ಅವಳು ಯಾವಾಗಲೂ ಎಣ್ಣೆ ಏಟಿನಲ್ಲೇ ಇರ್ತಾಳೆ ; ಕೆಜಿಎಫ್ ನಟಿಯ ಬಗ್ಗೆ ಪತ್ರಕರ್ತೆಯ ಶಾಕಿಂಗ್ ಹೇಳಿಕೆ
ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ. ಆದರೂ ಕೂಡ ಅಮಲಿನಲ್ಲಿ ಅನೇಕರು ತೇಲುತ್ತಾರೆ. ಹೀಗಿದ್ದ ಮೇಲೆ ಗ್ಲ್ಯಾಮರ್ ಲೋಕ ಕೇಳಬೇಕಾ..? ಇಲ್ಲಿ ಹಲವರ ದಿನಚರಿ ಶುರುವಾಗುವುದು ಎಣ್ಣೆಯಿಂದ. ಮುಕ್ತಾಯವಾಗುವುದು ಕೂಡ ಎಣ್ಣೆಯಿಂದಲೇ.
ಇನ್ನು ಇಲ್ಲಿನ ಪಾರ್ಟಿಗಳ ಕಥೆ ನಿಮಗೆ ಗೊತ್ತಿರಬೇಕು..? ಮದ್ಯದ ಹೊಳೆಯನ್ನೇ ಇಲ್ಲಿ ಕೆಲವರು ಹರಿಸುತ್ತಾರೆ. ಮೋಜು-ಮಸ್ತಿ ಎಂದು ಕಂಠಪೂರ್ತಿ ಕುಡಿದು ತೂರಾಡುತ್ತಾ-ವಾಲಾಡತ್ತಾ ತಮ್ಮ ತಮ್ಮ ಡ್ರೈವರ್ ಗಳ ಸಹಾಯದಿಂದ ತಮ್ಮ ಗೂಡು ಸೇರುತ್ತಾರೆ. ಕೇವಲ ನಾಯಕರು ಮಾತ್ರ ಅಲ್ಲ. ಚಿತ್ರರಂಗದಲ್ಲಿನ ಹಲವಾರು ನಾಯಕಿಯರು ಕೂಡ ಮದ್ಯದ ಅಮಲಿನಲ್ಲಿರುತ್ತಾರೆ. ಆ ಪೈಕಿ ಮೌನಿ ರಾಯ್ ಕೂಡ ಒಬ್ಬರು ಎನ್ನುವ ಬಾಂಬ್‌ನ್ನು ಪತ್ರಕರ್ತರೊಬ್ಬರು ಸದ್ಯ ಎಸೆದಿದ್ದಾರೆ.

ಹೌದು, ಮೌನಿ ರಾಯ್.. ''ಕೆ.ಜಿ.ಎಫ್'' ಚಿತ್ರದ ಹಿಂದಿ ವರ್ಷನ್‌ನಲ್ಲಿ ರಾಕಿಂಗ್ ಸ್ಟಾರ್ ಯಶ್ ಜೊತೆ ಹೆಜ್ಜೆ ಹಾಕಿದ್ದ ಮದನಾರಿ. ನೋಡಲು ಶಿಲಾಬಾಲಿಕೆಯಂತೆ ಇರುವ ಮೌನಿ ತಮ್ಮ ಕನಸಿನ ಈ ಪ್ರಯಾಣವನ್ನ ಆರಂಭ ಮಾಡಿದ್ದು ಕಿರುತೆರೆಯ ಮೂಲಕ. ''ಕ್ಯುಂಕಿ ಸಾಸ್ ಭಿ ಕಭಿ ಬಹು ಥಿ'' ಧಾರಾವಾಹಿ ಇವರ ಮೊದಲ ಹೆಜ್ಜೆ.
ಆ ನಂತರ ''ಕಸ್ತೂರಿ''.. ''ದೇವೊಂಕೇ ದೇವ್ ಮಹಾದೇವ್'' ಸೇರಿ ಕೆಲ ಧಾರಾವಾಹಿ ಮಾಡಿದ್ದ ಮೌನಿ ರಾಯ್ ಅದೃಷ್ಟ ಏಕ್ತಾ ಕಪೂರ್ ಕಚೇರಿಯಲ್ಲಿತ್ತು. ಏಕ್ತಾ ನಿರ್ಮಾಣದ ''ನಾಗಿನ್'' ಬೇಕಿದ್ದ ಹೆಸರನ್ನ ಇವರಿಗೆ ತಂದು ಕೊಡ್ತು.
ಅಲ್ಲಿಂದಾಚೆ.. ಮೌನಿ ಒಂದಾದ ಮೇಲೊಂದು ಅವಕಾಶ ಪಡೆದರು. ಐಟಂ ಹಾಡುಗಳಿಗೆ ಹೆಜ್ಜೆ ಹಾಕ್ತಾನೇ, ನಾಯಕಿಯಾಗುವ ''ಗೋಲ್ಡ್''ನ ಅವಕಾಶ ಪಡೆದರು. ''ಬ್ರಹ್ಮಾಸ್ತ್ರ'' ಚಿತ್ರದಲ್ಲಿ ಕೂಡ ಪ್ರಮುಖ ಪಾತ್ರವನ್ನ ನಿರ್ವಹಿಸಿದ್ದರು. ಕೆಲ ದಿನಗಳ ಹಿಂದೆಯಷ್ಟೇ ಇವರ ಅಭಿನಯದ ''ಹೇ ಜವಾನಿ ತೋ ಇಷ್ಕ್ ಹೋನಾ ಹೈ'' ಬಿಡುಗಡೆಯಾಗಿದೆ.
ಇಂಥಾ ಮೌನಿ ರಾಯ್ ನಾಲ್ಕು ವರ್ಷದ ಹಿಂದೆ ಅಂದರೆ ಜನವರಿ 27-2022ರಂದು ಗೋವಾದ ರೆಸಾರ್ಟ್‌ನಲ್ಲಿ ಸೂರಜ್ ನಂಬಿಯಾರ್ ಜೊತೆ ಅದ್ದೂರಿಯಾಗಿ ಮದುವೆ ಆಗಿದ್ದರು. ಬೆಂಗಾಲಿ ಮತ್ತು ಮಲಯಾಳಿ ಸಂಪ್ರದಾಯದಂತೆ ಇಬ್ಬರು ಹೊಸ ಬದುಕಿಗೆ ಮುನ್ನುಡಿ ಬರೆದಿದ್ದರು.

ಆದರೆ ದುರ್ದೈವ. ಮದುವೆಯಾದ ನಾಲ್ಕೇ ವರ್ಷಕ್ಕೆ ಇವರ ದಾಂಪತ್ಯ ಜೀವನ ಮುರಿದು ಬಿದ್ದಿದೆ. ಇಬ್ಬರು ನಾನೊಂದು ತೀರ.. ನೀನೊಂದು ತೀರ.. ಎನ್ನುವಂತೆ ಬದುಕುತ್ತಿದ್ದಾರೆ.ತಮ್ಮ ತಮ್ಮ ಜೀವನದಲ್ಲಿ ಬ್ಯುಸಿಯಾಗಿರುವ ಪ್ರಯತ್ನ ಮಾಡುತ್ತಿದ್ಧಾರೆ. ನೆಮ್ಮದಿಯನ್ನು ಹುಡುಕುತ್ತಿದ್ದಾರೆ. ಆದರೆ, ಇದು ಬಣ್ಣದ ಲೋಕ. ಇಲ್ಲಿ ಹಲವರ ವಿಷಯದಲ್ಲಿ ನೆಮ್ಮದಿ ಮರಿಚೀಕೆ. ಇದಕ್ಕೆ ಮತ್ತೊಂದು ಉದಾಹರಣೆ ಎಂಬಂತೆ ಹಿಂದಿಯ ಹಿರಿಯ ಸಿನಿಮಾ ಪತ್ರಕರ್ತೆ ಸಿಮಿ ಚಂದೋಕ್, ಮೌನಿ ರಾಯ್ ಕುರಿತು ಹೇಳಿಕೆಯೊಂದನ್ನು ನೀಡಿದ್ದಾರೆ. ಮೌನಿಯ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.
ಮೌನಿ ರಾಯ್ ಬಗ್ಗೆ ಹೇಳಿದ್ದೇನು ಪತ್ರಕರ್ತೆ ಸಿಮಿ ಚಂದೋಕ್ ?
ಈ ಕುರಿತು ಸಿದ್ದಾರ್ಥ್ ಕಣ್ಣನ್ ಅವರಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಸಿಮಿ ಚಂದೋಕ್, ಮೌನಿ ರಾಯ್ ಸದಾ ಕುಡಿದ ಮತ್ತಿನಲ್ಲಿಯೇ ಇರುತ್ತಾರೆ ಎಂದು ಹೇಳಿದ್ಧಾರೆ.
ಸೆಲೆಬ್ರಿಟಿಗಳ ಸಾರ್ವಜನಿಕ ನಡುವಳಿಕೆಯ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿರುವ ಸಿಮಿ ಚಂದೋಕ್,ಮೌನಿ ರಾಯ್ ಪ್ರಜ್ಞಾವಸ್ಥೆಯಲ್ಲಿರುವುದನ್ನು ನಾನು ಯಾವತ್ತು ನೋಡಿಲ್ಲ. ಅವರು ಸದಾ ಅಮಲಿನಲ್ಲಿಯೇ ಇರುತ್ತಾರೆ ಎಂದು ಹೇಳಿದ್ಧಾರೆ.
ಮೌನಿ ಮಾತ್ರ ಅಲ್ಲ ಸಂಜು ಬಾಬಾ ಕಥೆ ಕೂಡ ಸೇಮ್
ಇನ್ನು ಇದೇ ವೇಳೆ ಸಿದ್ದಾರ್ಥ್ ಕಣ್ಣನ್ ಮದ್ಯದ ಅಮಲಿನಲ್ಲಿ ಸದಾ ಕಾಲ ಇರುವ ನಾಯಕನ ಹೆಸರು ಹೇಳಿ ಎಂದು ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಸಿಮಿ ಚಂದೋಕ್ ಬಾಲಿವುಡ್‌ನ ಖಳನಾಯಕ್ ಸಂಜಯ್ ದತ್ ಹೆಸರು ತೆಗೆದುಕೊಂಡಿದ್ದಾರೆ.
ಸದ್ಯ ಸಿಮಿ ಚಂದೋಕ್ ಅವರ ಈ ಹೇಳಿಕೆ ವಿವಾದಕ್ಕೆ ನಾಂದಿ ಹಾಡಿದೆ. ಸಿದ್ದಾರ್ಥ್ ಕಣ್ಣನ್ ಅವರ ಸಂದರ್ಶನದ ಈ ಕ್ಲಿಪ್ ವೈರಲ್ ಆದ ಬೆನ್ನಲ್ಲೇ ವಿಡಿಯೋವನ್ನು ಡಿಲೀಟ್ ಮಾಡಲಾಗಿದೆ. ಆದರೆ, ಇದೇ ಸಮಯದಲ್ಲಿ ಮೌನಿ ರಾಯ್ ಅವರ ವರ್ಷದ ಹಿಂದಿನ ವಿಡಿಯೋ ಒಂದು ವೈರಲ್ ಆಗಿದೆ. ಸಿಮಿ ಚಂದೋಕ್ ವಿರುದ್ದ ಟೀಕಾಪ್ರಹಾರ ಮಾಡುತ್ತಿರುವ ಹಲವರ ಬಾಯಿಯನ್ನು ಕೂಡ ಈ ವಿಡಿಯೋ ಮುಚ್ಚಿಸಿದೆ.
ಮೌನಿ ರಾಯ್ ಹಳೆಯ ವಿಡಿಯೋ ವೈರಲ್
2025ರ ಜನವರಿ 1 ರಂದು ಮೌನಿ ರಾಯ್ ಸದ್ಯ ಮಾಜಿಯಾಗಿರುವ ಅಂದಿನ ಪತಿ ಸೂರಜ್ ಮತ್ತು ತಮ್ಮ ಗೆಳತಿ ದಿಶಾ ಜೊತೆ ರೆಸ್ಟೋರೆಂಟ್ ಒಂದರಲ್ಲಿ ಪಾರ್ಟಿ ಮಾಡಿದ್ದರು. ಆದರೆ, ಪಾರ್ಟಿ ಮುಗಿಸಿ ಕಾರಿನ ಹತ್ತಿರ ಹೋಗುವಾಗ ಮೆಟ್ಟಿಲಿನ ಮೇಲೆ ಆಯ ತಪ್ಪಿ ಮೌನಿ ರಾಯ್ ದೊಪ್ಪನೆ ಕೆಳಗೆ ಬಿದ್ದಿದ್ದರು. ಕೂಡಲೇ ಮೌನಿ ಸುತ್ತ ಇದ್ದ ಭದ್ರತಾ ಸಿಬ್ಬಂದಿ ನೆರವಿಗೆ ಬಂದಿದ್ದರು. ಆ ನಂತರ ಮೌನಿ ರಾಯ್ ಕೈಯನ್ನು ಹಿಡಿದು ಸೂರಜ್ ಕರೆದುಕೊಂಡು ಹೋಗಿ ಕಾರು ಹತ್ತಿಸಿದ್ದರು.
ಆ ಸಮಯದಲ್ಲಿ ಈ ವಿಡಿಯೋ ವೈರಲ್ ಆಗಿತ್ತು. ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಕೂಡ ನಡೆದಿತ್ತು. ಕೆಲವರು ನಿಲ್ಲಲು ಸಾಧ್ಯವಾಗದಷ್ಟು ಯಾಕೆ ಕುಡಿಯಬೇಕು ಎಂಬ ಪ್ರಶ್ನೆಯನ್ನು ಕೇಳಿದ್ದರೆ, ಇನ್ನು ಕೆಲವರು ಮೌನಿ ರಾಯ್ ಕಂಠಪೂರ್ತಿ ಕುಡಿದಿದ್ದಾರೆ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಕುಡಿದಿದ್ದು ಜಾಸ್ತಿಯಾಗಿದೆ ಎಂದು ಕಾಮೆಂಟ್ ಮಾಡಿದ್ದರು.
ಸದ್ಯ ಸಿಮಿ ಚಂದೋಕ್ ಅವರ ಹೇಳಿಕೆಯಿಂದ ಮೌನಿ ರಾಯ್ ಅವರ ಈ ಹಳೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ವೈರಲ್ ಆಗಿದೆ. ಸಿಮಿ ಚಂದೋಕ್ ಹೇಳಿರುವುದರಲ್ಲಿ ಯಾವ ಅತಿಶಯೋಕ್ತಿ ಇಲ್ಲ, ತಾವ ತಪ್ಪು ಇಲ್ಲ ಎಂಬ ಅಭಿಪ್ರಾಯವನ್ನು ಕೂಡ ಒಂದು ವರ್ಗ ವ್ಯಕ್ತಪಡಿಸುತ್ತಿದೆ.


Click it and Unblock the Notifications