»   »  ಮುಂಬೈನಲ್ಲಿ ಕುಂಗ್ ಫು ಪಂಡಾದ ಮೆರುಗು, ಎಲ್ಲೆಲ್ಲೂ ಜಾಕಿ ಚಾನ್ ರಂಗು

ಮುಂಬೈನಲ್ಲಿ ಕುಂಗ್ ಫು ಪಂಡಾದ ಮೆರುಗು, ಎಲ್ಲೆಲ್ಲೂ ಜಾಕಿ ಚಾನ್ ರಂಗು

Posted By:
Subscribe to Filmibeat Kannada

ಮುಂಬೈನಲ್ಲಿ ಕುಂಗ್ ಫು ಪಂಡಾದ ಮೆರುಗು, ಎಲ್ಲೆಲ್ಲೂ ಜಾಕಿ ಚಾನ್ ರಂಗು

ಚೈನಾ ಚಿತ್ರರಂಗದ ದಂತ ಕತೆ ಜಾಕಿಚಾನ್ ಮುಂಬೈಗೆ ಬಂದಿದ್ದಾರೆ. ಅವರ ನೂತನ ಚಿತ್ರವಾದ 'ಕಿಂಗ್ ಫು ಯೋಗ'ದ ಪ್ರಚಾರಕ್ಕಾಗಿ ನಡೆದ ಭವ್ಯ ಸಮಾರಂಭವೊಂದರಲ್ಲಿ ಭಾಗವಹಿಸಿದ್ದ ಅವರು, ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದರು.[ಜಾಕಿ ಚಾನ್, ಸಲ್ಮಾನ್ ಖಾನ್ ಅಪರೂಪದ ಸಮಾಗಮ]

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ, ನಟ ಸೂನು ಸೂದ್ ಅವರೂ ಕಾರ್ಯಕ್ರಮದಲ್ಲಿ ಜಾಕಿ ಚಾನ್ ಅವರಿಗೆ ಸಾಥ್ ನೀಡಿದರು.

ಅಂದು ಜಾಕಿ ಚಾನ್, ಹಾಡಿದರು, ಕುಣಿದರು, ಸಹ ನಟರೊಂದಿಗೆ ಒಂದೆರಡು ಸ್ಟೆಪ್ಸ್ ಹಾಕಿದರು. ಇದು ಚಿತ್ರರಸಿಕರಿಗೆ ಕಚಗುಳಿಯಿಟ್ಟಿದ್ದು ಮಾತ್ರ ಸುಳ್ಳಲ್ಲ.

ಸಮಾರಂಭದ ಕೆಲ ಫೋಟೋಗಳ ಇಲ್ಲಿ ನಿಮಗಾಗಿ.....

ನಟಿಯರೊಂದಿಗೆ ಎರಡು ಸ್ಟೆಪ್ಸ್

ಕೇವಲ ಫೈಟಿಂಗ್ ನಿಂದಲೇ ಹೆಸರು ವಾಸಿಯಾಗಿದ್ದ ನಟ ಜಾಕಿ ಚಾನ್ ಉತ್ತಮವಾಗಿ ನೃತ್ಯವನ್ನೂ ಮಾಡಬಲ್ಲರು ಎಂಬುದನ್ನು ಅವರು ಸಹ ನಟಿಯರೊಂದಿಗೆ ಕುಣಿದು ತೋರಿಸಿದ್ದು ಹೀಗೆ.

ಹಮ್ ನಹೀ ಛೋಡೇಂಗೇ...

ಚಿತ್ರದಲ್ಲಿ ಜಾಕಿ ಚಾನ್ ಜತೆಗೆ ನಟಿಸಿರುವ ಬಾಲಿವುಡ್ ನಟ ಸೂನು ಸೂದ್ ಅವರು ಹೆಸರಾಂತ ಶೋಲೆ ಶೈಲಿಯಲ್ಲಿ ಸ್ಟೇಜ್ ಮೇಲೆ ಕಾಣಿಸಿಕೊಂಡಿದ್ದು ಹೀಗೆ.

ಹಿರಿಯರಿಗೆ ನಮಸ್ಕಾರ

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಟಿ ಶಿಲ್ಪಾ ಶೆಟ್ಟಿ, ಹಿರಿಯ ನಟರಾದ ಜಾಕಿಚಾನ್ ಅವರ ಕಾಲಿಗೆ ನಮಸ್ಕರಿಸಿದರು. ಹಿರಿಯ ಕಲಾವಿದನಿಗೆ ತೋರಿದ ಗೌರವವದು.

ಲೆಜೆಂಡ್ ಜತೆಗಿನ ಬಾಂಧವ್ಯ

'ಕಿಂಗ್ ಫು ಯೋಗ' ಚಿತ್ರದ ಪ್ರಮುಖ ನಟರಾದ ಜಾಕಿ ಚಾನ್ ಹಾಗೂ ಸೋನು ಸೂದ್ ಜತೆಗೆ ಶಿಲ್ಪ ಶೆಟ್ಟಿ ಆಕರ್ಷಕ ಪೋಸು.

ಮರೆಲಾರೆನು ಈ ಕ್ಷಣವ

ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೇವಲ ತನ್ನ ಪ್ರತಿಭೆಯಿಂದಲೇ ಹೆಸರುವಾಸಿಯಾದ ಜಾಕಿಯವರೊಂದಿಗೆ ಕಳೆದ ಅಮೂಲ್ಯ ಕ್ಷಣಗಳನ್ನು ಮರೆಯಲು ಸಾಧ್ಯವೇ ಎನ್ನುವಂತೆ ನಟಿ ಶಿಲ್ಪಾ ಅವರು ಹಿರಿಯ ನಟನನ್ನು ಪ್ರೀತಿಯಿಂದ ಆಲಂಗಿಸಿದರು.

English summary
International fame actor was in a promotion event of movie 'King Fu Yoga' in Mumbai. Bollywood actors Shilpa Shetty and Sonu Sood who is also a co-star in the movie were present in the promotion.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada