ಬಾಲಿವುಡ್ ತುಂಬಾ ಪೂಜಾ ಹೆಗ್ಡೆ ಪ್ಯಾರ್ ಬಗ್ಗೆ ಗುಲ್ಲೋ ಗುಲ್ಲು.!

ನಟಿ ಪೂಜಾ ಹೆಗ್ಡೆ ತಂದೆ-ತಾಯಿ ಕರ್ನಾಟಕ ಮೂಲದವರಾದರೂ, ಪೂಜಾ ಹೆಗ್ಡೆ ಹುಟ್ಟಿ-ಬೆಳೆದಿದ್ದೆಲ್ಲ ಮುಂಬೈನಲ್ಲಿ. ತಮಿಳು ಮತ್ತು ತೆಲುಗು ಚಿತ್ರಗಳಲ್ಲಿ ಅಭಿನಯಿಸಿರುವ ಪೂಜಾ ಹೆಗ್ಡೆ ಬಾಲಿವುಡ್ ನಲ್ಲೂ ತಮ್ಮದೇ ಆದ ಛಾಪಿನಿಂದ ಗುರುತಿಸಿಕೊಂಡಿದ್ದಾರೆ.

ಹ್ಯಾಂಡ್ಸಮ್ ಹಂಕ್ ಹೃತಿಕ್ ರೋಷನ್ ಜೊತೆಗೆ 'ಮೊಹೆಂಜೋ ದಾರೋ' ಮತ್ತು ಮಲ್ಟಿ ಸ್ಟಾರರ್ ಚಿತ್ರ 'ಹೌಸ್ ಫುಲ್-4' ಚಿತ್ರದಲ್ಲಿ ನಟಿಸಿರುವ ಪೂಜಾ ಹೆಗ್ಡೆ ಹಿಂದಿ ಚಿತ್ರರಂಗದಲ್ಲಿ ಬಹು ಬೇಡಿಕೆ ಕಂಡುಕೊಂಡಿದ್ದಾರೆ.

ಇಂತಿಪ್ಪ ನಟಿ ಪೂಜಾ ಹೆಗ್ಡೆ ಬಗ್ಗೆ ಗಾಸಿಪ್ ವೊಂದು ಕೇಳಿ ಬರುತ್ತಿದೆ. ನಟಿ ಪೂಜಾ ಹೆಗ್ಡೆ ಪ್ರೀತಿಯಲ್ಲಿ ಬಿದ್ದಿದ್ದಾರಂತೆ ಎಂಬ ಅಂತೆ-ಕಂತೆ ಕೇಳಿಬರುತ್ತಿದೆ. ಬಾಲಿವುಡ್ ನಟರೊಬ್ಬರನ್ನು ಪೂಜಾ ಹೆಗ್ಡೆ ಲವ್ ಮಾಡುತ್ತಿದ್ದಾರೆ ಎನ್ನಲಾಗಿದೆ.

is-pooja-hegde-dating-bollywood-actor-rohan-mehra

ಬಾಲಿವುಡ್ ನಟ ರೋಹನ್ ವಿನೋದ್ ಮೆಹ್ರಾ ಎಂಬುವರನ್ನ ನಟಿ ಪೂಜಾ ಹೆಗ್ಡೆ ಡೇಟಿಂಗ್ ಮಾಡುತ್ತಿದ್ದಾರೆ ಅಂತ ಬಾಲಿವುಡ್ ತುಂಬಾ ಗುಲ್ಲೆಬ್ಬಿದೆ. ಯಾರು ಈ ರೋಹನ್ ವಿನೋದ್ ಮೆಹ್ರಾ ಅಂದ್ರೆ 2018 ರಲ್ಲಿ ತೆರೆಕಂಡ 'ಬಾಝಾರ್' ಚಿತ್ರದಲ್ಲಿ ಸೈಫ್ ಅಲಿ ಖಾನ್ ಮತ್ತು ರಾಧಿಕಾ ಆಪ್ಟೆ ಜೊತೆಗೆ ತೆರೆ ಹಂಚಿಕೊಂಡ ನಟ.

is-pooja-hegde-dating-bollywood-actor-rohan-mehra

ಹಿರಿಯ ನಟ ವಿನೋದ್ ಮೆಹ್ರಾ ಪುತ್ರ ರೋಹನ್ ಮೆಹ್ರಾ ಬಾಲಿವುಡ್ ನಲ್ಲಿ ಇನ್ನೂ ಅಂಬೆಗಾಲಿಡುತ್ತಿದ್ದಾರೆ. ಹೀಗಿರುವಾಗಲೇ, ರೋಹನ್ ಮೆಹ್ರಾ ಜೊತೆಗೆ ಪೂಜಾ ಹೆಗ್ಡೆ ಹೆಸರು ತಳುಕು ಹಾಕಿಕೊಂಡಿದೆ. ಡೇಟಿಂಗ್ ಬಗ್ಗೆ ರೋಹನ್ ಮೆಹ್ರಾ ಆಗಲಿ, ಪೂಜಾ ಹೆಗ್ಡೆ ಆಗಲಿ ಕನ್ಫರ್ಮ್ ಮಾಡಿಲ್ಲ.

ಅಂದ್ಹಾಗೆ, ತೆಲುಗಿನಲ್ಲಿ ಅಲ್ಲು ಅರ್ಜುನ್ ಜೊತೆಗೆ ಪೂಜಾ ಹೆಗ್ಡೆ ಅಭಿನಯದ 'ಅಲಾ ವೈಕುಂಠಪುರಮುಲೋ' ಬಿಡುಗಡೆ ಆಗಿ ಬಾಕ್ಸ್ ಆಫೀಸ್ ನಲ್ಲಿ ದಾಖಲೆ ಬರೆಯುತ್ತಿದೆ.

More from Filmibeat

English summary
Is Pooja Hegde Dating Bollywood Actor Rohan Mehra.?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X