For Quick Alerts
  ALLOW NOTIFICATIONS  
  For Daily Alerts

  ಖ್ಯಾತ ಗಾಯಕನ ಜೇಬಲ್ಲಿ ಉಳಿದಿರುವುದು ಕೆಲವೇ ಸಾವಿರ!

  |

  ಉದಿತ್ ನಾರಾಯಣ್ ಹೆಸರು ಕೇಳದ ಸಂಗೀತ ಪ್ರೇಮಿಗಳು ವಿರಳ. ಬಾಲಿವುಡ್‌ನ ಖ್ಯಾತ ಮತ್ತು ಗೌರವಕ್ಕೆ ಪಾತ್ರವಾಗುವ ಗಾಯಕ ಉದಿತ್ ನಾರಾಯಣ್.

  ದಶಕಕ್ಕೂ ಹೆಚ್ಚು ಕಾಲದಿಂದ ಬಾಲಿವುಡ್‌ನಲ್ಲಿ ಹಾಡುತ್ತಿರುವ ಉದಿತ್ ನಾರಾಯಣ್ ಪುತ್ರ ಆದಿತ್ಯ ನಾರಾಯಣ್ ಸಹ ಗಾಯಕರೇ. ಜೊತೆಗೆ ರಿಯಾಲಿಟಿ ಶೋಗಳ ನಿರೂಪಕ ಸಹ.

  ಆದರೆ ಉದಿತ್ ನಾರಾಯಣ್ ಪುತ್ರ, ಗಾಯಕ ಆದಿತ್ಯ ನಾರಾಯಣ್ ಬಳಿ ಹಣವೇ ಇಲ್ಲವಂತೆ. ಆದಿತ್ಯ ನಾರಾಯಣ್ 'ಬರ್ಬಾದ್' ಆಗಿಬಿಟ್ಟಿದ್ದಾರೆ ಎಂಬ ಸಂದೇಶಗಳು ಸುದ್ದಿಗಳು ಹರಿದಾಡುತ್ತಿವೆ, ಇದಕ್ಕೆ ಕಾರಣ ಸ್ವತಃ ಅವರೇ ನೀಡಿರುವ ಹೇಳಿಕೆ.

  ಬ್ಯಾಂಕ್ ಖಾತೆಯಲ್ಲಿ 18,000 ಮಾತ್ರ ಇದೆ: ಆದಿತ್ಯ ನಾರಾಯಣ್

  ಬ್ಯಾಂಕ್ ಖಾತೆಯಲ್ಲಿ 18,000 ಮಾತ್ರ ಇದೆ: ಆದಿತ್ಯ ನಾರಾಯಣ್

  ಕೆಲವೇ ದಿನಗಳ ಹಿಂದೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಆದಿತ್ಯಾ ನಾರಾಯಣ್ ನನ್ನ ಬ್ಯಾಂಕ್ ಖಾತೆಯಲ್ಲಿ ಉಳಿದಿರುವುದು ಕೇವಲ 18,000 ರುಪಾಯಿಗಳು ಮಾತ್ರ, ನಾನು ನನ್ನ ಬೈಕ್ ಅನ್ನು ಸಹ ಮಾರಬೇಕಾಯಿತು ಎಂದಿದ್ದರು.

  ನನ್ನ ಹೇಳಿಕೆ ತಪ್ಪಾಗಿ ಅರ್ಥೈಸಲಾಗಿದೆ: ಆದಿತ್ಯ ನಾರಾಯಣ್

  ನನ್ನ ಹೇಳಿಕೆ ತಪ್ಪಾಗಿ ಅರ್ಥೈಸಲಾಗಿದೆ: ಆದಿತ್ಯ ನಾರಾಯಣ್

  ಆದರೆ ಇದರ ಬಗ್ಗೆ ಸ್ಪಷ್ಟನೆ ನೀಡಿರುವ ಉದಿತ್ ನಾರಾಯಣ್, 'ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ನಾನು ತಮಾಷೆಯಾಗಿ ಮಾತನಾಡುತ್ತಾ ಹೀಗೆ ಹೇಳಿದ್ದೆ. ಆದರೆ ಅದನ್ನೇ ಗಂಭೀರವಾಗಿ ಪರಿಗಣಿಸಲಾಗಿದೆ ಎಂದಿದ್ದಾರೆ ಆದಿತ್ಯ ನಾರಾಯಣ್.

  ಹೊಸ ಮನೆ ಸಹ ಖರೀದಿಸಿದ್ದೇನೆ: ಆದಿತ್ಯಾ

  ಹೊಸ ಮನೆ ಸಹ ಖರೀದಿಸಿದ್ದೇನೆ: ಆದಿತ್ಯಾ

  ನಾನು ಕಳೆದ 3-4 ವರ್ಷಗಳಿಂದಲೂ ಕೆಲಸ ಮಾಡುತ್ತಿದ್ದೇನೆ. ಇತ್ತೀಚೆಗಷ್ಟೆ ನಾನು ಹೊಸ ಮನೆ ಖರೀದಿಸಿದ್ದೇನೆ. ಇಎಂಐ ಗಳನ್ನು ಪಾವತಿಸುತ್ತಿದ್ದೇನೆ. ನಾನು ಆರಾಮವಾಗಿಯೇ ಇದ್ದೇನೆ, ಯಾರೂ ಸಹ ನಾನು ಬಡವನಾಗಿದ್ದೇನೆ, ಕಷ್ಟದಲ್ಲಿದ್ದೇನೆ ಎಂಬ ಸುದ್ದಿ ಹರಡಿಸುವುದು ಬೇಡ ಎಂದಿದ್ದಾರೆ ಆದಿತ್ಯ ನಾರಾಯಣ್.

  6 ತಿಂಗಳ ನಂತರ ತೆರೆದ ಚಿತ್ರ ಮಂದಿರ | Filmibeat Kannada
  ಇಂಡಿಯನ್ ಐಡಲ್ ಶೋ ದ ನಿರೂಪಕ

  ಇಂಡಿಯನ್ ಐಡಲ್ ಶೋ ದ ನಿರೂಪಕ

  ಆದಿತ್ಯ ನಾರಾಯಣ್ ಇಂಡಿಯನ್ ಐಡಲ್ ಶೋ ದ ನಿರೂಪಕರಾಗಿದ್ದಾರೆ. ಜೊತೆಗೆ ಸಿನಿಮಾಗಳಿಗೆ ಸಹ ಹಾಡುತ್ತಾರೆ. ಆದಿತ್ಯ ನಾರಾಯಣ್ ಹೆಸರು ನೇಹಾ ಕಕ್ಕರ್ ಜೊತೆಗೆ ಕೇಳಿ ಬಂದಿತ್ತು, ಆದರೆ ಕೆಲವು ದಿನಗಳ ಹಿಂದಷ್ಟೆ ನೇಹಾ, ತಾವು ರೋಹನ್ ಪ್ರೀತ್ ಸಿಂಗ್ ಅನ್ನು ಪ್ರೀತಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ.

  English summary
  Udit Narayan's son Aditya Narayan in an interview told that he has only 18,000 in his bank account.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X