ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್‌ಗೆ ಸದಾ ನಗಿಸುವ ಹುಡುಗನೇ ಬೇಕಂತೆ!

ಬಾಲಿವುಡ್‌ನಲ್ಲಿ ಸ್ಟಾರ್‌ ಮಕ್ಕಳ ಹಾವಳಿಯೇ ಹೆಚ್ಚು. ಅದರಲ್ಲಿ ಸ್ಟಾರ್ ನಟಿ ಶ್ರೀದೇವಿ ಮತ್ತು ಸ್ಟಾರ್ ನಿರ್ಮಾಪಕ ಬೋನಿ ಕಪೂರ್ ಮಕ್ಕಳು ಕೂಡ ಇದ್ದಾರೆ. ಈಗಾಗಲೇ ಇವರ ಮೊದಲ ಮಗಳು ಜಾಹ್ನವಿ ಕಪೂರ್ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟಿದ್ದಾಳೆ. ಸಾಲು, ಸಾಲು ಸಿನಿಮಾಗಳನ್ನು ಕೂಡ ಮಾಡುತ್ತಿದ್ದಾರೆ.

ಶ್ರೀದೇವಿ ಸೌತ್ ಸಿನಿಮಾ ಮತ್ತು ಬಾಲಿವುಡ್‌ನಲ್ಲಿ ಸಿಕ್ಕಾಪಟ್ಟೆ ಮಿಂಚಿದವರು. ಸ್ಟಾರ್ ನಟಿಯಾಗಿ ದಶಕಗಳ ಕಾಲ ಚಿತ್ರರಂಗವನ್ನು ಆಳಿದವರು. ಆದರೆ ಅವರ ಮಕ್ಕಳಿಗೆ ಇನ್ನೂ ಆ ಭಾಗ್ಯ ದೊರೆತಿಲ್ಲ. ಜಾಹ್ನವಿ ಸಿನಿಮಾಗಳನ್ನು ಮಾಡುತ್ತಿದ್ದಾರೆ ಆದರೆ ಸೂಪರ್ ಹಿಟ್ ಸಿನಿಮಾಗಳನ್ನು ಇನ್ನೂ ಕೊಟ್ಟಿಲ್ಲ.

ಆದರೆ ಈಗ ಜಾಹ್ನವಿ ಕಪೂರ್ ಸಿನಿಮಾದಿಂದ ಅಲ್ಲ, ಬದಲಿಗೆ ಜಾಹ್ನವಿ ತಮ್ಮ ಮದುವೆಯ ವಿಚಾರಕ್ಕೆ ಸುದ್ದಿ ಆಗಿದ್ದಾರೆ. ಅರೆ ಇದೇನಪ್ಪ ಈಕೆಗೆ ಮದುವೆ ಫಿಕ್ಸ್ ಆಯ್ತಾ ಅಂದುಕೊಂಡಿರಾ? ಮುಂದೆ ಓದಿ..

ಹುಡುಗನ ಬಗ್ಗೆ ಮಾತನಾಡಿದ ಜಾಹ್ನವಿ ಕಪೂರ್!

ಹುಡುಗನ ಬಗ್ಗೆ ಮಾತನಾಡಿದ ಜಾಹ್ನವಿ ಕಪೂರ್!

ಜಾಹ್ನವಿ ಕಪೂರ್ ಮದುವೆ ಬಗ್ಗೆ ಸುದ್ದಿ ಆಗಲು ಕಾರಣವಿದೆ. ಆಕೆಯೇ ಸಂದರ್ಶನ ಒಂದರಲ್ಲಿ ಜಾಹ್ನವಿ ತನ್ನ ಭಾವಿ ಪತಿ ಹೇಗೆ ಇರಬೇಕು ಎಂದು ಹೇಳಿಕೊಂಡಿದ್ದಾರೆ. ಹಾಗಾಗಿ ತೆರೆಮರೆಯಲ್ಲಿ ಜಾಹ್ನವಿ ಕಪೂರ್ ಮದುವೆ ಏನಾದ್ರೂ ನಿಶ್ವಯ ಆಯ್ತಾ ಎನ್ನುವ ಶಂಕೆ ಹುಟ್ಟಿಕೊಂಡಿದೆ. ಆದರೆ ಸದ್ಯಕ್ಕೆ ಮದುವೆ ನಿಶ್ಚಯ ಆಗಿಲ್ಲ. ಆದರೆ ಹುಡುಗನ ಗುಣಗಳ ಬಗ್ಗೆ ಜಾಹ್ನವಿ ಮಾತನಾಡಿದ್ದಾರೆ.

ನಗುಸುವ ಹುಡುಗನೇ ಬೇಕಂತೆ!

ನಗುಸುವ ಹುಡುಗನೇ ಬೇಕಂತೆ!

ಹೌದು, ನಟಿ ಜಾಹ್ನವಿ ಕಪೂರ್ ತಾನು ಮದುವೆ ಆಗುವ ಹುಡುಗ ಹೇಗೆ ಇರಬೇಕು ಎನ್ನುವುದನ್ನು ಹೇಳಿದ್ದಾರೆ. "ನಾನು ಮಾಡುವ ಕೆಲಸವನ್ನು ಇಷ್ಟ ಪಡುವ ಪ್ರತಿಭಾವಂತ ವ್ಯಕ್ತಿ ನನಗೆ ಪತಿಯಾಗಬೇಕು. ಜೊತೆಗೆ ಕಾಮಿಡಿ ಚೆನ್ನಾಗಿ ಮಾಡಬೇಕು. ಸೆನ್ಸ್ ಆಫ್ ಹ್ಯೂಮರ್ ಚೆನ್ನಾಗಿರಬೇಕು. ಯಾವಾಗಲೂ ನನ್ನನ್ನು ನೋಡಿ ನಗುತ್ತಿರಬೇಕು. ಸದಾ ಏನಾದರೂ ಹೇಳಿಕೊಡುವ, ಹುರಿದುಂಬಿಸುವ ಗುಣಗಳಿರುವವನೇ ನನ್ನ ಜೀವನ ಸಂಗಾತಿಯಾಗಿ ಬರಬೇಕು" ಎಂದು ಹೇಳಿದ್ದಾರೆ.

ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ!

ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ!

ಜಾಹ್ನವಿ ಕಪೂರ್ ಬಾಲಿವುಡ್‌ನ ಟಾಪ್ ನಟಿಯರಲ್ಲಿ ಒಬ್ಬರು. 2018ರಲ್ಲಿ 'ಧಡಕ್' ಸಿನಿಮಾ ಮೂಲಕ ಹಿಂದಿ ಚಿತ್ರರಂಗಕ್ಕೆ ಪರಿಚಯವಾದರು. ಬಳಿಕ ಹಲವಾರು ಚಿತ್ರಗಳಲ್ಲಿ ಜಾಹ್ನವಿ ನಟಿಸುತ್ತಿದ್ದಾರೆ. ಬಾಲಿವುಡ್‌ನಲ್ಲಿ, ಧಡಕ್, 'ಗುಂಜನ್ ಸಕ್ಸೇನಾ', 'ಕಾರ್ಗಿಲ್ ಗರ್ಲ್' ಮತ್ತು 'ಘೋಸ್ಟ್ ಸ್ಟೋರೀಸ್'‌ನಂತಹ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಪ್ರಸ್ತುತ ಅವರ ಕೈಯಲ್ಲಿ, 'ಗುಡ್ ಲಕ್ ಜೆರ್ರಿ', 'ಮಿಲಿ', 'ಬಾವಲ್', 'ಮಿಸ್ಟರ್ ಅಂಡ್ ಮಿಸ್ ಮಹಿ' ಮುಂತಾದ ಚಿತ್ರಗಳಿವೆ.

ತೆಲುಗಿನಲ್ಲಿ ಜಾಹ್ನವಿ ಅಭಿನಯ!

ತೆಲುಗಿನಲ್ಲಿ ಜಾಹ್ನವಿ ಅಭಿನಯ!

ಅತಿಲೋಕ ಸುಂದರಿ ಶ್ರೀದೇವಿಯ ಮಗಳು ಟಾಲಿವುಡ್‌ಗೆ ಎಂಟ್ರಿ ಕೊಡುತ್ತಿದ್ದಾರೆ ಎನ್ನಲಾಗಿದೆ. ಸೌತ್ ಪ್ರೇಕ್ಷಕರಲ್ಲಿ ಇದು ಕುತೂಹಲ ಹುಟ್ಟಿಸಿದೆ. ಆದರೆ, ಜಾಹ್ನವಿ ಕಪೂರ್ ಇದುವರೆಗೂ ಯಾವುದೇ ತೆಲುಗು ಚಿತ್ರ ಒಪ್ಪಿಕೊಂಡಿಲ್ಲ. ಜಾಹ್ನವಿ ಅಭಿನಯದ 'ಗುಡ್ ಲಕ್ ಜೆರ್ರಿ' ಚಿತ್ರ ಜುಲೈ 29 ರಿಂದ ಒಟಿಟಿಯಲ್ಲಿ ತೆರೆಗೆ ಬರ್ತಿದೆ.

More from Filmibeat

English summary
Is Janhvi Kapoor Planning For Wedding, She Talk About The Boy Qualities,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X