ಪುಷ್ಪ ಡೈರೆಕ್ಟರ್ ಸುಕುಮಾರ್ ಜೊತೆ ಶಾರುಖ್ ಖಾನ್ ಸಿನಿಮಾ, ಇಲ್ಲಿದೆ ಸತ್ಯಾಂಶ ..!

ಏನೇ ಕಿಂಗ್ ಖಾನ್ ಆದ್ರೂ ಅದು ಬಾಲಿವುಡ್ ಗೆ ಮಾತ್ರ. ಸೌತ್ ಇಂಡಿಯಾಗೆ ಯಾವ ಕಿಂಗೂ ಇಲ್ಲ ಅನ್ನುವ ಮಾತು ಆಗಾಗ ಕೇಳಿ ಬರುತ್ತಾನೇ ಇರುತ್ತೆ. ಈ ಮಾತು ನಿಜಾನಾ, ಸುಳ್ಳಾ ಗೊತ್ತಿಲ್ಲ. ಆದರೆ ಸದ್ಯ ಶಾರುಖ್ ಖಾನ್ ಸೌತ್ ಇಂಡಿಯಾದ ಸ್ಟಾರ್ ಡೈರೆಕ್ಟರ್ ಸುಕುಮಾರ್ ಜೊತೆ ಸಿನಿಮಾ ಮಾಡುತ್ತಿದ್ದಾರೆ ಎನ್ನುವ ಸುದ್ದಿಯೊಂದು ಸದ್ಯ ಅಷ್ಟದಿಕ್ಕುಗಳಿಂದ ಕೇಳಿ ಬರುತ್ತಿದೆ.

ಹೌದು, ಸತತ ಸೋಲುಗಳನ್ನು ಕಂಡು ಆ ನಂತರ ನಾಲ್ಕು ವರ್ಷ ಅಜ್ಞಾತವಾಸಕ್ಕೆ ತೆರಳಿದ್ದ ಶಾರುಖ್ ಖಾನ್ 2023ರಲ್ಲಿ ಫೀನಿಕ್ಸ್‌ನಂತೆ ಎದ್ದು ಬಂದಿದ್ದರು. ಒಂದೇ ವರ್ಷದಲ್ಲಿ ಎರಡು ಬ್ಲಾಕ್‌ಬಸ್ಟರ್ ಮತ್ತು ಒಂದು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದರು.

is-shah-rukh-khans-next-film-with-mythri-movie-makers-sukumar-find-out-the-truth

ಸದ್ಯ ಶಾರುಖ್ ಅಭಿನಯದ ಚಿತ್ರ ಬಂದು ಮತ್ತೆ ಎರಡು ವರ್ಷಗಳಾಗಿವೆ. ಈ ಎರಡು ವರ್ಷದಲ್ಲಿ ಶಾರುಖ್ ಖಾನ್ ಒಪ್ಪಿಕೊಂಡಿರುವ ಚಿತ್ರ ಕಿಂಗ್ ಮಾತ್ರ. ಚಿತ್ರದ ನಿರ್ಮಾಣ ಕೂಡ ಇವರದ್ದೇ. ವಿಶೇಷ ಅಂದರೆ ಈ ಚಿತ್ರದ ಮೂಲಕ ಶಾರುಖ್ ಖಾನ್ ಅವರ ಮುದ್ದಾದ ಮಗಳು ಸುಹಾನಾ ಖಾನ್ ಚಿತ್ರರಂಗಕ್ಕೆ ಬರುತ್ತಿದ್ದಾರೆ.

ಈ ಹಿಂದೆ ಸುಹಾನಾ 'ಆರ್ಚಿಸ್' ಚಿತ್ರವನ್ನು ಮಾಡಿದ್ದರಾದರೂ ಅದು ನೇರವಾಗಿ ಓಟಿಟಿಯಲ್ಲಿ ಬಿಡುಗಡೆಯಾಗಿತ್ತು. ಹೀಗಾಗಿ ಬೆಳ್ಳಿತೆರೆಯಲ್ಲಿ ಕಿಂಗ್ ಸುಹಾನಾಗೆ ಮೊದಲ ಅನುಭವ. ಈ ಹಿನ್ನೆಲೆ ಶಾರುಖ್ ಖಾನ್ ಅವರ ಅಭಿಮಾನಿಗಳು ಈ ಚಿತ್ರಕ್ಕೆ ಕಾತುರರಾಗಿದ್ದಾರೆ. ತೆರೆಯ ಮೇಲೆ ಅಪ್ಪ ಮತ್ತು ಮಗಳ ಜುಗಲಬಂದಿ ನೋಡಲು ಕುತೂಹಲದಿಂದ ಕಾಯುತ್ತಿದ್ದಾರೆ. ಪಠಾಣ್ ಚಿತ್ರವನ್ನು ನಿರ್ದೇಶಿಸಿದ್ದ ಸಿದ್ಧಾರ್ಥ್ ಆನಂದ್ ಈ ಚಿತ್ರದ ನಿರ್ದೇಶನ ಜವಾಬ್ಧಾರಿಯನ್ನು ವಹಿಸಿಕೊಂಡಿದ್ದಾರೆ.

ಇನ್ನು ದೀಪಿಕಾ ಪಡುಕೋಣೆ ಈ ಚಿತ್ರದಲ್ಲಿ ಶಾರುಖ್‌ ಖಾನ್‌ಗೆ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿಯೂ ಇದೆ. ಅಭಿಷೇಕ್ ಬಚ್ಚನ್, ಜೈದೀಪ್‌ ಅಹ್ಲಾವತ್, ಅನಿಲ್ ಕಪೂರ್, ರಾಣಿ ಮುಖರ್ಜಿ, ಜಾಕಿ ಶ್ರಾಫ್ ಹೀಗೆ ಬಹುದೊಡ್ಡ ತಾರಾಬಳಗವನ್ನು ಕಿಂಗ್ ಚಿತ್ರಕ್ಕೆ ಆಯ್ಕೆ ಮಾಡಲಾಗಿದೆ.

is-shah-rukh-khans-next-film-with-mythri-movie-makers-sukumar-find-out-the-truth

ಹೀಗಿರುವಾಗ ಇದೀಗ ಪುಷ್ಪ ಚಿತ್ರದ ನಿರ್ದೇಶಕ ಸುಕುಮಾರ್ ಜೊತೆ ಶಾರುಖ್ ಖಾನ್ ಸಿನಿಮಾ ಮಾಡಲಿದ್ದಾರೆ ಈ ಚಿತ್ರವನ್ನು ತೆಲುಗಿನ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಲ್ಲಿ ಒಂದಾದ ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ ಮಾಡುತ್ತಿದೆ ಎನ್ನುವ ಸುದ್ದಿ ಸದ್ಯ ತುಂಬಾನೇ ಸದ್ದು ಮಾಡುತ್ತಿದೆ.

ಆದರೆ ವಾಸ್ತವದಲ್ಲಿ ಈ ಸುದ್ದಿ ಸಂಪೂರ್ಣ ಸುಳ್ಳು. ಹೌದು, ಶಾರುಖ್ ಖಾನ್ ಸದ್ಯಕ್ಕೆ ಯಾವುದೇ ಹೊಸ ಕಥೆಗಳನ್ನು ಕೇಳುತ್ತಿಲ್ಲ. ಬದಲಿಗೆ ತಮ್ಮ ಗಮನವನ್ನೆಲ್ಲ ತಮ್ಮ ಮಹತ್ವಕಾಂಕ್ಷೆಯ ಕಿಂಗ್‌ ನತ್ತ ವಹಿಸಿದ್ದಾರೆ. ಯಾಕೆಂದರೆ ಇದು ಕೇವಲ ಶಾರುಖ್ ಖಾನ್‌ಗೆ ಮಹತ್ವದ ಸಿನಿಮಾ ಅಲ್ಲ. ಶಾರುಖ್ ಖಾನ್ ಮಗಳ ಮುಂದಿನ ಭವಿಷ್ಯ ನಿಂತಿರುವುದು ಇದೇ ಚಿತ್ರದ ಮೇಲೆ. ಹೀಗಾಗಿ ತನು-ಮನದ ಜೊತೆ ಚಿತ್ರಕ್ಕೆ ಹಣವನ್ನು ಅರ್ಪಿಸಿರುವ ಶಾರುಖ್ ಖಾನ್ 2026ರ ಆರಂಭದ 3 ತಿಂಗಳು ಕಿಂಗ್ ಚಿತ್ರದಲ್ಲಿ ತಮ್ಮನ್ನು ತೋಡಗಿಸಿಕೊಳ್ಳಲು ನಿರ್ಧಾರ ಮಾಡಿದ್ದಾರೆ.

ಇನ್ನು ಈ ಹಿಂದೆ ಶಾರುಖ್ ಕೆಲ ಕಥೆಗಳನ್ನು ಕೇಳಿದ್ದು ಆ ಪೈಕಿ ಈ ವರ್ಷದ ಅಂತ್ಯದೊಳಗೆ ಒಂದೆರಡು ಚಿತ್ರಗಳಿಗೆ ಶಾರುಖ್ ಖಾನ್ ಗ್ರೀನ್ ಸಿಗ್ನಲ್ ನೀಡುವ ಸಾಧ್ಯತೆ ಇದೆ. ವಿಶೇಷ ಅಂದರೆ ಹೀಗೆ ಶಾರುಖ್ ಖಾನ್ ಒಪ್ಪಿಕೊಳ್ಳಲಿರುವ ಚಿತ್ರಗಳಲ್ಲಿ ಯಾವ ಚಿತ್ರ ಕೂಡ ಮೈತ್ರಿ ಸಂಸ್ಥೆಗೆ ಸಂಬಂಧಿಸಿದ್ದಿಲ್ಲ ಎಂದು ''ಪಿಂಕ್‌ ವಿಲ್ಲಾ'' ವರದಿಯನ್ನು ಮಾಡಿದೆ. ಈ ಮೂಲಕ ಶಾರುಖ್ ಖಾನ್ - ಸುಕುಮಾರನ್ ಮತ್ತು ಮೈತ್ರಿ ಮೂವಿ ಮೇಕರ್ಸ್ ಕಾಂಬಿನೇಷನ್‌ನಲ್ಲಿ ಸಿನಿಮಾ ಬರುತ್ತಿದೆ ಎಂಬ ಸುದ್ದಿ ಸುಳ್ಳು ಎಂದು 'ಪಿಂಕ್‌ವಿಲ್ಲಾ' ತನ್ನ ವರದಿಯ ಮೂಲಕ ಪ್ರತಿಪಾದಿಸಿದೆ.

ಒಟ್ನಲ್ಲಿ ಸದ್ಯ ಶಾರುಖ್ ಖಾನ್ ಮತ್ತು ಸುಕುಮಾರ್ ಜೋಡಿಯ ಚಿತ್ರದ ಕುರಿತು ಚರ್ಚೆ ಜೋರಾಗಿದೆ. ನಿಜಕ್ಕೂ ಸುಕುಮಾರ್ ಜೊತೆ ಶಾರುಖ್ ಖಾನ್ ಕೈ ಜೋಡಿಸುತ್ತಾರಾ ಉತ್ತರ ಶೀಘ್ರದಲ್ಲಿಯೇ ಸಿಗಲಿದೆ.

More from Filmibeat

English summary
Don't miss out! Get the definitive answer on whether Shah Rukh Khan's next film is with Mythri Movie Makers and Sukumar post-'King'. All the details you need.
Read more about: shah rukh khan bollywood sukumar
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X