ರಿಯಲ್ ಎಸ್ಟೇಟ್ ಏಜೆಂಟ್ ಆದ ಸ್ಟಾರ್ ನಟಿ ; ದುಡ್ಡೇ ದೊಡ್ಡಪ್ಪ, ಸಂಬಂಧಕ್ಕಿಲ್ಲ ಬೆಲೆ - ಕಹಿ ಸತ್ಯ ಹೇಳಿದ 'ಧೂಮ್' ಸುಂದರಿ

ಹಣ ಎಂದರೆ ಹೆಣ ಕೂಡ ಬಾಯಿ ಬೀಡುವ ಕಾಲ ಇದು. ಈ ಕಾಲದಲ್ಲಿ ಹಣದ ಮುಂದೆ ಸಂಬಂಧಕ್ಕೆ ಬೆಲೆ ಇಲ್ಲ. ಪ್ರೀತಿ .. ನಂಬಿಕೆ.. ವಿಶ್ವಾಸ .. ಗೌರವ.. ಕೌಟುಂಬಿಕ ಮೌಲ್ಯಗಳಿಗಿಂತ ಈಗ ಬ್ಯಾಂಕ್ ಬ್ಯಾಲೆನ್ಸ್ ಮುಖ್ಯ. ರಕ್ತ ಸಂಬಂಧಕ್ಕಿಂತ ಆಸ್ತಿ-ಪಾಸ್ತಿ ಮುಖ್ಯ. ಹಣದ ಭದ್ರತೆ ಇದ್ದರೆ ಜೀವನ ಸುಲಭ.

ಹೀಗಾಗಿ ದಿನ ಬೆಳಗಾದರೆ ಸಾಕು ಹಲವರು ಹಣದ ಹಿಂದೆ ಓಡುತ್ತಾರೆ. ಹಗಲು ರಾತ್ರಿ ಕಷ್ಟು ಪಟ್ಟು ಬೆವರು ಸುರಿಸುತ್ತಾರೆ. ಕೇವಲ ಬಡವರು.. ಮಧ್ಯಮ ವರ್ಗದವರು ಮಾತ್ರ ಅಲ್ಲ. ಖಜಾನೆಯಲ್ಲಿ ಕೋಟಿ ಕೊಳೆಯುತ್ತಿದ್ದರೂ ಕೂಡ ಶ್ರೀಮಂತರು ಹಣಕ್ಕೆ ಮಹತ್ವ ಕೊಡುತ್ತಾರೆ. ಹಣ ಗಳಿಸಲು ನೂರಾರು ಉಪಾಯಗಳನ್ನು ಕೂಡ ಮಾಡುತ್ತಾರೆ. ಹಲವಡೆ ಹೂಡಿಕೆ ಮಾಡುತ್ತಾರೆ. ಒಟ್ನಲ್ಲಿ ಹಣ ಹೆಚ್ಚಿದ್ದರೆ ಮಾತ್ರ ನಮ್ಮ ಜೀವನ ಸುಂದರ ಎನ್ನುವಂತಾಗಿದೆ. ಇದಕ್ಕೆ ಕೈಗನ್ನಡಿಯೇ ರಿಮಿ ಸೇನ್ ಅವರಾಡಿರುವ ಮಾತುಗಳು.

It s All a Money Game Actress Rimi Sen Drops a Bold Bitter Truth About Life at Dubai Event

ಹೌದು, ರಿಮಿ ಸೇನ್.. ಒಂದ್ಕಾಲದಲ್ಲಿ ಪ್ರಿಯಾಂಕ ಚೋಪ್ರಾ, ಕತ್ರಿನಾ ಕೈಫ್ ಮತ್ತು ದೀಪಿಕಾ ಪಡುಕೋಣೆ ಅವರನ್ನು ಸೆಡ್ಡು ಹೊಡೆದಿದ್ದ ಬೆಂಗಾಲಿ ಬೆಡಗಿ. ''ಹಂಗಾಮಾ''.. ''ಧೂಮ್''.. ''ಫಿರ್ ಹೇರಾ ಪೇರಿ''.. ''ಗರಮ್ ಮಸಾಲಾ''.. ''ಕ್ಯೂಂ ಕೀ''.. ''ಧೂಮ್ 2''.. ''ಗೋಲ್‌ಮಾಲ್''.. ಹೀಗೆ ಒಂದಾದ ಮೇಲೊಂದು ಸಿನಿಮಾದಲ್ಲಿ, ಒಬ್ಬರಾದ ಮೇಲೊಬ್ಬರಂತೆ ಸೂಪರ್ ಸ್ಟಾರ್‌ಗಳ ಜೊತೆ ಕಾಣಿಸಿಕೊಂಡಿದ್ದವರು ರಿಮಿ ಸೇನ್. ಮೂರು ವರ್ಷದಲ್ಲಿ 07 ಹಿಟ್ ಸಿನಿಮಾ ನೀಡಿದ ಹೆಗ್ಗಳಿಕೆ ಕೂಡ ಇವರದ್ದು.

ಆದರೆ, ದುರಾದೃಷ್ಟ. ಖ್ಯಾತಿಯ ಉತ್ತುಂಗದಲ್ಲಿದ್ದ ರಿಮಿ ಸೇನ್, 2009ರ ಸುಮಾರು ದೊಪ್ಪನೆ ನೆಲಕ್ಕೆ ಬಿದ್ದರು. ಅವಕಾಶಗಳ ಕೊರತೆ ಎದುರಿಸಿದರು. 2011ರ ನಂತರ ಬಾಲಿವುಡ್‌ನಿಂದ ಸಂಪೂರ್ಣವಾಗಿ ಕಣ್ಮರೆಯಾದರು. ಅಲ್ಲಿಂದಾಚೆ ''ಬಿಗ್ ಬಾಸ್'' ಮತ್ತು ''ಜಲಕ್ ದಿಕ್ಲಾ ಜಾ'' ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡ ರಿಮಿ ಸೇನ್, ಚಿತ್ರಕ್ಕೆ ಬಣ್ಣ ಹಚ್ಚಿ 15 ವರ್ಷಗಳೇ ಉರುಳಿವೆ.

ಇಂಥಾ ರಿಮಿ ಸೇನ್ ಸದ್ಯ ಚಿತ್ರರಂಗದಿಂದ ದೂರವಾಗಿದ್ದಾರೆ. ಕೇವಲ ಚಿತ್ರರಂಗ ಮಾತ್ರ ಅಲ್ಲ ತಮ್ಮ ಸ್ನೇಹಿತರು ಮತ್ತು ಕುಟುಂಬದಿಂದ ಕೂಡ ದೂರವಾಗಿ ದೂರದ ದುಬೈನಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದಾರೆ. ನೆಮ್ಮದಿಯ ಬದುಕನ್ನು ಮುನ್ನಡೆಸುತ್ತಿದ್ದಾರೆ. ಆದರೆ, ಈ ನೆಮ್ಮದಿಗೆ ಹಣ ಮುಖ್ಯ. ಹೀಗಾಗಿ ಹಣದ ಮುಂದೆ ಏನೂ ಇಲ್ಲ. ಹಣ ಗಳಿಸುವುದನ್ನು ಯೋಚನೆ ಮಾಡಿ ಎಂದು ಕಿವಿಮಾತನ್ನು ಕೂಡ ರಿಮಿ ಸೇನ್ ಹೇಳಿದ್ದಾರೆ.

ಈ ಕುರಿತು ದುಬೈನ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ರಿಮಿ ಸೇನ್, ಬದುಕಿನಲ್ಲಿ ಭಾವನೆಗಳಿಗಿಂತ ದುಡ್ಡು ಮುಖ್ಯ ಎಂದು ಹೇಳಿದ್ದಾರೆ. ಹಣ ಇಲ್ಲದಿದ್ದರೆ ಮರ್ಯಾದೆ ಸಿಗುವುದಿಲ್ಲ.. ಹಣ ಇಲ್ಲದಿದ್ದರೆ ಸಂಬಂಧಗಳು ಕೂಡ ಉಳಿಯುವುದಿಲ್ಲ.. ಎಂದು ಹೇಳಿರುವ ರಿಮಿ ಇದು ನಾನು ನನ್ನ ಬದುಕಿನಲ್ಲಿ ಕಲಿತ ಬಹುಮುಖ್ಯವಾದ ಪಾಠ ಎಂದು ಹೇಳಿದ್ದಾರೆ. ಇದು ನಮ್ಮ ಸಮಾಜದ ಕಹಿ ಸತ್ಯ, ನಮ್ಮೆಲ್ಲರಿಗೆ ಈ ಸತ್ಯ ಗೊತ್ತು ಎಂದು ಕೂಡ ಹೇಳಿದ್ದಾರೆ.

It s All a Money Game Actress Rimi Sen Drops a Bold Bitter Truth About Life at Dubai Event

ತಮ್ಮ ಪ್ರೀತಿ ಪಾತ್ರರಿಂದ.. ಕುಟುಂಬದವರಿಂದ ದೂರವಾಗಿ ಎಲ್ಲರೂ ದುಡಿಯುವುದೇ ದುಡ್ಡಿಗಾಗಿ ಎಂದು ಹೇಳಿರುವ ರಿಮಿ ಸೇನ್, ತಮ್ಮ ''ಹೇರಾಪೇರಿ'' ಚಿತ್ರದ ಸಬ್ ಪೈಸೆ ಕಾ ಖೇಲ್ ಹೈ, ಬಾಬು ಭಯ್ಯಾ ಎಂಬ ಡೈಲಾಗ್ ಹೊಡೆದಿದ್ದಾರೆ. ಪೈಸೆ ಕೆ ಉಪರ್ ಕುಚ್ ಭಿ ನಹಿ ಹೈ ಎಂದು ಹೇಳಿದ್ದಾರೆ.

ಮುಂದುವರೆದು ಹಾಗಂಥ ನಿಮ್ಮ ಮೌಲ್ಯಗಳನ್ನು ಮರೆಯದಿರಿ.. ದಾರಿ ತಪ್ಪದಿರಿ.. ಅಡ್ಡದಾರಿಯಲ್ಲಿ ಹೋಗದೇ, ಸರಿಯಾದ ದಾರಿಯ ಮೂಲಕ ನೈತಿಕತೆಯಿಂದ.. ಪ್ರಾಮಾಣಿಕತೆಯಿಂದ.. ಹಣ ಗಳಿಸುವುದನ್ನು ಕಲಿಯಿರಿ ಎಂದು ಹೇಳಿರುವ ರಿಮಿ ಸೇನ್ ನೀವು ಯಾವುದಾದರೂ ಒಂದು ಕೆಲಸ ಮಾಡುತ್ತಿದ್ದರೆ, ಆ ಕೆಲಸದಲ್ಲಿ ನಿಮಗೆ ಬೆಳವಣಿಗೆ ಕಂಡು ಬರದೇ ಇದ್ದರೆ ಕೂಡಲೇ ನಿಮ್ಮ ವೃತ್ತಿಯನ್ನು ಬದಲಿಸಿಕೊಳ್ಳಿ, ಬೇರೆ ಕಡೆ ಪ್ರಯತ್ನವನ್ನು ಮಾಡಿ, ಯಾಕೆಂದರೆ ಸಮಯ ಅತ್ಯಮೂಲ್ಯವಾದದ್ದು, ಒಮ್ಮೆ ಹೋದರೆ ಮತ್ತೆ ಮರಳಿ ಬರುವುದಿಲ್ಲ ಎಂದು ಕಿವಿ ಮಾತನ್ನು ಕೂಡ ಹೇಳಿದ್ದಾರೆ. ಸುಂದರವಾದ ಜೀವನಶೈಲಿ, ಉತ್ತಮ ಆರೋಗ್ಯ ಮತ್ತು ಗೌರವಯುತ ಬದುಕಿಗೆ ಹಣವೇ ಅಡಿಪಾಯ ಎಂದು ಪುನರುಚ್ಚಿಸಿದ್ದಾರೆ.

ಸದ್ಯ ರಿಮಿ ಸೇನ್ ಅವರ ಈ ಮಾತುಗಳ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ. ಅಂದ್ಹಾಗೇ ಬೆಳ್ಳಿತೆರೆಯಲ್ಲಿ ಕಾಣಿಸಿಕೊಂಡಿದ್ದ ಸುಂದರವಾದ ಮುಖಚಹರೆ ಹೊಂದಿದ್ದ ರಿಮಿ ಸೇನ್ ಬೇರೆ. ಈಗಿರುವ ರಿಮಿ ಸೇನ್ ಬೇರೆ. ಎದುರು ಬಂದರೂ ಗುರುತು ಹಿಡಿಯಲಾಗದಷ್ಟು ರಿಮಿ ಸೇನ್ ಅವರು ಬದಲಾಗಿದ್ದಾರೆ. ತಮ್ಮ ಸಹಜ ಸೌಂದರ್ಯವನ್ನು ಹಾಳು ಮಾಡಿಕೊಂಡಿದ್ದಾರೆ ಎನ್ನುವುದು ಬೇರೆ ವಿಷಯ.

More from Filmibeat

English summary
Actress Rimi Sen shares a bold reality check at a recent event in Dubai. Discover why the star believes life is just a "money game" and explore her candid views on success and survival in this viral update.
Read more about: money business
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X