ನ್ಯೂಯಾರ್ಕ್ 'ಇಂಡಿಯಾ ಡೇ ಪರೇಡ್' ನಲ್ಲಿ ಮಿಂಚಿದ ಸಮಂತಾ, ಜಾಕ್ವೆಲಿನ್

ಯುನೈಟೆಡ್ ಸ್ಟೇಟ್ಸ್‌ನ ನ್ಯೂಯಾರ್ಕ್ ನಗರದಲ್ಲಿ ಭಾನುವಾರ ನಡೆದ ವಿಶ್ವದ ಅತಿದೊಡ್ಡ ವಾರ್ಷಿಕ 'ಇಂಡಿಯಾ ಪರೇಡ್ ಡೇ' ಕಾರ್ಯಕ್ರಮದಲ್ಲಿ ಗೌರವ ಅಥಿತಿಗಳಾಗಿ ನಟಿಯರಾದ ಸಮಂತಾ ರುತ್‌ಪ್ರಭು, ಜಾಕ್ವೆಲಿನ್ ಫರ್ನಾಂಡೀಸ್ ಭಾಗಿಯಾಗಿದ್ದರು. ಈ ಪರೇಡ್ ಭಾರತದ ಸ್ವಾತಂತ್ರ್ಯ ದಿನಾಚರಣೆಗೆ ಗೌರವ ಸಲ್ಲಿಸುವ ಕಾರ್ಯಕ್ರಮ.

ಈ ವರ್ಷ ನ್ಯೂಯಾರ್ಕ್‌ನ 38 ನೇ ಬೀದಿ ಮತ್ತು ಮ್ಯಾಡಿಸನ್ ಅವೆನ್ಯೂದಲ್ಲಿ ಮಧ್ಯಾಹ್ನ 12 ಗಂಟೆಗೆ (ಸ್ಥಳೀಯ ಸಮಯ) 41 ನೇ 'ಇಂಡಿಯಾ ಪರೇಡ್ ಡೇ' ನಡೆಸಲಾಗಿದೆ. ಕಾರ್ಯಕ್ರಮದಲ್ಲಿ ಆಧ್ಯಾತ್ಮಿಕ ಗುರು ರವಿಶಂಕರ್ ಗುರೂಜಿ, ನಟರಾದ ಸಮಂತಾ ರುತ್ ಪ್ರಭು, ಜಾಕ್ವೆಲಿನ್ ಫರ್ನಾಂಡಿಸ್ ಮತ್ತು ನ್ಯೂಯಾರ್ಕ್ ಸಿಟಿ ಮೇಯರ್ ಎರಿಕ್ ಆಡಮ್ಸ್ ಹಾಜರಿದ್ದರು.

Jacqueline Fernandez, Samantha represented India in 41st India Day Parade in New York

'ಇಂಡಿಯಾ ಪರೇಡ್ ಡೇ' ಅನ್ನು ಫೆಡರೇಶನ್ ಆಫ್ ಇಂಡಿಯನ್ ಅಸೋಸಿಯೇಷನ್ಸ್ (ಎಫ್‌ಐಎ) ಆಯೋಜಿಸಿತ್ತು. ಈಶಾನ್ಯ ಯುಎಸ್‌ಎಯಲ್ಲಿ ಬೆಳೆಯುತ್ತಿರುವ ಸಂಸ್ಥೆ ಇದಾಗಿದೆ. ಇದನ್ನು 1970 ರಲ್ಲಿ ಸ್ಥಾಪಿಸಲಾಗಿದೆ.

ಸುದ್ದಿ ಸಂಸ್ಥೆ ಎಎನ್‌ಐ ಹಂಚಿಕೊಂಡ ವಿಡಿಯೋದಲ್ಲಿ 'ಇಂಡಿಯಾ ಪರೇಡ್ ಡೇ'ನ ಝಲಕ್ ಕಾಣಿಸಿದೆ. ನಟಿ ಜಾಕ್ವೆಲಿನ್ ಫರ್ನಾಂಡೀಸ್ ಅವರು ಮೆರವಣಿಗೆಯಲ್ಲಿ ಭಾಗವಹಿಸಿದ್ದು, ದಾರಿಯುದ್ದಕ್ಕೂ ತ್ರಿವರ್ಣ ಧ್ವಜವನ್ನು ಸಂಭ್ರಮದಿಂದ ಬೀಸುತ್ತಿದ್ದಾರೆ. ಪರೇಡ್ ಮಾರ್ಗದಲ್ಲಿ, ಅನೇಕ ಭಾರತೀಯರು ಆಕೆಯ ಚಿತ್ರಗಳನ್ನು, ವಿಡಿಯೋಗಳನ್ನು ಸೆರೆಹಿಡಿಯಲು ಪ್ರಯತ್ನಿಸಿದ್ದಾರೆ. ಪರೇಡ್‌ನಲ್ಲಿ ಭಾಗಿಯಾಗಿದ್ದವರು ದೇಶಿಯ ಉಡುಪುಗಳನ್ನು ಧರಿಸಿ, ನೃತ್ಯ ಮತ್ತು ಡ್ರಮ್ಸ್ ಬಾರಿಸಿದ್ದಾರೆ.

ನ್ಯೂಯಾರ್ಕ್‌ನಲ್ಲಿ 'ಇಂಡಿಯಾ ಡೇ ಪರೇಡ್'

ನ್ಯೂಯಾರ್ಕ್ ನಗರದಲ್ಲಿ ನಡೆಯುವ 'ಇಂಡಿಯಾ ಡೇ ಪರೇಡ್' ಭಾರತದ ಹೊರಗೆ ನಡೆಸಲಾಗುವ ಮೆರವಣಿಗೆಗಳಲ್ಲಿ ಅತ್ಯಂತ ದೊಡ್ಡ ಮೆರವಣಿಗೆಯಾಗಿದೆ. ದೇಶದ ಹೊರಗೆ ಭಾರತೀಯ ಸಮುದಾಯದ ಸಾವಿರಾರು ಜನರು ತಮ್ಮ ಸಂಸ್ಕೃತಿಯನ್ನು ಒಟ್ಟಿಗೆ ಆಚರಿಸುವ ದೊಡ್ಡ ಕಾರ್ಯಕ್ರಮವಾಗಿದೆ. ಕಾರ್ಯಕ್ರಮದಲ್ಲಿ ಭಾರತೀಯ ಕಲೆಯ ಪ್ರದರ್ಶನಗಳು, ಪರಿಸರದ ಬಗ್ಗೆ ಕಾಳಜಿ, ಆರೋಗ್ಯಕರ ಸಿರಿಧಾನ್ಯದ ಆಹಾರಗಳನ್ನು ಒಳಗೊಂಡ ಜಾಗತಿಕ ಆಹಾರ ಉತ್ಸವ, ಸಾಕಷ್ಟು ರುಚಿಕರವಾದ ಆಹಾರ ಮಳಿಗೆಗಳು ಸೇರಿವೆ.

Jacqueline Fernandez, Samantha represented India in 41st India Day Parade in New York

ಈ ವರ್ಷದ ಥೀಮ್

ಈ ವರ್ಷ, ಥೀಮ್ "ಮಿಷನ್ ಲೈಫ್". ಪ್ರಧಾನಿ ನರೇಂದ್ರ ಮೋದಿಯವರು ಪ್ರಾರಂಭಿಸಿದ ದೊಡ್ಡ ಆಂದೋಲನ ಮಿಷನ್ ಲೈಫ್. ಇದು ಪರಿಸರದೊಂದಿಗೆ ಒಳ್ಳೆಯ ರೀತಿಯಲ್ಲಿ ಬದುಕುವ ಪರಿಕಲ್ಪನೆಯನ್ನು ನೈಜವಾಗಿ ಪರಿವರ್ತಿಸುವ ಗುರಿಯನ್ನು ಹೊಂದಿದೆ. ಪರಿಸರವನ್ನು ರಕ್ಷಿಸಲು ಮತ್ತು ಉಳಿಸಲು ಪ್ರಪಂಚದಾದ್ಯಂತ ಜನರು ಒಟ್ಟಾಗಿ ಕೆಲಸ ಮಾಡುವಂತೆ ಮಾಡುವುದು ಮಿಷನ್ ಲೈಫ್ ಗುರಿಯಾಗಿದೆ.

'ಇಂಡಿಯಾ ಡೇ ಪರೇಡ್'ನಲ್ಲಿ ನಟ- ನಟಿಯರು

ಅನಾರೋಗ್ಯದ ಕಾರಣದಿಂದ ನಟನೆಯಿಂದ ವಿರಾಮ ಘೋಷಿಸಿರುವ ನಟಿ ಸಮಂತಾ ಭಾನುವಾರ ನ್ಯೂಯಾರ್ಕ್‌ನಲ್ಲಿ ನಡೆದ ಇಂಡಿಯಾ ಡೇ ಪರೇಡ್‌ನಲ್ಲಿ ಭಾಗವಹಿಸಿದ್ದರು. "ಇಂದು ನಾನು ಇಲ್ಲಿರುವುದು ನಿಜವಾಗಿಯೂ ನನಗೆ ಹೆಮ್ಮೆಯಿದೆ. ನನ್ನ ಸಂಸ್ಕೃತಿ ಮತ್ತು ಪರಂಪರೆ ಎಷ್ಟು ಶ್ರೀಮಂತವಾಗಿದೆ. ನನ್ನ ಪ್ರತಿಯೊಂದು ಚಿತ್ರಕ್ಕೂ ಬೆಂಬಲ ನೀಡುತ್ತಿರುವ ಅಮೆರಿಕಾದ ಭಾರತೀಯರಿಗೆ ಧನ್ಯವಾದಗಳು" ಎಂದು ಸಮಂತಾ ಹೇಳಿದ್ದಾರೆ.

ನಟಿ ಸಮಂತಾ, ವಿಜಯ್ ದೇವರಕೊಂಡ ಜೊತೆಗಿನ 'ಖುಷಿ' ತೆರೆಗೆ ಬರಲು ಸಿದ್ಧವಾಗಿದೆ. ಇದರ ಜೊತೆಗೆ ಬಾಲಿವುಡ್ ನಟ ವರುಣ್ ಧವನ್ ಅವರೊಂದಿಗೆ ಮುಂಬರುವ 'ಇಂಡಿಯನ್' ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

'ಇಂಡಿಯಾ ಡೇ ಪರೇಡ್' ನಲ್ಲಿ ಸಮಂತಾ ಜೊತೆಗೆ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಕೂಡ ಭಾಗವಹಿಸಿದ್ದರು. ಈ ಹಿಂದೆ ಅರ್ಜುನ್ ರಾಂಪಾಲ್, ಅಭಿಷೇಕ್ ಬಚ್ಚನ್, ರಾಣಾ ದಗ್ಗುಬಾಟಿ, ತಮನ್ನಾ ಭಾಟಿಯಾ, ಸನ್ನಿ ಡಿಯೋಲ್, ಅಲ್ಲು ಅರ್ಜುನ್ ಮತ್ತು ರವೀನಾ ಟಂಡನ್ ಸೇರಿದಂತೆ ಹಲವು ಭಾರತೀಯ ತಾರೆಯರು ಪರೇಡ್‌ನಲ್ಲಿ ಭಾಗಿಯಾಗಿದ್ದಾರೆ.

More from Filmibeat

English summary
Jacqueline Fernandez, Samantha take part in 41st India Day Parade in New York.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X