For Quick Alerts
  ALLOW NOTIFICATIONS  
  For Daily Alerts

  ಜಾಕ್ವೆಲಿನ್ ಫರ್ನಾಂಡಿಸ್ ಬೋಲ್ಡ್ ಲುಕ್ ಗೆ ಅಭಿಮಾನಿಗಳು ಫಿದಾ

  |

  ಬಾಲಿವುಡ್ ನ ಹಾಟ್ ಅ್ಯಂಡ್ ಬೋಲ್ಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟೀವ್ ಆಗಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ 46ಮಿಲಿಯನ್ ಗೂ ಅಧಿಕ ಫಾಲೋವರ್ಸ್ ಹೊಂದಿರುವ ಜಾಕ್ವೆಲಿನ್ ಫರ್ನಾಂಡಿಸ್, ಇದೇ ಖುಷಿಗೆ ಇತ್ತೀಚಿಗೆ ಅಭಿಮಾನಿಗಳಿಗಾಗಿ ಟಾಪ್ ಲೆಸ್ ಫೋಟೋಶೂಟ್ ಮಾಡಿಸಿ ವಿಭಿನ್ನವಾಗಿ ಧನ್ಯವಾದ ತಿಳಿಸಿ ಸಖತ್ ಸದ್ದು ಮಾಡಿದ್ದರು.

  ಇದೀಗ ಜಾಕ್ವೆಲಿನ್ ಮತ್ತೆ ಹೊಸ ಫೋಟೋ ಮೂಲಕ ಸುದ್ದಿಯಲ್ಲಿದ್ದಾರೆ. ಕಿಕ್ ಸುಂದರಿ ಶೇರ್ ಮಾಡಿರುವ ಬೋಲ್ಡ್ ಪೋಟೋಗೆ ಅಭಿಮಾನಿಗಳು ಕಿಕ್ ಏರಿಸಿಕೊಂಡಿದ್ದಾರೆ. ಕಪ್ಪು ಬಟ್ಟೆ ಧರಿಸಿ, ಕೂದಲು ಬಿಟ್ಟು ಗಂಭೀರ ಲುಕ್ ನಲ್ಲಿ ಕುಳಿತಿರುವ ಜಾಕ್ವೆಲಿನ್ ಅವರ ಬ್ಲ್ಯಾಕ್ ಅ್ಯಂಡ್ ವೈಟ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹಲ್ ಚಲ್ ಎಬ್ಬಿಸಿದೆ.

  ಅಭಿಮಾನಿಗಳಿಗಾಗಿ 'ಟಾಪ್ ಲೆಸ್' ಆದ ನಟಿ ಜಾಕ್ವೆಲಿನ್ ಫರ್ನಾಂಡೀಸ್: ಕಾರಣವೇನು?

  ಜಾಕ್ವೆಲಿನ್ ಫೋಟೋಗೆ ಅಭಿಮಾನಿಗಳಿಂದ ಮೆಚ್ಚುಗೆಯ ಕಾಮೆಂಟ್ಸ್ ಹರಿದುಬರುತ್ತಿವೆ. ಲೈಕ್ಸ್ ಒತ್ತಿ ಹಾರ್ಟ್ ಇಮೋಜಿ ಹಾಕುತ್ತಿದ್ದಾರೆ. ಅಭಿಮಾನಿಗಳು ಮಾತ್ರವಲ್ಲದೆ ಬಾಲಿವುಡ್ ಗಣ್ಯರು ಸಹ ಕಾಮೆಂಟ್ಸ್ ಮಾಡುತ್ತಿದ್ದಾರೆ. ನಟಿ ಊರ್ವಶಿ ರೌತೆಲಾ ಸೇರಿದಂತೆ ಅನೇಕರು ಜಾಕ್ವೆಲಿನ್ ಹಾಟ್ ಫೋಟೋಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  ಇತ್ತೀಚಿಗೆ ಜಾಕ್ವೆಲಿನ್ ಗುಲಾಬಿ ಹೂಗುಚ್ಚವನ್ನೇ ಉಡುಗೆಯಾಗಿ ಮಾಡಿಕೊಂಡು ಕ್ಯಾಮರಾಗೆ ಪೋಸ್ ನೀಡಿದ್ದರು. ಹೂವಿನ ಮರೆಯಲ್ಲಿದ್ದ ಜಾಕ್ವೆಲಿನ್ ತರಹೇವಾರಿ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಅಂದ್ಹಾಗೆ ಜಾಕ್ವೆಲಿನ್ ಸಿನಿಮಾ, ಫೋಟೋಶೂಟ್ ಅಂತ ಬಣ್ಣದ ಲೋಕದಲ್ಲಿ ಮಾತ್ರ ಬ್ಯಾಸಿಯಾಗಿಲ್ಲ. ಜೊತೆಗೆ ಸಾಮಾಜಿಕ ಕಾರ್ಯದಲ್ಲೂ ತೊಡಗಿಕೊಂಡಿದ್ದಾರೆ.

  ಅಂದು ಪ್ರಥಮ್ ಮಾಡಿದ ಒಳ್ಳೆ ಕೆಲಸ ಇಂದು ಎಷ್ಟೋ ಮಕ್ಕಳಿಗೆ ಉಪಯೋಗ ಆಗ್ತಿದೆ | Olle Hudga Pratham

  ಇತ್ತೀಚಿಗೆ ಜಾಕ್ವೆಲಿನ್ ತನ್ನ ಹುಟ್ಟುಹಬ್ಬದ ಸಮಯದಲ್ಲಿ ಮಹಾರಾಷ್ಟ್ರದ ಗ್ರಾಮವನ್ನು ದತ್ತು ಪಡೆದಿದ್ದಾರೆ. ಮಹಾರಾಷ್ಟ್ರದ ಎರಡು ಗ್ರಾಮವನ್ನು ದತ್ತು ಪಡೆದು, ಗ್ರಾಮದ ಅಭಿವೃದ್ದಿಗೆ ಪಣತೊಟ್ಟಿದ್ದಾರೆ. ಸುಮಾರು 1500 ಜನರು ಇರುವ ಗ್ರಾಮದ ಸರ್ವತೋಮುಖ ಅಭಿವೃದ್ದಿಯ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

  English summary
  Actress Jacqueline Fernandez's bold look heats up the internet.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X