ಉಡುಗೊರೆ ತಂದ ಸಂಕಷ್ಟ.. ಜಾಕ್ವೆಲಿನ್‌ಗೆ ಇಡಿ ಕುಣಿಕೆ ಬಿಗಿ: ಸಾಕ್ಷ ನಾಶ, ವಿದೇಶಕ್ಕೆ ಪರಾರಿಯಾಗಲು ಯತ್ನ!
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್‌ಗೆ ಇಡಿ ಕುಣಿಕೆ ಬಿಗಿಯಾಗುತ್ತಿದೆ. ಶ್ರೀಲಂಕಾ ಮೂಲಕ ನಟಿಯನ್ನು ವಿಚಾರಣೆ ನಡೆಸುತ್ತಿರುವ ಇಡಿ ಅಧಿಕಾರಿಗಳು ಆಕೆ ವಿದೇಶಕ್ಕೆ ಪಲಾಯನ ಮಾಡಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಅದೇ ರೀತಿ ಆಕೆ ತನ್ನ ಫೋನ್‌ನಲ್ಲಿರುವ ದತ್ತಾಂಶವನ್ನು ಅಳಿಸಿ ಹಾಕಿದ್ದಾಳೆ ಮತ್ತು ಸಾಕ್ಷ್ಯವನ್ನು ತಿರುಚಲು ಪ್ರಯತ್ನಿಸುತ್ತಿದ್ದಾಳೆ ಎಂದು ಇಡಿ ವಕೀಲರು ದೆಹಲಿ ನ್ಯಾಯಾಲಯಕ್ಕೆ ತಿಳಿಸಿದರು. ಜಾಕ್ವೆಲಿನ್ ಫರ್ನಾಂಡಿಸ್ ಸದ್ಯ ಮಧ್ಯಂತರ ಜಾಮೀನು ಪಡೆದುಕೊಂಡಿದ್ದಾರೆ.
200 ಕೋಟಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸುಕೇಶ್ ಚಂದ್ರಶೇಖರ್ ಅವರನ್ನು ಕೆಲ ದಿನಗಳ ಹಿಂದೆ ಬಂಧಿಸಲಾಗಿತ್ತು. ಜಾಕ್ವೆಲಿನ್ ಫರ್ನಾಂಡಿಸ್ ಅವರನ್ನು ಇಡಿ ತನಿಖೆ ನಡೆಸುತ್ತಿರುವಾಗ ಆತನಿಂದ ದುಬಾರಿ ಉಡುಗೊರೆಗಳನ್ನು ಪಡೆದಿರುವುದು ಪತ್ತೆಯಾಗಿದೆ. ಜಾಕ್ವೆಲಿನ್ ಫರ್ನಾಂಡಿಸ್ ಅವರಿಗೆ ಇಡಿ ನೋಟಿಸ್ ಜಾರಿ ಮಾಡಿ ತನಿಖೆ ಆರಂಭಿಸಿ ಅಂತಿಮವಾಗಿ ಆಕೆಯ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿತ್ತು. ಬಂಧನ ಭೀತಿ ಹಿನ್ನೆಲೆಯಲ್ಲಿ ಆಕೆ ದೆಹಲಿ ನ್ಯಾಯಾಲಯದ ಮೊರೆ ಹೋಗಿದ್ದು, ಮಧ್ಯಂತರ ಜಾಮೀನು ಕೋರಿದ್ದರು. ಕಳೆದ ಸೆಪ್ಟೆಂಬರ್ 26ರಂದು ನ್ಯಾಯಾಲಯ ಜಾಮೀನು ನೀಡಿತ್ತು.
ಜಾಕ್ವೆಲಿನ್ ಫರ್ನಾಂಡಿಸ್ ತನಿಖೆಗೆ ಸಹಕರಿಸುತ್ತಿಲ್ಲ. ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳೊಂದಿಗೆ ಮುಖಾಮುಖಿ ವಿಚಾರಣೆ ನಡೆಸಿದ ವೇಳೆ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಲು ಆಕೆ ನಿರಾಕರಿಸಿದ್ದಾಳೆ ಎಂದು ಇಡಿ ಹೇಳಿದೆ. ಎಲ್ಲಕ್ಕಿಂತ ಹೆಚ್ಚಾಗಿ, ಫೋನ್‌ನಲ್ಲಿರುವ ಡೇಟಾವನ್ನು ಅಳಿಸುವುದರ ಜೊತೆಗೆ ದೇಶದಿಂದ ಪಲಾಯನ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಇಡಿ ನ್ಯಾಯಾಲಯಕ್ಕೆ ತಿಳಿಸಿದೆ. ಸದ್ಯ ದೆಹಲಿ ಕೋರ್ಟ್ ವಿಚಾರಣೆಯನ್ನು ನವೆಂಬರ್ 10ಕ್ಕೆ ಮುಂದೂಡಿದೆ.

ಸಾಕ್ಷ್ಯ ನಾಶಕ್ಕೆ ಜಾಕ್ವಲಿನ್ ಯತ್ನ
ಆರೋಪಿ ಸುಖೇಶ್ ಚಂದ್ರಶೇಖರ್ ನಟಿ ಜಾಕ್ವೆಲಿನ್‌ಗೆ ಉಡುಗೊರೆ ರೂಪದಲ್ಲಿ 10 ಕೋಟಿ ರೂ. ನೀಡಿರುವುದನ್ನು ಇ.ಡಿ ಅಧಿಕಾರಿಗಳು ಬಯಲಿಗೆಳೆದಿದ್ದರು. ಹಾಗಾಗಿ ಈ ಪ್ರಕರಣದಲ್ಲಿ ಜಾಮೀನು ಕೋರಿರುವ ಜಾಕ್ವೆಲಿನ್ ಅರ್ಜಿಗೆ ಆಕ್ಷೇಪಣೆ ಸಲ್ಲಿಸಿದೆ. "ತನ್ನ ಫೋನ್‌ನಲ್ಲಿದ್ದ ಪುರಾವೆಗಳನ್ನು ಅಳಿಸಿರುವುದಾಗಿ ಆಕೆಯೇ ಒಪ್ಪಿಕೊಂಡಿದ್ದಾಳೆ. ಅಷ್ಟೇ ಅಲ್ಲದೇ ದಾಖಲೆಗಳನ್ನು ಅಳಿಸಿಹಾಕುವಂತೆ ಇತರರಿಗೂ ಹೇಳಿದ್ದಾಳೆ. ಇದು ಸಾಕ್ಷ್ಯ ನಾಶದ ಸ್ಪಷ್ಟ ಪ್ರಯತ್ನ. ಆಕೆ ವಿದೇಶಕ್ಕೆ ಪಲಾಯನ ಮಾಡಲೂ ಕೂಡ ಪ್ರಯತ್ನಿಸಿದ್ದಳು' ಎಂದು ಇ.ಡಿ ತಿಳಿಸಿದೆ.

ಸುಕೇಶ್ ನೀಡಿದ ಹಣ ಜಾಕ್ವೆಲಿನ್ ಬಳಕೆ
ಶಿವಿಂದರ್ ಸಿಂಗ್ ಅವರ ಪತ್ನಿ ಅದಿತಿ ಅವರಿಂದ ಸುಕೇಶ್ ಹಾಗೂ ಲೀನಾ ಸುಲಿಗೆ ಮಾಡಿದ್ದ ಹಣವನ್ನು ಹಣವನ್ನು ಜಾಕ್ವೆಲಿನ್ ಬಳಸಿಕೊಂಡಿದ್ದಾರೆ ಎಂದು ತನಿಖೆಯ ವೇಳೆ ತಿಳಿದುಬಂದಿದೆ ಎಂದು ಇ.ಡಿ ಹೇಳಿದೆ. ಇನ್ನು ಆರೋಪಿಗಳ ಅಪರಾಧಗಳ ಬಗ್ಗೆ ಜಾಕ್ವೆಲಿಗೆ ಗೊತ್ತಿತ್ತು ಎಂದು ಸಹ ಇಡಿ ಆರೋಪಿಸಿದೆ. "ಅಪರಾಧ ಕೃತ್ಯದಿಂದ ಬಂದ ಹಣವನ್ನು ತಾನು ಬಳಸಿಕೊಂಡಿದ್ದದಲ್ಲದೇ ತನ್ನ ಕುಟುಂಬ ಸದಸ್ಯರಿಗೂ ನೀಡಿದ್ದಳು. ಸುಖೇಶ್ ಕೊಟ್ಟ ಹಣ ಹಾಗೂ ಉಡುಗೊರೆ ಒಳ್ಳೆ ಮಾರ್ಗದಿಂದ ಬಂದಿದ್ದಲ್ಲ ಎನ್ನುವುದರ ಅರಿತು ಆಕೆಗೆ ಇತ್ತು ಎಂದು ಇ.ಡಿ ಹೇಳಿದೆ.

ಆರಂಭದಲ್ಲಿ 2 ಕಾರು ಬೇಡ ಎಂದಿದ್ದ ನಟಿ
ನಟಿ ಜಾಕ್ವೆಲಿನ್ ತನಿಖೆಗೆ ಸಹಕರಿಸುತ್ತಿಲ್ಲ, ಸಾಕ್ಷ್ಯಗಳನ್ನು ಮುಂದಿಟ್ಟು ಕೇಳಿದಾಗ ಮಾತ್ರವೇ ಕೆಲ ಮಾಹಿತಿ ನೀಡುತ್ತಿದ್ದಳು ಎಂದು ಇಡಿ ಹೇಳಿದೆ. ಜಾಕ್ವೆಲಿನ್ ಕುಟುಂಬಸ್ಥರಿಗಾಗಿ ಸುಖೇಶ್ ಕಾರುಗಳನ್ನು ಖರೀದಿಸಿದಾಗ ಆಕೆ ಬೇಡ ಎಂದು ಹೇಳಿದ್ದಳು. ಆದರೆ ಕಳೆದ ವರ್ಷ ಕೊನೆಯಲ್ಲಿ ಒಪ್ಪಿ ತೆಗೆದುಕೊಂಡಿದ್ದಳು. ಅಷ್ಟೇ ಅಲ್ಲದೇ ಆಕೆಯ ಸಹೋದರಿಯೂ 1 ಕೋಟಿ ರೂ.ಗೂ ಅಧಿಕ ಹಣವನ್ನು ಪಡೆದುಕೊಂಡಿದ್ದಳು ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ.

ಮಧ್ಯಂತರ ಜಾಮೀನು ಅವಧಿ ವಿಸ್ತರಣೆ
ಸದ್ಯ ಈ ಪ್ರಕರಣದಲ್ಲಿ ಆರೋಪಿಯಾಗಿರುವ ನಟಿ ಜಾಕ್ವೆಲಿನ್ ಫರ್ನಾಂಡೀಸ್‌ಗೆ ದೆಹಲಿಯ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಮಧ್ಯಂತರ ಜಾಮೀನು ನೀಡಿದೆ. ಆಕೆಗೆ ಸಾಮಾನ್ಯ ಜಾಮೀನು ಇನ್ನು ಮಂಜೂರಾಗಿಲ್ಲ. ಜಾಮೀನು ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ಮುಂದೂಡಿದ್ದು, ಮಧ್ಯಂತರ ಜಾಮೀನು ಅವಧಿಯನ್ನು ವಿಸ್ತರಿಸಲಾಗಿದೆ.


Click it and Unblock the Notifications











