ಸಲ್ಲೂ ಎದುರಿಗೇ ಕತ್ರಿನಾ ಪರ ಮಾತನಾಡಿದ ಶಾರುಖ್

<ul id="pagination-digg"><li class="previous"><a href="/bollywood/shahrukh-khan-defend-katrina-kaif-premiere-salman-khan-069557.html">« Previous</a>

ಜಬ್ ತಕ್ ಹೇ ಜಾನ್ ಚಿತ್ರದ ಪ್ರೀಮಿಯರ್ ಶೋ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಚಿತ್ರತಂಡದ ಪ್ರತಿಯೊಬ್ಬರೂ ಮಾತನಾಡಿದ್ದಾರೆ. ಚಿತ್ರದ ನಾಯಕಿ ಕತ್ರಿನಾ ಕೈಫ್ ಮಾತನಾಡುವ ವೇಳೆ ಶಾರುಖ್ ಖಾನ್ ಸಂಪೂರ್ಣವಾಗಿ ಸಂಯಮ ಕಳೆದುಕೊಂಡರು. ಅದಕ್ಕೆ ಕಾರಣ, ಪತ್ರಕರ್ತರೊಬ್ಬರು ಕತ್ರಿನಾ ಕೈಫ್ ಅವರಿಗೆ ಹಿಂದಿಯಲ್ಲೇ ಮಾತನಾಡಿ ಎಂದು ತಾಕೀತು ಮಾಡಿದರು. ಅದಕ್ಕೆ ಭಾರೀ ಕೋಪಗೊಂಡ ಶಾರುಖ್, ಕತ್ರಿನಾ ಪರವಾಗಿ ಮಾತನಾಡಿ ಪತ್ರಕರ್ತರನ್ನು ತರಾಟೆಗೆ ತೆಗೆದುಕೊಂಡರು.

ಈ ವೇಳೆ ಮಾತನಾಡಿದ ಶಾರುಖ್ "ನಟಿ ಕತ್ರಿನಾಗೆ ಹಿಂದಿ ಭಾಷೆಯ ಜ್ಞಾನ ಚೆನ್ನಾಗಿಯೇ ಇದೆ. ಆದರೆ ಸುದ್ದಿಗೋಷ್ಠಿಯಲ್ಲಿ ಅವರು ಯಾವ ಭಾಷೆಯಲ್ಲಿ ಹೇಗೆ ಮಾತನಾಡಬೇಕು ಎಂಬುದು ಅವರ 'ಕಂಫರ್ಟ್' ಹಾಗೂ 'ಇಷ್ಟ'ಕ್ಕೆ ಸಂಬಂಧಿಸಿದ ವಿಷಯ. ಅಷ್ಟಕ್ಕೂ ಮಹಿಳೆಯೊಬ್ಬರ ಜೊತೆ ಅಷ್ಟೊಂದು ಒರಟಾಗಿ ನಡೆದುಕೊಳ್ಳಬಾರದು. ಅವರ ಕಾಲೆಳೆದು ಮನಸ್ಸಿಗೆ ನೋವಾಗುವ ರೀತಿ ನಡೆದುಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ?" ಎಂದು ಶಾರುಖ್ ಕಿಡಿಕಿಡಿಯಾದರು.

ಅದರಿಂದ ತಬ್ಬಿಬ್ಬಾದ ಪತ್ರಕರ್ತರು ಕತ್ರಿನಾ ಯಾವ ಭಾಷೆಯಲ್ಲಾದರೂ ಮಾತನಾಡಿಕೊಳ್ಳಲಿ, ಏನಾದರೂ ಹೇಳಿಕೊಳ್ಳಲಿ ಎಂದು ಸುಮ್ಮನಾದರು. ಈ ಎಲ್ಲಾ ತಮಾಷೆಗಳನ್ನೂ ಮೌನವಾಗಿ ನೋಡುತ್ತಿದ್ದರು ಸಲ್ಮಾನ್ ಖಾನ್. ಅದಕ್ಕವರು ಯಾವುದೇ ಪ್ರತಿಕ್ರಿಯೆಯನ್ನು ನೀಡಲಿಲ್ಲವಾದರೂ ತಮ್ಮ ಗೆಳತಿ ಕತ್ರಿನಾ ಕೈಫ್ ಪರವಾಗಿ ಮಾತನಾಡಿದ ಶಾರುಖ್ ಅವರ ಬಗ್ಗೆ ಸಲ್ಲೂ ಕಣ್ಣಿನಲ್ಲೇ ಮೆಚ್ಚುಗೆ ಸೂಚಿಸಿದ್ದು ಅಲ್ಲಿದ್ದವರ ಗಮನಕ್ಕೆ ಬಾರದಿರಲಿಲ್ಲ.

ಒಟ್ಟಿನಲ್ಲಿ, ಶಾರುಖ್ ಖಾನ್ ಚಿತ್ರದ ಪ್ರೀಮಿಯರ್ ಶೋಗೆ ಸಲ್ಲೂ ಹೋಗಿದ್ದು, ಅಲ್ಲಿ ನಡೆದ ತಮಾಷೆಯ ಘಟನೆಗಳು ಈಗ ಎಲ್ಲೆಡೆ ಸುದ್ದಿಯಾಗಿವೆ. ಅಷ್ಟೇ ಅಲ್ಲ, ಚಿತ್ರವು ಅತ್ಯದ್ಭುತ ಓಪನಿಂಗ್ ಪಡೆದು ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ. ಇಡೀ ಏಷ್ಯಾದಲ್ಲಿ ಎಲ್ಲಾ ಕಡೆ ಯಶ್ ರಾಜ್ ಬ್ಯಾನರಿನ 'ಜಬ್ ತಕ್ ಹೇ ಜಾನ್' ಚಿತ್ರದ್ದೇ ಸುದ್ದಿ. ಶಾರುಖ್ ಖಾನ್ ಹಾಗೂ ಕತ್ರಿನಾ ಕೈಫ್ ನಟನೆಯ ಚಿತ್ರ 'ಜಬ್ ತಕ್ ಹೇ ಜಾನ್', ಬಾಲಿವುಡ್ ನಲ್ಲಿ ಹೊಸ ದಾಖಲೆ ಬರೆಯುವ ಲಕ್ಷಣಗಳು ಗೋಚರಿಸುತ್ತಿವೆ. (ಏಜೆನ್ಸೀಸ್)

<ul id="pagination-digg"><li class="previous"><a href="/bollywood/shahrukh-khan-defend-katrina-kaif-premiere-salman-khan-069557.html">« Previous</a>

More from Filmibeat

English summary
Shahrukh Khan defended Jab Tak Hai Jaan leading lady Katrina Kaif in the premiere, in presence of Salman Khan.&#13; &#13;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X