ನಮ್ಮ ಚಿತ್ರರಂಗವನ್ನು ಈ ಹೊಸ ಹೀರೋಗಳೆಲ್ಲ ಸೇರಿ ಹಾಳು ಮಾಡುತ್ತಿದ್ದಾರೆ ಎಂದ ಖ್ಯಾತ ನಿರ್ದೇಶಕ...!

ಎಲ್ಲೆಲ್ಲಿಂದಲೋ ಹಣ ಹೊಂದಿಸಿಕೊಂಡು ಬಂದು, ಕಲಾವಿದರು, ತಂತ್ರಜ್ಞರನ್ನೆಲ್ಲಾ ಒಂದು ಕಡೆ ಸೇರಿಸಿ ಸಿನಿಮಾ ಮಾಡಿ, ಅದನ್ನು ತೆರೆಗೆ ತರೋ ಹೊತ್ತಿಗೇ ನಿರ್ಮಾಪಕನ ಪರಿಸ್ಥಿತಿ ಅಕ್ಷರಶಃ ಹೆಣ ಬಿದ್ದಂತಾಗಿರುತ್ತದೆ.

ಯಾಕೆಂದರೆ ಎಷ್ಟೇ ಶ್ರೀಮಂತ ನಿರ್ಮಾಪಕರೇ ಆದರೂ ಸಿನಿಮಾ ಅಂದಮೇಲೆ ಅದಕ್ಕೆ ಸಾಲದ ದುಡ್ಡು ಇದ್ದೇ ಇರುತ್ತದೆ. ಬಡ್ಡಿ ಕಟ್ಟದಿದ್ದರೆ ಯಾರೂ ಬಿಡೋದಿಲ್ಲ. ಕ್ರೆಡಿಟ್ಟು, ಇಂಟರೆಸ್ಟುಗಳ ವಿಚಾರವಿರಲಿ, ಇಷ್ಟೆಲ್ಲಾ ಖರ್ಚು ಮಾಡಿ ನಮ್ಮ ನಿರ್ಮಾಪಕರು ಸಿನಿಮಾ ಮಾಡಿದ್ದಾರೆ. ಎಲ್ಲೆಲ್ಲಿಂದಾ ತಂದು ಸುರಿದಿದ್ದಾರೋ.? ಅವರ ಕಷ್ಟ ಏನು ಅಂತಾ ಯಾವ ಹೀರೋ-ಹೀರೋಯಿನ್ ಕೂಡಾ ಕೇಳುವುದಿಲ್ಲ. ಕೊರೋನಾನಾದರೂ ಇರಲಿ, ಕಾಲರಾವಾದರೂ ಬರಲಿ, ದುಡ್ಡು ಮಡಗಿದ ಮೇಲೆಯೇ ಸಿನಿಮಾ ಅನ್ನುವ ಮನಸ್ಥಿತಿಯೇ ಬಹುತೇಕರದ್ದು.

Its new generation actors who are destroying our film industry says Renowned filmmaker

ಅದರಲ್ಲಿಯೂ ಬಾಲಿವುಡ್‌ನಲ್ಲಿ ನಿರ್ಮಾಪಕರ ಪಾಡು ಆ ದೇವರಿಗೆ ಪ್ರೀತಿ. ಯಾಕೆಂದರೆ ಸ್ಟಾರ್‌ಗಳಿಡುವ ಬೇಡಿಕೆನ್ನೆಲ್ಲ ಪೂರೈಸಿ ಚಿತ್ರ ಮಾಡಲು ನಿರ್ಮಾಪಕರು ಮುಂದಾದ ನಂತರ ನಾಯಕ-ನಾಯಕಿಯರು ಮತ್ತೊಮ್ಮೆ ಅಪಸ್ವರ ತೆಗೆಯುತ್ತಾರೆ. ತಮ್ಮ ಜೊತೆಗೆ ಒಂದು ಅರ್ಧ ಡಜನ್ ಅಸಿಸ್ಟೆಂಟುಗಳು, ಜೊತೆಗೊಬ್ಬ ಮ್ಯಾನೇಜರು.ತಮ್ಮನ್ನೂ ಸೇರಿಸಿ ತಮ್ಮ ಜೊತೆ ಬರುವವರಿಗೆಲ್ಲ ಸ್ಟಾರ್ ಹೊಟೇಲಿನಲ್ಲಿ ಸೂಟ್ ರೂಮು, ಬಂದು ಹೋಗಲು ಬ್ಯುಸಿನೆಸ್ ಕ್ಲಾಸ್ ಫ್ಲೈಟ್ ಟಿಕೆಟ್, ವ್ಯವಸ್ಥೆ ಮಾಡುವಂತೆ ಫರ್ಮಾನು ಹೊರಡಿಸುತ್ತಾರೆ. ಇನ್ನೂ ಈಗೀಗ ಬಂದ ಹೊಸ ನಾಯಕರು ತಮ್ಮ ಚಿತ್ರ ಒಂದು ಗೆದ್ದರೆ ಸಾಕು ಸಂಭಾವನೆಯನ್ನು ಗಗನದೆತ್ತರಕ್ಕೇರಿಸುತ್ತಾರೆ. ಸ್ಟಾರ್‌ಗಳ ಈ ಧಿಮಾಕು ಮತ್ತು ನಡೆಯ ಬಗ್ಗೆ ಇಲ್ಲಿಯವರೆಗೆ ಅನೇಕರು ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ. ಅನುರಾಗ್ ಕಶ್ಯಪ್ ಮತ್ತು ಕರಣ್ ಜೋಹರ್ ಸೇರಿ ಅನೇಕರು ತಮ್ಮ ಆಕ್ರೋಶ ಹೊರ ಹಾಕಿದ್ದಾರೆ. ಇದೀಗ ಈ ಸಾಲಿಗೆ ರೊಹೀತ್ ಶೆಟ್ಟಿ ಕೂಡ ಸೇರಿಕೊಂಡಿದ್ದಾರೆ. ಬಾಲಿವುಡ್‌ನ ಈ ಕಾಲದ ಹೊಸ ಹುಡುಗರು ಹಾಳು ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಹೌದು, ರಣವೀರ್ ಅಲ್ಲಾಬಾಡಿಯಾಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ರೊಹೀತ್ ಶೆಟ್ಟಿ ಚಿತ್ರರಂಗದಲ್ಲಿಗ ಇರುವ ಹೊಸ ನಾಯಕರಿಗೆ ಅಭದ್ರತೆ ಇದೆ ಎಂದು ಹೇಳಿದ್ದಾರೆ. ಯಾರದಾದರೂ ಚಿತ್ರ ಗೆದ್ದರೆ ಸಂಭ್ರಮ ಪಡುವುದಕ್ಕಿಂತ ನಿದ್ದೆಗೆಡುತ್ತಾರೆ, ಹಲ್ಲಲ್ಲು ಕಡಿಯುತ್ತಾರೆ ಎಂದು ಹೇಳಿದ್ದಾರೆ. ಆದರೆ ಹಿಂದೆ ಹೀಗೆ ಇರಲಿಲ್ಲ ಸೋಲು ಗೆಲುವುಗಳ ಬಗ್ಗೆಯಾಗಲಿ ಬೇರೆಯವರ ಬಗ್ಗೆಯಾಗಲಿ ಹಿಂದಿನ ತಾರೆಯರು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ ಎಂದು ಹೇಳಿರುವ ರೊಹೀತ್ ಶೆಟ್ಟಿ ತಮ್ಮ ನೆಚ್ಚಿನ ನಾಯಕ ಅಜಯ್ ದೇವಗನ್ ಅವರನ್ನು ಉದಾಹರಣೆಯನ್ನಾಗಿ ನೀಡಿದ್ದಾರೆ.

Its new generation actors who are destroying our film industry says Renowned filmmaker

ಅಜಯ್ ದೇವಗನ್ ಅಭಿನಯದ ದೃಶ್ಯಂ 2 ಚಿತ್ರ 200 ಕೋಟಿಗೂ ಹೆಚ್ಚು ಹಣ ಗಳಿಸಿತು. ಆದರೆ ಅವರು ಅದರ ಬಗ್ಗೆ ತಮಟೆ ಹೊಡೆಯಲಿಲ್ಲ. ಸೆಲೆಬ್ರೇಟ್ ಮಾಡಲಿಲ್ಲ. ಅದೇ ಗುಂಗಿನಲ್ಲಿ ಓಡಾಡುವುದಿಲ್ಲ ಬದಲಿಗೆ ತಮ್ಮ ಮುಂದಿನ ಚಿತ್ರದ ಕಡೆ ಗಮನ ಕೊಡ್ತಾರೆ ಎಂದು ಹೇಳಿದ್ದಾರೆ. ಆದರೆ, ಇದಕ್ಕೆ ತದ್ವಿರುದ್ದವಾಗಿರುವ ಈಗೀನ ನಾಯಕರು ಒಂದು ಚಿತ್ರ ಗೆದ್ದರೆ ಸಾಕು ಸ್ಟಾರ್‌ಗಳಂತೆ ವರ್ತನೆ ಮಾಡಲು ಶುರುಮಾಡುತ್ತಾರೆ. ಸಂಭಾವನೆ ಹೆಚ್ಚಿಸಿಕೊಳ್ಳುತ್ತಾರೆ. ಇದಲ್ಲದೇ ಕೈಗೊಬ್ಬರು ಕಾಲಿಗೊಬ್ಬರು ಕೆಲಸದವರನ್ನು ನೇಮಿಸಿಕೊಳ್ಳುವುದಲ್ಲದೇ ಮ್ಯಾನೇಜರ್‌ನನ್ನೂ ಕೂಡ ನೇಮಿಸಿಕೊಳ್ಳುತ್ತಾರೆ ಎಂದಿರುವ ರೊಹೀತ್ ಶೆಟ್ಟಿ ಇವರ ಜೊತೆ ನಮ್ಮಂಥಹಾ ನಿರ್ದೇಶಕರು ನೇರವಾಗಿ ಮಾತನಾಡಲು ಸಾಧ್ಯವಾಗುವುದಿಲ್ಲ, ನಾವು ಕೂಡ ಮ್ಯಾನೇಜರ್ ಮೂಲಕವೇ ಹೋಗುವಂತಹ ಸ್ಥಿತಿ ನಿರ್ಮಾಣ ಆಗಿದೆ ಎಂದು ಹೇಳಿದ್ದಾರೆ. ತಮ್ಮ ಬೇಸರವನ್ನೂ ಹೊರ ಹಾಕಿದ್ದಾರೆ.

ಇನ್ನೂ ರೊಹೀತ್ ಶೆಟ್ಟಿ ನಿರ್ದೇಶನದ ಸಿಂಗಂ ಅಗೇನ್ ಈ ದೀಪಾವಳಿ ಹಬ್ಬದ ಪ್ರಯುಕ್ತ ಬಿಡುಗಡೆಯಾಗುತ್ತಿದೆ. ಅವತ್ತೇ ಕಾರ್ತಿಕ್ ಆರ್ಯನ್ ಅಭಿನಯದ ಭೂಲ್ ಭೂಲಯ್ಯ 3 ಕೂಡ ಬಿಡುಗಡೆಯಾಗುತ್ತಿದೆ. ಇನ್ನೂ ಕಾರ್ತಿಕ್ ಆರ್ಯನ್ ತಮ್ಮ ವೃತ್ತಿ ಬದುಕನ್ನು ಶುರು ಮಾಡಿದ್ದು 70,000 ರೂಪಾಯಿಗಳಿಂದ. ಆದರೆ ಇಂದು ಅವರು ಪಡೆಯುವ ಸಂಭಾವನೆ 50 ಕೋಟಿ. ಈ ಕಾರಣಕ್ಕೆ ಅನೇಕರು ಕಾರ್ತಿಕ್ ಆರ್ಯನ್ ವಿರುದ್ಧ ರೊಹೀತ್ ಶೆಟ್ಟಿ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ ಎನ್ನುವ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಕಾರ್ತಿಕ್ ಆರ್ಯನ್ ಅವರನ್ನು ಗುರಿಯಾಗಿಸಿಕೊಂಡು ರೊಹೀತ್ ಶೆಟ್ಟಿ ಈ ಮಾತನ್ನು ಹೇಳಿದ್ದಾರೆ ಎನ್ನುತ್ತಿದ್ದಾರೆ. ಅಂದ್ಹಾಗೇ ರೊಹೀತ್ ಶೆಟ್ಟಿ ಈ ಮಾತುಗಳನ್ನು ಇಂದಲ್ಲ ಬದಲಿಗೆ ಹಿಂದೆ ಹೇಳಿದ್ದರು. ಅವರ ಈ ಮಾತು ಸಿಗಂ ಅಗೇನ್ ಮತ್ತು ಭೂಲ್ ಭೂಲಯ್ಯ 3 ಚಿತ್ರ ಮುಖಾಮುಖಿಯಾಗುತ್ತಿರುವ ಹಿನ್ನೆಲೆ ಮತ್ತೊಮ್ಮೆ ಇವರ ಈ ಮಾತು ಮುನ್ನೆಲೆಗೆ ಬಂದಿದೆ. ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X