ್ ಖಾನ್‌ ವಿರುದ್ಧ ಯುದ್ಧ ಸಾರಿದ ಕೆಆರ್‌ಕೆಗೆ ಗೋವಿಂದ ಸಹಾಯ!

  |

  ನಟ ಸಲ್ಮಾನ್ ಖಾನ್ ವೃತ್ತಿಯನ್ನು ಮಣ್ಣುಪಾಲು ಮಾಡುತ್ತೇನೆ. ಅವನ ಜೀವನವನ್ನು ನಿರ್ನಾಮ ಮಾಡುತ್ತೇನೆ ಎಂದು ಕಮಾಲ್ ಆರ್ ಖಾನ್ ಕೆಲವು ದಿನಗಳ ಹಿಂದೆಯಷ್ಟೆ ಅಬ್ಬರಿಸಿ ಬೊಬ್ಬಿರಿದಿದ್ದಾರೆ.

  ಕಮಲ್ ಆರ್ ಖಾನ್ ಮಾಡಿರುವ ಪ್ರತಿಜ್ಞೆ ನೋಡಿ ಜನ ನಕ್ಕದ್ದೇ ಹೆಚ್ಚು. ಆದರೆ ಕಮಾಲ್ ಆರ್‌ ಖಾನ್‌ ಸಲ್ಮಾನ್ ಖಾನ್‌ರ ಮಾಜಿ ಗೆಳೆಯರೇ ಸಹಾಯ ಮಾಡುತ್ತಿದ್ದಾರೆಯೇ ಎಂಬ ಅನುಮಾನ ಇದೀಗ ಮೂಡಿದೆ.

  ಹೌದು, ಸಲ್ಮಾನ್ ಖಾನ್‌ ಜೀವನವನ್ನು ಮಣ್ಣು ಪಾಲು ಮಾಡುವುದಾಗಿ ಪ್ರತಿಜ್ಞೆ ಮಾಡಿರುವ ಕಮಾಲ್ ಆರ್ ಖಾನ್ ಇದೀಗ ಟ್ವಿಟ್ಟರ್‌ನಲ್ಲಿ ವ್ಯಕ್ತಿಯೊಬ್ಬರಿಗೆ ಧನ್ಯವಾದ ಹೇಳಿದ್ದಾರೆ. ಆ ಟ್ವೀಟ್‌ನಿಂದಾಗಿಯೇ ಸಲ್ಮಾನ್ ಖಾನ್‌ರ ಗೆಳೆಯ ಗೋವಿಂದ ಮೇಲೆ ಅನುಮಾನ ಏರ್ಪಟ್ಟಿದೆ.

  ಸಲ್ಮಾನ್ ಕುರಿತಾಗಿ ಟ್ವೀಟ್ ಮಾಡಿದ ಬಳಿಕ ಟ್ವೀಟ್ ಮಾಡಿರುವ ಕಮಾಲ್ ಆರ್‌ ಖಾನ್, 'ನಿಮ್ಮ ಪ್ರೀತಿ ಮತ್ತು ಬೆಂಬಲಕ್ಕೆ ಧನ್ಯವಾದ ಗೋವಿಂದ ಭಾಯ್. ನಿಮ್ಮ ನಿರೀಕ್ಷೆಯನ್ನು ನಾನು ಹುಸಿಗೊಳಿಸುವುದಿಲ್ಲ' ಎಂದಿದ್ದಾರೆ. ಸಲ್ಮಾನ್ ಖಾನ್ ವಿರುದ್ಧ ಯುದ್ಧಕ್ಕೆ ನಿಂತಿರುವ ಕಮಲ್ ಆರ್ ಖಾನ್ ಗೆ ನಟ ಗೋವಿಂದ ಸಹಾಯ ಮಾಡುತ್ತಿದ್ದಾರೆಯೇ ಎಂಬ ಅನುಮಾನ ಈ ಟ್ವೀಟ್‌ನಿಂದ ವ್ಯಕ್ತವಾಗಿದೆ.

  ಆಗಿದ್ದಿಷ್ಟು, ಕಮಾಲ್ ಆರ್‌ ಖಾನ್, ಸಲ್ಮಾನ್ ನಟನೆಯ 'ರಾಧೆ' ಸಿನಿಮಾದ ವಿಮರ್ಶೆ ನೀಡಿದ್ದರು. ವಿಮರ್ಶೆ ಮಾಡುವ ವೇಳೆ 'ರಾಧೆ' ಸಿನಿಮಾವು ಅತ್ಯಂತ ಕೆಟ್ಟ ಸಿನಿಮಾ ಎಂದು ಹೇಳಿದ್ದರು. ವಿಮರ್ಶೆ ಮಾಡುತ್ತಾ ಕಣ್ಣೀರು ಹಾಕಿದ್ದ ಕೆಆರ್‌ಕೆ, ನಾನು ಇನ್ನೂ ಅರ್ಧ ಸಿನಿಮಾ ನೋಡುವುದು ಬಾಕಿ ಇದೆ. ನನಗೆ ಈಗಲೇ ಭಯವಾಗುತ್ತಿದೆ. ಮನೆಗೆ ಹೋಗಿ ಮಾತ್ರೆಗಳನ್ನು ತೆಗೆದುಕೊಂಡು ಎರಡು ದಿನ ವಿಶ್ರಾಂತಿ ಪಡೆಯುತ್ತೇನೆ' ಎಂದಿದ್ದರು.

  Recommended Video

  ದುಡುಕಿ ಏನನ್ನೂ ಮಾಡ್ಬಾರ್ದು ಅನ್ನೋದು ಗೊತ್ತಾಯ್ತು ಎಂದ ಕನ್ನಡತಿ ಖ್ಯಾತಿಯ ರಂಜನಿ | Filmibeat Kannada

  ಇದರಿಂದ ಸಿಟ್ಟಿಗೆದ್ದ ಸಲ್ಮಾನ್ ಖಾನ್, ಕಮಲ್ ಆರ್ ಖಾನ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದರು. ಇದಕ್ಕೆ ಪ್ರತಿಯಾಗಿ ಟ್ವಿಟ್ಟರ್‌ನಲ್ಲಿ ಪ್ರತಿಜ್ಞೆ ಮಾಡಿದ ಕಮಾಲ್ ಆರ್ ಖಾನ್, 'ನಾನು ಸಲ್ಮಾನ್ ಖಾನ್ ವೃತ್ತಿ ಜೀವನವನ್ನು ಮಣ್ಣು ಪಾಲು ಮಾಡುತ್ತೇನೆ' ಎಂದಿದ್ದಾರೆ.

  English summary
  Is Govinda helping Kamaal R Khan to battle against Salman Khan. Kamaal R Khan tweeted thanking Govinda for his support.
  Tuesday, June 1, 2021, 14:47
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X