For Quick Alerts
  ALLOW NOTIFICATIONS  
  For Daily Alerts

  ತನ್ನ ಮೇಕಪ್ ಕಲಾವಿದನಿಗೆ ದುಬಾರಿ ಕಾರ್ ಗಿಫ್ಟ್ ನೀಡಿದ ನಟಿ

  By Bharath Kumar
  |

  ಸಿನಿಮಾ ನಟ-ನಟಿಯರು ತಮ್ಮ ಜೊತೆಯಲ್ಲಿ ಕೆಲಸ ಮಾಡುವ ಕಲಾವಿದರನ್ನ ಕೀಳಾಗಿ ಕಾಣ್ತಾರೆ ಎಂಬ ಆರೋಪ, ಅಪವಾದಗಳು ಬಾಲಿವುಡ್ ನಲ್ಲಿ ಆಗಾಗ ಕೇಳಿ ಬರುತ್ತೆ. ಆದ್ರೆ, ಇಂತಹ ಆರೋಪಗಳನ್ನ ಮೀರಿಸುವಂತಹ ಕೆಲಸವನ್ನ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಮಾಡಿದ್ದಾರೆ.

  ಹೌದು, ತನ್ನ ಮೇಕಪ್ ಕಲಾವಿದನಿಗೆ ದುಬಾರಿ ಕಾರ್ ಗಿಫ್ಟ್ ನೀಡುವುದರ ಮೂಲಕ ಬಾಲಿವುಡ್ ಮಂದಿಯಿಂದ ಶಬ್ಬಾಶ್ ಎನಿಸಿಕೊಂಡಿದ್ದಾರೆ. ಹಲವು ವರ್ಷಗಳಿಂದ ತನಗೆ ಮೇಕಪ್ ಕಲಾವಿದನಾಗಿ ಕೆಲಸ ಮಾಡುತ್ತಿರುವ ಶಾನ್ ಅವರಿಗೆ, 34ನೇ ಹುಟ್ಟುಹಬ್ಬದ ಪ್ರಯುಕ್ತ ಕಾರ್ ಉಡುಗೊರೆಯಾಗಿ ನೀಡಿದ್ದಾರೆ ಜಾಕ್ವೆಲಿನ್.

  ಜಾಕ್ವೆಲಿನ್ ತನ್ನ ತಂಡದವರನ್ನ ಚೆನ್ನಾಗಿ ನೋಡಿಕೊಳ್ಳುತ್ತಾರೆ. ಅವರ ಕಷ್ಟ-ನಷ್ಟಗಳ ಬಗ್ಗೆ ಅನುಕಂಪ ತೋರುತ್ತಾರೆ. ಅವರ ಜೊತೆ ಸಮಯ ಕಳೆಯುತ್ತಾರೆ. ತನ್ನ ಜೊತೆ ಕೆಲಸ ಮಾಡುವ ಕಲಾವಿದರನ್ನ ತನ್ನ ಮನೆಯವರಂತೆ ನೋಡಿಕೊಳ್ಳುತ್ತಾರಂತೆ.

  ಇತ್ತೀಚಿಗಷ್ಟೆ ದುಬೈನಲ್ಲಿ ನಡೆದ ಸಿನಿಮಾ ಶೂಟಿಂಗ್ ನಲ್ಲಿ ಜಾಕ್ವೆಲಿನ್ ಗಾಯಗೊಂಡಿದ್ದರು. ನಂತರ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದ ಜಾಕ್ವೆಲಿನ್ ವಿಶ್ರಾಂತಿ ಪಡೆದು, ಮತ್ತೆ ಶೂಟಿಂಗ್ ನಲ್ಲಿ ಭಾಗಿಯಾಗಿದ್ದರು.

  ಸದ್ಯ, ಸಲ್ಮಾನ್ ಖಾನ್ ಅಭಿನಯಿಸಿರುವ 'ರೇಸ್-3' ಚಿತ್ರದಲ್ಲಿ ನಟಿಸಿರುವ ಜಾಕ್ವೆಲಿನ್, 'ಕಿಕ್-2' ಚಿತ್ರದ ಸರಣಿಯಲ್ಲೂ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರಂತೆ. ಸಲ್ಮಾನ್ ಖಾನ್ ಮತ್ತು ಜಾಕ್ವೆಲಿನ್ ನಟಿಸುತ್ತಿರುವ 'ರೇಸ್-3' ಚಿತ್ರದಲ್ಲಿ ಅನಿಲ್ ಕಪೂರ್, ಬಾಬಿ ಡಿಯೋಲ್, ಡೈಸಿ ಶಾ, ಸಾಕೀಬ್ ಸಲೀಮ್ ಸೇರಿದಂತೆ ಹಲವರು ನಟಿಸಿದ್ದಾರೆ. ರೇಮೋ ಡಿಸೋಜಾ ನಿರ್ದೇಶನದ ಈ ಚಿತ್ರಕ್ಕೆ ಸಲ್ಮಾನ್ ಖಾನ್ ಕೂಡ ಬಂಡವಾಳ ಹಾಕಿದ್ದಾರೆ. ಬಹುತೇಕ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಈದ್ ಹಬ್ಬದ ಪ್ರಯುಕ್ತ ತೆರೆಗೆ ಬರಲಿದೆ.

  English summary
  Jacqueline Fernandez is a team player and always treats her team as a family. One such recent example is when Jacqueline Fernandez gifted her make-up artist Shaan a brand new car.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X