For Quick Alerts
  ALLOW NOTIFICATIONS  
  For Daily Alerts

  ಐಪಿಎಲ್ ಸಮಾರೋಪ ಸಮಾರಂಭದಲ್ಲಿರಲಿದೆ ಜಾಕ್ವೆಲಿನ್ ಮಸ್ತ್ ಡ್ಯಾನ್ಸ್.!

  By Harshitha
  |

  ಮೇ 27 ರಂದು ಮುಂಬೈನಲ್ಲಿ ಐ.ಪಿ.ಎಲ್ ಸಮಾರೋಪ ಸಮಾರಂಭ ನಡೆಯಲಿದೆ. ಇಂಡಿಯನ್ ಪ್ರೀಮಿಯರ್ ಲೀಗ್ ಬೀಳ್ಕೊಡುಗೆ ಸಮಾರಂಭದಲ್ಲಿ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಸೊಂಟ ಬಳುಕಿಸಲಿದ್ದಾರೆ.

  ಐ.ಪಿ.ಎಲ್ 11ನೇ ಆವೃತ್ತಿ ಉದ್ಘಾಟನೆ ಕಾರ್ಯಕ್ರಮದಲ್ಲಿಯೂ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಡ್ಯಾನ್ಸ್ ಪರ್ಫಾಮೆನ್ಸ್ ಕೊಟ್ಟಿದ್ದರು. ಜಾಕ್ವೆಲಿನ್ ಫರ್ನಾಂಡಿಸ್ ಜೊತೆಗೆ ವರುಣ್ ಧವನ್, ಪ್ರಭುದೇವ, ತಮನ್ನಾ, ಹೃತಿಕ್ ರೋಷನ್ ಸೇರಿದಂತೆ ಹಲವರು ಕುಣಿದು ಕುಪ್ಪಳಿಸಿದ್ದರು.

  ಉದ್ಘಾಟನೆ ಕಾರ್ಯಕ್ರಮದಲ್ಲಿ ಟನ್ ಟನಾ ಟನ್ ಹಾಡಿಗೆ ಜಾಕ್ವೆಲಿನ್ ಹೆಜ್ಜೆ ಹಾಕಿದ್ದರು. ಇದೀಗ ಸಮಾರೋಪ ಸಮಾರಂಭದಲ್ಲಿಯೂ ಡ್ಯಾನ್ಸ್ ಮಾಡುವ ಚಾನ್ಸ್ ಜಾಕ್ವೆಲಿನ್ ಗೆ ಸಿಕ್ಕಿದೆ.

  ಐಪಿಎಲ್ ಉದ್ಘಾಟನೆ ದಿನ ಈ ನಟನ ಡ್ಯಾನ್ಸ್ ಗೆ ಅತಿ ಹೆಚ್ಚು TRP.!ಐಪಿಎಲ್ ಉದ್ಘಾಟನೆ ದಿನ ಈ ನಟನ ಡ್ಯಾನ್ಸ್ ಗೆ ಅತಿ ಹೆಚ್ಚು TRP.!

  ''ಉದ್ಘಾಟನೆ ಹಾಗೂ ಬೀಳ್ಕೊಡುಗೆ ಸಮಾರಂಭ.. ಎರಡರಲ್ಲಿಯೂ ಡ್ಯಾನ್ಸ್ ಪರ್ಫಾಮೆನ್ಸ್ ನೀಡುವ ಅವಕಾಶ ಗಿಟ್ಟಿಸಿಕೊಂಡಿರುವ ಏಕೈಕ ನಟಿ ಜಾಕ್ವೆಲಿನ್ ಫರ್ನಾಂಡಿಸ್. ಅದಕ್ಕೆ ಕಾರಣ ಅವರ ಎನರ್ಜಿ'' ಎನ್ನುವುದು ಮೂಲಗಳ ಮಾಹಿತಿ.

  ''ಜೂಮೇ ಕಿ ರಾತ್...'' ಹಾಡು ಸೇರಿದಂತೆ ಇಲ್ಲಿಯವರೆಗೂ ಜಾಕ್ವೆಲಿನ್ ಕಿಸೆಯಲ್ಲಿ 19 ಹಿಟ್ ನಂಬರ್ ಗಳಿವೆ. ಆ ಎಲ್ಲ ಹಾಡುಗಳ ಫ್ಯೂಶನ್ ಗೆ ಜಾಕ್ವೆಲಿನ್ ಐ.ಪಿ.ಎಲ್ ಕ್ಲೋಸಿಂಗ್ ಸೆರಮನಿಯಲ್ಲಿ ಡ್ಯಾನ್ಸ್ ಮಾಡುವ ಸಾಧ್ಯತೆ ಇದೆ.

  ಐ.ಪಿ.ಎಲ್ ಬೀಳ್ಕೊಡುಗೆ ಸಮಾರಂಭದಲ್ಲಿ ಡ್ಯಾನ್ಸ್ ಪರ್ಫಾಮೆನ್ಸ್ ನೀಡುವುದರ ಜೊತೆಗೆ 'ರೇಸ್ 3' ಚಿತ್ರದ ಪ್ರಮೋಷನ್ ಕಾರ್ಯದಲ್ಲಿಯೂ ಜಾಕ್ವೆಲಿನ್ ತೊಡಗಲಿದ್ದಾರೆ. 'ಕಿಕ್ 2' ಚಿತ್ರದ ಬಳಿಕ ಜಾಕ್ವೆಲಿನ್ ಹಾಗೂ ಸಲ್ಮಾನ್ ಖಾನ್ ಒಂದಾಗಿರುವುದು 'ರೇಸ್ 3' ಚಿತ್ರದಲ್ಲಿಯೇ.!

  English summary
  Bollywood Actress Jacqueline Fernandez to perform at IPL Closing ceremony.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X