For Quick Alerts
  ALLOW NOTIFICATIONS  
  For Daily Alerts

  'ವಿಕ್ರಾಂತ್ ರೋಣ' ಚಿತ್ರೀಕರಣ ಮುಗಿಸಿ ಬ್ಯಾಕ್‌ಲೆಸ್ ಆಗಿ ಕಾಣಿಸಿಕೊಂಡ ಜಾಕ್ವೆಲಿನ್

  |

  ಬಾಲಿವುಡ್ ಖ್ಯಾತ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಇತ್ತೀಚಿಗಷ್ಟೆ ಕನ್ನಡದ ವಿಕ್ರಾಂತ್ ರೋಣ ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾದಲ್ಲಿ ಜಾಕ್ವೆಲಿನ್ ಐಟಂ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಚಿತ್ರೀಕರಣ ಮುಗಿಸಿ ಮುಂಬೈ ಹಾರುತ್ತಿದ್ದಂತೆ ಜಾಕ್ವೆಲಿನ್ ಸಖತ್ ಹಾಟ್ ಆಗಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ.

  ಪಡ್ಡೆಗಳ ನಿದ್ದೆಗೆಡಿಸಿ ವಿಚಿತ್ರ ಸ್ಟೇಟಸ್ ಹಾಕಿದ ವಿಕ್ರಾಂತ್ ರೋಣ ಬೆಡಗಿ ಜಾಕ್ವೆಲಿನ್ ಫರ್ನಾಂಡಿಸ್

  ಬ್ಯಾಕ್‌ಲೆಸ್ ಪೋಸ್ ನೀಡಿರುವ ಜಾಕ್ವೆಲಿನ್ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಹಾಟ್ ಜಾಕ್ವೆಲಿನ್ ಕಂಡು ಅಭಿಮಾನಿಗಳು ಬೆರಗಾಗಿದ್ದಾರೆ. ಹಿಂದಿ ಸಿನಿಮಾದಲ್ಲಿ ಭಾರಿ ಬೇಡಿಕೆಯ ನಟಿಯಾಗಿರುವ ಜಾಕ್ವೆಲಿನ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

  ಶ್ರೀಲಂಕಾದ ಈ ಸುಂದರಿ ಬಾಲಿವುಡ್‌ನಲ್ಲಿ ಖ್ಯಾತಿಗಳಿಸಿ, ಅಭಿಮಾನಿಗಳ ಮನಗೆದ್ದಿದ್ದಾರೆ. ಅಂದಹಾಗೆ ಜಾಕ್ವೆಲಿನ್ ಹಾಟ್ ಅವತಾರದಲ್ಲಿ ಕಾಣಿಸಿಕೊಳ್ಳುವ ಜೊತೆಗೆ ಪವರ್ ಫುಲ್ ಸಂದೇಶವನ್ನು ರವಾನಿಸಿದ್ದಾರೆ. "ನೀವು ಕೆಟ್ಟವರಲ್ಲ, ಆದರೆ ಸಮಾಜ ಕೆಟ್ಟದ್ದು" ಎಂದು ಬರೆದುಕೊಂಡಿದ್ದಾರೆ.

  ರೆಟ್ರೋ ಶೈಲಿಯಲ್ಲಿ ಫೋಟೋಶೂಟ್ ಮಾಡಿಸಿದ್ದು, ಕೇವಲ ಟವಲ್‌ನಿಂದ ದೇಹ ಮುಚ್ಚಿಕೊಂಡಿದ್ದಾರೆ. ಜಾಕ್ವೆಲಿನ್ ಮೋಹಕ ನೋಟಕ್ಕೆ ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಲೈಕ್ಸ್ ಮತ್ತು ಕಾಮೆಂಟ್‌ಗಳು ಹರಿದುಬಂದಿವೆ. 10 ಲಕ್ಷಕ್ಕೂ ಅಧಿಕ ಲೈಕ್ಸ್ ಮತ್ತು ಸಿಕ್ಕಾಪಟ್ಟೆ ಕಾಮೆಂಟ್ ಬಂದಿದೆ.

  ಇತ್ತೀಚಿಗಷ್ಟೆ ಕನ್ನಡದ ವಿಕ್ರಾಂತ್ ರೋಣ ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ಜಾಕ್ವೆಲಿನ್ ಚಿತ್ರದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಚಿತ್ರತಂಡವನ್ನು ಹಾಡಿ ಹೊಗಳಿದ್ದರು. ಮತ್ತೆ ಮುಂದಿನ ಬಾರಿ ಭೇಟಿಯಾಗೋಣ. ಚೆಸ್ ಆಡೋಣ ಎಂದು ಬರೆದುಕೊಂಡಿದ್ದರು. ಜೊತೆಗೆ ಸುದೀಪ್ ಜೊತೆ ಫೋಟೋವನ್ನು ಶೇರ್ ಮಾಡಿದ್ದರು.

  ಇನ್ನು ವಿಕ್ರಾಂತ್ ರೋಣ ಖಂಡಿತವಾಗಿಯೂ ಜಾಗತಿಕ ಮಟ್ಟದಲ್ಲಿ ಭಾರತವನ್ನು ಹೆಮ್ಮೆ ಪಡಿಸಲಿದೆ ಎಂದು ಹಾಡಿ ಹೊಗಳಿದ್ದರು. ಸದ್ಯ ಚಿತ್ರೀಕರಣ ಮುಗಿಸಿರುವ ಜಾಕ್ವೆಲಿನ್ ಮತ್ತೆ ಡಬ್ಬಿಂಗ್ ನಲ್ಲಿ ಭೇಟಿಯಾಗೋಣ ಎಂದಿದ್ದಾರೆ.

  English summary
  Bollywood Actress Jacqueline Fernandez goes backless in latest photoshoot, shares message about living life for oneself.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X