»   » ಶಾರುಖ್-ಅನುಷ್ಕಾ'ರ 'ಜಬ್‌ ಹ್ಯಾರಿ ಮೆಟ್ ಸೀಜಲ್' ಫಸ್ಟ್‌ ಡೇ ಕಲೆಕ್ಷನ್ ಎಷ್ಟು?

ಶಾರುಖ್-ಅನುಷ್ಕಾ'ರ 'ಜಬ್‌ ಹ್ಯಾರಿ ಮೆಟ್ ಸೀಜಲ್' ಫಸ್ಟ್‌ ಡೇ ಕಲೆಕ್ಷನ್ ಎಷ್ಟು?

Posted By:
Subscribe to Filmibeat Kannada

ಶಾರುಖ್ ಖಾನ್ ಮತ್ತು ಅನುಷ್ಕಾ ಶರ್ಮಾ ಅಭಿನಯದ 'ಜಬ್ ಹ್ಯಾರಿ ಮೆಟ್ ಸೀಜಲ್' ಚಿತ್ರ ನಿನ್ನೆ(ಆಗಸ್ಟ್ 4) ಪ್ರಪಂಚದಾದ್ಯಂತ ಬಿಡುಗಡೆ ಆಗಿದೆ. ಬಹು ನಿರೀಕ್ಷಿತ ಚಿತ್ರವಾದ್ದರಿಂದ ಪ್ರಪಂಚದಾದ್ಯಂತ ಪ್ರೇಕ್ಷಕರು ಮುಗಿಬಿದ್ದು ಮೊದಲ ದಿನವೇ ಚಿತ್ರವನ್ನು ಹಲವರು ನೋಡಿದ್ದಾರೆ.

'ಜಬ್ ಹ್ಯಾರಿ ಮೆಟ್ ಸೆಜಲ್' ಕ್ಲೈಮ್ಯಾಕ್ಸ್‌ ಸೀನ್‌ನಲ್ಲಿ ಶಾರುಖ್ ಆತ್ಮಹತ್ಯೆಗೆ ಯತ್ನ?

ಇಮ್ತಿಯಾಜ್ ಅಲಿ ನಿರ್ದೇಶನದ 'ಜಬ್ ಹ್ಯಾರಿ ಮೆಟ್ ಸೀಜಲ್' ಚಿತ್ರವು ಭಾರತದ ಬಾಕ್ಸ್ ಆಫೀಸ್‌ನಲ್ಲಿ ಮೊದಲ ದಿನವೇ 16.5 ಕೋಟಿ ಗಳಿಸಿರುವುದು 'ಬಾಕ್ಸ್‌ಆಫೀಸ್ ಇಂಡಿಯಾ.ಕಾಂ' ವರದಿ ಪ್ರಕಾರ ತಿಳಿದಿದೆ.

'Jab Harry Met Sejal' box-office collection Day 1

ಅಂದಹಾಗೆ ಶಾರುಖ್ ಮತ್ತು 'ಪಿಕೆ' ಗರ್ಲ್ ರೊಮ್ಯಾಂಟಿಕ್ ಚಿತ್ರವು ಮೊದಲ ದಿನವೇ ಅತಿಹೆಚ್ಚು ಬಾಕ್ಸ್ ಆಫೀಸ್ ಗಳಿಕೆ ಪಡೆದ ಈ ವರ್ಷದ ನಾಲ್ಕನೇ ಚಿತ್ರ. ಈ ವರ್ಷ ಮೊದಲ ದಿನ ಅತಿಹೆಚ್ಚು ಗಳಿಕೆಯ ಕಂಡ ಚಿತ್ರಗಳು ಕ್ರಮವಾಗಿ 'ಬಾಹುಬಲಿ 2', 'ರಯೀಸ್' ಮತ್ತು ಸಲ್ಮಾನ್ ಖಾನ್ 'ಟ್ಯೂಬ್‌ಲೈಟ್'. ಈ ಮೂರು ಚಿತ್ರಗಳ ನಂತರ ಈಗ 'ಜಬ್ ಹ್ಯಾರಿ ಮೆಟ್ ಸೀಜಲ್' ಚಿತ್ರವು ನಾಲ್ಕನೇ ಅತಿಹೆಚ್ಚು ಗಳಿಕೆ ಕಂಡ ಚಿತ್ರವಾಗಿ ಹೊರಹೊಮ್ಮಿದೆ. ಆದರೆ ಶಾರುಖ್ ಖಾನ್‌ ರವರ ಈ ಹಿಂದಿನ ಚಿತ್ರ 'ರಯೀಸ್' ಮೊದಲ ದಿನವೇ 20 ಕೋಟಿ ರೂ ಬಾಕ್ಸ್ ಆಫೀಸ್ ಗಳಿಸಿತ್ತು.

'ಜಬ್‌ ಹ್ಯಾರಿ ಮೆಟ್ ಸೀಜಲ್' ಚಿತ್ರವು ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದಿದೆ.

English summary
'Jab Harry Met Sejal', starring Shah Rukh Khan and Anushka Sharma in the lead roles, released worldwide on Friday. The Imtiaz Ali directorial has amassed an approximate collection of Rs 16.5 crore on its first day at the domestic box-office, according to a report on BoxofficeIndia.com.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada