For Quick Alerts
  ALLOW NOTIFICATIONS  
  For Daily Alerts

  ದಸರಾ ಹಬ್ಬಕ್ಕೆ ಸಿಬ್ಬಂದಿಯೊಬ್ಬರಿಗೆ ಕಾರ್ ಗಿಫ್ಟ್ ಮಾಡಿದ ನಟಿ ಜಾಕ್ವೆಲಿನ್ ಫರ್ನಾಂಡಿಸ್

  |

  ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಒಂದಲ್ಲೊಂದು ವಿಚಾರದ ಮೂಲಕ ಸುದ್ದಿಯಲ್ಲಿರುತ್ತಾರೆ. ಇತ್ತೀಚಿಗೆ ವಿಭಿನ್ನ ಫೋಟೋಶೂಟ್ ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದ ನಟಿ ಜಾಕ್ವೆಲಿನ್ ಈಗ ಮನೆಯ ಸಿಬ್ಬಂದಿಯೊಬ್ಬರಿಗೆ ಕಾರು ಗಿಫ್ಟ್ ಮಾಡುವ ಮೂಲಕ ಸುದ್ದಿಯಲ್ಲಿದ್ದಾರೆ.

  ಜಾಕ್ವೆಲಿನ್ ಜೊತೆ ಅನೇಕ ವರ್ಷಗಳಿಂದ ಕೆಲಸ ಮಾಡುತ್ತಿದ್ದ ಸಿಬ್ಬಂದಿಯೊಬ್ಬರಿಗೆ ದಸರಾ ಹಬ್ಬದ ವಿಶೇಷವಾಗಿ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಜಾಕ್ವೆಲಿನ್ ಕಾರಿನ ಕೀ ಕೊಡುತ್ತಿರುವ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ದಸರಾ ಹಬ್ಬದ ಸಮಯದಲ್ಲಿ ವಿಶೇಷ ಉಡುಗೊರೆ ನೀಡಿ ಸಿಬ್ಬಂದಿಯ ಸಂತಸ, ಸಂಭ್ರಮ ಹೆಚ್ಚಿಸಿದ್ದಾರೆ. ವಿಶೇಷ ಅಂದರೆ ಜಾಕ್ವೆಲಿನ್ ಟ್ರಾಫಿಕ್ ಫೊಲೀಸ್ ಕಾಸ್ಟ್ಯೂಮ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಮುಂದೆ ಓದಿ..

  ಅಭಿಮಾನಿಗಳಿಗಾಗಿ 'ಟಾಪ್ ಲೆಸ್' ಆದ ನಟಿ ಜಾಕ್ವೆಲಿನ್ ಫರ್ನಾಂಡೀಸ್: ಕಾರಣವೇನು?ಅಭಿಮಾನಿಗಳಿಗಾಗಿ 'ಟಾಪ್ ಲೆಸ್' ಆದ ನಟಿ ಜಾಕ್ವೆಲಿನ್ ಫರ್ನಾಂಡೀಸ್: ಕಾರಣವೇನು?

  ಜಾಕ್ವೆಲಿನ್ ಜೊತೆ ಅನೇಕ ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ

  ಜಾಕ್ವೆಲಿನ್ ಜೊತೆ ಅನೇಕ ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ

  ಹೊಸ ಕಾರಿನ ಪಕ್ಕದಲ್ಲಿ ನಿಂತು ಸಿಬ್ಬಂದಿ ಜೊತೆ ಜಾಕ್ವೆಲಿನ್ ಪೂಜೆ ಮಾಡುತ್ತಿರುವ ಫೋಟೋಗಳು ಸಹ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಂದ್ಹಾಗೆ ನಟಿ ಜಾಕ್ವೆಲಿನ್ ಬಾಲಿವುಡ್ ಗೆ ಎಂಟ್ರಿ ಕೊಟ್ಟಾಗಿನಿಂದ ಜಾಕ್ವೆಲಿನ್ ಜೊತೆ ಈ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರಂತೆ. ಹಾಗಾಗಿ ಆ ವಿಶೇಷ ಸಿಬ್ಬಂದಿಗೆ ಕಾರನ್ನು ಗಿಫ್ಟ್ ಆಗಿ ನೀಡಿ ಅಚ್ಚರಿ ಮೂಡಿಸಿದ್ದಾರೆ.

  ಮೇಕಪ್ ಮ್ಯಾನ್ ಗೆ ಕಾರು ಗಿಫ್ಟ್ ಮಾಡಿದ್ದರು

  ಮೇಕಪ್ ಮ್ಯಾನ್ ಗೆ ಕಾರು ಗಿಫ್ಟ್ ಮಾಡಿದ್ದರು

  ಜಾಕ್ವೆಲಿನ್ ಕಾರನ್ನು ಗಿಫ್ಟ್ ಆಗಿ ನೀಡುತ್ತಿರುವುದು ಇದೇ ಮೊದಲೇನಲ್ಲ. ಈ ಮೊದಲು ಮೇಕಪ್ ಕಲಾವಿದರಿಗೆ ಕಾರನ್ನು ಗಿಫ್ಟ್ ನೀಡಿದ್ದರಂತೆ. ಸಿಬ್ಬಂದಿ ವರ್ಗವನ್ನು ಮತ್ತು ಪ್ರತಿಯೊಬ್ಬರನ್ನು ಜಾಕ್ವೆಲಿನ್ ತುಂಬಾ ಪ್ರೀತಿಯಿಂದ ನೋಡಿಕೊಳ್ಳುತ್ತಾರಂತೆ. ಜಾಕ್ವೆಲಿನ್ ಉಡುಗೊರೆಗೆ ಅಭಿಮಾನಿಗಳು ಸಹ ಫಿದಾ ಆಗಿದ್ದಾರೆ. ಚಿತ್ರೀಕರಣ ಸೆಟ್ ನಲ್ಲೇ ಕಾರನ್ನು ಗಿಫ್ಟ್ ನೀಡಿದ್ದಾರೆ. ಹಾಗಾಗಿ ಟ್ರಾಫಿಕ್ ಪೊಲೀಸ್ ಬಟ್ಟೆ ಧರಿಸಿದ್ದಾರೆ. ಇದೇ ಫೋಟೋವನ್ನು ಜಾಕ್ವೆಲಿನ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

  ಇನ್ಸ್ಟಾಗ್ರಾಮ್ ನಲ್ಲಿ 46 ಮಿಲಿಯನ್ ಫಾಲೋವರ್ಸ್

  ಇನ್ಸ್ಟಾಗ್ರಾಮ್ ನಲ್ಲಿ 46 ಮಿಲಿಯನ್ ಫಾಲೋವರ್ಸ್

  ಜಾಕ್ವೆಲಿನ್ ಫರ್ನಾಂಡಿಸ್ ಇತ್ತೀಚಿಗೆ ಇನ್ಸ್ಟಾಗ್ರಾಮ್ ನಲ್ಲಿ 46 ಮಿಲಿಯನ್ ಫಾಲೋವರ್ಸ್ ಹೊಂದಿದ ಖುಷಿಗೆ ಅಭಿಮಾನಿಗಳಿಗೆ ಧನ್ಯವಾದ ತಿಳಿಸಲು ವಿಭಿನ್ನ ಫೋಟೋಶೂಟ್ ಮಾಡಿಸಿದ್ದರು. ಜಾಕ್ವೆಲಿನ್ ಹಾಟ್ ಫೋಟೋಶೂಟ್ ಗೆ ಅಭಿಮಾನಿಗಳು ಫಿದಾ ಆಗಿದ್ದರು.

  ಹೇ ಉದ್ಧವ್ ಠಾಕ್ರೆ ಎಂದು ಏಕವಚನದಲ್ಲಿ ಗಾಳಿ ಬಿಡಿಸಿದ ಕಂಗನಾ | Filmibeat Kannada
  ಜಾಕ್ವೆಲಿನ್ ಬಳಿ ಇರುವ ಸಿನಿಮಾಗಳು

  ಜಾಕ್ವೆಲಿನ್ ಬಳಿ ಇರುವ ಸಿನಿಮಾಗಳು

  ಜಾಕ್ವೆಲಿನ್ ಸದ್ಯ ಸಲ್ಮಾನ್ ಖಾನ್ ಜೊತೆ ಕಿಕ್-2 ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ನಟ ರಣ್ವೀರ್ ಸಿಂಗ್ ಅಭಿನಯದ ಸರ್ಕಸ್ ಚಿತ್ರದಲ್ಲಿ ನಟಿಸಲಿದ್ದಾರೆ. ಇದಲ್ಲದೇ ಇನ್ನೂ ಎರಡೂ ಸಿನಿಮಾದಲ್ಲಿ ಜಾಕ್ವೆಲಿನ್ ಬ್ಯುಸಿಯಾಗಿದ್ದಾರೆ.

  English summary
  Bollywood Actress Jacqueline Fernandez gifted car to one of her staff member.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X