ಧುರಂಧರ್ ದಾಖಲೆ, ಅಕ್ಷಯ್ ಖನ್ನಾಗೆ ಪ್ರೇಕ್ಷಕರ ಬಹುಪರಾಕ್ - ಆರ್‌ ಮಾಧವನ್‌ಗೆ ಹೊಟ್ಟೆಕಿಚ್ಚು ?

ಬಾಲಿವುಡ್ ಅಂಗಳದಲ್ಲಿ ಈಗ ''ಧುರಂಧರ್'' ಸಿನಿಮಾದ್ದೇ ಸದ್ದು. ಈ ಸಿನಿಮಾದ ಸ್ಟಾರ್ ಕಾಸ್ಟ್ ನೋಡಿದರೆ ಸಾಕು ಅಭಿಮಾನಿಗಳಲ್ಲಿ ಕುತೂಹಲ ದುಪ್ಪಟ್ಟಾಗುತ್ತದೆ. ಅಂತಹ ಘಟಾನುಘಟಿ ಕಲಾವಿದರು ಈ ಚಿತ್ರಕ್ಕಾಗಿ ಒಂದಾಗಿದ್ದಾರೆ. ಸಿನಿಮಾ ಘೋಷಣೆಯಾದ ದಿನದಿಂದಲೂ ಒಂದಲ್ಲ ಒಂದು ವಿಷ್ಯಕ್ಕೆ ಸುದ್ದಿ ಆಗುತ್ತಲೇ ಇದೆ. ಅದರಲ್ಲೂ ಸೋಶಿಯಲ್ ಮೀಡಿಯಾದಲ್ಲಿ ಈ ಸಿನಿಮಾದ ಪಾತ್ರಗಳ ಬಗ್ಗೆ ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿದೆ. ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಎಂಟ್ರಿಗಾಗಿ ಕಾಯುತ್ತಿದ್ದಾರೆ.

ಯಾವುದೇ ದೊಡ್ಡ ಸಿನಿಮಾ ಸೆಟ್ಟೇರಿದಾಗ ಅಲ್ಲಿ ಕಲಾವಿದರ ನಡುವಿನ ಬಾಂಧವ್ಯದ ಬಗ್ಗೆ ಮಾತುಗಳು ಕೇಳಿ ಬರುವುದು ಸಹಜ. ಈಗ 'ಧುರಂಧರ್' ವಿಚಾರದಲ್ಲೂ ಅಂತಹದ್ದೇ ಒಂದು ಗಾಸಿಪ್ ಬಿಟೌನ್ ಗಲ್ಲಿಗಳಲ್ಲಿ ಹರಿದಾಡುತ್ತಿದೆ.

Is R Madhavan jealous of Akshaye Khanna s hype in Dhurandhar Maddy finally breaks his silence

ಪೈಪೋಟಿ ಶುರುವಾಯ್ತಾ?

ಸಾಮಾನ್ಯವಾಗಿ ಮಲ್ಟಿಸ್ಟಾರರ್ ಸಿನಿಮಾಗಳಲ್ಲಿ ನಟರ ನಡುವೆ ಶೀತಲ ಸಮರ ಇರುತ್ತದೆ ಎಂಬ ಮಾತು ಕೇಳಿ ಬರುತ್ತಿರುತ್ತದೆ. ಈಗ ಅಕ್ಷಯ್ ಖನ್ನಾ ಮತ್ತು ಆರ್. ಮಾಧವನ್ ನಡುವೆ ಎಲ್ಲವೂ ಸರಿಯಿಲ್ಲ ಎಂಬ ಗುಸುಗುಸು ಶುರುವಾಗಿದೆ. ಇದಕ್ಕೆ ಕಾರಣ 'ಧುರಂಧರ್' ಸಿನಿಮಾದ ಪ್ರಚಾರ ಮತ್ತು ಸಿಕ್ಕ ಲೈಮ್ ಲೈಟ್.

ಮಾಧವನ್ ಮನಸ್ಸಿನಲ್ಲೇನಿದೆ?

ಈ ಸಿನಿಮಾದಲ್ಲಿ ಅಕ್ಷಯ್ ಖನ್ನಾ ಅವರಿಗೆ ಹೆಚ್ಚಿನ ಪ್ರಾಮುಖ್ಯತೆ ಸಿಗುತ್ತಿದೆ ಎನ್ನುವ ಚರ್ಚೆ ಜೋರಾಗಿದೆ. ಆಕ್ಷಯ್ ಅವರ ಲುಕ್ ಮತ್ತು ಪಾತ್ರದ ಬಗ್ಗೆ ಜನ ಹೆಚ್ಚು ಮಾತನಾಡುತ್ತಿದ್ದಾರೆ. ಇದರಿಂದಾಗಿ ಮಾಧವನ್ ಅವರಿಗೆ ಸ್ವಲ್ಪ ಅಸೂಯೆ ಆಗಿರಬಹುದು ಎಂದು ಕೆಲವರು ಮಾತನಾಡಿಕೊಳ್ಳುತ್ತಿದ್ದರು. ಆದರೆ ಇದಕ್ಕೆ ಸ್ವತಃ ಮ್ಯಾಡಿ ಉತ್ತರ ನೀಡಿದ್ದಾರೆ.

ಧುರಂಧರ್ ಸಿನಿಮಾದ ವಿಶೇಷತೆ ಏನು?

ಈ ಸಿನಿಮಾ ಇಷ್ಟೊಂದು ಸದ್ದು ಮಾಡುತ್ತಿರುವುದಕ್ಕೆ ಕಾರಣ ಅದರ ಅದ್ಧೂರಿತನ. ಹೆಸರಾಂತ ನಿರ್ದೇಶಕ ಆದಿತ್ಯ ಧರ್ ಈ ಚಿತ್ರವನ್ನು ಮುನ್ನಡೆಸುತ್ತಿದ್ದಾರೆ. ಇದು ಕೇವಲ ಸಾಧಾರಣ ಆಕ್ಷನ್ ಸಿನಿಮಾ ಅಲ್ಲ. ಇದರಲ್ಲಿ ದೇಶಪ್ರೇಮ ಮತ್ತು ರೋಚಕ ಕಥೆಯ ಎಳೆಯಿದೆ. ಭಾರತೀಯ ಚಿತ್ರರಂಗದ ಪ್ರಮುಖ ನಟರು ಇದರಲ್ಲಿ ಬಣ್ಣ ಹಚ್ಚಿದ್ದಾರೆ.

ರಣವೀರ್ ಸಿಂಗ್, ಸಂಜಯ್ ದತ್ ಮತ್ತು ಅರ್ಜುನ್ ರಾಂಪಾಲ್ ಅವರಂತಹ ಸ್ಟಾರ್ ನಟರು ಈ ಸಿನಿಮಾದಲ್ಲಿದ್ದಾರೆ. ಹೀಗಾಗಿ ಇದೊಂದು ಬಿಗ್ ಬಜೆಟ್ ಮಲ್ಟಿಸ್ಟಾರರ್ ಸಿನಿಮಾವಾಗಿದೆ. ಪ್ರತಿಯೊಬ್ಬ ನಟನಿಗೂ ವಿಭಿನ್ನವಾದ ಮತ್ತು ತೂಕವಿರುವ ಪಾತ್ರಗಳನ್ನು ನೀಡಲಾಗಿದೆ.

is-r-madhavan-jealous-of-akshaye-khanna-s-hype-in-dhurandhar-maddy-finally-breaks-his-silence

ಅಸೂಯೆ ಬಗ್ಗೆ ಮ್ಯಾಡಿ ಹೇಳಿದ್ದೇನು?

ತಮ್ಮ ಬಗ್ಗೆ ಕೇಳಿ ಬರುತ್ತಿರುವ ಈ ವದಂತಿಗಳಿಗೆ ಮಾಧವನ್ ಫುಲ್ ಸ್ಟಾಪ್ ಇಟ್ಟಿದ್ದಾರೆ. ''ಬಾಲಿವುಡ್ ಹಂಗಾಮಾ''ಗೆ ನೀಡಿದ ವಿಶೇ‍ಷ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ಮಾಧವನ್ "ಅಕ್ಷಯ್ ಖನ್ನಾ ಒಬ್ಬ ಅದ್ಭುತ ನಟ. ಅವರ ಜೊತೆ ಕೆಲಸ ಮಾಡುವುದು ನನಗೆ ಖುಷಿ ತಂದಿದೆ. ನನಗೆ ಅವರ ಮೇಲೆ ಯಾವುದೇ ಅಸೂಯೆ ಇಲ್ಲ" ಎಂದು ನೇರವಾಗಿ ಹೇಳಿದ್ದಾರೆ.

ಇಷ್ಟೇ ಅಲ್ಲ ಅಕ್ಷಯ್ ಖನ್ನಾಗೆ ಸಿಕ್ತಿರುವ ಈ ಪ್ರಶಂಸೆಯಿಂದ ನನಗೆ ತುಂಬಾ ಖುಷಿಯಾಗಿದೆ, ಯಾಕೆಂದರೆ ಈ ಪ್ರಶಂಸೆಗೆ ಅಕ್ಷಯ್ ಖನ್ನಾ ಅರ್ಹವಾದ ವ್ಯಕ್ತಿ ಎಂದು ಹೇಳಿರುವ ಆರ್ ಮಾಧವನ್ ಇದೇ ವೇಳೆ ಅಕ್ಷಯ್ ಖನ್ನಾ ಸರಳತೆಯನ್ನು ಮೆಚ್ಚಿಕೊಂಡಿದ್ದಾರೆ.

ಅಕ್ಷಯ್ ಖನ್ನಾ ಜಾಗದಲ್ಲಿ ಬೇರೆ ಯಾರಾದರೂ ಇದ್ದಿದ್ದರೆ ಇವತ್ತಿಗೆ 1000 ಸಂದರ್ಶನಗಳನ್ನು ಕೊಡುತ್ತಿದ್ದರು ಆದರೆ ಅಕ್ಷಯ್ ಖನ್ನಾ ಮಾತ್ರ ಇದಕ್ಕೆ ತದ್ವಿರುದ್ದ, ಈ ಜನಪ್ರಿಯತೆಗೂ ತಮಗೂ ಸಂಬಂಧವೇ ಇಲ್ಲ ಎನ್ನುವಂತೆ ತಮ್ಮ ಮನೆಯಲ್ಲಿ ನೆಮ್ಮದಿಯಿಂದ ಇದ್ದಾರೆ ಎಂದು ಹೇಳಿರುವ ಆರ್ ಮಾಧವನ್, ಪ್ರಚಾರದಿಂದ ದೂರ ಇರಲು ಬಯಸುವ ವ್ಯಕ್ತಿ ನಾನೊಬ್ಬನೇ ಎಂದುಕೊಂಡಿದ್ದೇ ಆದರೆ ಅವರು ನನಗಿಂತ ಒಂದು ಹೆಜ್ಜೆ ಮುಂದಿದ್ದಾರೆ ಎಂದು ಅಕ್ಷಯ್ ಖನ್ನಾ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಮಾಧವನ್ ಅವರ ಮಾತುಗಳು ಈಗ ಅಭಿಮಾನಿಗಳ ಮನ ಗೆದ್ದಿವೆ. ಒಬ್ಬ ಕಲಾವಿದನಿಗೆ ಮತ್ತೊಬ್ಬ ಕಲಾವಿದನ ಪ್ರತಿಭೆಯ ಬಗ್ಗೆ ಗೌರವ ಇರಬೇಕು ಎನ್ನುವುದು ಅವರ ವಾದ. ಅಕ್ಷಯ್ ಈ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ ಎಂದು ಅವರು ಹೊಗಳಿದ್ದಾರೆ. ಜನ ಅವರಿಗೆ ನೀಡುತ್ತಿರುವ ಪ್ರೀತಿಯನ್ನು ನೋಡಿ ನನಗೆ ಹೆಮ್ಮೆ ಅನಿಸುತ್ತಿದೆ ಎಂದು ಅವರು ಮನಬಿಚ್ಚಿ ಮಾತನಾಡಿದ್ದಾರೆ.

ಕಲಾವಿದರ ನಡುವಿನ ಬಾಂಡಿಂಗ್...

ಶೂಟಿಂಗ್ ಸೆಟ್ನಲ್ಲಿ ಮಾಧವನ್ ಮತ್ತು ಅಕ್ಷಯ್ ಖನ್ನಾ ಆಪ್ತ ಸ್ನೇಹಿತರಂತೆ ಇದ್ದರಂತೆ. ಇಬ್ಬರೂ ಒಬ್ಬರಿಗೊಬ್ಬರು ಸಲಹೆಗಳನ್ನು ನೀಡುತ್ತಾ ಕೆಲಸ ಮಾಡುತ್ತಿದ್ದರು. ಅಸೂಯೆ ಎಂಬುದು ಕೇವಲ ಸೃಷ್ಟಿಸಿದ ಕಥೆ ಅಷ್ಟೇ ಎಂದು ಚಿತ್ರತಂಡದ ಮೂಲಗಳು ತಿಳಿಸಿವೆ. ಮಾಧವನ್ ಅವರು ಯಾವಾಗಲೂ ಪಾಸಿಟಿವ್ ಆಗಿ ಇರುವ ವ್ಯಕ್ತಿ.

ಅಭಿಮಾನಿಗಳ ಕಾಯುವಿಕೆ...

ಸದ್ಯ 'ಧುರಂಧರ್' ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ತನ್ನದೇ ಆದ ಚಾಪು ಮೂಡಿಸುತ್ತಿದೆ. ಅಕ್ಷಯ್ ಖನ್ನಾ ಕಮ್ಬ್ಯಾಕ್ ಮತ್ತು ಮಾಧವನ್ ಅವರ ಸ್ಥಿರವಾದ ನಟನೆಗೆ ಜನ ಫಿದಾ ಆಗಿದ್ದಾರೆ. ಯಾವ ನಟನಿಗೆ ಎಷ್ಟು ಪ್ರಾಮುಖ್ಯತೆ ಸಿಕ್ಕಿದೆ ಎನ್ನುವುದಕ್ಕಿಂತ ಸಿನಿಮಾ ಒಟ್ಟಾರೆಯಾಗಿ ಗೆದ್ದಿರುವುದು ಚಿತ್ರತಂಡಕ್ಕೆ ಖುಷಿ ನೀಡಿದೆ.

More from Filmibeat

Read more about: akshaye khanna r madhavan
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X