ಜಾಕ್ವೆಲಿನ್‌ಗೆ ಕೆರಿಯರ್‌ಗೆ ಮುಳುವಾಯ್ತು ಸುಕೇಶ್ ಕೇಸ್! ನಾಗಾರ್ಜುನ ಚಿತ್ರದಿಂದ ಜಾಕ್ವೆಲಿನ್ ಔಟ್

ವಂಚಕ ಸುಕೇಶ್ ಚಂದ್ರಶೇಖರ್ ಹೆಸರಿನ ಸುತ್ತು ಜಾಕ್ವೆಲಿನ್ ಹೆಸರು ಹರಿದಾಡುತ್ತಿದೆ. ವಿಚಾರಣೆ ಅಂತೆಲ್ಲ ಜಾಕ್ವೆಲಿನ್ ಓಡಾಡಿದ್ದಾರೆ. ಸುಕೇಶ್ ಮತ್ತು ಜಾಕ್ವೆಲಿನ್ ಹೆಸರು ಕೇಳಿ ಬರ್ತಾ ಇರೋ ದಿನದಿಂದಲೂ ಕುಗ್ಗಿ ಹೋಗಿರುವ ಜಾಕ್ವೆಲಿನ್ ಯಾವುದರಲ್ಲೂ ಆಸಕ್ತಿ ತೋರುತ್ತಿಲ್ಲ ಎಂಬುದು ಮೂಲಗಳಿಂದ ತಿಳಿದು ಬಂದಿದೆ.

Recommended Video

ಇಡಿ ಮುಂದೆ ಸುಕೇಶ್ ಪರಿಚಯದ ಬಗ್ಗೆ ಮಾಹಿತಿ ನೀಡಿದ ಜಾಕ್ವೆಲಿನ್

ಸುಕೇಶ್ ಮತ್ತು ಜಾಕ್ವೆಲಿನ್ ಲವ್‌ ಮಾಡುತ್ತಿದ್ದಾರೆ ಎಂಬುದು ಈ ಹಿಂದೆ ಕೇಳಿ ಬಂದಿತ್ತು. ಪದೇ ಪದೇ ಇವರಿಬ್ಬರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇತ್ತೀಚೆಗೆ ಕೂಡ ಜಾಕ್ವೆಲಿನ್ ಕುತ್ತಿಗೆ ಭಾಗದಲ್ಲಿ ಮುತ್ತಿನ ಗುರುತ್ತಿದ್ದ ಫೋಟೋ ಒಂದು ವೈರಲ್ ಆಗಿತ್ತು. ಆಗ ಜಾಕ್ವೆಲಿನ್ ವೈಯುಕ್ತಿಕ ಫೋಟೋಗಳನ್ನು ಶೇರ್ ಮಾಡದಂತೆ ಸೋಶಿಯಲ್ ಮೀಡಿಯಾದಲ್ಲಿ ಮನವಿ ಮಾಡಿಕೊಂಡಿದ್ದರು.

ಇದೆಲ್ಲದರ ನಂತರ ಜಾಕ್ವೆಲಿನ್ ಬಗೆಗಿಗ ಸಾಕಷ್ಟು ವಿಚಾರಗಳು ಹರಿದಾಡುತ್ತಿವೆ. ಮಾನಸಿಕ ಖಿನ್ನತೆ ಅನುಭವಿಸುತ್ತಿದ್ದಾರೆ ಜಾಕ್ವೆಲಿನ್ ಅನ್ನೋದು ಒಂದು ಸುದ್ದಿಯಾದ್ರೆ, ತಾನು ಒಪ್ಪಿಕೊಂಡಿದ್ದ ಸಿನಿಮಾಗಳಿಂದಲೂ ಜಾಕ್ವೆಲಿನ್ ಹೊರ ಬಿದ್ದಿದ್ದಾರೆ. ಅದು ಯಾವ ಸಿನಿಮಾ ಅಂತ ಮುಂದೆ ಓದಿ.

ಖ್ಯಾತ ನಟನ ಚಿತ್ರದಿಂದ ಜಾಕ್ವೆಲಿನ್ ಅವರನ್ನು ಹೊರಹಾಕಿದ ತಂಡ

ಖ್ಯಾತ ನಟನ ಚಿತ್ರದಿಂದ ಜಾಕ್ವೆಲಿನ್ ಅವರನ್ನು ಹೊರಹಾಕಿದ ತಂಡ

ನಟಿ ಜಾಕ್ವೆಲಿನ್ ಫರ್ನಾಂಡೀಸ್ ಅವರು ಸುಕೇಶ್ ಚಂದ್ರಶೇಖರ್ ಅವರನ್ನು ಒಳಗೊಂಡ ಬಹುಕೋಟಿ ಸುಲಿಗೆ ಪ್ರಕರಣದಲ್ಲಿ ತಮ್ಮ ಹೆಸರು ಬೆಳೆದಾಗಿನಿಂದ ಸುದ್ದಿಯಾಗುತ್ತಿದ್ದಾರೆ. ಜಾರಿ ನಿರ್ದೇಶನಾಲಯದಿಂದ ಹಲವು ಬಾರಿ ವಿಚಾರಣೆಗೆ ಒಳಗಾದ ನಂತರ ಜಾಕ್ವೆಲಿನ್ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಇದೆಲ್ಲವೂ ಜಾಕ್ವೆಲಿನ್‌ ಅವರ ವೃತ್ತಿ ಜೀವನದ ಮೇಲೂ ಪರಿಣಾಮ ಬೀರಿದೆ. 'ಪಿಂಕ್ವಿಲ್ಲಾದಲ್ಲಿ'ನ ಇತ್ತೀಚಿನ ವರದಿಯ ಪ್ರಕಾರ, ನಾಗಾರ್ಜುನ ಅಕ್ಕಿನೇನಿ ಅವರ ಮುಂಬರುವ ಚಿತ್ರ 'ದಿ ಘೋಸ್ಟ್'‌ನ ತಯಾರಕರು ಜಾಕ್ವೆಲಿನ್ ಅವರನ್ನು ಸಿನಿಮಾದಿಂದ ತೆಗೆದುಹಾಕಿದ್ದಾರೆ. ಆದರೆ, ಯಾವ ಕಾರಣಕ್ಕೆ ಎಂಬುದು ಇನ್ನು ನಿಖರವಾಗಿ ತಿಳಿದು ಬಂದಿಲ್ಲಾ ಎಂದು ಉಲ್ಲೇಖಿಸಲಾಗಿದೆ.

ಮುಂದೆ ಸಮಸ್ಯೆ ಆಗುತ್ತೆ ಎಂದು ಕೈ ಬಿಟ್ಟಿತ್ತಾ ಚಿತ್ರತಂಡ?

ಮುಂದೆ ಸಮಸ್ಯೆ ಆಗುತ್ತೆ ಎಂದು ಕೈ ಬಿಟ್ಟಿತ್ತಾ ಚಿತ್ರತಂಡ?

ಈ ಸುದ್ದಿ ಇದೀಗ ಬಾರೀ ಚರ್ಚೆಗೆ ಕಾರಣವಾಗುತ್ತಿದ್ದು, ಯಾವಕಾರಣಕ್ಕೆ ಎಂಬ ಬಗ್ಗೆ ಹುಡುಕಾಟಗಳ ಆರಂಭವಾಗಿದೆ. ಆದರೇ ಜಾಕ್ವೆಲಿನ್ 'ದಿ ಘೋಸ್ಟ್' ಚಿತ್ರದ ಭಾಗವಾಗಿ ಇನ್ನು ಇರೋದಿಲ್ಲ ಅನ್ನೋದು ಅಭಿಮಾನಿಗಳಿಗೆ ನೀರಾಸೆ ಉಂಟು ಮಾಡಿದೆ. ಮೂಲಗಳ ಪ್ರಕಾರ ಜಾಕ್ವೆಲಿನ್ ಹೆಸರು ಈ ಕೇಸ್ ನಲ್ಲಿ ಕೇಳಿಬಂದ ದಿನದಿಂದಲೂ ಅವರು ಮಾನಸಿಕ ಖಿನ್ನತೆಗೆ ಒಳಗಾಗಿದ್ದಾರೆ. ಹೀಗಾಗಿ ಬಾಲಿವುಡ್‌ನ ಹಲವು ಸಿನಿಮಾಗಳಿಂದಲೂ ಹೊರನಡೆದಿದ್ದಾರೆ ಎಂಬುದು ಕೇಳಿ ಬರುತ್ತಿದೆ. ಹೀಗಾಗಿಯೇ ದಿ ಘೋಸ್ಟ್ ಚಿತ್ರತಂಡಕ್ಕೆ ಮುಂದೆ ಸಮಸ್ಯೆ ಆಗಬಾರದು ಎಂದು ಮುಂಚಿತವಾಗಿಯೇ ಚಿತ್ರತಂಡ ಅವರನ್ನು ಹೊರ ಇಟ್ಟಿದೆ ಎಂಬ ಮಾತುಗಳು ಕೇಳಿಬರುತ್ತಿದೆ. ಇದು ಎಷ್ಟು ಸತ್ಯ ಎಂಬುದು ಚಿತ್ರತಂಡ ಅಧಿಕೃತ ಮಾಹಿತಿ ನೀಡಿದ ನಂತರವಷ್ಟೆ ತಿಳಿದು ಬರಬೇಕಿದೆ.

ಈಗ ಜಾಕ್ವೆಲಿನ್, ಕಾಜಲ್ ಇಬ್ಬರು ಚಿತ್ರದಲ್ಲಿಲ್ಲಾ !

ಈಗ ಜಾಕ್ವೆಲಿನ್, ಕಾಜಲ್ ಇಬ್ಬರು ಚಿತ್ರದಲ್ಲಿಲ್ಲಾ !

ಇನ್ನು ದಿ ಘೋಸ್ಟ್ ಸಿನಿಮಾಗೆ ಈ ಮುಂಚೆ ಕಾಜಲ್ ಅಗರ್ವಾಲ್ ಅವರು ಫೈನಲ್ ಆಗಿದ್ದರು. ತದನಂತರದಲ್ಲಿ ಅವರು ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿ ಇರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹಾಕುವ ಮೂಲಕ ಸುದ್ದಿ ಜಗಜಾಹೀರಾಗಿತ್ತು. ಇದಾದ ಬಳಿಕ ದಿ ಘೋಸ್ಟ್ ಚಿತ್ರತಂಡ ಜಾಕ್ವೆಲಿನ್ ಫರ್ನಾಂಡಿಸ್ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಿಕೊಂಡಿತ್ತು. ಆದರೇ ಈಗ ಮತ್ತೆ ಜಾಕ್ವೆಲಿನ್ ಅವರನ್ನು ಚಿತ್ರತಂಡ ಕೈ ಬಿಟ್ಟಿದೆ. ಹೀಗಾಗಿ ನಾಗರ್ಜುನ ಅಭಿನಯದ ದಿ ಘೋಸ್ಟ್ ಚಿತ್ರಕ್ಕೆ ಯಾರು ನಾಯಕಿ ಆಗಿ ಆಯ್ಕೆ ಆಗುತ್ತಾರೆ ಎಂಬ ಕುತೂಹಲವು ಇದೀಗ ಮೂಡಿದೆ.

ಧ್ಯಾನಕ್ಕೆ ಸಮಯ ಮೀಸಲಿಟ್ಟ ನಟಿ ಜಾಕ್ವೆಲಿನ್

ಧ್ಯಾನಕ್ಕೆ ಸಮಯ ಮೀಸಲಿಟ್ಟ ನಟಿ ಜಾಕ್ವೆಲಿನ್

ಮತ್ತೊಂದು ಮೂಲಗಳ ಪ್ರಕಾರ ಶ್ರೀಲಂಕಾ ಮೂಲದ ಜಾಕ್ವೆಲಿನ್‌ಗೆ ಸುಕೇಶ್​ ಚಂದ್ರಶೇಖರ್​ ಜೊತೆಗಿನ ಸಂಬಂಧವೇ ಮುಳುವಾಗಿದೆ. ವಂಚಕ ಸುಕೇಶ್ ಅವರ ಈ ಕೇಸ್‌ನಿಂದ ನೊಂದಿರುವ ಜಾಕ್ವೆಲಿನ್‌ ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ. ಹೀಗಾಗಿ ಆಧ್ಯಾತ್ಮಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಅವರು ಓದಲು ಪ್ರಾರಂಭಿಸಿದ್ದಾರೆ. ಧ್ಯಾನಕ್ಕೆ ಹೆಚ್ಚು ಸಮಯ ಮೀಸಲಿಡುತ್ತಿದ್ದಾರೆ. ಉಸಿರಾಟಕ್ಕೆ ಸಂಬಂಧಿಸಿದ ವ್ಯಾಯಾಮಗಳನ್ನು ಮಾಡುತ್ತಿದ್ದಾರೆ ಎಂದು ಕೇಳಿಬರುತ್ತಿದೆ. ಉಳಿದಂತೆ ಜಾಕ್ವೆಲಿನ್ ಕೈಯಲ್ಲಿ ಸದ್ಯ 'ಕಿಕ್ 2', 'ರಾಮ್ ಸೇತು', 'ಬಚ್ಚನ್ ಪಾಂಡೆ' ಮತ್ತು 'ಸರ್ಕಸ್' ಚಿತ್ರಗಳು ಇವೆ.

More from Filmibeat

English summary
Jacqueline Fernandez out of Nagarjuna's The Ghost.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X