ಮದುವೆ ಮುನ್ನ ಅಫ್ಘಾನಿಸ್ತಾನದ ಅಬ್ದುಲ್ ಜೊತೆ ಒಂದೇ ಮನೆಯಲ್ಲಿ ಸಹ ಜೀವನ ; ಜಾಕಿ ಶ್ರಾಫ್ ಮಗಳ ಪ್ರೇಮಕಥೆ ಶುರುವಾಗಿದ್ಹೇಗೆ ?

ಪ್ರೇಮ ಕುರುಡು.. ಇತಿಹಾಸದುದ್ದಕ್ಕೂ ಪ್ರೀತಿಗಂಟಿಕೊಂಡೇ ಬಂದ ಆರೋಪ ಇದು. ಆದರೆ ಬದಲಾದ ಕಾಲದಲ್ಲಿ ಪ್ರೀತಿಯ ವರಸೆ ಬದಲಾಗಿದೆ. ಭಾವೋದ್ವೇಗದ ಪ್ರೀತಿ, ಸ್ನೇಹವಾಗಿ ಅರಳಿ, ಬೆಳೆದು ಪ್ರಬುದ್ಧವಾಗುವ ತನಕ, ನಂಬುಗೆಗಳ ಅಡಿಪಾಯದಲ್ಲಿ ನಿಜಾರ್ಥದ ಅನುರಾಗ ಅರಳುವ ತನಕ... ಕಾಯುವ ತಂತ್ರ ಈಗಿನದು.

ಬಾಳಪೂರ್ತಿ ಜೊತೆ ಬರುವ ಪ್ರೀತಿಯ ಗಟ್ಟಿತನವನ್ನು ಒಂದಲ್ಲ ಹತ್ತು ಬಾರಿ ಪರೀಕ್ಷಿಸುವ, ಪೊಳ್ಳೆನಿಸಿದರೆ ಕೈ ಬಿಡುವ, ತಾಳುವುದನ್ನು ಮಾತ್ರ ಆಯ್ದುಕೊಳ್ಳುವ ಪ್ರೀತಿಯ ಹೊಸ ಪರಿ ಇದು. ಕೃಷ್ಣಾ ಶ್ರಾಫ್ ಇದಕ್ಕೆ ಸದ್ಯದ ಉದಾಹರಣೆ.

Jackie Shroff s Daughter Krishna Reveals Bold Live-In Relationship With Afghan MMA Fighter

ಹೌದು, ಕೃಷ್ಣಾ ಶ್ರಾಫ್.. ಅಂದಕಾಲತ್ತಿಲ್‌ನ ಸೂಪರ್ ಸ್ಟಾರ್ ಜಾಕಿ ಶ್ರಾಫ್ ಅವರ ಮುದ್ದಿನ ಮಗಳು. ಬಾಲಿವುಡ್‌ನ ಯಂಗ್ ಜನರೇಶನ್‌ನ ಸ್ಟಾರ್ ಟೈಗರ್ ಶ್ರಾಫ್ ಅವರ ತಂಗಿ. ತಂದೆ ಮತ್ತು ಅಣ್ಣನಂತೆ ಚಿತ್ರರಂಗದಲ್ಲಿ ನಾಯಕಿಯಾಗಿ ಮಿಂಚದ ಕೃಷ್ಣಾ ಸಹಾಯಕ ನಿರ್ದೇಶಕಿಯಾಗಿ ಕೆಲಸ ಮಾಡಿದ್ದಾರೆ. ಟ್ರಾನ್ಸ್‌ಜೆಂಡರ್ ಸಮುದಾಯದ ಸುತ್ತ 'ಬ್ಲ್ಯಾಕ್ ಶೀಪ್' ಎಂಬ ಸಾಕ್ಷ್ಯಚಿತ್ರವನ್ನು ಕೂಡ ನಿರ್ದೇಶಿಸಿದ್ದಾರೆ.

ಇನ್ನು.. ಟೈಗರ್ ಶ್ರಾಫ್ ಅವರಂತೆಯೇ ಕೃಷ್ಣಾಗೆ ಮಾರ್ಷಲ್ ಆರ್ಟ್ಸ್ ತುಂಬಾ ಅಚ್ಚು ಮೆಚ್ಚು. ಇದಕ್ಕೆ ಕೈಗನ್ನಡಿ ಎಂಬಂತೆ ಟೈಗರ್ ಶ್ರಾಫ್ ಜೊತೆ ಸೇರಿ MMA Matrix ಎಂಬ ಫಿಟ್‌ನೆಸ್ ಸೆಂಟರ್ ನ ಶುರು ಮಾಡಿದ್ದಾರೆ ಕೃಷ್ಣಾ. ಭಾರತದ ಅತಿದೊಡ್ಡ ಮಿಕ್ಸೆಡ್ ಮಾರ್ಷಲ್ ಆರ್ಟ್ಸ್ (MMA) ಪ್ರಚಾರ ಸಂಸ್ಥೆಯಾದ Matrix Fight Night (MFN) ನ ಹಿಂದಿರುವ ಪ್ರಮುಖ ಶಕ್ತಿ ಇವರೇ. ತಮ್ಮ ಈ ಕಂಪನಿಯ ಮೂಲಕ ಭಾರತೀಯ ಫೈಟರ್‌ಗಳಿಗೆ ಅಂತರಾಷ್ಟ್ರೀಯ ವೇದಿಕೆಯನ್ನು ಕೂಡ ಕೃಷ್ಣಾ ಕಲ್ಪಿಸಿಕೊಡುತ್ತಿದ್ದಾರೆ.

ಇಂಥಾ ಕೃಷ್ಣಾ ಶ್ರಾಫ್ ಕಳೆದ ಕೆಲ ದಿನಗಳಿಂದ ಅಬ್ದುಲ್ ಅಜೀಮ್ ಅವರ ಜೊತೆ ಮದುವೆಯಾಗದೇ ಸಂಸಾರ ನಡೆಸುತ್ತಿದ್ದಾರೆ. ಒಂದೇ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ. ಈ ಅಬ್ದುಲ್ ಬೇರೆ ಯಾರು ಅಲ್ಲ ಬದಲಿಗೆ ಅಫ್ಘಾನಿಸ್ತಾನದ ಪ್ರಜೆ. ಕೃಷ್ಣ ಅತೀವವಾಗಿ ಇಷ್ಟ ಪಡುವ ಮಿಕ್ಸೆಡ್ ಮಾರ್ಷಲ್ ಆರ್ಟ್ಸ್ (MMA)ನ ಫೈಟರ್. ತಮ್ಮ ಈ ಪ್ರೇಮ ಕಥೆಯನ್ನು ಕೃಷ್ಣಾ ಇತ್ತೀಚೆಗೆ ಹಂಚಿಕೊಂಡಿದ್ದು, ಕೃಷ್ಣಾ ಅವರ ಈ ಲವ್ ಸ್ಟೋರಿಯ ವಿಡಿಯೋ ಸದ್ಯ ವೈರಲ್ ಆಗಿದೆ.

ಈ ಕುರಿತು ಇತ್ತೀಚೆಗೆ ಮುಕ್ತಾಯವಾದ ''ದಿ 50'' ರಿಯಾಲಿಟಿ ಶೋನಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಮಾತನಾಡಿರುವ ಕೃಷ್ಣಾ, ತಾವು ಅಫ್ಘಾನ್ ಮೂಲದ ಎಂಎಂಎ ಫೈಟರ್ ಜೊತೆ ಲಿವ್ ಇನ್ ಸಂಬಂಧದಲ್ಲಿರುವುದಾಗಿ ಹೇಳಿದ್ದಾರೆ.

Jackie Shroff s Daughter Krishna Reveals Bold Live-In Relationship With Afghan MMA Fighter

ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮೊದಲ ಬಾರಿ ನಾನು ಮತ್ತೆ ಅಜೀಜ್ ಮುಖಾಮುಖಿಯಾಗಿದ್ದೆವು ಎಂದು ಹೇಳಿರುವ ಕೃಷ್ಣಾ ಆ ಸಮಯದಲ್ಲಿ ನಮ್ಮ ನಡುವೆ ಮಾತು ಕಥೆ ಯಾವುದು ನಡೆದಿರಲಿಲ್ಲ ಎಂದಿದ್ದಾರೆ.

ಮುಂದುವರೆದು ಆ ನಂತರ ನನ್ನ ಇನ್‌ಸ್ಟಾಗ್ರಾಮ್‌ಗೆ ಅಬ್ದುಲ್ ಹಾಯ್ ಎಂದು ಮೆಸೇಜ್ ಮಾಡಿದ್ದರು ಎಂದು ಹೇಳಿರುವ ಕೃಷ್ಣಾ,ನಾನು ಅವರ ಈ ಮೆಸೇಜ್‌ಗೆ ರಿಪ್ಲೈ ಕೂಡ ಮಾಡಿರಲಿಲ್ಲ ಅಷ್ಟರಲ್ಲಿಯೇ ಅವರು ನನ್ನ ಫೋನ್ ನಂಬರ್ ಕೂಡ ಕೇಳಿದರು ಎಂದು ಹೇಳಿದ್ದಾರೆ. ನನಗೆ ಯಾರು ಇಷ್ಟೊಂದು ಧೈರ್ಯವಾಗಿ ಆತ್ಮವಿಶ್ವಾಸದಿಂದ ನಂಬರ್ ಕೇಳಿರಲಿಲ್ಲ, ಹೀಗಾಗಿ ಅವರ ಈ ಧೈರ್ಯ ಮತ್ತು ಆತ್ಮವಿಶ್ವಾಸಕ್ಕೆ ನಾನು ಮನ ಸೋತೆ ಎಂದಿದ್ದಾರೆ.

ನಮ್ಮ ಈ ಪ್ರೇಮಕಥೆಯಲ್ಲಿ ಭಾಷೆ ನಮಗೆ ದೊಡ್ಡ ಸವಾಲಾಗಿತ್ತು ಎಂದು ಹೇಳಿರುವ ಕೃಷ್ಣಾ ಶ್ರಾಫ್, ಅಜೀಮ್ ಅವರಿಗೆ ಪರ್ಷಿಯನ್ ಭಾಷೆ ಗೊತ್ತು, ನನಗೆ ಇಂಗ್ಲೀಷ್ ಮಾತ್ರ ಗೊತ್ತು ಎಂದು ಹೇಳಿದ್ದಾರೆ. ನನ್ನ ಹಿಂದಿ ಅಷ್ಟಕಷ್ಟೇ ಎಂದಿದ್ದಾರೆ. ಆದರೆ, ಮನಸ್ಸುಗಳು ಒಂದಾದಾಗ ಭಾಷೆ ನಮ್ಮ ನಡುವೆ ಅಡ್ಡಿಯಾಗಲಿಲ್ಲ ಎಂದು ಹೇಳಿರುವ ಕೃಷ್ಣಾ ಸುಮಾರು ಎಂಟು ತಿಂಗಳ ಕಾಲ ಕೇವಲ ವಿಡಿಯೋ ಕಾಲ್ ಮೂಲಕ ಪರಸ್ಪರ ನಾವು ಹತ್ತಿರವಾದೆವು ಎಂದು ಹೇಳಿದ್ದಾರೆ. ಆ ನಂತರ ಗೋವಾದ ಎರಡು ವಾರದ ಪ್ರವಾಸ ನಮ್ಮ ಇಬ್ಬರನ್ನು ಇನ್ನೂ ಹತ್ತಿರವಾಗಿಸಿತು ಎಂದು ಹೇಳಿದ್ದಾರೆ.

ಆ ನಂತರ ನಾನು ದೆಹಲಿಗೆ ಹೋಗಿ ಅವರ ಜೊತೆ ಮೂರು ವಾರ ಇದ್ದೇ, ಕೊನೆಗೆ ಅವರನ್ನು ಬಿಟ್ಟು ಇರಲಾಗದೇ ಮುಂಬೈನಲ್ಲಿ ನನ್ನ ಜೊತೆ ಇರುವಂತೆ ಕೇಳಿಕೊಂಡೆ ಅಬ್ದುಲ್ ತಕ್ಷಣವೇ ಒಪ್ಪಿಕೊಂಡರು. ಅಲ್ಲಿಂದ ನಾವು ಒಟ್ಟಿಗೆ ವಾಸ ಮಾಡುತ್ತಿದ್ದೇವೆ ಎಂದು ಹೇಳಿರುವ ಕೃಷ್ಣ ಪ್ರೀತಿಗೆ ಗಡಿಗಳಿಲ್ಲ, ಭಾಷೆಯ ಹಂಗಿಲ್ಲ ಎಂದು ಹೇಳಿದ್ಧಾರೆ. ಸದ್ಯ ಕೃಷ್ಣಾ ಶ್ರಾಫ್ ಅವರ ಈ ವಿಡಿಯೋ ವೈರಲ್ ಆಗುತ್ತಿದ್ದು ಬಗೆಬಗೆಯ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

More from Filmibeat

English summary
Krishna Shroff opens up about her relationship with Afghan fighter Abdul Azim Badakshi. See how Jackie Shroff's daughter defied language barriers and distance in this candid revelation from the reality show 'The 50.'
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X