200 ಕೋಟಿ ವಂಚನೆ ವಿವಾದದ ಬಳಿಕ ಜಾಕ್ವೆಲಿನ್‌ ಪ್ರತ್ಯಕ್ಷ: ವಿಡಿಯೋದಲ್ಲಿ ನಟಿ ಹೇಳಿದ್ದೇನು?

ಬಾಲಿವುಡ್‌ ನಟಿ ಜಾಕ್ವೆಲಿನ್‌ ಫರ್ನಾಂಡಿಸ್‌ ಹೆಸರು 200 ಕೋಟಿ ವಂಚನೆ ಪ್ರಕರಣದಲ್ಲಿ ತಳುಕು ಹಾಕಿಕೊಂಡಿದೆ. ಈ ವಿಚಾರದಲ್ಲಿ ಜಾಕ್ವೆಲಿನ್‌ ಎರಡು ಬಾರಿ ಇಡಿ ಮುಂದೆ ಹಾಜರಾಗಿದ್ದರು. ಇದೇ ಪ್ರಕರಣದ ವಿಚಾರದಲ್ಲಿ ನಟಿ ಜಾಕ್ವೆಲಿನ್ ಇತ್ತೀಚೆಗೆ ಹೆಚ್ಚು ಗಮನ ಸೆಳೆದಿದ್ದಾರೆ.

ವಂಚನೆ ವಿವಾದ ಹೆಚ್ಚಾಗಿ ಸದ್ದು ಮಾಡುತ್ತಾ ಇದ್ದರೂ ಕೂಡ ನಟಿ ಜಾಕ್ವೆಲಿನ್‌ ಮಾತ್ರ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಈ ಪ್ರಕರಣದ ಬಗ್ಗೆಯೂ ಎಲ್ಲೂ ಮಾತನಾಡಿರಲಿಲ್ಲ. ಹಾಗಾಗಿ ಜಾಕ್ವೆಲಿನ್ ಎಲ್ಲಿದ್ದಾರೆ? ಏನು ಮಾಡ್ತಿದ್ದಾರೆ ಎನ್ನುವ ಬಗ್ಗೆ ಕುತೂಹಲಗಳು ಮೂಡಿದ್ದವು. ಅದಕ್ಕೆಲ್ಲಾ ಈಗ ಉತ್ತರ ಸಿಕ್ಕಿದೆ.

ನಟಿ ಜಾಕ್ವೆಲಿನ್‌ ಫರ್ನಾಂಡಿಸ್‌ ದಿಢೀರನೆ ಪ್ರತ್ಯಕ್ಷ ಆಗಿದ್ದಾರೆ. ಜಾಕ್ವೆಲಿನ್ ತಮ್ಮ ಸಿನಿಮಾ ವಿಚಾರವಾಗಿ ಮಾತನಾಡಿದ್ದಾರೆ. ಜಾಕ್ವೆಲಿನ್‌ ಅಭಿನಯದ ಅಟ್ಯಾಕ್‌ ಸಿನಿಮಾದ ಪ್ರೋಮೊ ರಿಲೀಸ್‌ಗೆ ರೆಡಿಯಾಗಿದೆ. ಈ ಬಗ್ಗೆ ನಟಿ ಜಾಕ್ವೆಲಿನ್ ವಿಡಿಯೋ ಮೂಲಕ ಮಾತನಾಡಿದ್ದಾರೆ.

ವಿಡಿಯೋದಲ್ಲಿ 'ಅಟ್ಯಾಕ್' ಬಗ್ಗೆ ಜಾಕ್ವೆಲಿನ್‌ ಮಾತು!

ನಟ ಜಾನ್‌ ಅಬ್ರಹಮ್‌ ಜೊತೆಗೆ ಜಾಕ್ವೆಲಿನ್‌ ಮಾತನಾಡಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆದರೆ ಇಲ್ಲಿ ಜಾಕ್ವೆಲಿನ್‌ ಆ ವಿವಾದದ ಬಗ್ಗೆ ಮಾತನಾಡಿಲ್ಲ. ತಮ್ಮ ಮುಂಬರುವ 'ಅಟ್ಯಾಕ್‌' ಚಿತ್ರದ ಬಗ್ಗೆ ಮಾತನಾಡಿದ್ದಾರೆ. 'ಚಿತ್ರದ ಟೀಸರ್‌ ಟ್ರೇಲರ್‌ಗೆ ಕೊಟ್ಟಿರುವ ಉತ್ತಮ ಪ್ರಶಂಸೆಗೆ ಧನ್ಯವಾದಗಳು. ನಿಮಗೆ ಮತ್ತೊಂದು ಸರ್ಪ್ರೈಸ್‌ ಕಾದಿದೆ. ಇದೇ ಜನವರಿ 28ರಂದು ನಿಮ್ಮನ್ನು ಸಿನಿಮಾ ಮಂದಿರದಲ್ಲಿ ಭೇಟಿ ಆಗುತ್ತೇನೆ' ಎಂದು ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ. ಈ ಮೂಲಕ ವಿವಾದದ ಬಳಿಕ ಜಾಕ್ವೆಲಿನ್‌ ಅಭಿಮಾನಿಗಳ ಮುಂದೆ ಬಂದಿದ್ದಾರೆ.

ವಂಚನೆ ಪ್ರಕರಣದಿಂದ ಸಿನಿಮಾ ಕೈ ಬಿಟ್ಟ ನಟಿ!

ವಂಚನೆ ಪ್ರಕರಣದಿಂದ ಸಿನಿಮಾ ಕೈ ಬಿಟ್ಟ ನಟಿ!

ಇನ್ನು ಜಾಕ್ವೆಲಿನ್ ಸಿನಿಮಾಗಳಿಗೆ ಈ ವಂಚನೆ ಪ್ರಕರಣ ಅಡ್ಡಿ ಆಗಿದೆ. ಈ ಪ್ರಕರಣ ಮುನ್ನೆಲೆಗೆ ಬರುವ ಮುನ್ನ ಜಾಕ್ವೆಲಿನ್‌ ತೆಲುಗಿನ ಚಿತ್ರದಲ್ಲಿ ರಾಣಿಯ ಪಾತ್ರ ಮಾಡುವುದಾಗಿ ಸಹಿ ಹಾಕಿದ್ದರು. ಪವನ್‌ ಕಲ್ಯಾಣ್ ಅಭಿನಯದ 'ಹರ..ಹರ.. ವೀರ ಮಲ್ಲು' ಸಿನಿಮಾದಲ್ಲಿ ರಾಣಿಯ ಪಾತ್ರ ನಿರ್ವಹಿಸಬೇಕಿತ್ತು. ಆದರೆ ವಂಚನೆ ಪ್ರಕರಣ ಬೆಳಕಿಗೆ ಬಂದ ಬಳಿಕ ನಟಿ ಆ ಚಿತ್ರದಿಂದ ಹೊರ ಬಂದಿದ್ದಾರೆ. ಸದ್ಯ 'ಅಟ್ಯಾಕ್' ಸಿನಿಮಾದ ರಿಲೀಸ್‌ಗೆ ಎದುರು ನೋಡ್ತಿದ್ದಾರೆ.

ಏರ್‌ರ್ಪೋರ್ಟ್‌ನಲ್ಲಿ ಲಾಕ್ ಆಗಿದ್ದ ನಟಿ!

ಏರ್‌ರ್ಪೋರ್ಟ್‌ನಲ್ಲಿ ಲಾಕ್ ಆಗಿದ್ದ ನಟಿ!

200 ಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧ ಜಾಕ್ವೆಲಿನ್ ಅವರನ್ನು ಇಡಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಈ ಸಂಬಂಧ ದುಬೈಗೆ ಹಾರಲು ಹೊರಟಿದ್ದ ನಟಿಯನ್ನು ಮುಂಬೈ ಏರ್‌ಪೋರ್ಟ್‌ನಲ್ಲಿ ತಡೆಯಲಾಗಿತ್ತು. ಜಾಕ್ವೆಲಿನ್ ಫರ್ನಾಂಡೀಸ್ ಡಿಸೆಂಬರ್ 5 ರಂದು ದುಬೈಗೆ ಪ್ರಯಾಣ ಬೆಳೆಸಲು ಮುಂಬೈ ಏರ್‌ಪೋರ್ಟ್‌ಗೆ ಬಂದಿದ್ದರು. ಈ ವೇಳೆ ಏರ್‌ಪೋರ್ಟ್ ಅಧಿಕಾರಿಗಳು ಜಾಕ್ವೆಲಿನ್ ಅನ್ನು ಕೆಲ ಕಾಲ ತಡೆದು ನಿಲ್ಲಿಸಿದ್ದರು. 200 ಕೋಟಿ ವಂಚನೆ ಪ್ರಕರಣದಲ್ಲಿ ಜಾಕ್ವೆಲಿನ್ ಹೆಸರು ತಳುಕು ಹಾಕಿಕೊಂಡಿರುವುದರಿಂದ ಇಡಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.

ಕನ್ನಡದಲ್ಲೂ ರಂಗು ಮೂಡಿಸಿದ ಜಾಕ್ವೆಲಿನ್‌!

ಕನ್ನಡದಲ್ಲೂ ರಂಗು ಮೂಡಿಸಿದ ಜಾಕ್ವೆಲಿನ್‌!

ಇನ್ನು ನಟಿ ಜಾಕ್ವೆಲಿನ್ ಫರ್ನಾಂಡೀಸ್ ಅವರು ಕನ್ನಡ ಚಿತ್ರರಂಗದಲ್ಲೂ ರಂಗು ಮೂಡಿಸಿದ್ದಾರೆ. ಕಿಚ್ಚ ಸುದೀಪ್‌ ಅಭಿನಯದ ವಿಕ್ರಾಂತ್‌ ರೋಣ ಸಿನಿಮಾದಲ್ಲಿ ಜಾಕ್ವೆಲಿನ್‌ ಅಭಿನಯಿಸಿದ್ದಾರೆ. ಈ ಚಿತ್ರದ ಗಡಂಗ್‌ ರಕ್ಕಮ್ಮ ಹಾಡಿನ ಸಣ್ಣ ತುಣುಕು ಈ ಹಿಂದೆಯೇ ರಿಲೀಸ್‌ ಆಗಿತ್ತು. ಈ ಹಾಡಿನಲ್ಲಿ ವಿಶೇಷ ಹಾಡಿನಲ್ಲಿ ಕಿಚ್ಚ ಸುದೀಪ್‌ ಜೊತೆಗೆ ಜಾಕ್ವೆಲಿನ್‌ ಹೆಜ್ಜೆ ಹಾಕಿದ್ದಾರೆ. ಈ ಚಿತ್ರ 2022 ಫೆಬ್ರವರಿ 24ಕ್ಕೆ ತೆರೆಗೆ ಬರಲು ಸಜ್ಜಾಗಿದೆ.

More from Filmibeat

English summary
Jacqueline Fernandez Appears Before Her Fans After Controversy, Know More,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X