ಅಕ್ಷಯ್ ಕುಮಾರ್ 'ಬಚ್ಚನ್ ಪಾಂಡೆ' ತಂಡ ಸೇರಿದ ಮತ್ತೊಬ್ಬ ಸ್ಟಾರ್ ನಟಿ

ಬಾಲಿವುಡ್ ಅಕ್ಷಯ್ ಕುಮಾರ್ ನಟಿಸುತ್ತಿರುವ 'ಬಚ್ಚನ್ ಪಾಂಡೆ' ಚಿತ್ರತಂಡಕ್ಕೆ ಮತ್ತೊಬ್ಬ ಸ್ಟಾರ್ ನಟಿ ಎಂಟ್ರಿಯಾಗಿದೆ. ಸದ್ಯ ಕೃತಿ ಸನನ್ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದು, ಈಗ ಜಾಕ್‌ಲೀನ್ ಫರ್ನಾಂಡೀಸ್ ಸಹ ಚಿತ್ರಕ್ಕೆ ಸೇರ್ಪಡೆಯಾಗಿದ್ದಾರೆ.

ಈ ಕುರಿತು ಖ್ಯಾತ ವಿಶ್ಲೇಷಕ ತರಣ್ ಆದರ್ಶ್ ಟ್ವೀಟ್ ಮಾಡಿದ್ದು, ''ಬಚ್ಚನ್ ಪಾಂಡೆ ಸೆಟ್‌ಗೆ ಜಾಕ್‌ಲೀನ್ ಸೇರಿದ್ದಾರೆ'' ಎಂದು ತಿಳಿಸಿದ್ದಾರೆ.

ಇದಕ್ಕೂ ಮುಂಚೆ ಅರ್ಷದ್ ವಾರ್ಸಿ ಬಚ್ಚನ್ ಪಾಂಡೆ ಚಿತ್ರತಂಡಕ್ಕೆ ಎಂಟ್ರಿಕೊಂಡಿದ್ದರು. ಈ ಕುರಿತು ಶನಿವಾರ ಅಧಿಕೃತ ಪ್ರಕಟಣೆಯಾಗಿತ್ತು. ಅಕ್ಷಯ್ ಕುಮಾರ್ ಸ್ನೇಹಿತನ ಪಾತ್ರದಲ್ಲಿ ಅರ್ಷದ್ ವಾರ್ಸಿ ನಟಿಸುತ್ತಿದ್ದಾರೆ.

Jacqueline Fernandez Joins With Bachchan Pandey

ಕೃತಿ ಸನನ್ ಸಹ ಈ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದು, ನಿರ್ದೇಶಕಿ ಆಗಬೇಕೆಂಬ ಕನಸು ಕಾಣುತ್ತಿರುವ ಪತ್ರಕರ್ತೆಯಾಗಿ ಅಭಿನಯಿಸಲಿದ್ದಾರೆ. ಅಕ್ಷಯ್ ಕುಮಾರ್ ಗ್ಯಾಂಗ್‌ಸ್ಟರ್ ಪಾತ್ರ ಹಾಗೂ ಅರ್ಷದ್ ವಾರ್ಸಿ ಅಕ್ಷಯ್ ಸ್ನೇಹಿತನ ಪಾತ್ರದಲ್ಲಿ ಮಿಂಚಲಿದ್ದಾರೆ. ಸದ್ಯಕ್ಕೆ ಜಾಕ್‌ಲೀನ್ ಪಾತ್ರದ ಬಗ್ಗೆ ಮಾಹಿತಿ ಇಲ್ಲ.

ಇನ್ನು ಸಾಜೀದ್ ನದಿಯಾದ್‌ವಾಲ್ ಈ ಚಿತ್ರ ನಿರ್ಮಾಣ ಮಾಡುತ್ತಿದ್ದು, ಫರ್ಹಾದ್ ಸಂಜಿ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ಅಂದ್ಹಾಗೆ, ಜನವರಿ ತಿಂಗಳಿನಿಂದ ಬಚ್ಚನ್ ಪಾಂಡೆ ಶೂಟಿಂಗ್ ಆರಂಭಿಸಿ ಮಾರ್ಚ್ ವರೆಗೂ ನಿರಂತರವಾಗಿ ಕೆಲಸ ಮಾಡಲಿದೆಯಂತೆ. ಅಕ್ಷಯ್ ಕುಮಾರ್, ಕೃತಿ ಸನನ್, ನಿರ್ದೇಶಕ ಫರ್ಹಾದ್ ಸಂಜಿ ಸೇರಿದಂತೆ ಇಡೀ ಚಿತ್ರತಂಡ 60 ದಿನಗಳ ಶೂಟಿಂಗ್‌ಗಾಗಿ ರಾಜಸ್ಥಾನದ ಜೈಸಲ್ಮೇರ್ ಗೆ ಹೋಗಲಿದ್ದಾರೆ.

More from Filmibeat

English summary
Bollywood actress Jacqueline Fernandez joins the cast of Bachchan Pandey. Stars Akshay Kumar, Arshad Warsi and KritiSanon.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X