ಪತ್ನಿ ನತಾಶಗೆ ವಿಚ್ಛೇದನ ನೀಡಿದರೆ ಶೇಕಡಾ 70 % ಕರಗಲಿದೆ ಹಾರ್ದಿಕ್ ಪಾಂಡ್ಯ ಸಂಪತ್ತು...!
ಕ್ರಿಕೆಟ್ ಹಾಗೂ ಸಿನಿಮಾ ಎರಡಕ್ಕೂ ಮೊದಲಿಂದ ಗಂಡ-ಹೆಂಡ್ತಿಯ ಸಂಬಂಧ. ಬಿಟ್ರೂ ಬಿಡದ ಈ ಎರಡು ಮಾಯೆ, ಮಾಯಾಲೋಕದ ಸ್ವರ್ಗ ತೆರೆದಿಡುವ ಉದ್ಯಮಗಳು. ಇಲ್ಲಿ ಆಟದ ಜೊತೆ ಹಣ ಇದೆ. ಗೆಲುವಿನ ಜೊತೆ ನಾನಾ ಬಗೆಯ ನಶೆ ಇದೆ. ಇನ್ನೂ ಪ್ರೀತಿ ಅನ್ನುವ ಪದದ ಅರ್ಥ ಬದಲಾಗದೇ ಇದ್ದರೂ, ಈ ಎರಡು ಕ್ಷೇತ್ರದಲ್ಲಿ ಈ ಪ್ರೀತಿಯನ್ನ ಅರ್ಥೈಸಿಕೊಳ್ಳುವ ರೀತಿ ತುಂಬಾನೇ ಬದಲಾಗಿದೆ. ಸಂಬಂಧಕ್ಕಿಂತ ದುಡ್ಡೇ ದೊಡ್ಡಪ್ಪ ಎಂಬ ಮನಸ್ಥಿತಿ ಹೆಚ್ಚಾಗಿದೆ. ಇದಕ್ಕೆ ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಸ್ಟಾಂಕೋವಿಕ್ ಅತ್ಯುತ್ತಮ ಸಾಕ್ಷಿ ಎಂಬ ಅಭಿಪ್ರಾಯವನ್ನ ಸದ್ಯಕ್ಕೆ ಅನೇಕರು ವ್ಯಕ್ತಪಡಿಸುತ್ತಿದ್ದಾರೆ.
ಹೌದು, ಕಳೆದ ಕೆಲ ದಿನಗಳಿಂದ ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ನಡುವೆ ಅರಳಿದ್ದ ಪ್ರೇಮ ಕಮರಿದೆ ಅನ್ನುವ ಮಾತು ದಶದಿಕ್ಕುಗಳಿಂದ ಕೇಳಿ ಬರುತ್ತಿದೆ. ಇದಕ್ಕೆ ಪೂರಕವಾಗಿ ನತಾಶ ಹೆಸರಿನ ಮುಂದೆ ಇದ್ದ ಹಾರ್ದಿಕ್ ಹೆಸರು ಮಾಯವಾಗಿದೆ. ಹಾರ್ದಿಕ್ ಪಾಂಡ್ಯ ನಾಯಕನಾದರೂ ಕೂಡ ಮುಂಬೈ ಇಂಡಿಯನ್ಸ್ ಪಂದ್ಯಗಳನ್ನ ನೋಡಲು ನತಾಶಾ ಯಾಕೆ ಒಮ್ಮೆಯೂ ಬರಲಿಲ್ಲ ಎಂಬ ಪ್ರಶ್ನೆ ಅನೇಕರನ್ನ ಈಗ ಕಾಡುತ್ತಿದೆ.

ಇನ್ನೂ ಸ್ವರ್ಗವನ್ನೇ ಧರೆಗಿಳಿಸಿ ಮೊದಲೆಲ್ಲ ನತಾಶ ಹುಟ್ಟಿದ ಹಬ್ಬವನ್ನ ಹಾರ್ದಿಕ್ ಪಾಂಡ್ಯ ಆಚರಿಸುತ್ತಿದ್ದರು. ಆದರೆ ಈ ಬಾರಿ ಯಾವ ಆಡಂಬರ ಕಾಣಲಿಲ್ಲ. ನತಾಶ ಹುಟ್ಟಿದ ಹಬ್ಬಕ್ಕೆ ಹಾರ್ದಿಕ್ ಪಾಂಡ್ಯ ಶುಭಾಶಯವನ್ನೂ ಕೂಡ ಕೋರಲಿಲ್ಲ. ಈ ಎಲ್ಲ ಕಾರಣಗಳಿಂದ ಇಬ್ಬರ ಸುತ್ತ ಮುತ್ತ ಅನುಮಾನದ ಹೊಗೆಯಾಡುತ್ತಿದೆ. ಹೀಗಿರುವಾಗ ನೈಟ್ ಕ್ಲಬ್‌ನಲ್ಲಿ ಸೆರ್ಬಿಯಾ ಸುಂದರಿಯ ಮೋಹಕ್ಕೆ ಸಿಲುಕಿ ಮದುವೆಯಾದ ತಪ್ಪಿಗೆ ಹಾರ್ದಿಕ್ ಪಾಂಡ್ಯ ಸಂಪತ್ತು ಶೇಕಡಾ 70ರಷ್ಟು ಕರಗಲಿದೆ ಅನ್ನುವ ಮಾತು ಕೇಳಿ ಬರುತ್ತಿದೆ.
ಹೌದು. ಅಪ್ಪಿ..ತಪ್ಪಿ.. ಹರಿದಾಡುತ್ತಿರುವ ಸುದ್ದಿ ನಿಜವಾದಲ್ಲಿ, ಹಾರ್ದಿಕ್ ಪಾಂಡ್ಯ ತಮ್ಮ ಜನುಮದ ಜೋಡಿ ನತಾಶ ಅವರಿಂದ ದೂರವಾಗುವ ನಿರ್ಧಾರಕ್ಕೆ ಬಂದು ವಿಚ್ಛೇದನ ನೀಡಿದ್ದೇ ಆದಲ್ಲಿ, ಹಾರ್ದಿಕ್ ಪಾಂಡ್ಯ ತನ್ನ ಆಸ್ತಿಯಲ್ಲಿ ಶೇಕಡಾ 70 ಪ್ರತಿಶತವನ್ನು ನತಾಶಾಗೆ ನೀಡಬೇಕಾಗಬಹುದು ಎಂಬ ವರದಿಯನ್ನ ಅಹಮದಾಬಾದ್ ಮಿರರ್ ಪ್ರಕಟಿಸಿದೆ. ಯಾಕೆಂದರೆ.. ನತಾಶ ಇಲ್ಲಿವರಲ್ಲ ಬದಲಿಗೆ ಸೆರ್ಬಿಯಾ ದೇಶದವರು. ಹೀಗಾಗಿ ಅವರು ಜೀವನಾಂಶವನ್ನು ಸರ್ಬಿಯನ್ ದಿನಾರ್ನಲ್ಲಿ ಪಡೆದುಕೊಳ್ಳುವ ಸಾಧ್ಯತೆಯಿದೆ ಎಂದು ಅಹಮದಾಬಾದ್ ಮಿರರ್ ಉಲ್ಲೇಖಿಸಿದೆ. ಈ ಹಣಕಾಸಿನ ಇಕ್ಕಟ್ಟು ವಿಚ್ಚೇದನದ ವಿಚಾರದಲ್ಲಿ ಹಾರ್ದಿಕ್ ಪಾಂಡೆಯನ್ನ ಕೈಯನ್ನ ಕಟ್ಟಿಹಾಕಿದೆ ಎಂಬ ಮಾತು ಕೂಡ ಈ ವರದಿಯ ಬೆನ್ನಲ್ಲಿಯೇ ಎಲ್ಲೆಡೆ ಕೇಳಿ ಬರುತ್ತಿದೆ.

ಇನ್ನೂ ಆಸ್ತಿಯ-ಪಾಸ್ತಿಯ ವಿಚಾರ ಚರ್ಚೆಯಾಗ್ತಿರುವ ಈ ಸಮಯದಲ್ಲಿ, ಹಿಂದೊಮ್ಮೆ ಹಾರ್ದಿಕ್ ಪಾಂಡ್ಯ ಮಾತನಾಡಿದ್ದ ಮಾತು ಸಾಮಾಜಿಕ ಜಾಲತಾಣದಲ್ಲಿ ಮತ್ತೆ ಮಾರ್ದನಿಸುತ್ತಿದೆ. ತಮ್ಮ ಸಂಪೂರ್ಣ ಆಸ್ತಿಯ ಒಡತಿ ನಮ್ಮ ಅಮ್ಮ ಎಂದು ಹಾರ್ದಿಕ್ ಪಾಂಡ್ಯ ಹೇಳಿದ್ದ ವಿಡಿಯೋ ಒಂದು ವೈರಲ್ ಆಗಿದೆ.
ವೈರಲ್ ಆದ ವಿಡಿಯೋದಲ್ಲಿ ನಮ್ಮ ಮನೆಯ ಕಾರು, ಆಸ್ತಿಗಳಿಂದ ಹಿಡಿದು ಎಲ್ಲವೂ ಕೂಡಾ ಅಮ್ಮನ ಹೆಸರಿನಲ್ಲಿದ್ದು, ನಮ್ಮೆಲ್ಲರ 50% ಅಕೌಂಟ್ ಪಾರ್ಟ್ನರ್‌ಶಿಪ್ ಅಮ್ಮನ ಹೆಸರಿನಲ್ಲಿದೆ. ಹೀಗಿರುವಾಗ ನನ್ನ ಆಸ್ತಿಯ 50% ಅಲ್ಲ 5% ಭಾಗ ಕೂಡಾ ಯಾರಿಗೂ ಸಿಗೋಕೆ ಸಾಧ್ಯವಿಲ್ಲ ಎಂದು ಹಾರ್ದಿಕ್ ಪಾಂಡ್ಯ ವರ್ಷಗಳ ಹಿಂದೆ ಹೇಳಿದ್ದರು.
ಒಟ್ನಲ್ಲಿ ಸದ್ಯಕ್ಕೆ ಹಾರ್ದಿಕ್ ಪಾಂಡ್ಯ ತಮ್ಮ ಪತ್ನಿಯಿಂದ ದೂರವಾಗಲು ತಾವು ಗಳಿಸಿರುವ ಶೇಕಡಾ 70ರಷ್ಟು ಆಸ್ತಿಯನ್ನ ನೀಡಬೇಕು ಎಂಬ ಸುದ್ದಿ ಸದ್ಯಕ್ಕೆ ವೈರಲ್ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರದ ಕುರಿತು ಗಂಭೀರವಾದ ಚರ್ಚೆ ನಡೆಯುತ್ತಿದೆ. ದೊಡ್ಡ ದೊಡ್ಡವರ ಸಂಸಾರದ ಕಥೆ ಇಷ್ಟೇ ಅನ್ನುವ ಅಭಿಪ್ರಾಯ ಕೂಡ ವ್ಯಕ್ತವಾಗುತ್ತಿದೆ.


Click it and Unblock the Notifications











