ಒಂದು ಫೋಟೋಶೂಟ್ ಗೆ ಒಂದು ಕೋಟಿ ಪಡೆದ ನಟಿ ಜಾಕ್ಲಿನ್
ಬಾಲಿವುಡ್ ನಟಿ ಜಾಕ್ಲಿನ್ ಫರ್ನಾಂಡಿಸ್ ಡಿಮ್ಯಾಂಡ್ ದಿನೇ ದಿನೇ ಹೆಚ್ಚಾಗುತ್ತಿದೆ. ಅದಕ್ಕೆ ತಾಜಾ ಉದಾಹರಣೆ ಅಂದರೆ ಇತ್ತೀಚಿನ ಒಂದು ಪೋಟೋಶೂಟ್. ಯಾಕಂದ್ರೆ, ಈ ಫೋಟೋಶೂಟ್ ಗಾಗಿ ಜಾಕ್ಲಿನ್ ಬರೋಬ್ಬರಿ ಒಂದು ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ.
ಇತ್ತೀಚಿಗಷ್ಟೆ ಜಾಕ್ಲಿನ್ ಒಂದು ಫೋಟೋಶೂಟ್ ಮೂಲಕ ಸಖತ್ ಸದ್ದು ಮಾಡಿದ್ದರು. ತುಂಬ ಹಾಟ್ ಆಗಿದ್ದ ಆ ಫೋಟೋಶೂಟ್ ಎಲ್ಲರ ಕಣ್ಣುಕುಕ್ಕಿತ್ತು. ಈಗ ಆ ಫೋಟೋಶೂಟ್ ಗೆ ಜಾಕ್ಲಿನ್ ಒಂದು ಕೋಟಿ ಸಂಭಾವನೆ ಪಡೆದಿದ್ದರು ಎಂಬ ಸದ್ದು ಹೊರಬಿದ್ದಿದೆ.

ಸಲ್ಮಾನ್ ಖಾನ್ ಸೇರಿದಂತೆ ಸ್ಟಾರ್ ನಟರ ಜೊತೆ ಸಿನಿಮಾ ಮಾಡಿರುವ ಜಾಕ್ಲಿನ್ ಬೇಡಿಕೆ ಜೋರಾಗಿದೆ. ಹಿಟ್ ಸಿನಿಮಾಗಳನ್ನು ನೀಡುತ್ತಿರುವ ಈ ನಟಿ ಬಾಲಿವುಡ್ ನಲ್ಲಿ ದಿನೇ ದಿನೇ ತನ್ನ ಸ್ಥಾನವನ್ನು ಗಟ್ಟಿಗೊಳಿಸಿಕೊಳ್ಳುತ್ತಿದ್ದಾರೆ.
More from Filmibeat
English summary
Actress Jacqueline Fernandez gets paid Rs.1 crore for her recent photoshoot.


Click it and Unblock the Notifications











