ಅರ್ಜುನ್ ಕಪೂರ್ ಜೊತೆ ಬ್ರೇಕಪ್.. ಹೊಸ ಬಾಯ್‌ಫ್ರೆಂಡ್ ಹುಡುಕೊಂಡ್ರಾ ಮಲೈಕಾ ಅರೋರಾ?

By ಫಿಲ್ಮಿಬೀಟ್ ಡೆಸ್ಕ್

ಬಾಲಿವುಡ್‌ನಲ್ಲಿ ಅದ್ಯಾವಾಗ ಲವ್ ಆಗುತ್ತೋ? ಅದ್ಯಾವಾಗ ಬ್ರೇಕಪ್ ಆಗುತ್ತೋ? ಆ ದೇವರಿಗೆ ಗೊತ್ತು. ಇಲ್ಲಂತೂ ದಿನಕ್ಕೊಂದು ಲವ್ ಸ್ಟೋರಿ ಹುಟ್ಟಿಕೊಳ್ಳುತ್ತೆ. ದಿನಕ್ಕೊಂದು ಬ್ರೇಕಪ್ ಆಗುತ್ತೆ. ಇದೊಂದು ಕಡೆಯಾದರೆ, ಕಣ್ಮುಚ್ಚಿ ಕಣ್ಬಿಡುವುದರೊಳಗೆ ಹೊಸ ಬಾಯ್‌ಫ್ರೆಂಡ್, ಗರ್ಲ್‌ಫ್ರೆಂಡ್ ಸಿಕ್ಕಿಬಿಡುತ್ತಾರೆ. ಈಗ ಮಲೈಕಾ ಅರೋರಾ ಲೈಫ್‌ನಲ್ಲೂ ಹಾಗೇ ನಡೀತಿದೆ ಅನ್ನೋದು ನೆಟ್ಟಿಗರಿಗೆ ಡೌಟು.

ಮಲೈಕಾ ಅರೋರಾ ಬಾಲಿವುಡ್‌ನ ಫ್ಯಾಷನ್ ಐಕಾನ್. ಅವರ ಫಿಟ್ನೆಸ್‌ಗೆ ವಿಶ್ವದಾದ್ಯಂತ ಅಭಿಮಾನಿಗಳು ಇದ್ದಾರೆ. ಅವರ ಬ್ಯೂಟಿ ಸೀಕ್ರೆಟ್ ತಿಳಿದುಕೊಳ್ಳುವುದಕ್ಕೆ ಹಾತೊರೆಯುತ್ತಿದ್ದಾರೆ. ಇನ್ನೊಂದು ಕಡೆ ಅವರ ಪರ್ಸನಲ್ ಲೈಫ್‌ ಬಗ್ಗೆನೂ ಕುತೂಹಲ ಇಟ್ಟುಕೊಂಡಿದ್ದಾರೆ. ಗಾಸಿಪ್‌ಗಳು ಅವರ ಬ್ಯೂಟಿ ಸೀಕ್ರೆಟ್‌ನಷ್ಟೇ ರಹಸ್ಯವಾಗಿಯೇ ಉಳಿದು ಬಿಟ್ಟಿವೆ. ಅದಕ್ಕೆ ಕಾರಣ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಒಂದು ವಿಡಿಯೋ.

Is Vikram Padnis Malaika Arora s new boyfriend after breakup with Arjun Kapoor fack check

ಮಲೈಕಾ ಅರೋರಾ ಹಾಗೂ ಅರ್ಜುನ್ ಕಪೂರ್ ಪ್ರೀತಿಯಲ್ಲಿ ಬಿದ್ದಿದ್ದು ಗೊತ್ತೇ ಇದೆ. ಆದರೆ, ಇತ್ತೀಚೆಗೆ ಅದೂ ಮುರಿದು ಬಿದ್ದಿದ್ದೆ ಅನ್ನೋದು ಸುದ್ದಿ. ಈ ಮಧ್ಯೆ ಮಲೈಕಾಗೆ ಹೊಸ ಭಾಯ್‌ಫ್ರೆಂಡ್ ಸಿಕ್ಕಿದ್ದಾರೆ ಅನ್ನೋ ವಿಷಯ ಜೋರಾಗಿ ಸದ್ದು ಮಾಡುತ್ತಿದೆ. ಅದಕ್ಕೆ ಕಾರಣ ಮುಂಬೈನಲ್ಲಿ ಮಲೈಕಾ ಅರೋರಾ ಪಾರ್ಟಿ ಮಾಡಿ ಹೊರಡುವಾಗ ಕಾಣಿಸಿಕೊಂಡಿರುವ ಆ ವ್ಯಕ್ತಿ. ಅಷ್ಟಕ್ಕೂ ರೆಸ್ಟೋರೆಂಟ್‌ನಿಂದ ಮಲೈಕಾ ಕೈ ಹಿಡಿದು ಹೊರಟು ಹೋದ ಆ ವ್ಯಕ್ತಿ ಯಾರು?

ಇತ್ತೀಚೆಗೆ ಮುಂಬೈನ ರೆಸ್ಟೋರೆಂಟ್ ಒಂದರಲ್ಲಿ ಮಲೈಕಾ ಅರೋರಾ ಸ್ನೇಹಿತರೊಂದಿಗೆ ಪಾರ್ಟಿ ಮಾಡಿದ್ದರು. ಆ ಬಳಿಕ ಪಾಪರಾಜಿಗಳ ಕಣ್ಣಿಗೆ ಬಿದ್ದಿದ್ದರು. ಆ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ನೆಟ್ಟಿಗರು ಮಲೈಕಾ ಅರೋರಾ ಜೊತೆ ಇದ್ದ ವ್ಯಕ್ತಿ ಯಾರು? ಹೊಸ ಬಾಯ್‌ಫ್ರೆಂಡ್ ಇರಬಹುದಾ? ಎಂದು ತಲೆ ಕೆಡಿಸಿಕೊಂಡಿದ್ದಾರೆ. ಅರ್ಜುನ್ ಕಪೂರ್ ಜೊತೆ ಬ್ರೇಕಪ್ ಆದ್ಮೇಲೆ ಹೊಸ ಭಾಯ್ ಫ್ರೆಂಡ್ ಸಿಕ್ಕಿದ್ದಾರಾ? ಅನ್ನೋ ಅನುಮಾನ ಶುರುವಾಗಿದೆ.

ಅಂದ್ಹಾಗೆ ಈ ವಿಡಿಯೋದಲ್ಲಿ ಇರೋದು ಅವರ ಹೊಸ ಭಾಯ್‌ಫ್ರೆಂಡ್ ಅಲ್ಲ. ಬಾಲಿವುಡ್‌ನ ಫ್ಯಾಷನ್ ಡಿಸೈನರ್ ಹಾಗೂ ಸಿನಿಮಾ ನಿರ್ಮಾಪಕ ವಿಕ್ರಮ್ ಫಡ್ನಿಸ್. ಮಲೈಕಾ ಸ್ನೇಹಿತರೊಂದಿಗೆ ಪಾರ್ಟಿ ಮಾಡಿದ್ದರು. ಅದರಲ್ಲಿ ವಿಕ್ರಮ್ ಫಡ್ನಿಸ್ ಕೂಡ ಭಾಗವಹಿಸಿದ್ದರು ಎಂದು ಹೇಳಲಾಗುತ್ತಿದೆ. ಈ ವೇಳೆ ಮಲೈಕಾ ಜೊತೆ ವಿಕ್ರಮ್ ಕೂಡ ಹೊರಟಿದ್ದಾರೆ. ಈ ವೇಳೆ ಪಾಪರಾಜಿಗಳು ವಿಡಿಯೋ ಸೆರೆ ಹಿಡಿದಿದ್ದು, ಅದೇ ವೈರಲ್ ಆಗಿದೆ ಎನ್ನಲಾಗಿದೆ.

Is Vikram Padnis Malaika Arora s new boyfriend after breakup with Arjun Kapoor fack check

ಮಲೈಕಾ ಅರೋರಾ ಹಾಗೂ ವಿಕ್ರಮ್ ಜೊತೆಯಲ್ಲಿ ಕಾಣಿಸಿಕೊಂಡ ಬಳಿಕ ಗಾಸಿಪ್‌ಗಳು ಶುರುವಾಗಿವೆ. ಮಲೈಕಾ ಅರೋರಾಗೆ ಹೊಸ ಬಾಯ್‌ಫ್ರೆಂಡ್‌ಗೆ ಸಿಕ್ಕಿಬಿಟ್ಟಿದ್ದಾರೆ ಅಂತ ಪುಕಾರು ಹಬ್ಬಿದೆ. ಅಲ್ಲದೆ ಇಬ್ಬರೂ ಹೆಚ್ಚು ಕಡಿಮೆ ಒಂದೇ ವಯಸ್ಸಿನವರು. ಹೀಗಾಗಿ ಇದ್ದರೂ ಇರಬಹುದೇನೋ ? ಅಂತನೇ ನಂಬಿದ್ದರು. ಆದರೆ, ಅಸಲಿಗೆ ಇಬ್ಬರೋ ಒಳ್ಳೆಯ ಗೆಳೆಯರು ಎನ್ನಲಾಗಿದೆ. ಅಲ್ಲದೆ ಬಾಲಿವುಡ್‌ನಲ್ಲಿ ಹಲವು ಬಾರಿ ಒಟ್ಟಿಗೆ ಕೆಲಸ ಮಾಡಿದ್ದಾರೆ ಅನ್ನೋ ಮಾತುಗಳು ಕೂಡ ಕೇಳಿ ಬಂದಿವೆ.

ಇನ್ನು ಮಲೈಕಾ ಅರೋರಾ ಹಾಗೂ ಅರ್ಜುನ್ ಕಪೂರ್ ಇಬ್ಬರೂ ಪರೋಕ್ಷವಾಗಿ ಬ್ರೇಕಪ್‌ ಬಗ್ಗೆ ಸುಳಿವು ಕೊಟ್ಟಿದ್ದಾರೆ. ತಮ್ಮ ಅಭಿಮಾನಿಗಳಿಗೆ ಇನ್‌ ಡೈರೆಕ್ಟ್ ಆಗಿ ಸಂದೇಶವನ್ನು ರವಾನೆ ಮಾಡಿದ್ದಾರೆ. ಮುಂದೆ ಮಲೈಕಾ ಅರೋರಾ ಹೊಸ ಭಾಯ್‌ಫ್ರೆಂಡ್ ಹುಡುಕಿಕೊಂಡು ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿಯನ್ನು ನೀಡುತ್ತಾರಾ? ಅನ್ನೋದನ್ನು ಎಲ್ಲರೂ ಕುತೂಹಲದಿಂದ ನೋಡುತ್ತಿದ್ದಾರೆ.

More from Filmibeat

English summary
Is Vikram Padnis Malaika Arora's new boyfriend after breakup with Arjun Kapoor. Here is viral video
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X