twitter
    For Quick Alerts
    ALLOW NOTIFICATIONS  
    For Daily Alerts

    ವಂಚಕನೊಂದಿಗೆ ನಂಟು: ಇಡಿ ವಿಚಾರಣೆಗೆ ಹಾಜರಾದ ನಟಿ ಜಾಕ್ವೆಲಿನ್ ಫರ್ನಾಂಡೀಸ್

    |

    ನಟಿ ಜಾಕ್ವೆಲಿನ್ ಫರ್ನಾಂಡೀಸ್ ಜಾರಿ ನಿರ್ದೇಶನಾಲಯ (ಎನ್ಫೋರ್ಸ್‌ಮೆಂಟ್ ಡೈರೆಕ್ಟೊರೇಟ್) ಎದುರು ವಿಚಾರಣೆಗೆ ಹಾಜರಾಗಿದ್ದಾರೆ. ನಟಿ ಜಾಕ್ವೆಲಿನ್ ಫರ್ನಾಂಡೀಸ್ ಮೇಲೆ ಹಣ ಅಕ್ರಮ ವರ್ಗಾವಣೆ ಆರೋಪ ಇದೆ.

    ಇದೇ ವರ್ಷದ ಆರಂಭದಲ್ಲಿ ಸುಖೇಶ್ ಚಂದ್ರಶೇಖರ್ ಎಂಬಾತ ತಿಹಾರ್ ಜೈಲಿನಿಂದ ಉದ್ಯಮಿಯೊಬ್ಬರ ಪತ್ನಿಗೆ ಕರೆ ಮಾಡಿ ಭಾರಿ ಮೊತ್ತದ ಹಣಕ್ಕೆ ಬೇಡಿಕೆ ಇಟ್ಟಿದ್ದ ಆ ಪ್ರಕರಣ ಬೆನ್ನತ್ತಿದ್ದ ಸಿಬಿಐ ಇದೊಂದು ಭಾರಿ ದೊಡ್ಡ ವಂಚನೆ ಜಾಲ ಎಂಬುದು ಪತ್ತೆಯಾಯಿತು. ನಂತರ ಇಡಿ ಈ ಸಹ ಈ ಪ್ರಕರಣದ ವಿಚಾರಣೆ ನಡೆಸಿತು.

    ಇಡಿ ವಿಚಾರಣೆಯಲ್ಲಿ ಸುಖೇಶ್ ಚಂದ್ರಶೇಖರ್ ಜೊತೆಗೆ ಜಾಕ್ವೆಲಿನ್ ಫರ್ನಾಂಡೀಸ್ ಆಪ್ತ ಸಂಬಂಧ ಹೊಂದಿರುವ ವಿಷಯ ಹೊರಗೆ ಬಿದ್ದಿದ್ದು, ಸುಖೇಶ್‌ ಚಂದ್ರಶೇಖರ್, ಅಕ್ರಮವಾಗಿ ಹಣ ವರ್ಗಾವಣೆ ಮಾಡಲು ಜಾಕ್ವೆಲಿನ್ ನೆರವು ನೀಡಿದ್ದಾರೆ ಎನ್ನಲಾಗುತ್ತಿದೆ.

    Jacqueline Fernandez Appears In Front Of ED In 200 Crore Money Laundering Case

    ನಟಿ ಜಾಕ್ವೆಲಿನ್, ಆರೋಪಿ ಸುಖೇಶ್‌ಗೆ ಮುತ್ತು ಕೊಡುತ್ತಿರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಇದೀಗ ವೈರಲ್ ಆಗಿವೆ. ಪ್ರಕರಣ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಜಾಕ್ವೆಲಿನ್ ದೇಶ ಬಿಟ್ಟು ದುಬೈಗೆ ತೆರಳಲು ಮುಂದಾಗಿದ್ದರು. ಆದರೆ ಅವರನ್ನು ಏರ್‌ಪೋರ್ಟ್‌ನಲ್ಲಿ ತಡೆ ಹಿಡಿಯಲಾಯ್ತು. ಜಾಕ್ವೆಲಿನ್ ದೇಶ ಬಿಟ್ಟು ಹೊರಡಲು ಸಜ್ಜಾಗಿದ್ದ ಕಾರಣ ಅವರಿಗೆ ಇಡಿ ತ್ವರಿತ ನೋಟಿಸ್ ಜಾರಿ ಮಾಡಿ ವಿಚಾರಣೆಗೆ ಹಾಜರಾಗುವಂತೆ ಸಹ ಸೂಚಿಸಿತ್ತು.

    ಇದೀಗ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಇಡಿ ಎದುರು ವಿಚಾರಣೆಗೆ ಹಾಜರಾಗಿದ್ದಾರೆ. ಕೆಲವು ವರದಿಗಳ ಪ್ರಕಾರ, ಜಾಕ್ವೆಲಿನ್, ''ನಾನು ಸಂತ್ರಸ್ತೆಯಾಗಿದ್ದು ನನಗೆ ಸುಖೇಶ್‌ನ ವ್ಯವಹಾರಗಳ ಅರಿವಿಲ್ಲ, ನಾನು ಇಡಿ ಪರ ಸಾಕ್ಷ್ಯ ನಡಿಯುವುದಕ್ಕೆ ತಯಾರಿದ್ದೀನಿ'' ಎಂದಿದ್ದಾರೆ ಎನ್ನಲಾಗಿದೆ.

    ಇಂದು ಇಡಿ ಅಧಿಕಾರಿಗಳು ದೆಹಲಿ ಕಚೇರಿಯಲ್ಲಿ ಜಾಕ್ವೆಲಿನ್ ಫರ್ನಾಂಡೀಸ್‌ರ ವಿಚಾರಣೆ ನಡೆಸುತ್ತಿದ್ದು, ಅಕ್ರಮ ಹಣ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದಂತೆ ಇಡಿ ಕೇಳಿದ ಪ್ರಶ್ನೆಗಳಿಗೆ ಜಾಕ್ವೆಲಿನ್ ಸಮಂಜಸ ಉತ್ತರ ನೀಡದಿದ್ದರೆ ನಟಿಯ ಬಂಧನ ಆಗುವ ಸಾಧ್ಯತೆಗಳೂ ಇವೆ.

    ಆರೋಪಿ ಸುಖೇಶ್ ಚಂದ್ರಶೇಖರ್ ಜೈನಲ್ಲಿದ್ದುಕೊಂಡೆ ಕೋಟ್ಯಂತರ ರುಪಾಯಿ ಹಣವನ್ನು ಕಾರ್ಪೊರೇಟ್ ಸಂಸ್ಥೆಗಳು, ಉದ್ಯಮಿಗಳಿಂದ ಸುಲಿಗೆ ಮಾಡಿದ್ದ. ಜಾಕ್ವೆಲಿನ್‌ಗೆ ಸುಮಾರು 10 ಕೋಟಿ ಮೌಲ್ಯದ ಉಡುಗೊರೆಗಳನ್ನು ಕೊಡಿಸಿದ್ದ. 59 ಲಕ್ಷ ರುಪಾಯಿ ಮೌಲ್ಯದ ಕುದುರೆ, 9 ಲಕ್ಷ ಮೌಲ್ಯದ ಬೆಕ್ಕು ಇನ್ನೂ ಹಲವು ಉಡುಗೊರೆಗಳನ್ನು ಸುಖೇಶ್, ಜಾಕ್ವೆಲಿನ್‌ಗೆ ನೀಡಿದ್ದ.

    ಜಾಕ್ವೆಲಿನ್‌ಗೆ ಮಾತ್ರವೇ ಅಲ್ಲದೆ ನಟಿ ನೋರಾ ಫತೇಹಿಗೂ ಭಾರಿ ದುಬಾರಿ ಉಡುಗೊರೆಗಳನ್ನು ಸುಕೇಶ್ ಚಂದ್ರಶೇಖರ್ ಕೊಡಿಸಿದ್ದ. ಫತೇಹಿಗೆ ಒಂದು ಬಿಎಂಡಬ್ಲು ಹಾಗೂ ಐಫೋನ್ ಒಂದನ್ನು ಉಡುಗೊರೆಯಾಗಿ ನೀಡಿದ್ದ ಸುಕೇಶ್. ನೋರಾಗೂ ಇಡಿ ನೊಟೀಸ್ ನೀಡಿದೆ. ಈ ಪ್ರಕರಣದಲ್ಲಿ ನಾನು ಸಂತ್ರಸ್ತೆ ಎಂದು ನೋರಾ ಹೇಳಿಕೊಂಡಿದ್ದಾರೆ.

    English summary
    Bollywood actress Jacqueline Fernandez appears in front of ED in 200 crore rs money laundering case. She is close to main accuse Sukesh Chandrashekhar.
    Wednesday, December 8, 2021, 15:56
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X