ಸ್ಟಾರ್ ಡೈರೆಕ್ಟರ್ ಜೊತೆ ಮೆಗಾ ಪವರ್ ಸ್ಟಾರ್ ; ಬಾಲಿವುಡ್ ನತ್ತ ರಾಮಚರಣ್ ಚಿತ್ತ ?

ಜಂಜೀರ್ ಚಿತ್ರದ ಮೂಲಕ 2013ರಲ್ಲಿಯೇ ನ್ಯಾಷನಲ್ ಸ್ಟಾರ್ ಆಗುವ ಪ್ರಯತ್ನವನ್ನ ಪಟ್ಟವರು ರಾಮ್ ಚರಣ್ ತೇಜಾ. ಆದರೆ ಆ ಪ್ರಯತ್ನ ವಿಫಲವಾಯಿತು. ರಾಮ್ ಚರಣ್ ತೇಜಾ ಮರಳಿ ಗೂಡು ಸೇರಬೇಕಾಯಿತು. ಆದರೆ ಈಗ ಕಾಲ ಹಿಂದೆ ಇದ್ದಂತೆ ಇಲ್ಲ. ದಕ್ಷಿಣದ ನಟನೆಂಬ ಭೇದ ಭಾವ ಇಲ್ಲದೇ ಉತ್ತರದ ಸಿನಿ ಪ್ರಿಯರು ಸಿನಿಮಾ ನೋಡುತ್ತಿದ್ದಾರೆ. ಬಾಲಿವುಡ್ ನವರು ಕೂಡ ಸೌಥ್ ಸ್ಟಾರ್ ಗಳಿಗೆ ಚಿನ್ನದ ಮಣೆ ಹಾಕ್ತಿದ್ದಾರೆ.

ಇನ್ನೂ ಆರ್.ಆರ್.ಆರ್ ನಂತರ ರಾಮ್ ಚರಣ್ ತೇಜಾ ಕೀರ್ತಿ ಜಗದಗಲ ಪಸರಿಸಿದೆ. ನ್ಯಾಷನಲ್ ಸ್ಟಾರ್ ಪಟ್ಟಕ್ಕೇರುವ ಆಸೆ ಮತ್ತೆ ಚಿಗುರೊಡೆದಿದೆ. ಇದಕ್ಕೆ ಪುಷ್ಠಿ ನೀಡುವಂತೆ ರಾಮ್ ಚರಣ್ ತೇಜಾ ಬಾಲಿವುಡ್ ನ ಪ್ಲೈಟ್ ಹತ್ತಿದ್ದಾರೆ ಎಂಬ ಸುದ್ದಿ ಆಂಧ್ರದಿಂದ ಹಿಡಿದು ಮುಂಬೈವರೆಗೆ ಕೇಳಿ ಬರ್ತಾ ಇದೆ.

Is Ram Charan Teaming Up With Sanjay Leela Bhansali For His Next ?

ಅಂತೆ ಕಂತೆಯ ಸಂತೆಯಲ್ಲಿ ಕೇಳಿ ಬರ್ತಿರುವ ಈ ಸುದ್ದಿಯ ಪ್ರಕಾರ, ರಾಮ್ ಚರಣ್ ತೇಜಾ ಅವರ ಈ ಚಿತ್ರವನ್ನ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶಿಸಲಿದ್ದಾರೆ. ಸಂಜಯ್ ಲೀಲಾ ಬನ್ಸಾಲಿ ಸಿನಿಮಾವೆಂದರೆ ಅಲ್ಲಿ ದುಬಾರಿ, ರಾಯಲ್ಲು, ವೈಭವವೆಂಬುದು ನಿರೀಕ್ಷೆಗೂ ಮೀರಿ ಹೆಚ್ಚಾಗಿರುತ್ತೆ. ಇದಕ್ಕೆ ಇವರ ಹಿಂದಿನ ಸಿನಿಮಾಗಳೇ ಸಾಕ್ಷಿ. ಇಂಥಹ ಸಂಜಯ್ ಲೀಲಾ ಬನ್ಸಾಲಿ , ರಾಮ್ ಚರಣ್ ತೇಜಾ ಗೆ ನಿಜಕ್ಕೂ ಆಕ್ಷನ್ ಕಟ್ ಹೇಳಿದರೆ ಅವರ ಅಭಿಮಾನಿಗಳಿಗೆ ಅದು ಹಬ್ಬದೂಟವೇ ಸರಿ

ಅಮಿಶ್ ಅವರ 'ದಿ ಲೆಜೆಂಡ್ ಆಫ್ ಸುಹೇಲ್ದೇವ್' ಪುಸ್ತಕವನ್ನು ಆಧರಿಸಿದ ಈ ಚಿತ್ರದಲ್ಲಿ ರಾಮ್ ಚರಣ್ ತೇಜಾ, ರಜಪೂತ ಯೋಧ ಸುಹೇಲ್ದೇವ್ ಬರ್ಹಾಜ್ ಪಾತ್ರವನ್ನು ನಿರ್ವಹಿಸಲಿದ್ದಾರೆ ಎಂಬ ಮಾತನ್ನ ಕೂಡ ತೇಲಿ ಬಿಡಲಾಗಿದೆ.

Is Ram Charan Teaming Up With Sanjay Leela Bhansali For His Next ?

ಅಂದ್ಹಾಗೇ ಸದ್ಯಕ್ಕೆ ರಾಮ್ ಚರಣ್ ತೇಜಾ ಗೇಮ್ ಚೇಂಜರ್ ಚಿತ್ರದ ಬಿಡುಗಡೆಯನ್ನ ಎದುರು ನೋಡ್ತಿದ್ದಾರೆ. ಶಂಕರ್ ನಿರ್ದೇಶನದ ಈ ಚಿತ್ರದ ಮೇಲೆ ಬೆಟ್ಟದಷ್ಟು ನಿರೀಕ್ಷೆಗಳಿವೆ. ಅಭಿಮಾನಿಗಳಲ್ಲಿ ಕೂಡ ಕುತೂಹಲ ಇದೆ. ಕಳೆದ ಕೆಲ ದಿನಗಳಿಂದ ಚಿತ್ರದ ಕುರಿತು ಮಾಹಿತಿ ನೀಡಿ ಎಂದು ರಾಮ್ ಚರಣ್ ತೇಜಾ ಭಕ್ತಗಣ ಶಂಕರ್ ಅವರಲ್ಲಿ ಮನವಿಯನ್ನೂ ಮಾಡ್ತಿದೆ.

Wake Up Shankar ಎಂಬ ಹ್ಯಾಶ್ ಟ್ಯಾಗ್ ನ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಮಾಡಿ ಬಳಲಿ ಸುಸ್ತಾಗಿದೆ. ಒಟ್ಟಿನಲ್ಲಿ ಸದ್ಯಕ್ಕೆ ರಾಮ್ ಚರಣ್ ತೇಜಾ ಸಂಜಯ್ ಲೀಲಾ ಬನ್ಸಾಲಿ ಅವರ ಜೊತೆ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ವ್ಯಾಪಕವಾಗಿ ಹಬ್ಬಿದೆ. ಹಬ್ಬಿರುವ ಈ ಸುದ್ದಿ ನಿಜವಾಗುತ್ತಾ.. ಲೆಟ್ಸ್ ಸೀ

More from Filmibeat

English summary
After his mega blockbuster RRR, Ram Charan is reportedly now in talks with another big pan-India film. The Telugu superstar is likely to work in another Bollywood movie soon which will be directed by Sanjay Leela Bhansali.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X