ವಿಡಿಯೋ: ಲಾಕ್‌ಡೌನ್ ನಡುವೆ ಮದ್ಯ ಖರೀದಿಸಿದರೇ ರಾಕುಲ್ ಪ್ರೀತ್
ಕ್ಯೂಟ್ ನಟಿ ರಾಕುಲ್ ಪ್ರೀತ್ ಸಿಂಗ್ ಅವರ ವಿಡಿಯೋ ಒಂದು ಹರಿದಾಡುತ್ತಿದ್ದು, ವಿಡಿಯೋದಲ್ಲಿ ಕೈಯಲ್ಲಿ ಏನೋ ಹಿಡಿದುಕೊಂಡು ರಾಕುಲ್ ರಸ್ತೆ ದಾಟುತ್ತಿದ್ದಾರೆ. 'ರಾಕುಲ್ ಮದ್ಯ ಖರೀದಿಸಿ ಕೊಂಡೊಯ್ಯುತ್ತಿದ್ದಾರೆ' ಎಂದು ಕ್ಯಾಪ್ಷನ್ ನೀಡಿ ಈ ವಿಡಿಯೋವನ್ನು ಶೇರ್ ಮಾಡಲಾಗುತ್ತಿದೆ.
Recommended Video
ರಾಕುಲ್ ಪ್ರೀತ್ ಸಿಂಗ್ ಮಾಸ್ಕ್ ಧರಿಸಿ ಕೈಯಲ್ಲಿ ಕೆಲವು ವಸ್ತುಗಳನ್ನು ಹಿಡಿದುಕೊಂಡು ರಸ್ತೆ ದಾಟುವಾಗ ಯಾರೋ ಒಬ್ಬಾತ ವಿಡಿಯೋ ಮಾಡಿದ್ದಾನೆ. ಈ ವಿಡಿಯೋ ಈಗ ವೈರಲ್ ಆಗಿದೆ.
ಹಲವು ರಾಜ್ಯಗಳಲ್ಲಿ ಮದ್ಯದಂಗಡಿಗಳು ತೆರೆಯಲು ಅನುಮತಿ ನೀಡಿದಾಗಲೇ ಈ ವಿಡಿಯೋ ವೈರಲ್ ಆಗಿದ್ದು, ರಾಕುಲ್ ನಿಜಕ್ಕೂ ಎಣ್ಣೆ ಖರೀದಿಸಿದ್ದಾರೆಯೇ ಎಂಬ ಚರ್ಚೆ ಹುಟ್ಟುಹಾಕಿದೆ ವಿಡಿಯೋ. ಆದರೆ ಇದಕ್ಕೆ ಅವರೇ ಸ್ಪಷ್ಟೀಕರಣ ನೀಡಿದ್ದಾರೆ.

ತಮಾಷೆಯಾಗಿ ಪ್ರತಿಕ್ರಿಯಿಸಿರುವ ರಾಕುಲ್
ವಿಡಿಯೋಕ್ಕೆ ತಮಾಷೆಯಾಗಿಯೇ ಪ್ರತಿಕ್ರಿಯೆ ನೀಡಿರುವ ರಾಕುಲ್ ಪ್ರೀತ್ ಸಿಂಗ್, 'ಅಯ್ಯೋ ಆ ಮೆಡಿಕಲ್ ಶಾಪ್‌ನಲ್ಲಿ ಮದ್ಯ ಸಿಗುತ್ತದೆ ಎಂದು ಗೊತ್ತೇ ಇರಲಿಲ್ಲ' ಎಂದು ಟ್ವಿಟ್ಟರ್ ನಲ್ಲಿ ಹೇಳಿದ್ದಾರೆ ರಾಕುಲ್.
ಮೆಡಿಕಲ್ ಶಾಪ್ ಗೆ ಹೋಗಿದ್ದರು ರಾಕುಲ್
ನಿಜವಾಗಿ ರಾಕುಲ್ ಪ್ರೀತಿ ಸಿಂಗ್ ಹೋಗಿದ್ದು ಮೆಡಿಕಲ್ ಶಾಪ್‌ಗೆಯೇ. ವಿಡಿಯೋದಲ್ಲಿಯೇ ಹಿನ್ನೆಯೆಯಲ್ಲಿ ಮೆಡಿಕಲ್ ಶಾಪ್ ಒಂದು ಕಾಣುತ್ತದೆ. ಆದರೆ ರಾಕುಲ್ ಹಿಡಿದಿರುವ ವಸ್ತು ಸಣ್ಣ ಬಾಟಲಿಯ ರೀತಿಯಲ್ಲಿ ಕಾಣುತ್ತದೆಯಾದ್ದರಿಂದ ಹೀಗೆ ಸುಳ್ಳು ಕ್ಯಾಪ್ಷನ್ ಜೊತೆ ಅದನ್ನು ವೈರಲ್ ಮಾಡಲಾಗಿದೆ.

ಲಾಕ್‌ಡೌನ್ ಸಮಯ ಎಂಜಾಯ್ ಮಾಡುತ್ತಿರುವ ರಾಕುಲ್
ಪ್ರಸ್ತುತ ಲಾಕ್‌ಡೌನ್ ಸಮಯವನ್ನು ಎಂಜಾಯ್ ಮಾಡುತ್ತಿರುವ ರಾಕುಲ್ ಪ್ರೀತ್ ಸಿಂಗ್, ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಅಡುಗೆ ರೆಸಿಪಿಗಳ ವಿಡಿಯೋಗಳನ್ನು ಶೇರ್ ಮಾಡುತ್ತಿದ್ದಾರೆ. ಜೊತೆಗೆ ವ್ಯಾಯಾಮ, ಅಭಿಮಾನಿಗಳೊಂದಿಗೆ ಲೈವ್ ಮಾತುಕತೆ ಮಾಡುತ್ತಿದ್ದಾರೆ.

ಕನ್ನಡದಲ್ಲಿ ಒಂದು ಸಿನಿಮಾದಲ್ಲಿ ರಾಕುಲ್ ನಟಿಸಿದ್ದಾರೆ
ಕನ್ನಡದಲ್ಲಿ ಗಿಲ್ಲಿ ಎಂಬ ಸಿನಿಮಾದಲ್ಲಿ ನಟಿಸಿದ್ದ ರಾಕುಲ್ ಪ್ರೀತ್, ತೆಲುಗು, ತಮಿಳು, ಹಿಂದಿ ಭಾಷೆಯಲ್ಲಿ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ನಾನ್ನಕು ಪ್ರೇಮತೋ, ಬ್ರೂಸ್ ಲೀ, ಕಿಕ್ 2, ಪಂಡಗ ಚೇಸ್ಕೋ, ಕರೆಂಟು ತೀಗಾ ಇನ್ನೂ ಹಲವು ಜನಪ್ರಿಯ ಸಿನಿಮಾಗಳಲ್ಲಿ ನಟಿಸಿದ್ದಾರೆ.


Click it and Unblock the Notifications











