'RRR' ಬದಲು ರೀಮೇಕ್ ಸಿನಿಮಾವನ್ನು ಆಸ್ಕರ್‌ಗೆ ಆರಿಸಿತೇ ಎಫ್‌ಎಫ್‌ಐ?

ರಾಜಮೌಳಿ ನಿರ್ದೇಶನದ ಸೂಪರ್ ಹಿಟ್ ಸಿನಿಮಾ 'RRR' ಈ ಬಾರಿ ಆಸ್ಕರ್‌ಗೆ ಆಯ್ಕೆಯಾಗುತ್ತದೆ ಎಂಬ ನಿರೀಕ್ಷೆ ದೊಡ್ಡ ಮಟ್ಟದಲ್ಲಿತ್ತು. ವಿದೇಶಿ ಮನೊರಂಜನಾ ಮ್ಯಾಗಜೀನ್‌ಗಳು ಸಹ ಈ ಬಾರಿ ಆಸ್ಕರ್‌ನ ಅಂತಿಮ ಘಟ್ಟಕ್ಕೆ 'RRR' ಬರಲಿದೆ ಎಂದಿದ್ದವು. ಆದರೆ ಭಾರತದ ಜ್ಯೂರಿಗಳು 'RRR' ಬದಲು ಗುಜರಾತಿ ಸಿನಿಮಾ 'ಚೆಲ್ಲೊ ಶೋ' ಅನ್ನು ಅಧಿಕೃತವಾಗಿ ಆಸ್ಕರ್‌ ಸ್ಪರ್ಧೆಗೆ ಕಳಿಸಿದ್ದಾರೆ.

'RRR' ಸಿನಿಮಾವನ್ನು ಆಸ್ಕರ್‌ಗೆ ಅಧಿಕೃತವಾಗಿ ಭಾರತದಿಂದ ಕಳಿಸದೇ ಇರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಏರ್ಪಟ್ಟಿದ್ದು, ಎಫ್‌ಎಫ್‌ಐನ ಜ್ಯೂರಿಗಳ ವಿರುದ್ಧ ನೆಟ್ಟಿಗರು ಹರಿಹಾಯ್ದಿದ್ದಾರೆ. ಅಲ್ಲದೆ, ಇದೀಗ ಆಸ್ಕರ್‌ಗೆ ಆಯ್ಕೆ ಮಾಡಲಾಗಿರುವ ಗುಜರಾತಿ ಸಿನಿಮಾ 'ಚೆಲ್ಲೊ ಶೋ' ಒರಿಜಿನಲ್ ಸಿನಿಮಾ ಅಲ್ಲ ಬದಲಿಗೆ ಅದೊಂದು ರೀಮೇಕ್ ಸಿನಿಮಾ ಎಂದಿದ್ದಾರೆ.

ಇಟಾಲಿಯನ್ ಸಿನಿಮಾ 'ನುವೊ ಸಿನಿಮಾ ಪ್ಯಾರಡೈಸೊ' ಸಿನಿಮಾದ ಸ್ಪೂರ್ತಿ ಪಡೆದು 'ಚೆಲ್ಲೊ ಶೋ' ಸಿನಿಮಾ ಮಾಡಲಾಗಿದೆ. ಒಂದು ರೀಮೇಕ್ ಸಿನಿಮಾವನ್ನು ಆಸ್ಕರ್‌ಗೆ ಎಫ್‌ಎಫ್‌ಐ ಆಯ್ಕೆ ಮಾಡಿದೆ ಎಂದು ನೆಟ್ಟಿಗರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮತ್ತೆ ಬಡತನದ ಕತೆಯುಳ್ಳ ಸಿನಿಮಾವನ್ನೇ ಆಸ್ಕರ್‌ಗೆ ಕಳಿಸಲಾಗಿದೆ ಎಂದು ಸಹ ಕೆಲವರು ಟೀಕಿಸಿದ್ದಾರೆ.

ಇಟಾಲಿಯನ್ ಸಿನಿಮಾ 'ನುವೊ ಸಿನಿಮಾ ಪ್ಯಾರಡೈಸೊ' 1988 ರಲ್ಲಿ ಬಿಡುಗಡೆ ಆಗಿತ್ತು. ಆ ಸಿನಿಮಾ ಸಹ ಆಸ್ಕರ್ ಪಡೆದುಕೊಂಡಿತ್ತು. ಬಾಲಕನೊಬ್ಬ ಸಿನಿಮಾ ಬಗ್ಗೆ ಆಕರ್ಷಿತನಾಗಿ ಚಿತ್ರಮಂದಿರದಲ್ಲಿ ಪ್ರೊಜೆಕ್ಷನ್ ಕಲಿಯುವ ಬಗ್ಗೆ ಆ ನಂತರ ಅವನ ಜೀವನದಲ್ಲಿ ನಡೆವ ಘಟನೆಗಳ ಬಗ್ಗೆ ಸಿನಿಮಾ ಮಾಡಲಾಗಿದೆ.

Is Indias Official Entry For Oscars Challo Show Is A Remake Movie

'ಚೆಲ್ಲೊ ಶೋ' ಸಿನಿಮಾದ ಕತೆ ಪೂರ್ಣವಾಗಿ 'ನುವೊ ಸಿನಿಮಾ ಪ್ಯಾರಡೈಸೊ' ಅನ್ನು ಹೋಲುತ್ತಿಲ್ಲವಾದರೂ, ಅದರ ಛಾಯೆ ತುಸು ಈ ಸಿನಿಮಾದ ಮೇಲಿರುವುದು ಸಿನಿಮಾದ ಟ್ರೈಲರ್‌ನಿಂದ ತಿಳಿದುಬರುತ್ತಿದೆ. 'ಚೆಲ್ಲೊ ಶೋ' ಸಿನಿಮಾದಲ್ಲಿ ಬಡ ಬಾಲಕನೊಬ್ಬನಿಗೆ ಸಿನಿಮಾ ಎಂದರೆ ಪ್ರಾಣ. ಚಿತ್ರಮಂದಿರಕ್ಕೆ ತೆರಳಿ ಸಿನಿಮಾ ನೋಡುವಷ್ಟು ಹಣವಿಲ್ಲ.

ಆತ ಸಿನಿಮಾದ ಪ್ರೊಜಕ್ಷನ್ ರೂಮ್‌ನಲ್ಲಿ ಕೆಲಸ ಮಾಡುವ ವ್ಯಕ್ತಿಯೊಂದಿಗೆ ಸ್ನೇಹ ಸಾಧಿಸುತ್ತಾನೆ, ಅವನಿಗೆ ದಿನವೂ ರುಚಿಯಾದ ಆಹಾರ ತಂದುಕೊಟ್ಟು ಪ್ರೊಜೆಕ್ಷನ್ ರೂಮಿನಿಂದ ಸಿನಿಮಾ ನೋಡುತ್ತಾನೆ. ಪ್ರೊಜೆಕ್ಟರ್ ಹೇಗೆ ಕೆಲಸ ಮಾಡುತ್ತದೆ ಕಲಿಯುತ್ತಾನೆ. ಆದರೆ ಒಂದು ದಿನ ಆ ಚಿತ್ರಮಂದಿರ ಬಂದ್ ಆಗುತ್ತದೆ. ಆ ನಂತರ ಆ ಬಾಲಕ ಏನು ಮಾಡುತ್ತಾನೆ ಎಂಬುದು ಸಿನಿಮಾದ ಕತೆ. ಸಿನಿಮಾವನ್ನು ಪಾನ್ ನಳಿನ್ ನಿರ್ದೇಶನ ಮಾಡಿದ್ದಾರೆ.

'ಚೆಲ್ಲೊ ಶೋ' ಸಿನಿಮಾ ಆಸ್ಕರ್‌ಗೆ ಅಧಿಕೃತವಾಗಿ ಆಯ್ಕೆ ಆಗಿದೆ. ಆದರೆ 'RRR' ಸಿನಿಮಾಕ್ಕೆ ಅವಕಾಶ ಇನ್ನೂ ಇದೆ. ಅಧಿಕೃತವಾಗಿ ಅಲ್ಲದೇ ಇದ್ದರು ಸಹ 'RRR' ಸಿನಿಮಾ ಆಸ್ಕರ್‌ಗೆ ಆಯ್ಕೆ ಆಗಬಹುದಾಗಿದೆ.

More from Filmibeat

English summary
India's official entry for Oscars Challo Show movie is a remake?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X