ಮನಮೋಹಕವಾಗಿದೆ 'ಜಬ್ ಹ್ಯಾರಿ ಮೆಟ್ ಸೆಜಲ್' ಟ್ರೈಲರ್
ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಮತ್ತು ಅನುಷ್ಕಾ ಶರ್ಮಾ ಕಾಂಬಿನೇಷನ್ ನ ಮೂರನೇ ಸಿನಿಮಾ 'ಜಬ್ ಹ್ಯಾರಿ ಮೆಟ್ ಸೆಜಲ್' ಚಿತ್ರದ ಬಿಡುಗಡೆಗೆ ಈಗ ದಿನಗಣನೆ ಶುರುವಾಗಿದ್ದು, ಶಾರುಖ್ ಖಾನ್ ಅಭಿಮಾನಿಗಳು ಸಿನಿಮಾವನ್ನು ಕಣ್ತುಂಬಿಕೊಳ್ಳಲು ಪ್ರಪಂಚದಾದ್ಯಂತ ಕಾತುರರಾಗಿದ್ದಾರೆ.
ಈಗ 'ಜಬ್ ಹ್ಯಾರಿ ಮೆಟ್ ಸೆಜಲ್' ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಮನಮೋಹಕವಾಗಿದೆ. ಇದೊಂದು ಮುದ್ದಾದ ಲವ್ ಸ್ಟೋರಿ ಸಿನಿಮವಾಗಿದ್ದು, ಶಾರೂಖ್ ಖಾನ್ ಮತ್ತು ಅನುಷ್ಕಾ ಜೋಡಿ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದೆ. ಕಾಮಿಡಿ, ಸೆಂಟಿಮೆಂಟ್, ಲವ್, ರೊಮ್ಯಾಂಟಿಕ್, ಹೀಗೆ ಎಲ್ಲ ಅಂಶಗಳನ್ನ ಈ ಸಿನಿಮಾ ಒಳಗೊಂಡಿದೆ. ಹೀಗಾಗಿ, ಚಿತ್ರದ ಮೇಲೆ ನಿರೀಕ್ಷೆ, ಕುತೂಹಲ ಹೆಚ್ಚಾಗುತ್ತಿದೆ.

ಇಮ್ತಿಯಾಜ್ ಅಲಿ ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ಸ್ವತಃ ಶಾರೂಖ್ ಖಾನ್ ಪತ್ನಿ ಗೌರಿ ಖಾನ್ ಬಂಡವಾಳ ಹಾಕಿದ್ದಾರೆ. ಉಳಿದಂತೆ ಎವೆಲಿನ್ ಶರ್ಮಾ ಮತ್ತು ಸಯಾನಿ ಗುಪ್ತಾ ಚಿತ್ರದಲ್ಲಿ ಪ್ರಮುಖ ಪಾತ್ರಗಳನ್ನ ನಿರ್ವಹಿಸಿದ್ದಾರೆ. ಸಿನಿಮಾ ಮುಗಿಸಿ ಪ್ರಮೋಷನ್ ನಲ್ಲಿ ತೊಡಗಿಕೊಂಡಿರುವ ಚಿತ್ರ, ಯುಎಇ ಮತ್ತು ಗಲ್ಫ್ ನಾಡಲ್ಲಿ ಆಗಸ್ಟ್ 3 ರಂದು ಬಿಡುಗಡೆಯಾಗುತ್ತಿದ್ದರೇ, ಭಾರತದಲ್ಲಿ ಆಗಸ್ಟ್ 4 ರಂದು ತೆರೆಗೆ ಬರಲಿದೆ.
'ಜಬ್ ಹ್ಯಾರಿ ಮೆಟ್ ಸೆಜಲ್' ಟ್ರೈಲರ್ ಇಲ್ಲಿದೆ ನೋಡಿ


Click it and Unblock the Notifications











