ಎಂ.ಎಸ್.ಧೋನಿ ಆಪ್ತ ಸ್ನೇಹಿತನ ಜೊತೆ ಲವ್ವಲ್ಲಿ ಬಿದ್ದ ಸ್ಟಾರ್ ನಟಿ...!
ಚಿತ್ರರಂಗದ ತಾರೆಯರೇ ಹಾಗೇ ಅನಸುತ್ತೆ. ಕೆಲವೊಮ್ಮೆ ಪ್ರಣಯ ಪಕ್ಷಿಗಳಂತೆ ಹಾರಾಡುವ ಇವರು, ಇನ್ನೂ ಕೆಲ ಒಮ್ಮೆ ಹಾಗೇ ದೂರವಾಗುತ್ತಾರೆ. ಮತ್ತೂ ಕೆಲ ಒಮ್ಮೆ ನಾನು ಸಿಂಗಲ್ ಎಂದು ಹೇಳಿಕೊಂಡು ತಿರುಗುತ್ತಾನೇ ಅಚಾನಕ್ ಆಗಿ ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗುತ್ತಾರೆ. ಸಾರ್ವಜನಿಕವಾಗಿ ಸಿಕ್ಕಿ ಹಾಕಿಕೊಳ್ಳುತ್ತಾರೆ. ಇದಕ್ಕೆ ಕೃತಿ ಸನೋನ್ ಸದ್ಯದ ಉದಾಹರಣೆ.
ಹೌದು, ಕೃತಿ ಸನೋನ್.. ಹೀರೋಂಪತಿ ಚಿತ್ರದ ಮೂಲಕ ಬಾಲಿವುಡ್‌ಗೆ ಬಂದ ಚೆಲುವೆ. ಮೊದಲ ಚಿತ್ರದಲ್ಲಿಯೇ ತನ್ನ ಅಂದ ಚೆಂದದಿಂದ ಕಣ್ಮನ ಸೆಳೆದ ಕೃತಿ ಸನೋನ್ ಆ ನಂತರ ಚಿತ್ರರಂಗದಲ್ಲಿ ಒಂದೊಂದೆ ಮೆಟ್ಟಿಲೇರಿದರು. ಇನ್ನೂ.. ಹಿಂದಿ ಉದ್ಯಮದಲ್ಲಿ ಲವ್ವು-ನೋವು ಎರಡು ತುಂಬಾ ಮಾಮೂಲು. ಇದಕ್ಕೆ ಕೈಗನ್ನಡಿ ಎಂಬಂತೆ ವೃತ್ತಿಯ ಆರಂಭದಲ್ಲಿಯೇ ತನ್ನ ಮೊದಲ ಚಿತ್ರ ಹೀರೋಪಂತಿಯ ಹೀರೋ ಟೈಗರ್ ಶ್ರಾಫ್ ಜೊತೆ ಕೃತಿ ಹೆಸರು ಕೇಳಿ ಬಂದಿತ್ತು. ಆ ನಂತರ ಸುರಸುಂದರಾಂಗ ಸುಶಾಂತ್ ಸಿಂಗ್ ರಜಪೂತ್ ಅವರನ್ನು ಕೃತಿ ಸನೋನ್ ಪ್ರೀತಿ ಮಾಡುತ್ತಿದ್ದಾರೆ ಎಂದು ಬಾಲಿವುಡ್ ಮಾತನಾಡಿಕೊಂಡಿತ್ತು.

ಆದರೆ ಅಷ್ಟರಲ್ಲಿ ಸುಶಾಂತ್ ಸಿಂಗ್ ರಜಪೂತ್ ನೇಣಿಗೆ ಕೊರಳೊಡ್ಡಿದರು. ಬಾರದ ಲೋಕಕ್ಕೆ ತೆರಳಿದರು. ಸುಶಾಂತ್ ಸಿಂಗ್ ರಜಪೂತ್ ಅವರ ಹಠಾತ್ ಅಗಲಿಕೆಯಿಂದ ಕೃತಿ ದಿಗ್ಬ್ರಾಂತರಾಗಿದ್ದರು. ಸುಶಾಂತ್ ನೆನೆದು ಅನೇಕ ಬಾರಿ ಕಣ್ಣೀರು ಕೂಡ ಹಾಕಿದ್ದರು. ಈ ಕಾರಣಕ್ಕೆ ನಿಜವಾಗಿಯೂ ಕೃತಿ ಮತ್ತು ಸುಶಾಂತ್ ಪರಸ್ಪರ ಪ್ರೀತಿ ಮಾಡುತ್ತಿದ್ದರು ಎಂದು ಎಲ್ಲರು ಅಂದುಕೊಂಡರು. ಸುಶಾಂತ್ ಸಿಂಗ್ ರಜಪೂತ್ ಅಗಲಿಕೆಯ ನಂತರ ಕೃತಿ ಸನೋನ್ ಹೆಸರು ಪ್ರಭಾಸ್ ಸೇರಿ ಇನ್ನೂ ಮೂರು ನಾಲ್ಕು ಜನರ ಜೊತೆ ಕೇಳಿ ಬಂತು.
ಆದರೆ ಆ ಸುದ್ದಿಗಳೆಲ್ಲ ಅಂತೆ-ಸಂತೆಯಲ್ಲಿಯೇ ಮಾಯವಾದವು. ಈ ಕಾರಣಕ್ಕೆ ಕೃತಿ ಸದ್ಯಕ್ಕೆ ಏಕಾಂಗಿಯಾಗಿರಬಹುದು ಎಂದು ಮಾಯನಗರಿ ಮುಂಬೈನಲ್ಲಿರುವ ಚಿತ್ರ ಪಂಡಿತರು ಅಂದಾಜಿಸಿದ್ದರು. ಆದರೆ ಈಗ ಕೃತಿ ಸನೋನ್ ಯುಕೆ ಮೂಲದ ಉದ್ಯಮಿ ಕಬೀರ್ ಬಾಹಿಯಾ ಜೊತೆ ಕಾಣಿಸಿಕೊಂಡಿದ್ದಾರೆ. ಮ್ಯಾಚಿಂಗ್ ಡ್ರೆಸ್ ಹಾಕಿಕೊಂಡು ವಿಮಾನ ನಿಲ್ದಾಣದೊಳಗೆ ಹೋಗಿದ್ದಾರೆ. ಆದರೆ ಈ ಸಮಯದಲ್ಲಿ ಹೊರಗಡೆ ಬಿಡಾರ ಹೂಡಿದ್ದ ಪಾಪರಾಜಿಗಳನ್ನು ಕಂಡು ದೂರ ಸರಿದಿದ್ದಾರೆ. ಕ್ಯಾಮರಾಗಳಿಗೆ ಫೋಸ್ ಕೊಡದೇ ಕಬೀರ್ ಬಹಿಯಾ ಪ್ರತೈಕವಾಗಿ ನಿರ್ಗಮಿಸಿದರೆ ಕೃತಿ ಸನೋನ್ ಕಾಟಾಚಾರಕ್ಕೆ ಒಂದೆರಡು ಫೋಸ್ ನೀಡಿ ಅಲ್ಲಿಂದ ತೆರಳಿದ್ದಾರೆ.
ಈ ಹಿನ್ನೆಲೆ ಕಬೀರ್ ಬಹಿಯಾ ಮತ್ತು ಕೃತಿ ಸನೋನ್ ಅವರ ಸಂಬಂಧದ ಕುರಿತು ಬಾಲಿವುಡ್ ಈಗ ಚರ್ಚೆ ಮಾಡುತ್ತಿದೆ. ಕೃತಿ ಸನೋನ್ ಅಭಿಮಾನಿ ಬಳಗ ಕಬೀರ್ ಬಹಿಯಾ ಜಾತಕವನ್ನು ಹೆಕ್ಕಿ ತೆಗೆದಿದೆ. ಆ ಪೈಕಿ ನೋಡುವುದಾದರೆ ಕೃತಿ ಸನೋನ್ ಜೊತೆ ಸುತ್ತಾಡುತ್ತಿರುವ ಕಬೀರ್ ಬಹಿಯಾ ಮತ್ತು ಭಾರತ ತಂಡದ ಮಾಜಿ ಕ್ರಿಕೆಟ್ ಪ್ಲೇಯರ್ ಮತ್ತು ಕ್ಯಾಪ್ಟನ್ ಎಂ.ಎಸ್.ಧೋನಿ ನಡುವೆ ಗಳಸ್ಯ ಕಂಠಸ್ಯ ಸ್ನೇಹ ಇದೆ. ಕೇವಲ ಎಂ.ಎಸ್.ಧೋನಿ ಮಾತ್ರ ಅಲ್ಲ ಹಾರ್ದಿಕ್ ಪಾಂಡ್ಯ ಮತ್ತು ಕೃನಾಲ್ ಪಾಂಡ್ಯಗೆ ಕೂಡ ಕಬೀರ್ ಬಹಿಯಾ ಅತ್ಯಾಪ್ತರು. ಇನ್ನೂ ಕ್ರೀಡೆ ಅಂದರೆ ಇವರಿಗೆ ಅಚ್ಚು ಮೆಚ್ಚು. ಇನ್ನೂ ಯುಕೆ ಅಲ್ಲಿ ಸೌತ್ ಹಾಲ್ ಟ್ರಾವೆಲ್ಸ್ ಹೆಸರಿನಲ್ಲಿ ಇವರದ್ದೊಂದು ಟ್ರಾವೆಲ್ ಏಜೆನ್ಸಿ ಇದೆ. ಇವರ ತಂದೆ ಕುಲ್ಜಿಂದರ್ ಬಹಿಯಾ ಯುಕೆ ಅಲ್ಲಿರುವ ಕೋಟ್ಯಾಧಿಪತಿಗಳಲ್ಲಿ ಒಬ್ಬರು. ಉಳಿದಂತೆ ಕೃತಿ ಸನೋನ್ ಸದ್ಯ ನಿರ್ಮಾಪಕಿಯಾಗಿ ಬಡ್ತಿ ಪಡೆದಿದ್ದಾರೆ. ತಾವು ನಿರ್ಮಾಣ ಮಾಡಿದ ಮೊದಲ ಚಿತ್ರ ದೊ ಪತ್ತಿಗೆ ನೆಟ್‌ಪ್ಲಿಕ್ಸ್‌ನಲ್ಲಿ ಸಿಕ್ತಿರುವ ಪ್ರತಿಕ್ರಿಯೆಯಿಂದ ಪುಳಕಿತಗೊಂಡಿದ್ದಾರೆ.


Click it and Unblock the Notifications











