ಸಲ್ಮಾನ್ ಬೆಡಗಿ ಚಲಿಸುತ್ತಿದ್ದ ಕಾರ್ ಗೆ ಅಪಘಾತ
ಸಲ್ಮಾನ್ ಖಾನ್ ಚಿತ್ರಗಳ ನೆಚ್ಚಿನ ನಾಯಕಿ ಜಾಕ್ವೆಲಿನ್ ಫರ್ನಾಂಡಿಸ್ ಅವರು ಚಲಿಸುತ್ತಿದ್ದ ಕಾರ್ ಆಟೋಗೆ ಡಿಕ್ಕಿ ಹೊಡೆದಿದೆ. ಸಲ್ಮಾನ್ ಖಾನ್ ಅವರ ಜೊತೆಯಲ್ಲಿ ಪಾರ್ಟಿ ಮುಗಿಸಿ ಮನೆಗೆ ತೆರೆಳುತ್ತಿದ್ದಾಗ ಈ ಘಟನೆ ಸಂಭವಿಸಿದೆ.
ಸಲ್ಮಾನ್ ಖಾನ್ ಅಭಿನಯದ 'ರೇಸ್-3' ಸಿನಿಮಾ ಬಿಡುಗಡೆಗೆ ಸಿದ್ಧವಾಗಿದ್ದು, ರಿಲೀಸ್ ಗೂ ಮುಂಚೆ ಸಲ್ಲು ಮನೆಯಲ್ಲಿ ಪಾರ್ಟಿ ಆಯೋಜನೆ ಮಾಡಲಾಗಿತ್ತು. ಈ ಪಾರ್ಟಿಯಲ್ಲಿ ಜಾಕ್ವೆಲಿನ್ ಕೂಡ ಭಾಗಿಯಾಗಿದ್ದರು.
ಪಾರ್ಟಿ ಮುಗಿದಿದ್ದು ರಾತ್ರಿ ಸುಮಾರು 2 ಗಂಟೆ. ನಂತರ 2.20ಕ್ಕೆ ಸಲ್ಮಾನ್ ಮನೆಯಿಂದ ಹೊರಟ ಜಾಕ್ವೆಲಿನ್ ಕಾರ್ ರಸ್ತೆ ಮಧ್ಯೆ ಆಟೋಗೆ ಡಿಕ್ಕಿ ಹೊಡೆದಿದೆ. ಹಿಂಬದಿ ಕಾರ್ ಸೀಟಿನಲ್ಲಿ ಕೂತಿದ್ದ ನಟಿಗೆ, ಕಾರು ಚಾಲಕನಿಗೆ ಮತ್ತು ಆಟೋ ಚಾಲಕನಿಗೆ ಯಾವುದೇ ರೀತಿಯ ಅಪಾಯವಾಗಿಲ್ಲ. ಕಾರಿನ ಹೆಡ್ ಲೈಟ್ ಮಾತ್ರ ಜಖಂ ಆಗಿದೆ.

'ರೇಸ್-3' ಚಿತ್ರದ ಬಹುತೇಕ ಚಿತ್ರೀಕರಣ ಮುಗಿದಿದ್ದು, ರೆಮೋ ಡಿಸೋಜಾ ಈ ಚಿತ್ರವನ್ನ ನಿರ್ದೇಶನ ಮಾಡಿದ್ದಾರೆ. ಸಲ್ಲು ಜೊತೆಯಲ್ಲಿ, ಅನಿಲ್ ಕಪೂರ್, ಬಾಬಿ ಸಿಂಹ, ಡೈಸಿ ಶಾ, ಸೇರಿದಂತೆ ಹಲವರು ಅಭಿನಯಿಸಿದ್ದಾರೆ.
ಈಗಾಗಲೇ ಘೋಷಣೆ ಮಾಡಿರುವಂತೆ ಈ ವರ್ಷದ ಈದ್ ಹಬ್ಬಕ್ಕೆ 'ರೇಸ್-3' ಸಿನಿಮಾ ತೆರೆಕಾಣುತ್ತಿದೆ.


Click it and Unblock the Notifications











