ಒಬ್ಬಳೇ ಬಂದು ನನ್ನನ್ನು ಭೇಟಿ ಮಾಡು ಎಂದು ಆ ಖ್ಯಾತ ನಾಯಕ ಹೇಳಿದ್ದ - ಇಶಾ ಕೊಪ್ಪಿಕರ್...!

ಬಣ್ಣದ ಪ್ರಪಂಚದಲ್ಲಿ ಅನೇಕರು ಮುಖವಾಡದ ಬದುಕನ್ನ ಬದುಕುತ್ತಾರೆ. ಇನ್ನೂ ಕೆಲವರು ಪ್ರಚಾರದ ಹುಚ್ಚಿಗೆ ಬಂದರೆ, ಬಹುತೇಕರು ಹೆಣ್ಣಿನ ಚಪಲಕ್ಕಾಗಿ ಸಿನಿಮಾ ನಿರ್ಮಾಣ ಮಾಡಲು ಬರುತ್ತಾರೆ. ಈ ಕಾರಣಕ್ಕೆ ಸಿನಿಮಾ ರಂಗದಲ್ಲಿ ಕಾಸ್ಟಿಂಗ್ ಕೌಚ್ ಎಂಬುದು ತೀರಾ ಸಾಮಾನ್ಯವಾಗಿಬಿಟ್ಟಿದೆ. ಅನಿವಾರ್ಯ ಪರಿಸ್ಥಿತಿಗೆ ಮನಸೋತ ಸಾಕಷ್ಟು ಮುಗ್ಧ ಮನಸ್ಸುಗಳು ಖೆಡ್ಡಾ ಎಂಬ ಅರಿವಿದ್ದರೂ ಬಿದ್ದು ಏಳುವ ಸಂದರ್ಭಗಳಿಗೆ ಗುರಿಯಾಗಿರುತ್ತಾರೆ. ಇನ್ನೂ ಕೆಲವರಂತೂ ಇಂತಹ ಕುಕೃತ್ಯವನ್ನು ಎಡಗಾಲಲ್ಲಿ ಒದ್ದು ನಡೆದ ಪ್ರಸಂಗಗಳೂ ಇವೆ. ಪ್ರತಿಯೊಬ್ಬ ನಟಿಮಣಿಯರೂ ಒಂದಿಲ್ಲೊಂದು ಸಂದರ್ಭಗಳಲ್ಲಿ ಇಂತಹ ಸನ್ನಿವೇಶಗಳಲ್ಲಿ ನಲುಗಿದವರೇ ಆಗಿರುತ್ತಾರೆ. ಇಶಾ ಕೊಪ್ಪಿಕರ್‌ ಕೂಡ ಇದರಿಂದ ಹೊರತಾಗಿಲ್ಲ.

ಹೌದು. ತೆಲುಗು ಚಿತ್ರದ ಮೂಲಕ ಚಿತ್ರರಂಗವನ್ನ ಪ್ರವೇಶಿಸಿ, ಆ ನಂತರ ಸೂರ್ಯವಂಶ ಸಿನಿಮಾದಿಂದ ಕನ್ನಡಿಗರ ಹೃದಯ ಗೆದ್ದು, ಕರುನಾಡಿನೆಲ್ಲೆಡೆ 'ಪದ್ಮಾ' ಎಂದೇ ಫೇಮಸ್‌ ಆದ ಇಶಾ ಕೊಪ್ಪಿಕರ್ ತಮ್ಮ ಬದುಕಿನ ಕಹಿ ಅನುಭವ ಹಂಚಿಕೊಂಡಿದ್ದಾರೆ. ಪಾತ್ರಕ್ಕಾಗಿಪಲ್ಲಂಗ ಏರುವಂತೆ ನನ್ನನ್ನೂ ಕೇಳಿದ್ದರು ಎಂದಿದ್ದಾರೆ.

isha-koppikar-recalls-casting-couch-experience-reveals-a-list-actors-request-for-private-meeting

ಸಿದ್ದಾರ್ಥ್ ಕಣ್ಣನ್ ಅವರಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಇಶಾ ಕೊಪ್ಪಿಕರ್, ನನಗೆ ಆಗಿನ್ನೂ ಕೇವಲ 18ರ ಹರೆಯ. ಚಿತ್ರರಂಗದಲ್ಲಿ ಉನ್ನತ ಸ್ಥಾನಕ್ಕೇರುವ ಕನಸು ಕಾಣುತ್ತಿದ್ದ ದಿನಗಳವು. ಆ ದಿನಗಳಲ್ಲಿ ಖ್ಯಾತ ನಾಯಕನ ಸೆಕ್ರೆಟರಿ ಒಬ್ರೂ ನನಗೆ ಕರೆ ಮಾಡಿದ್ದರು ಎಂದಿರುವ ಇಶಾ ನೀವೂ ನಾಯಕನ ಜೊತೆ 'ಫ್ರೆಂಡ್ಲಿ' ಆಗಿ ಇರಬೇಕು ಎಂದು ಹೇಳಿದ್ದರು ಎಂದಿದ್ದಾರೆ. ಸೆಕ್ರೆಟರಿಯ ಈ ಮಾತು ಕೇಳಿ ನಾನು ಅವಕ್ಕಾದೆ ಎಂದಿರುವ ಇಶಾ ನಾನು ತುಂಬ ಫ್ರೆಂಡ್ಲಿ, ಆದರೆ ನೀವು ಯಾವ ಅರ್ಥದಲ್ಲಿ 'ಫ್ರೆಂಡ್ಲಿ' ಆಗಿರಬೇಕು ಎಂದು ಹೇಳುತ್ತಿದ್ದೀರಿ ಅಂತ ಅವರಿಗೆ ಮರು ಪ್ರಶ್ನೆ ಮಾಡಿದ್ದೆ ಎಂದಿದ್ದಾರೆ.

ಇನ್ನೂ.. ಇದೊಂದೇ ಅಲ್ಲ. ಮತ್ತೊಮ್ಮೆ.. ಮತ್ತೊಬ್ಬ ಸ್ಟಾರ್‌ ನನಗೆ ಸಿಂಗಲ್ ಆಗಿ ಏಕಾಂತದಲ್ಲಿ ಭೇಟಿಯಾಗುವಂತೆ ಹೇಳಿದ್ದ ಎಂದಿದ್ಧಾರೆ. ಡ್ರೈವರ್ ಅಥವಾ ಬೇರೆ ಯಾರನ್ನೂ ಜೊತೆಗೆ ಕರೆದುಕೊಂಡು ಬರಬಾರದು ಎಂಬ ಷರತ್ತನ್ನೂ ಹಾಕಿದ್ದ ಎಂದಿರುವ ಇಶಾ ಕೊಪ್ಪಿಕರ್, ಆ ಕಾಲಕ್ಕೆ ಆತ ಹಿಂದಿ ಚಿತ್ರರಂಗದ 'ಎ' ದರ್ಜೆಯ ನಾಯಕನಾಗಿದ್ದ ಎಂದು ಕೂಡ ಬಾಂಬ್ ಸಿಡಿಸಿದ್ದಾರೆ.

isha-koppikar-recalls-casting-couch-experience-reveals-a-list-actors-request-for-private-meeting

ಚಿತ್ರರಂಗದಲ್ಲಿ ನಾಯಕಿಯರ ಭವಿಷ್ಯ ನಾಯಕರು ನಿರ್ಧಾರ ಮಾಡ್ತಾರೆ ಎಂದು ಕೂಡ ಹೇಳಿರುವ ಇಶಾ ಕೊಪ್ಪಿಕರ್, ನನ್ನ ಜೊತೆ ಚಿತ್ರರಂಗದ ಬಂದ ಹಲವಾರು ನಾಯಕಿಯರು ಈ ಕಾಸ್ಟಿಂಗ್ ಕೌಚ್ ಕಾರಣಕ್ಕೆ ಚಿತ್ರರಂಗದಿಂದ ದೂರ ಸರೆದರು, ಕೆಲವರು ಮಾತ್ರ ಎಲ್ಲ ಕಷ್ಟಗಳನ್ನೇದುರಿಸಿ, ಎಲ್ಲಿಯೂ ರಾಜಿ ಮಾಡಿಕೊಳ್ಳದೇ ಇಲ್ಲಿಯೇ ಉಳಿದರು, ಆ ಪೈಕಿ ನಾನು ಕೂಡ ಒಬ್ಬಳು ಎಂದು ಹೇಳಿದ್ದಾರೆ ಇಶಾ ಕೊಪ್ಪಿಕರ್.

ಸದ್ಯಕ್ಕೆ ಇಶಾ ಕೊಪ್ಪಿಕರ್ ನೀಡಿರುವ ಈ ಹೇಳಿಕೆ ಬಾಲಿವುಡ್‌ನಲ್ಲಿ ಸಂಚಲನ ಸೃಷ್ಟಿಸಿದೆ. ಇಶಾ ಕೊಪ್ಪಿಕರ್ ಆರೋಪ ಮಾಡಿರುವ ಆ 'ಎ' ದರ್ಜೆಯ ನಾಯಕ ಯಾರು ಎನ್ನುವ ಪ್ರಶ್ನೆ ಅನೇಕರನ್ನು ಈಗ ಕಾಡುತ್ತಿದೆ. ಇಷ್ಟೆಲ್ಲ ಹೇಳಿದ ಮೇಲೆ ಆ ಸ್ಟಾರ್ ಯಾರು ಎನ್ನುವುದನ್ನೂ ಹೇಳಬಹುದಲ್ಲವಾ ಎಂಬ ಅಭಿಪ್ರಾಯ ಕೂಡ ವ್ಯಕ್ತವಾಗುತ್ತಿದೆ.

More from Filmibeat

English summary
In a recent interview, Isha Koppikar opened up about her encounter with the casting couch culture in Bollywood. Acknowledging that male leads often wielded significant influence over actresses' careers, she disclosed that she first encountered such advances at the age of 18. Koppikar further recounted instances of inappropriate touching and pressure to be 'friendlier'.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X