ಸೈಫ್ ಅಲಿ ಖಾನ್ ಮಗನ ಜೊತೆ ಕ್ಯಾಮರಾದಲ್ಲಿ ಸೆರೆಯಾದ ಶ್ರೀಲೀಲಾ, ಕಿಸಿಕ್ ಚೆಲುವೆಯನ್ನು ಹಗ್ ಮಾಡಿದ ಇಬ್ರಾಹಿಂ..!

ಕನ್ನಡ ಚಿತ್ರರಂಗದಿಂದ ಕಾಣೆಯಾಗಿ ಟಾಲಿವುಡ್ ನಲ್ಲಿ ಠಿಕಾಣಿ ಹೂಡಿದವರಲ್ಲಿ ಶ್ರೀಲೀಲಾ ಕೂಡಾ ಒಬ್ಬರು ಮತ್ತು ಪ್ರಮುಖರು. ರಶ್ಮಿಕಾ ಮಂದಣ್ಣ ನಂತರ ಒಂದಾದ ಮೇಲೊಂದರಂತೆ ತೆಲುಗು ಚಿತ್ರಗಳಲ್ಲಿ ಅಭಿನಯಿಸಿ ಕೀರ್ತಿ ಪತಾಕೆ ಹಾರಿಸಿದ ಹೆಗ್ಗಳಿಕೆ ಕೂಡ ಇವರದ್ದೇ.

ಧಮಾಕಾ.. ಭಗವಂತ್ ಕೇಸರಿ.. ಆದಿಕೇಶವ.. ಎಕ್ಸ್ಟ್ರಾ ಆರ್ಡಿನರಿ ಮ್ಯಾನ್.. ಸ್ಕಂದ.. ಗುಂಟೂರು ಖಾರಂ.. ಅಬ್ಬಬ್ಬಾ.. ಒಂದಾ, ಎರಡಾ. ಕೇವಲ ಒಂದು-ಒಂದೂವರೆ ವರ್ಷದಲ್ಲಿ ಅರ್ಧ ಡಜನ್ ತೆಲುಗು ಸಿನಿಮಾ ಮಾಡಿದವರು ಇವರು.

It s official Sreeleela will make her Bollywood debut with Ibrahim Khan

ಇಂಥಾ ಶ್ರೀಲೀಲಾ ಟಾಲಿವುಡ್‌ಗೆ ಟಾಟಾ ಹೇಳಿ ರಶ್ಮಿಕಾ ಮಂದಣ್ಣ ಅವರಂತೆಯೇ ಬಾಲಿವುಡ್‌ನಲ್ಲಿ ಬಿಡಾರ ಹೂಡಲಿದ್ದಾರೆ ಎನ್ನುವ ಸುದ್ದಿ ಇಂದು ನಿನ್ನೆಯದಲ್ಲ. ಅನೇಕ ದಿನಗಳಿಂದ ಈ ನ್ಯೂಸ್ ಚಾಲ್ತಿಯಲ್ಲಿದೆ. ಶ್ರೀಲೀಲಾ ಅಭಿನಯದ ಚೊಚ್ಚಲ ಹಿಂದಿ ಚಿತ್ರಕ್ಕೆ ಸೈಫ್ ಅಲಿ ಖಾನ್ ಮಗ ಇಬ್ರಾಹಿಂ ಅಲಿ ಖಾನ್ ನಾಯಕ ಎನ್ನುವ ಮಾತು ಕೂಡ ಕೇಳಿ ಬರುತ್ತಿದೆ. ಈಗ ಇದಕ್ಕೆ ಪೂರಕವಾಗಿ ಕೆಲ ಬೆಳವಣಿಗೆ ನಡೆಯುತ್ತಿವೆ. ಸೈಫ್ ಅಲಿ ಖಾನ್ ಮಗ ಇಬ್ರಾಹಿಂ ಮತ್ತು ಶ್ರೀಲೀಲಾ ಅವರ ಚೊಚ್ಚಲ ಚಿತ್ರಕ್ಕೆ ಶೀಘ್ರದಲ್ಲಿಯೇ ಚಾಲನೆ ಸಿಗುವ ಸಾಧ್ಯತೆ ಇದೆ.

ಹೌದು, ಪುಷ್ಪ 2 ಚಿತ್ರದಲ್ಲಿಅಲ್ಲು ಅರ್ಜುನ್ ಎದುರು ಕಿಸಿಕ್ ಎಂದು ಕುಣಿದು, ಪಡ್ಡೆಗಳ ಹೃದಯಕ್ಕೆ ಕನ್ನ ಹಾಕಿದ್ದ ಶ್ರೀಲೀಲಾ ಈಗ ಮುಂಬೈನಲ್ಲಿ ಕಾಣಿಸಿಕೊಂಡಿದ್ದಾರೆ. ಶ್ರೀಲೀಲಾ ಅವರ ಜೊತೆ ಇಬ್ರಾಹಿಂ ಅಲಿ ಖಾನ್ ಕೂಡ ಇದ್ದು ಬಾಲಿವುಡ್‌ನ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಮ್ಯಾಡಾಕ್ ಕಚೇರಿಗೆ ತೆರಳಿದ ವೇಳೆ ಕ್ಯಾಮರಾ ಕಣ್ಣಿನಲ್ಲಿ ಇಬ್ಬರು ಸೆರೆಯಾಗಿದ್ದಾರೆ. ಆಫೀಸ್‌ದಿಂದ ಹೊರ ಬಂದು ತಬ್ಬಿಕೊಂಡು ಆ ನಂತರ ವಿರುದ್ದ ದಿಕ್ಕಿನತ್ತ ಸಾಗಿದ್ದಾರೆ

ಇನ್ನು ಶ್ರೀಲೀಲಾಗೆ ಹಿಂದಿ ಚಿತ್ರರಂಗದಲ್ಲಿ ಇದು ಮೊದಲ ಹೆಜ್ಜೆ. ಈ ಕಾರಣಕ್ಕೆ ಮೊದಲಿಂದ ಮಗಳ ಬೆನ್ನೆಲುಬಾಗಿ ಆಕೆಯನ್ನು ಹಿಂಬಾಲಿಸುತ್ತಾ ಬರುತ್ತಿರುವ ಡಾ.ಸ್ವರ್ಣಲತಾ ಕೂಡ ತಮ್ಮ ಮಗಳ ಜೊತೆ ಮ್ಯಾಡಾಕ್ ಆಫೀಸ್‌ಗೆ ತೆರಳಿದ್ದಾರೆ. ಮಗಳ ಜೊತೆ ತಾವು ಕೂಡ ಕಥೆಯನ್ನು ಕೇಳಿದ್ದಾರೆ. ಇನ್ನು ಮೊದಲ ಭೇಟಿಯಲ್ಲಿಯೇ ಇಬ್ರಾಹಿಂ ಅಲಿ ಖಾನ್ ಅವರ ವರ್ತನೆ ಹಾವ ಭಾವ ಸಂಸ್ಕಾರವನ್ನು ಮೆಚ್ಚಿಕೊಂಡ ಶ್ರೀಲೀಲಾ ತಾಯಿ ಇಬ್ರಾಹಿಂ ಅಲಿ ಖಾನ್ ಅವರನ್ನು ಹಗ್ ಮಾಡಿ ಬೀಳ್ಕೊಟ್ಟಿದ್ದಾರೆ. ಇದೇ ಸಮಯದಲ್ಲಿ ಪಾಪರಾಜಿಗಳ ಒತ್ತಾಯಕ್ಕೆ ಕಿಸಿಕ್ ಹಾಡಿಗೆ ಶ್ರೀಲೀಲಾ ಹೆಜ್ಜೆ ಹಾಕಬೇಕೆನ್ನುವಷ್ಟರಲ್ಲಿ ಹಿಂದೆಯಿಂದ ಇಬ್ರಾಹಿಂ ಅಲಿ ಖಾನ್ ಕಿಸಿಕ್ ಹಾಡಿನ ಸಿಗ್ನೇಚರ್ ಸ್ಟೆಪ್ ಹಾಕಿದ್ಧಾರೆ.

ಕುನಾಲ್ ದೇಶಮುಖ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಈ ಹಿಂದೆ ಶಿದ್ಧತ್ ಚಿತ್ರವನ್ನು ನಿರ್ದೇಶಿಸಿದ ಅನುಭವ ಇವರದ್ದು. ಇನ್ನು ತಮ್ಮ ಮ್ಯಾಡಾಕ್ ಫಿಲ್ಮ್ಸ್ ಮೂಲಕ ಚಿತ್ರವನ್ನು ನಿರ್ಮಾಣ ಮಾಡುತ್ತಿರುವ ದಿನೇಶ್ ವಿಜ್ಜನ್ ಚಿಕ್ಕ ಬಜೆಟ್‌ ಹೂಡಿ ದೊಡ್ಡ ಲಾಭವನ್ನು ಮಾಡುವ ಬುದ್ದಿವಂತ ನಿರ್ಮಾಪಕ. ಇನ್ನುಳಿದಂತೆ ಚಿತ್ರದ ಉಳಿದ ತಾರಾಬಳಗದಲ್ಲಿ ಯಾರೆಲ್ಲ ಇರಲಿದ್ದಾರೆ ? ಚಿತ್ರದ ಹೆಸರೇನು ? ಎಂಬ ಇತ್ಯಾದಿ ವಿವರಗಳೆಲ್ಲ ಬಹಿರಂಗವಾಗಬೇಕಿವೆ.

ಅಂದ್ಹಾಗೇ ಸದ್ಯ ಬಾಲಿವುಡ್‌ ಕಡೆ ಮುಖ ಮಾಡಿರುವ ಶ್ರೀಲೀಲಾ ತೆಲುಗಿನ ಮಾಸ್ ಮಾಹಾರಾಜ ರವಿತೇಜಾ ಅಭಿನಯದ 'ಮಾಸ್ ಜಾತರ' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ನಿತಿನ್ ಜೊತೆ 'ರಾಬಿನ್ ಹುಡ್' ಚಿತ್ರಕ್ಕೆ ಕೂಡ ಶ್ರೀಲೀಲಾ ನಾಯಕಿ. ಈ ಚಿತ್ರಗಳನ್ನು ಹೊರತು ಪಡಿಸಿದರೆ ಶಿವಕಾರ್ತಿಕೇಯನ್ ಅಭಿನಯದ ಚಿತ್ರದ ಮೂಲಕ ತಮಿಳು ಚಿತ್ರರಂಗವನ್ನು ಕೂಡ ಶ್ರೀಲೀಲಾ ಪ್ರವೇಶಿಸುತ್ತಿದ್ಧಾರೆ. ಪವನ್ ಕಲ್ಯಾಣ್ ಅಭಿನಯದ ಉಸ್ತಾದ್ ಭಗತ್ ಸಿಂಗ್ ಚಿತ್ರದಲ್ಲಿ ಕೂಡ ಶ್ರೀಲೀಲಾ ನಟಿಸುತ್ತಿದ್ದಾರೆ

More from Filmibeat

Read more about: sreeleela actress filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X