For Quick Alerts
  ALLOW NOTIFICATIONS  
  For Daily Alerts

  ಹೊಸ ಬಂಗ್ಲೆ ಖರೀದಿಸಿದ ಜಾಕ್ವೆಲಿನ್ ಫರ್ನಾಂಡೀಸ್: ಪ್ರಿಯಕರನ ಜೊತೆ ವಾಸ್ತವ್ಯ

  |

  ಕೆಲ ದಿನಗಳ ಹಿಂದಷ್ಟೆ ತಮ್ಮ ಪೋಷಕರು ಭಾರತ ಬಿಟ್ಟು ಬರುವಂತೆ ಕರೆಯುತ್ತಿದ್ದಾರೆ ಆದರೆ ನಾನು ಹೋಗುತ್ತಿಲ್ಲ ಎಂದಿದ್ದ ಶ್ರೀಲಂಕಾದ ಚೆಲುವೆ ಜಾಕ್ವೆಲಿನ್, ಭಾರತದಲ್ಲಿಯೇ ಶಾಶ್ವತವಾಗಿ ನೆಲೆಸುವ ನಿರ್ಧಾರ ಮಾಡಿದಂತಿದೆ.

  ಬಾಲಿವುಡ್‌ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಮುಂಬೈನ ದುಬಾರಿ ಏರಿಯಾದಲ್ಲಿ ದುಬಾರಿ ಬೆಲೆ ತೆತ್ತು ಬಂಗ್ಲೆಯೊಂದನ್ನು ಖರೀದಿಸಿದ್ದಾರೆ. ಆ ಬಂಗ್ಲೆಯನ್ನು ವಿದೇಶಿ ಸಂಸ್ಥೆಯೊಂದರಿಂದ ಒಳಾಂಗಣ ವಿನ್ಯಾಸ ಮಾಡಿಸುತ್ತಿದ್ದಾರೆ.

  ಜಾಕ್ವೆಲಿನ್ ಖರೀದಿಸಿರುವ ಬಂಗ್ಲೆಯು ಮುಂಬೈನ ಜುಹು ಏರಿಯಾದಲ್ಲಿದ್ದು, ಸಮುದ್ರ ತೀರದತ್ತ ಮುಖ ಮಾಡಿದೆ. ಈ ಐಶಾರಾಮಿ ಮನೆಗೆ ಕೆಲವೇ ದಿನಗಳಲ್ಲಿ ತಮ್ಮ ಪ್ರಿಯಕರನ ಜೊತೆಗೆ ಶಿಫ್ಟ್ ಆಗಲಿದ್ದಾರೆ ಜಾಕ್ವೆಲಿನ್.

  ದಕ್ಷಿಣ ಭಾರತದ ಉದ್ಯಮಿ ಜೊತೆ ಲವ್‌

  ದಕ್ಷಿಣ ಭಾರತದ ಉದ್ಯಮಿ ಜೊತೆ ಲವ್‌

  ಸಲ್ಮಾನ್ ಖಾನ್‌ ಜೊತೆಗೆ ಜಾಕ್ವೆಲಿನ್ ಹೆಸರು ಕೆಲ ಕಾಲ ಕೇಳಿಬಂದಿತ್ತು. ಆದರೆ ತಾವಿಬ್ಬರೂ ಗೆಳೆಯರೆಂದು, ಸಲ್ಮಾನ್ ತಮ್ಮ ಮೆಂಟೋರ್ ಎಂದು ಜಾಕ್ವೆಲಿನ್ ಹೇಳಿಕೊಂಡಿದ್ದರು. ಈಗ ಜಾಕ್ವೆಲಿನ್ ಉದ್ಯಮಿಯೊಬ್ಬರೊಂದಿಗೆ ಡೇಟಿಂಗ್ ನಡೆಸುತ್ತಿದ್ದು ಆ ಉದ್ಯಮಿ ದಕ್ಷಿಣ ಭಾರತದವರು ಎನ್ನಲಾಗುತ್ತಿದೆ. ತಮ್ಮ ಲವ್‌ ಲೈಫ್‌ ಬಗ್ಗೆ ಹೊರಗೆಲ್ಲೂ ಮಾತನಾಡಿಲ್ಲ ಜಾಕ್ವೆಲಿನ್.

  ಹಲವು ದಿನಗಳಿಂದ ಹುಡುಕಾಟ ನಡೆಸಿದ್ದರು

  ಹಲವು ದಿನಗಳಿಂದ ಹುಡುಕಾಟ ನಡೆಸಿದ್ದರು

  ಕೆಲವು ದಿನಗಳಿಂದಲೂ ಜಾಕ್ವೆಲಿನ್ ಹಾಗೂ ಅವರ ಬಾಯ್‌ಫ್ರೆಂಡ್‌ ಮುಂಬೈನಲ್ಲಿ ಮನೆಗಾಗಿ ಹುಡುಕಾಡುತ್ತಿದ್ದರಂತೆ. ಅಪಾರ್ಟ್‌ಮೆಂಟ್‌ಗಳಲ್ಲಿ ವಾಸ್ತವ್ಯ ಇರಲು ಇಷ್ಟವಿರದ ಕಾರಣ ಸ್ವಾತಂತ್ರ್ಯ ಮನೆಯನ್ನೇ ಇಬ್ಬರೂ ಹುಡುಕುತ್ತಿದ್ದು, ಬಾಂದ್ರಾ, ಜುಹು ಇನ್ನೂ ಕೆಲವೆಡೆ ಹುಡುಕಿದ್ದಾರೆ.

  ಫ್ರಾನ್ಸ್‌ ಸಂಸ್ಥೆಯಿಂದ ಒಳಾಂಗಣ ವಿನ್ಯಾಸ

  ಫ್ರಾನ್ಸ್‌ ಸಂಸ್ಥೆಯಿಂದ ಒಳಾಂಗಣ ವಿನ್ಯಾಸ

  ನಂತರ ಜುಹುನಲ್ಲಿ ಸಮುದ್ರ ತೀರಕ್ಕೆ ಮುಖ ಮಾಡಿರುವ ದೊಡ್ಡ ಬಂಗ್ಲೆಯೊಂದನ್ನು ಖರೀದಿಸಿದ್ದಾರೆ. ಮನೆಯನ್ನು ಇಬ್ಬರ ಟೇಸ್ಟ್‌ಗೆ ಅನುಗುಣವಾಗಿ ನವೀಕರಿಸಲು ಫ್ರಾನ್ಸ್‌ನ ಪ್ರತಿಷ್ಠಿತ ಒಳಾಂಗಣ ವಿನ್ಯಾಸ ಸಂಸ್ಥೆಗೆ ಗುತ್ತಿಗೆ ನೀಡಿದ್ದಾರೆ ಈ ಜೋಡಿ.

  Recommended Video

  ಪ್ರಶಾಂತ್ ಸಂಬರಗಿ ಯಾರು ಅನ್ನೋದೇ ಗೊತ್ತಿಲ್ಲ ಅವರ ಪರಿಚಯವೇ ಇಲ್ಲ ಎಂದ ರಾಗಿಣಿ | Filmibeat Kannada
  ಕನ್ನಡ ಸಿನಿಮಾದ ಹಾಡಿಗೆ ಹೆಜ್ಜೆ?

  ಕನ್ನಡ ಸಿನಿಮಾದ ಹಾಡಿಗೆ ಹೆಜ್ಜೆ?

  ಶ್ರೀಲಂಕಾದ ಚೆಲುವೆ ಜಾಕ್ವೆಲಿನ್, 2009ರಲ್ಲಿ ಅಲ್ಲಾದೀನ್ ಸಿನಿಮಾದ ಮೂಲಕ ಬಾಲಿವುಡ್ ಪ್ರವೇಶ ಮಾಡಿದರು. ಪ್ರಸ್ತುತ, ಜಾಕ್ವೆಲಿನ್ ನಟನೆಯ 'ಅಟ್ಯಾಕ್', 'ಬೂತ್ ಪೊಲೀಸ್', 'ಸರ್ಕಸ್', 'ಬಚ್ಚನ್ ಪಾಂಡೆ', 'ರಾಮ್ ಸೇತು' ಸಿನಿಮಾಗಳು ಬಿಡುಗಡೆಗೆ ತಯಾರಾಗಿವೆ. ಕನ್ನಡದ 'ವಿಕ್ರಾಂತ್ ರೋಣ' ಸಿನಿಮಾದಲ್ಲಿ ಒಂದು ವಿಶೇಷ ಹಾಡಿಗೆ ಜಾಕ್ವೆಲಿನ್ ಹೆಜ್ಜೆ ಹಾಕುತ್ತಾರೆ ಎನ್ನಲಾಗುತ್ತಿದೆ.

  English summary
  Actress Jacqueline Fernandez purchased new bungalow in Juhu area Mumbai. She will soon shift there with her boyfriend.
  Thursday, June 17, 2021, 16:06
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X