For Quick Alerts
  ALLOW NOTIFICATIONS  
  For Daily Alerts

  ಹೆಂಡ್ತಿ ದೀಪಿಕಾ ಬಟ್ಟೆ ತೊಟ್ಟು ಫೋಟೋ ತೆಗೆಸಿಕೊಂಡ್ರಾ ರಣ್ವೀರ್ ಸಿಂಗ್.?

  |

  ವಿಭಿನ್ನ ಮತ್ತು ವಿಚಿತ್ರ ಸ್ಟೈಲ್ ಗೆ ಬಾಲಿವುಡ್ ನಟ ರಣ್ವೀರ್ ಸಿಂಗ್ ಹೆಸರುವಾಸಿ. ಕಣ್ಣು ಕುಕ್ಕುವ ಉಡುಗೆ ತೊಟ್ಟು ಆಗಾಗ ಸುದ್ದಿ ಮಾಡುವ ರಣ್ವೀರ್ ಸಿಂಗ್ ಇದೀಗ ಪತ್ನಿ ದೀಪಿಕಾ ಪಡುಕೋಣೆ ಅವರ ಡ್ರೆಸ್ ತೊಟ್ಟು ಫೋಟೋ ತೆಗೆಸಿಕೊಂಡ್ರಾ.?

  ಇಂಥದ್ದೊಂದು ಅನುಮಾನ ಮೂಡಲು ಕಾರಣ ಸೋಷಿಯಲ್ ಮೀಡಿಯಾದಲ್ಲಿ ರಣ್ವೀರ್ ಸಿಂಗ್ ಶೇರ್ ಮಾಡಿರುವ ಹೊಸ ಫೋಟೋಗಳು.

  ಆ ಫೋಟೋಗಳಲ್ಲಿ ಟಾಪ್ ಟು ಬಾಟಂ ರೆಟ್ರೋ ಸ್ಟೈಲ್ ನಲ್ಲಿ ರಣ್ವೀರ್ ಸಿಂಗ್ ಮಿಂಚಿದ್ದಾರೆ. ಪೋಲ್ಕಾ ಡಾಟೆಡ್ ಶರ್ಟ್, ಅದಕ್ಕೆ ಮ್ಯಾಚಿಂಗ್ ಟೋಪಿ ಮತ್ತು ಮಲ್ಟಿ ಕಲರ್ ಸ್ಟ್ರೈಪ್ಡ್ ಪ್ಯಾಂಟ್, ಪಿಂಕ್ ಶೋ ಮತ್ತು ಪಿಂಕ್ ಕನ್ನಡಕ ತೊಟ್ಟು 70 ರ ದಶಕದ ಚಿಗುರು ಮೀಸೆಯ ಯುವಕನಂತೆ ರಣ್ವೀರ್ ಸಿಂಗ್ ಫೋಟೋ ಶೂಟ್ ಮಾಡಿದ್ದಾರೆ.

  ರಣ್ವೀರ್ ಸಿಂಗ್ ರವರ ಈ ರೆಟ್ರೋ ಅವತಾರವನ್ನು ಕಂಡ ಟ್ವೀಟಿಗರೆಲ್ಲರೂ ಕೇಳುತ್ತಿರುವುದು ಒಂದೇ ಪ್ರಶ್ನೆ. ಅದು ''ಪತ್ನಿ ದೀಪಿಕಾ ಬಟ್ಟೆ ಹಾಕೊಂಡು ಫೋಟೋ ಶೂಟ್ ಮಾಡಿದ್ದೀರಾ.?'' ಅಂತ.!

  ಇದು ದೀಪಿಕಾ ಬಟ್ಟೆನಾ.?

  ಇದು ದೀಪಿಕಾ ಬಟ್ಟೆನಾ.?

  ''ಇದು ಅತ್ತಿಗೆಯ ಉಡುಗೆನಾ.? ಮತ್ತೆ ದೀಪಿಕಾ ಡ್ರೆಸ್ ನ ಹಾಕೊಂಡಿದ್ದೀರಾ.? ದೀಪಿಕಾ ರವರ ಎಲ್ಲಾ ಬಟ್ಟೆಗಳನ್ನ ಮೊದಲು ನೀವು (ರಣ್ವೀರ್) ಧರಿಸಿ ಟ್ರಯಲ್ ನೋಡ್ತೀರಾ.? ನಿದ್ದೆಯಲ್ಲಿ ಗೊತ್ತಾಗದೆ ದೀಪಿಕಾ ವಾರ್ಡ್ ರೋಬ್ ನಿಂದ ಬಟ್ಟೆ ತೆಗೆದುಕೊಂಡ್ರಾ.?'' ಅಂತೆಲ್ಲಾ ಟ್ವೀಟಿಗರು ರಣ್ವೀರ್ ಸಿಂಗ್ ಗೆ ಪ್ರಶ್ನೆ ಮೇಲೆ ಪ್ರಶ್ನೆ ಮಾಡುತ್ತಿದ್ದಾರೆ. ಸಾಲದಕ್ಕೆ, ಇದೇ ಟ್ರೋಲ್ ಕೂಡ ಆಗುತ್ತಿದೆ.

  ರಣ್ವೀರ್ ಸಿಂಗ್ ಡ್ರೆಸ್ಸಿಂಗ್ ಸ್ಟೈಲ್ ಬಗ್ಗೆ ಮಾತನಾಡಿದ ಅಲ್ಲು ಅರ್ಜುನ್ರಣ್ವೀರ್ ಸಿಂಗ್ ಡ್ರೆಸ್ಸಿಂಗ್ ಸ್ಟೈಲ್ ಬಗ್ಗೆ ಮಾತನಾಡಿದ ಅಲ್ಲು ಅರ್ಜುನ್

  ದೀಪಿಕಾಗೆ ಪೋಲ್ಕಾ ಡಾಟೆಡ್ ಡ್ರೆಸ್ ಗಳೆಂದರೆ ಇಷ್ಟ.!

  ದೀಪಿಕಾಗೆ ಪೋಲ್ಕಾ ಡಾಟೆಡ್ ಡ್ರೆಸ್ ಗಳೆಂದರೆ ಇಷ್ಟ.!

  ಅಸಲಿಗೆ, ದೀಪಿಕಾ ಪಡುಕೋಣೆಗೆ ಪೋಲ್ಕಾ ಡಾಟೆಡ್ ಡ್ರೆಸ್ ಗಳೆಂದರೆ ಸಿಕ್ಕಾಪಟ್ಟೆ ಇಷ್ಟ. ಹಲವು ಬಾರಿ, ಅನೇಕ ಕಾರ್ಯಕ್ರಮಗಳಿಗೆ ಪೋಲ್ಕಾ ಡಾಟೆಡ್ ಡ್ರೆಸ್ ಗಳನ್ನು ತೊಟ್ಟು ದೀಪಿಕಾ ಪಡುಕೋಣೆ ಮಿಂಚಿದ್ದಾರೆ. ಹೀಗಾಗಿ, ದೀಪಿಕಾ ಸ್ಟೈಲ್ ನ ರಣ್ವೀರ್ ಫಾಲೋ ಮಾಡ್ತಿದ್ದಾರಾ ಎಂಬ ಪ್ರಶ್ನೆ ಉದ್ಭವ ಆಗಿದೆ.

  ರಣ್ವೀರ್ ಸಿಂಗ್ ವಿಚಿತ್ರ ಕಾಸ್ಟೂಮ್ ಗಳ ಡಿಸೈನರ್ ಈಕೆಯೇರಣ್ವೀರ್ ಸಿಂಗ್ ವಿಚಿತ್ರ ಕಾಸ್ಟೂಮ್ ಗಳ ಡಿಸೈನರ್ ಈಕೆಯೇ

  ಟ್ರೋಲ್ ಆದ ರಣ್ವೀರ್

  ಟ್ರೋಲ್ ಆದ ರಣ್ವೀರ್

  ರಣ್ವೀರ್ ಸಿಂಗ್ ರವರ ಈ ರೆಟ್ರೋ ಲುಕ್ ನೋಡಿ ಕೆಲವರು ಆಡಿಕೊಂಡು ನಗುತ್ತಿದ್ದಾರೆ. ಅಷ್ಟಕ್ಕೂ, ಹೀಗೆ ರೆಟ್ರೋ ಸ್ಟೈಲ್ ನಲ್ಲಿ ರಣ್ವೀರ್ ಸಿಂಗ್ ಫೋಟೋಶೂಟ್ ಮಾಡಿಸಿದ್ದು ಯಾಕೆ ಎಂಬುದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ.

  ಪತ್ನಿಯ ಸ್ವಂತ ಫ್ಲ್ಯಾಟ್ ಇರುವಲ್ಲೇ ಪ್ರತ್ಯೇಕ ಬಾಡಿಗೆ ಮನೆ ಮಾಡಿದ್ದೇಕೆ ರಣ್ವೀರ್.?ಪತ್ನಿಯ ಸ್ವಂತ ಫ್ಲ್ಯಾಟ್ ಇರುವಲ್ಲೇ ಪ್ರತ್ಯೇಕ ಬಾಡಿಗೆ ಮನೆ ಮಾಡಿದ್ದೇಕೆ ರಣ್ವೀರ್.?

  ರಣ್ವೀರ್ ಸಿಂಗ್ ಮುಂಬರುವ ಚಿತ್ರ

  ರಣ್ವೀರ್ ಸಿಂಗ್ ಮುಂಬರುವ ಚಿತ್ರ

  ರಣ್ವೀರ್ ಸಿಂಗ್ ಅಭಿನಯದ '83' ಚಿತ್ರ ಏಪ್ರಿಲ್ ತಿಂಗಳಲ್ಲಿ ಬಿಡುಗಡೆ ಆಗಲಿದೆ. 1983 ರಲ್ಲಿ ಭಾರತ ವಿಶ್ವ ಕಪ್ ಗೆದ್ದ ರೋಚಕ ಕಥೆಯೇ '83' ಚಿತ್ರದ ಕಥಾಹಂದರ. ಈ ಸಿನಿಮಾದಲ್ಲಿ ಕಪಿಲ್ ದೇವ್ ಆಗಿ ರಣ್ವೀರ್ ಸಿಂಗ್ ಅಭಿನಯಿಸಿದ್ದರೆ, ಕಪಿಲ್ ದೇವ್ ಪತ್ನಿ ಪಾತ್ರಕ್ಕಾಗಿ ದೀಪಿಕಾ ಪಡುಕೋಣೆ ಬಣ್ಣ ಹಚ್ಚಿದ್ದಾರೆ.

  English summary
  Is Ranveer Singh wearing Deepika Padukone's clothes.?

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X