ರಕುಲ್ ಪ್ರೀತ್ ಸಿಂಗ್ ಲೆಕ್ಕಾಚಾರ ಉಲ್ಟಾ, ಸಾಲದ ಸುಳಿಯಲ್ಲಿ ಸಿಲುಕಿದ ಗಂಡನಿಂದ ಉದ್ಯೋಗಿಗಳಿಗೆ ಮೋಸ..!
ಸಿನಿಮಾ ಅನ್ನುವುದು ಗ್ಯಾಂಬ್ಲಿಂಗ್ ಇದ್ದಂತೆ ಎಂದು ಕಾಲ ಕಾಲಕ್ಕೆ ಬರುವ ಕಾರಣ ಚಕ್ರವರ್ತಿಗಳು ಹೇಳ್ತಾನೇ ಬಂದಿದ್ದಾರೆ. ಆದರೂ.. ಇಲ್ಲಿ ಹೂಡಿಕೆ ಮಾಡಿದರೆ ಒಳ್ಳೇ ಲಾಭ ಮಾಡಬಹುದು ಎಂಬ ಲೆಕ್ಕಾಚಾರದಲ್ಲಿ ಅನೇಕರು ಬರುತ್ತಾರೆ. ಕೆಲವರು ಗೆಲ್ತಾರೆ. ಕೆಲವರು ಇರುವ ದುಡ್ಡೆಲ್ಲ ಕಳೆದುಕೊಂಡು ಅಜ್ಞಾತವಾಸಕ್ಕೆ ತೆರಳುತ್ತಾರೆ. ಸದ್ಯಕ್ಕೆ ರಕುಲ್ ಪ್ರೀತ್ ಸಿಂಗ್ ಗಂಡ ಇಂತಹದ್ದೇ ಸ್ಥಿತಿಯಲ್ಲಿದ್ದಾರೆ.
ಹೌದು, ಜಾಕಿ ಭಗ್ನಾನಿ.. ಬಾಲಿವುಡ್‌ನ ಹಿರಿಯ ನಿರ್ಮಾಪಕ ವಶು ಭಗ್ನಾನಿಯ ಮುದ್ದಿನ ಮಗ. ಒಂದ್ಕಾದಲ್ಲಿ ನಾಯಕನಾಗುವ ಆಸೆಯನ್ನೊತ್ತು ಬಂದಿದ್ದ ಜಾಕಿಯನ್ನ ಪ್ರೇಕ್ಷಕರು ಕೈ ಹಿಡಿಯಲಿಲ್ಲ. ಹೀಗಾಗಿ ನಿರಾಸೆಯಿಂದ ಹಿಂದೆ ಸರಿದು, ಆ ನಂತರ ತಮ್ಮ ತಂದೆಯ ಉಸ್ತುವಾರಿಯನ್ನ ವಹಿಸಿಕೊಂಡ ಜಾಕಿ ಭಗ್ನಾನಿ ಈಗ ದಿವಾಳಿಯಾಗುವ ಹಂತಕ್ಕೆ ಬಂದು ತಲುಪಿದ್ದಾರೆ. ಹತ್ತು..ಇಪ್ಪತ್ತು.. ಮೂವತ್ತಲ್ಲ..ಅಂದಾಜು 250 ಕೋಟಿ ಸಾಲದ ಸುಳಿಯಲ್ಲಿ ಸಿಲುಕಿದ್ದಾರೆ.

ತಮ್ಮ ಸಂಸ್ಥೆಯಲ್ಲಿ ಕೆಲಸ ಮಾಡುವ ಅನೇಕ ಉದ್ಯೋಗಿಗಳಿಗೆ ಜಾಕಿ ಭಗ್ನಾನಿ ಅವರು ಹಲವು ತಿಂಗಳಿಂದ ಸಂಬಳವನ್ನೇ ನೀಡಿಲ್ಲ ಅನ್ನುವ ಆರೋಪ ಕೂಡ ಇವರ ಮೇಲಿದೆ. ಇಷ್ಟೇ ಅಲ್ಲದೇ ಇವರ ಒಡೆತನದ ಪೂಜಾ ಎಂಟರ್ಟೇನ್ಮೆಂಟ್' ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಶೇಕಡ 80ರಷ್ಟು ಕೆಲಸಗಾರರನ್ನು ಮನೆಗೆ ಕಳಿಸಲಾಗಿದೆ ಎಂಬ ವಿಚಾರ ಮುಂಬೈನಲ್ಲಿ ಗುಲ್ಲಾಗಿದೆ. ಹಣ ಮರುಪಾವತಿ ಮಾಡಲು 7 ಮಹಡಿಗಳನ್ನು ಹೊಂದಿದ್ದ ಕಟ್ಟಡವನ್ನೂ ಕೂಡ ಜಾಕಿ ಭಗ್ನಾನಿ ಮತ್ತು ಅವರ ತಂದೆ ವಶು ಭಗ್ನಾನಿ ಮಾರಿದ್ದಾರೆ ಎಂಬ ವಿಚಾರ ಕೂಡ ಹೊರ ಬಿದ್ದಿದೆ.
ಅಂದ್ಹಾಗೇ ಜಾಕಿ ಭಗ್ನಾನಿ ಮತ್ತು ವಶು ಭಗ್ನಾನಿ ಅವರ ಪೂಜಾ ಎಂಟರ್ಟೇನ್ಮೆಂಟ್ ಮುಳುಗುವ ಹಂತಕ್ಕೆ ತಲುಪಲು ಕಾರಣವಾಗಿರುವುದು ಎರಡು ಸಿನಿಮಾ. ಈ ಎರಡು ಸಿನಿಮಾಗಳಲ್ಲಿ ಜಾಕಿ ಶ್ರಾಫ್ ಮಗ ಟೈಗರ್ ಶ್ರಾಫ್ ನಾಯಕನ ಪಾತ್ರಕ್ಕೆ ಬಣ್ಣ ಹಚ್ಚಿದ್ದರು ಅನ್ನುವುದು ವಿಶೇಷ. ಹೌದು.. ಕಳೆದ ವರ್ಷ ಅಕ್ಟೋಬರ್‌ನಲ್ಲಿ 'ಗಣಪತ್' ಎಂಬ ಸಿನಿಮಾ ತೆರೆಗೆ ಬಂದಿತ್ತು. ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ವಿಕಾಸ್ ಬಹ್ಲ್ ನಿರ್ದೇಶನದ ಈ ಚಿತ್ರಕ್ಕೆ ಜಾಕಿ ಭಗ್ನಾನಿ ಹತ್ ಹತ್ರ 190 ಕೋಟಿ ಹಣ ಸುರಿದಿದ್ದರು. ಆದರೆ ಈ ಸಿನಿಮಾ ಗಳಿಸಿದ್ದು ಕೇವಲ 15+ ಕೋಟಿ ರೂ. ಮಾತ್ರ.

ಗಣಪತ್ ಚಿತ್ರದ ಸೋಲಿನ ನಂತರ ಮತ್ತೊಮ್ಮೆ ಟೈಗರ್ ಶ್ರಾಫ್ ಜೊತೆ 'ಬಡೆ ಮಿಯಾ ಚೋಟೆ ಮಿಯಾ' ಸಿನಿಮಾವನ್ನ ಜಾಕಿ ಭಗ್ನಾನಿ ಮಾಡಿದ್ದರು. ಈ ಬಾರಿ ಟೈಗರ್ ಶ್ರಾಫ್ ಜೊತೆ ಮತ್ತೊಬ್ಬ ನಾಯಕನಾಗಿ ಅಕ್ಷಯ್ ಕುಮಾರ್ ಕೂಡ ಜೊತೆಯಾಗಿದ್ದರು. ವಿಲನ್ ಆಗಿ ಪೃಥ್ವಿರಾಜ್ ಸುಕುಮಾರನ್ ಇದ್ದರು. ಅಲಿ ಅಬ್ಬಾಸ್ ಝಫರ್ ನಿರ್ದೇಶನ ಮಾಡಿದ್ದ ಈ ಸಿನಿಮಾಕ್ಕೆ 300 ಕೋಟಿ ರೂ.ಗಳಿಗೂ ಅಧಿಕ ಹಣ ಹೂಡಿಕೆ ಮಾಡಲಾಗಿತ್ತು. ಆದರೆ ಈ ಸಿನಿಮಾವು ಬಾಕ್ಸ್ ಆಫೀಸ್‌ನಲ್ಲಿ 100 ಕೋಟಿ ರೂ. ಗಳಿಸುವಷ್ಟರಲ್ಲಿ ಸುಸ್ತು ಹೊಡೆದಿತ್ತು.
ಈ ಎರಡು ಸಿನಿಮಾಗಳಿಂದ ಈಗ ಜಾಕಿ ಭಗ್ನಾನಿ ಮತ್ತು ಅವರ ಕುಟುಂಬ ಅಂದಾಜು 250 ಕೋಟಿ ರೂ. ಸಾಲದ ಸುಳಿಗೆ ಸಿಲುಕಿದೆ.ಜಾಕಿ ಭಗ್ನಾನಿ ಅವರು ಆಸ್ತಿ ಮಾರಿಕೊಳ್ಳುವ ಪರಿಸ್ಥಿತಿ ಬಂದಿದೆ. ದೊಡ್ಡ ದೊಡ್ಡ ನಿರ್ಮಾಪಕರನ್ನು ಮದುವೆಯಾಗಿ ಖುಷಿಯಿಂದ ಸಂಸಾರ ಮಾಡುತ್ತಿರುವ ಅನೇಕ ನಾಯಕಿಯರ ನಡುವೆ, ರಕುಲ್ ಪ್ರೀತ್ ಸಿಂಗ್ ಗೆ ಆಘಾತವಾಗಿದೆ. ರಕುಲ್ ಪ್ರೀತ್ ಸಿಂಗ್ ಅವರ ಜೀವನದಲ್ಲಿ ಆರ್ಧಿಕ ಸಂಕಷ್ಟ ಉಂಟಾಗಿದೆ.


Click it and Unblock the Notifications











