ಬಾರ್ಡರ್ 2 ; ಆಕ್ಟಿಂಗ್ ಅಂದರೆ ಏನ್ಗೊತ್ತಾ ? ವರುಣ್ ಧವನ್ ಮೇಲೆ ವ್ಯೆಯಕ್ತಿಕ ದಾಳಿ- ಈ ಶುಕ್ರವಾರ ಗೊತ್ತಾಗುತ್ತೆ ಎಂದ ನಟ
ಸಿನಿಮಾ ರಂಗ ಅಂದಮೇಲೆ ಅಲ್ಲಿ ಹತ್ತಾರು ಚರ್ಚೆಗಳು ನಡೆಯುವುದು ಸಹಜ. ಅದರಲ್ಲೂ ಒಂದು ಕಾಲದ ಎಪಿಕ್ ಸಿನಿಮಾದ ಸೀಕ್ವೆಲ್ ಬರುತ್ತದೆ ಎಂದರೆ ಅಭಿಮಾನಿಗಳಲ್ಲಿ ನಿರೀಕ್ಷೆ ಬೆಟ್ಟದಷ್ಟಿರುತ್ತದೆ. ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾ ಪ್ರಭಾವ ಹೆಚ್ಚಾದಂತೆ, ಸಿನಿಮಾದ ಪಾಸಿಟಿವ್ ಸುದ್ದಿಗಿಂತ ನೆಗೆಟಿವ್ ಸುದ್ದಿಗಳೇ ಹೆಚ್ಚು ಸೌಂಡ್ ಮಾಡುತ್ತಿವೆ. ಯಾವುದೋ ಒಂದು ಸಣ್ಣ ವಿಷಯ ಸಿಕ್ಕರೂ ಸಾಕು, ನೆಟ್ಟಿಗರು ಅದನ್ನು ಹಿಡಿದು ಎಳೆಯುತ್ತಾರೆ.
ಬಾಲಿವುಡ್ ಅಂಗಳದಲ್ಲಿ ಈಗ ಇಂತಹದ್ದೇ ಒಂದು ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ. ಒಂದು ಕಡೆ ಸಂಭ್ರಮದ ವಾತಾವರಣ ಇದ್ದರೆ, ಇನ್ನೊಂದು ಕಡೆ ಟೀಕೆಗಳ ಸುರಿಮಳೆಯಾಗುತ್ತಿದೆ. ಚಿತ್ರದ ಕಾಸ್ಟಿಂಗ್ ವಿಷಯದಲ್ಲಿ ದೊಡ್ಡ ಮಟ್ಟದ ಗೊಂದಲಗಳು ಸೃಷ್ಟಿಯಾಗಿವೆ. ಅದರಲ್ಲೂ ಒಬ್ಬ ಸ್ಟಾರ್ ನಟನ ಎಂಟ್ರಿ ಹಲವರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಈ ವಿವಾದ ಈಗ ದೊಡ್ಡ ಸ್ವರೂಪ ಪಡೆದುಕೊಂಡಿದೆ.

ಸಾಮಾನ್ಯವಾಗಿ ನಟರು ಇಂತಹ ಟೀಕೆಗಳಿಗೆ ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ ಟ್ರೋಲ್‌ಗಳು ಮಿತಿ ಮೀರಿದಾಗ ಮೌನ ಮುರಿಯುವುದು ಅನಿವಾರ್ಯ ಆಗುತ್ತದೆ. ಈಗ ಅಂತಹದ್ದೇ ಒಂದು ಘಟನೆ ನಡೆದಿದೆ. ಟೀಕಾಕಾರರಿಗೆ ನೇರವಾಗಿಯೇ ಸವಾಲು ಹಾಕುವಂತಹ ಮಾತುಗಳು ಕೇಳಿಬರುತ್ತಿವೆ. ಆ ಸ್ಟಾರ್ ನಟ ಬೇರೆ ಯಾರು ಅಲ್ಲ ಬದಲಿಗೆ ವರುಣ್ ಧವನ್
ವರುಣ್ ಧವನ್ ಟ್ರೋಲ್ ಹೈಕ್ಳ ಕಾಟ
ಹೌದು, ಎಲ್ಲರಿಗೆ ಗೊತ್ತಿರುವಂತೆ ಸನ್ನಿ ಡಿಯೋಲ್ ಅಭಿನಯದ 'ಬಾರ್ಡರ್' ಸಿನಿಮಾ ಅಂದು ಸೃಷ್ಟಿಸಿದ್ದ ಇತಿಹಾಸ ಅಷ್ಟಿಷ್ಟಲ್ಲ. ಈಗ ಅದರ ಎರಡನೇ ಭಾಗ ಅಂದರೆ 'ಬಾರ್ಡರ್ 2' ತೆರೆಗೆ ಬರುತ್ತಿದೆ. ಈ ಹಿನ್ನೆಲೆ ಚಿತ್ರದ ಪ್ರಚಾರಾರ್ಥ ಚಿತ್ರತಂಡ ಕೆಲ ದಿನಗಳ ಹಿಂದೆ ''ಘರ್ ಕಬ್ ಆವೋಗೆ'' ಹಾಡು ಬಿಡುಗಡೆ ಮಾಡಿತ್ತು.
ಈ ಹಾಡು ಬಿಡುಗಡೆಯಾಗಿದ್ದೇ ತಡ ಹಲವರು ವರುಣ್ ಧವನ್ ಹಿಂದೆ ಬಿದ್ದಿದ್ದರು. ವರುಣ್ ಧವನ್ ಅವರ ಹಾವ ಭಾವ ಅಭಿನಯವನ್ನು ನೋಡಿ ಸಿಕ್ಕಾಪಟ್ಟೆ ಟ್ರೋಲ್ ಮಾಡಿದ್ದರು. ಆಕ್ಟಿಂಗ್ ಅಂದರೆ ಗೊತ್ತಿಲ್ಲದ ನೀವೆಲ್ಲ ಸ್ಟಾರ್‌ಗಳು ಎಂದು ಕಿಂಡಲ್ ಮಾಡಿದ್ದರು. ವ್ಯೆಯಕ್ತಿಕ ದಾಳಿಯನ್ನು ಕೂಡ ಮಾಡಿದ್ದರು. ಸನ್ನಿ ಡಿಯೋಲ್ ಒಬ್ಬರನ್ನು ಹೊರತು ಪಡಿಸಿ ಚಿತ್ರದ ಉಳಿದ ತಾರಾಬಳಗದ ಬಗ್ಗೆ ಕೂಡ ಅಪಸ್ವರ ತೆಗೆದಿದ್ದರು.
ವರುಣ್ ಧವನ್ ಖಡಕ್ ರಿಯಾಕ್ಷನ್...
ಇಷ್ಟೆಲ್ಲಾ ಟ್ರೋಲ್‌ಗಳು ನಡೆಯುತ್ತಿದ್ದರೂ ವರುಣ್ ಧವನ್ ಮಾತ್ರ ಯಾವುದಕ್ಕೂ ಎದೆಗುಂದಿಲ್ಲ. ಇತ್ತೀಚೆಗೆ ಈ ಬಗ್ಗೆ ಮಾತನಾಡಿದ ಅವರು "ಇದೆಲ್ಲವೂ ನನಗೆ ಅಷ್ಟಾಗಿ ಮ್ಯಾಟರ್ ಆಗುವುದಿಲ್ಲ" ಎಂದು ನೇರವಾಗಿಯೇ ಹೇಳಿದ್ದಾರೆ. ಟೀಕೆ ಮಾಡುವವರು ಮಾಡುತ್ತಲೇ ಇರುತ್ತಾರೆ, ಆದರೆ ನಾವು ನಮ್ಮ ಕೆಲಸದ ಮೇಲೆ ಗಮನ ಕೊಡಬೇಕು ಎಂಬುದು ಅವರ ಸ್ಪಷ್ಟ ನಿಲುವಾಗಿದೆ.

"ಯಾರೋ ಏನೋ ಹೇಳುತ್ತಾರೆ ಎಂದು ನಾವು ಕುಳಿತುಕೊಳ್ಳಲು ಸಾಧ್ಯವಿಲ್ಲ. ಸಿನಿಮಾದ ಮೇಲಿನ ಪ್ರೀತಿ ಮತ್ತು ಕಥೆಯ ಮೇಲಿನ ನಂಬಿಕೆ ನನಗೆ ಮುಖ್ಯ. ಟ್ರೋಲ್‌ಗಳ ಬಗ್ಗೆ ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ" ಎಂದು ಅವರು ಹೇಳುವ ಮೂಲಕ ಟ್ರೋಲ್ ಮಾಡುವವರ ಬಾಯಿ ಮುಚ್ಚಿಸಿದ್ದಾರೆ. ಈ ಶುಕ್ರವಾರ ಎಲ್ಲರಿಗೆ ಉತ್ತರ ಸಿಗುತ್ತೆ ಎಂದು ಹೇಳಿದ್ದಾರೆ. ಇವರ ಈ ಆತ್ಮವಿಶ್ವಾಸ ಈಗ ಚಿತ್ರತಂಡಕ್ಕೂ ಆನೆ ಬಲ ತಂದಿದೆ.
ಸಿನಿಮಾ ರಿಲೀಸ್ ಆಗುವ ಮೊದಲೇ ಅದರ ಬಗ್ಗೆ ಒಂದು ನಿರ್ಧಾರಕ್ಕೆ ಬರುವುದು ತಪ್ಪು. ವರುಣ್ ಧವನ್ ಅವರಂತಹ ನಟರು ವಿಭಿನ್ನ ಪಾತ್ರಗಳ ಮೂಲಕ ತಮ್ಮನ್ನು ತಾವು ಸಾಬೀತುಪಡಿಸಿದ್ದಾರೆ. 'ಬಾರ್ಡರ್ 2' ಚಿತ್ರದಲ್ಲಿ ಅವರು ಯಾವ ರೀತಿಯ ಮ್ಯಾಜಿಕ್ ಮಾಡಲಿದ್ದಾರೆ ಎಂಬುದು ಸಿನಿಮಾ ತೆರೆಕಂಡ ಮೇಲಷ್ಟೇ ತಿಳಿಯಲಿದೆ. ಟ್ರೋಲ್‌ಗಳಿಗೆ ತಲೆಕೆಡಿಸಿಕೊಳ್ಳದೆ ವರುಣ್ ನೀಡಿರುವ ಈ ಹೇಳಿಕೆ ಅವರ ಪಕ್ವತೆಯನ್ನು ತೋರಿಸುತ್ತದೆ.
ಸಿನಿಪ್ರೇಮಿಗಳು ಕಾತರದಿಂದ ಕಾಯುತ್ತಿರುವ 'ಬಾರ್ಡರ್ 2' ಸಿನಿಮಾ ಇದೇ ಜನವರಿ 23, 2026 ರಂದು ವಿಶ್ವಾದ್ಯಂತ ಅದ್ಧೂರಿಯಾಗಿ ತೆರೆಗೆ ಬರಲಿದೆ. ಗಣರಾಜ್ಯೋತ್ಸವದ ಲಾಂಗ್ ವೀಕೆಂಡ್ ಸಂಭ್ರಮವನ್ನು ಗಮನದಲ್ಲಿಟ್ಟುಕೊಂಡು ಚಿತ್ರತಂಡ ಈ ದಿನಾಂಕವನ್ನು ನಿಗದಿಪಡಿಸಿದೆ.


Click it and Unblock the Notifications











