ಚಂಡಮಾರುತಕ್ಕೆ ಸಿಕ್ಕ ಸಲ್ಮಾನ್ ಖಾನ್ ಫಾರ್ಮ್ ಹೌಸ್: ವಿಡಿಯೋ ಹಂಚಿಕೊಂಡ ಸಲ್ಲು ಗರ್ಲ್ ಫ್ರೆಂಡ್
ಭಾರಿ ಆತಂಕ ಸೃಷ್ಟಿಸಿದ್ದ ನಿಸರ್ಗ ಚಂಡಮಾರುತ ಮುಂಬೈಗೆ ಅಪ್ಪಳಿಸಿದೆ. ನಿರೀಕ್ಷೆಯ ಮಟ್ಟಕ್ಕಿಂತ ಚಂಡಮಾರುತದ ವೇಗ ತಗ್ಗಿರುವ ಪರಿಣಾಮ ಭಾರಿ ಪ್ರಮಾಣದ ಅನಾಹುತ ತಪ್ಪಿದೆ. ಆದರೂ ಚಂಡಮಾರುತದ ಹೊಡೆತಕ್ಕೆ ಸಿಕ್ಕ ಮುಂಬೈ ಹೇಗಾಗಿದೆ ಎನ್ನುವ ಒಂದು ವಿಡಿಯೋವನ್ನು ಬಾಲಿವುಡ್ ನಟ ಸಲ್ಮಾನ್ ಖಾನ್ ಗರ್ಲ್ ಫ್ರೆಂಡ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
Recommended Video
ಹೌದು, ಸಲ್ಮಾನ್ ಖಾನ್ ಗರ್ಲ್ ಫ್ರೆಂಡ್ ಅಂತಾನೆ ಗುರುತಿಸಿಕೊಂಡಿರುವ ಯೂಲಿಯಾ ವಂಟೂರ್ ಚಂಡಮಾರುತದ ಹೊಡೆತಕ್ಕೆ ಸಿಕ್ಕ ಫಾರ್ಮ್ ಹೌಸ್ ನ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸಲ್ಮಾನ್ ಖಾನ್, ಯೂಲಿಯಾ ಮತ್ತು ಕೆಲವು ಸ್ನೇಹಿತರ ಜೊತೆ ಪನ್ವೆಲ್ ಫಾರ್ಮ್ ಹೌಸ್ ನಲ್ಲಿ ನೆಲೆಸಿದ್ದಾರೆ.
ಚಂಡಮಾರುತದ ವೇಗ ತಗ್ಗಿದರು ಸಹ ಎಷ್ಟು ಪರಿಣಾಮ ಬೀರಿದೆ ಎನ್ನುವುದು ಈ ವಿಡಿಯೋ ಮೂಲಕ ಗೊತ್ತಾಗುತ್ತಿದೆ. ಜೋರಾಗಿ ಬೀಸುತ್ತಿರುವ ಗಾಳಿಗೆ ಮರಗಳು ಬೀಳುತ್ತಿವೆ. ಜೋರಾಗಿ ಮಳೆ ಸುರಿಯುತ್ತಿದೆ, ಫಾರ್ಮ್ ಹೌಸ್ ಸುತ್ತಮುತ್ತ ಉಂಟಾದ ಹಾನಿಯ ಬಗ್ಗೆ ಯೂಲಿಯಾ ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ.

"ಭಾರಿ ಮೋಡ, ಸೂರ್ಯಸ್ತ, ಎಲ್ಲವು ನಿಂತುಹೋದರೂ, ಜೀವನ ನಡೆಯುತ್ತಿರುತ್ತೆ, ಸೂರ್ಯೋದಯವಾಗುತ್ತೆ" ಎಂದು ಹೇಳಿದ್ದಾರೆ. "ಇದನ್ನೆಲ್ಲ ಸರಿ ಮಾಡಲು ಮತ್ತೆ ಸೂರ್ಯ ಬಂದೇ ಬರುತ್ತಾನೆ" ಎಂದು ವಿಡಿಯೋಗೆ ಕ್ಯಾಪ್ಷನ್ ನೀಡಿದ್ದಾರೆ.
ಲಾಕ್ ಡೌನ್ ನಲ್ಲಿ ಸಲ್ಮಾನ್ ಖಾನ್ ಮನೆಯುಿಂದ ದೂರ ಇದ್ದು ತೋಟದ ಮನೆಯಲ್ಲಿ ವಾಸವಾಗಿದ್ದಾರೆ. ಗರ್ಲ್ ಫ್ರೆಂಡ್ ಯೂಲಿಯಾ, ಜಾಕ್ವೆಲ್ ಫರ್ನಾಂಡಿಸ್ ಸೇರಿದಂತೆ ಅನೇಕರು ತೋಟದಮನೆಯಲ್ಲಿದ್ದಾರೆ. ಇದೆ ಸಮಯದಲ್ಲಿ ಸಲ್ಮಾನ್ ಖಾನ್ ಮ್ಯೂಸಿಕ್ ವಿಡಿಯೋವೊಂದನ್ನು ಮಾಡಿ ರಿಲೀಸ್ ಮಾಡಿದ್ದಾರೆ.


Click it and Unblock the Notifications











