For Quick Alerts
  ALLOW NOTIFICATIONS  
  For Daily Alerts

  ಹಣಕ್ಕಾಗಿಯೇ ವಂಚಕ ಸುಕೇಶ್‌ ಜೊತೆ ಸಂಬಂಧ! ಜಾಕ್ವೆಲಿನ್‌ ವಿರುದ್ಧ ಇಡಿ ಸಾಕ್ಷ್ಯ ಸಹಿತ ಆರೋಪ

  |

  'ವಿಕ್ರಾಂತ್ ರೋಣ' ಸಿನಿಮಾದಲ್ಲಿ ರಕ್ಕಮ್ಮನಾಗಿ ಕುಣಿದು ಮಿಂಚು ಹರಿಸಿದ ನಟಿ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಇದೀಗ ಇಡಿ ದೆಸೆಯಿಂದಾಗಿ ತೀವ್ರ ಸಂಕಷ್ಟದಲ್ಲಿದ್ದಾರೆ.

  200 ಕೋಟಿ ವಂಚನೆ, ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾಕ್ವೆಲಿನ್ ಫರ್ನಾಂಡೀಸ್ ಅನ್ನು ಇಡಿ (ಜಾರಿ ನಿರ್ದೇಶನಾಲಯ) ಆರೋಪಿಯನ್ನಾಗಿ ಮಾಡಿದೆ. ಇಷ್ಟು ದಿನ ಸಾಕ್ಷಿಯಾಗಿದ್ದ ಜಾಕ್ವೆಲಿನ್ ಇದೀಗ ಆರೋಪಿಯಾಗಿದ್ದು, ಬಂಧನ ಭೀತಿ ಎದುರಿಸುತ್ತಿದ್ದಾರೆ.

  Recommended Video

  Jacqueline Fernandez| ಹಣಕ್ಕಾಗಿಯೇ ಸುಕೇಶ್‌ ಜೊತೆ ಸಂಬಂಧ ಬೆಳೆಸಿದ್ದ ಜಾಕ್ವೆಲಿನ್ | Filmibeat Kannada

  'ವಿಕ್ರಾಂತ್ ರೋಣ' ಬಾಕ್ಸಾಫೀಸ್ ಕಲೆಕ್ಷನ್ ₹200 ಕೋಟಿ ಎಂದ ಜೀ5: ಕಾಲರ್ ಎಗರಿಸಿದ ಫ್ಯಾನ್ಸ್!'ವಿಕ್ರಾಂತ್ ರೋಣ' ಬಾಕ್ಸಾಫೀಸ್ ಕಲೆಕ್ಷನ್ ₹200 ಕೋಟಿ ಎಂದ ಜೀ5: ಕಾಲರ್ ಎಗರಿಸಿದ ಫ್ಯಾನ್ಸ್!

  200 ಕೋಟಿ ವಂಚನೆ, ಅಕ್ರಮ ಹಣ ವರ್ಗಾವಣೆ ಪ್ರಕರಣದ ಪ್ರಮುಖ ಆರೋಪಿ ಸುಕೇಶ್‌ ಜೊತೆ ಜಾಕ್ವೆಲಿನ್ ಆಪ್ತ ಸಂಬಂಧ ಹೊಂದಿದ್ದು, ಇದೇ ಕಾರಣಕ್ಕೆ ಇದೀಗ ಜಾಕ್ವೆಲಿನ್ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಲವು ತಿಂಗಳಿನಿಂದಲೂ ಈ ಪ್ರಕರಣದ ತನಿಖೆ ನಡೆಯುತ್ತಿದ್ದು, ಜಾಕ್ವೆಲಿನ್ ಹಲವು ಬಾರಿ ವಿಚಾರಣೆ ಎದುರಿಸಿದ್ದಾರೆ. ಕಳೆದ ಕೆಲವು ತಿಂಗಳ ವರೆಗೆ ಜಾಕ್ವೆಲಿನ್ ಅನ್ನು ಸಾಕ್ಷಿ ಎಂದು ಪರಿಗಣಿಸಿದ್ದ ತನಿಖಾ ಸಂಸ್ಥೆ ಇಡಿ, ಇತ್ತೀಚೆಗೆ ಸಲ್ಲಿಸಿರುವ ಚಾರ್ಜ್‌ಶೀಟ್‌ನಲ್ಲಿ ಜಾಕ್ವೆಲಿನ್ ಅನ್ನು ಆರೋಪಿಯನ್ನಾಗಿಸಿದೆ.

  ತಮ್ಮನ್ನು ಆರೋಪಿಯನ್ನಾಗಿಸಿರುವ ಇಡಿ ನಡೆಯ ಬಗ್ಗೆ ಜಾಕ್ವೆಲಿನ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಇದೇ ಪ್ರಕರಣದಲ್ಲಿ ಸಿಲುಕಿರುವ ನಟಿ ನೋರಾ ಫತೇಹಿಯನ್ನು ಸಾಕ್ಷಿಯನ್ನಾಗಿಸಿ ನನ್ನನ್ನು ಆರೋಪಿಯನ್ನಾಗಿಸಿರುವುದು ಇಡಿಯ ಪಕ್ಷಪಾತ ತೋರಿಸುತ್ತದೆ ಎಂದಿದ್ದಾರೆ.

  ಜಾಕ್ವೆಲಿನ್‌ರ ಪಕ್ಷಪಾತದ ಆರೋಪಕ್ಕೆ ಪ್ರತಿಕ್ರಿಯಿಸಿರುವ ಇಡಿ, ಜಾಕ್ವೆಲಿನ್ ವಿರುದ್ಧ ಸೂಕ್ತ ಆಧಾರವಿರುವ ಕಾರಣದಿಂದಲೇ ಅವರನ್ನು ಆರೋಪಿಯನ್ನಾಗಿಸಲಾಗಿದೆ ಎಂದಿದೆ. ಜಾಕ್ವೆಲಿನ್ ಫರ್ನಾಂಡೀಸ್‌ಗೆ ಸುಕೇಶ್ ಚಂದ್ರಶೇಖರ್ ಅಪರಾಧಿ, ವಂಚಕ ಎಂಬುದು ಗೊತ್ತಿತ್ತು ಹಾಗಿದ್ದರೂ ಅವನೊಟ್ಟಿಗೆ ಸಂಬಂಧ ಮುಂದುವರೆಸಿದರು, ಆತನಿಂದ ಹಣ, ಉಡುಗೊರೆಗಳನ್ನು ತೆಗೆದುಕೊಂಡರು ಎಂದಿದೆ.

  ಜಾಕ್ವೆಲಿನ್ ಫರ್ನಾಂಡೀಸ್‌ರ ಕೇಶವಿನ್ಯಾಸಕ ಶಾನ್ ಮೊದಲೇ ಜಾಕ್ವೆಲಿನ್‌ಗೆ ಸುಕೇಶ್ ಚಂದ್ರಶೇಖರ್ ಎಂಥಹಾ ವಂಚಕ ಎಂಬುದನ್ನು ಹೇಳಿದ್ದ, ಅಷ್ಟೇ ಅಲ್ಲದೆ, ಲೀನಾ ಮರೀಯಾ ಪೌಲ್, ಸುಕೇಶ್‌ನ ಪತ್ನಿ ಎಂಬುದು ಸಹ ಜಾಕ್ವೆಲಿನ್ ಫರ್ನಾಂಡೀಸ್‌ಗೆ ಮೊದಲೇ ಗೊತ್ತಿತ್ತು. ಆದರೂ ಕೇವಲ ಹಣಕ್ಕಾಗಿ, ಉಡುಗೊರೆಗಳಿಗಾಗಿ ಜಾಕ್ವೆಲಿನ್ ಫರ್ನಾಂಡೀಸ್ ಸುಕೇಶ್‌ ಜೊತೆ ಸಂಬಂಧ ಮುಂದುವರೆಸಿದರು.

  ಸುಕೇಶ್ ಚಂದ್ರಶೇಖರ್ ಅಪರಾಧ ಎಸಗಿ ಹಣ ಸಂಪಾದನೆ ಮಾಡುತ್ತಿದ್ದಾನೆ ಎಂದು ಜಾಕ್ವೆಲಿನ್ ಫರ್ನಾಂಡೀಸ್‌ಗೆ ಮೊದಲೇ ಗೊತ್ತಿತ್ತು ಹಾಗಿದ್ದರೂ ಜಾಕ್ವೆಲಿನ್ ಆತನಿಂದ ಹಣ, ಉಡುಗೊರೆಗಳನ್ನು ಪಡೆದುಕೊಂಡಿದ್ದಾಳೆ ಎಂದಿದೆ ಇಡಿ.

  ಜಾಕ್ವೆಲಿನ್ ಫರ್ನಾಂಡೀಸ್‌ಗೆ ಕೋಟ್ಯಂತರ ಬೆಲೆಯ ಕಾರು, ಜಾಕ್ವೆಲಿನ್ ಖಾತೆಗೆ ಹಣ, ಜಾಕ್ವೆಲಿನ್ ಸಹೋದರನ ಖಾತೆಗೆ ಲಕ್ಷಾಂತರ ಹಣವನ್ನು ಸುಕೇಶ್ ಚಂದ್ರಶೇಖರ್ ಹಾಕಿದ್ದ.

  ಕಳೆದ ಕೆಲ ವರ್ಷಗಳಿಂದ ತಿಹಾರ್ ಜೈಲಿನಲ್ಲಿರುವ ಸುಕೇಶ್ ಚಂದ್ರಶೇಖರ್ ದೇಶದ ಟಾಪ್ ರಾಜಕಾರಣಿಗಳು, ಉದ್ಯಮಿಗಳಿಗೆ ಕೋಟ್ಯಂತರ ಹಣ ವಂಚನೆ ಮಾಡಿದ್ದಾರೆ. ಅಲ್ಲದೆ ಉದ್ಯಮಿಗಳಿಂದ ಹಣ ವಸೂಲಿ ಸಹ ಮಾಡಿದ್ದಾನೆ. ಜೈಲಿನಲ್ಲಿದ್ದುಕೊಂಡೆ ಕೊಟ್ಯಂತರ ಹಣ ವಸೂಲಿ ಮಾಡಿದ್ದಾನೆ ಸುಕೇಶ್. ಜೈಲಿನಲ್ಲಿದ್ದಾಗ ಜೈಲಿಗೆ ಕೆಲವು ನಟಿಯರನ್ನೂ ಸಹ ಕರೆಸಿಕೊಂಡಿದ್ದನಂತೆ ಈತ.

  English summary
  ED says Actress Jacqueline Fernandez knows Sukesh Chandrashekhar is criminal and still she took gifts and money from him.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X